ಮಂಗಳೂರಿನಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂ ; ಕೊಣಾಜೆಯಲ್ಲಿ 22 ಎಕರೆ ಜಾಗ ಗುರುತಿಸಿದ ಜಿಲ್ಲಾಡಳಿತ

25-10-22 10:45 pm       Mangalore Correspondent   ಕರಾವಳಿ

ಕರಾವಳಿ ನಗರಿ ಮಂಗಳೂರಿನಲ್ಲಿ ಕ್ರಿಕೆಟ್ ಸ್ಟೇಡಿಯಂ ಆಗಬೇಕು ಅನ್ನುವುದು ಬಹುಕಾಲದ ಕನಸು. ಕಡೆಗೂ ಕನಸು ಈಡೇರುವ ಹಂತಕ್ಕೆ ಬಂದಿದೆ. ಮಂಗಳೂರು ನಗರದಲ್ಲಿ ಕ್ರಿಕೆಟ್ ಸ್ಟೇಡಿಯಂ ಸ್ಥಾಪನೆಗೆ ಜಾಗ ಗುರುತಿಸಲಾಗಿದೆ.

ಮಂಗಳೂರು, ಅ.25: ಕರಾವಳಿ ನಗರಿ ಮಂಗಳೂರಿನಲ್ಲಿ ಕ್ರಿಕೆಟ್ ಸ್ಟೇಡಿಯಂ ಆಗಬೇಕು ಅನ್ನುವುದು ಬಹುಕಾಲದ ಕನಸು. ಕಡೆಗೂ ಕನಸು ಈಡೇರುವ ಹಂತಕ್ಕೆ ಬಂದಿದೆ. ಮಂಗಳೂರು ನಗರದಲ್ಲಿ ಕ್ರಿಕೆಟ್ ಸ್ಟೇಡಿಯಂ ಸ್ಥಾಪನೆಗೆ ಜಾಗ ಗುರುತಿಸಲಾಗಿದೆ. ಕೋಣಾಜೆ ವಿಶ್ವವಿದ್ಯಾನಿಲಯದ ಬಳಿ ಸ್ಟೇಡಿಯಂ ನಿರ್ಮಿಸಲು ರಾಜ್ಯ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ.

ರಾಜ್ಯ ಸರಕಾರ ಮಂಗಳೂರಿನಲ್ಲಿ ಕ್ರಿಕೆಟ್ ಸ್ಟೇಡಿಯಂ, ಪೊಲೀಸ್ ಫೈರಿಂಗ್ ತರಬೇತಿ ಕೇಂದ್ರ ಮತ್ತು ಹಾರ್ಸ್ ಅಕಾಡೆಮಿ ಸ್ಥಾಪನೆಗೆ ರಾಜ್ಯ ಸರಕಾರ ಸ್ಥಳ ಗುರುತಿಸಿದೆ. ಕೋಣಾಜೆ ಬಳಿ 22 ಎಕರೆ ಭೂಮಿ ಗುರುತಿಸಲಾಗಿದ್ದು ಈ ಬಗ್ಗೆ ಈ ಹಿಂದಿನ ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆವಿ ಸಮಗ್ರ ವಿವರಣೆ ಹೊಂದಿರುವ ಪ್ರಸ್ತಾಪವನ್ನು ರಾಜ್ಯ ಸರಕಾರಕ್ಕೆ ಕಳುಹಿಸಿದ್ದಾರೆ.

ರಾಜ್ಯ ಸರಕಾರ ಮೈಸೂರಿನಲ್ಲಿ ಕ್ರಿಕೆಟ್ ಸ್ಟೇಡಿಯಂ ನಿರ್ಮಿಸುವುದಕ್ಕೆ ಪ್ರಾಥಮಿಕ ಒಪ್ಪಿಗೆ ನೀಡಿದೆ. ಮಂಗಳೂರಿನಲ್ಲಿಯೂ ಅದೇ ರೀತಿ ಸ್ಟೇಡಿಯಂ ನಿರ್ಮಾಣಕ್ಕೆ ಸರಕಾರ ಅನುಮತಿ ನೀಡುವ ಸಾಧ್ಯತೆಯಿದೆ. ಕರ್ನಾಟಕ ರಾಜ್ಯ ಕ್ರಿಕೆಟ್ ಮಂಡಳಿಯ ಪದಾಧಿಕಾರಿಗಳು ಮಂಗಳೂರಿನಲ್ಲಿ ಸ್ಟೇಡಿಯಂ ನಿರ್ಮಿಸುವುದಕ್ಕೆ ಒಲವು ಹೊಂದಿದ್ದಾರೆ. ರಾಜ್ಯ ಸರಕಾರ ಭೂಮಿ ಸ್ವಾಧೀನಪಡಿಸಿದ ಬಳಿಕ ಕ್ರಿಕೆಟ್ ಅಸೋಸಿಯೇಶನ್ ಪದಾಧಿಕಾರಿಗಳು ಸ್ಟೇಡಿಯಂ ನಿರ್ಮಾಣಕ್ಕೆ ಮುಂದಾಗಲಿದ್ದಾರೆ.

ಸ್ಟೇಡಿಯಂ ನಿರ್ಮಾಣಕ್ಕೆ ಸಮಗ್ರ ಡಿಪಿಆರ್ ರೆಡಿ ಮಾಡಲಾಗಿದೆ ಎನ್ನಲಾಗುತ್ತಿದ್ದು, ಒಮ್ಮೆ ಕೆಲಸ ಶುರು ಮಾಡಿದರೆ ಮೂರು ವರ್ಷಗಳಲ್ಲಿ ಮಂಗಳೂರಿನಲ್ಲಿ ಸ್ಟೇಡಿಯಂ ತಲೆಯೆತ್ತಲಿದೆ. ಜಿಲ್ಲಾಡಳಿತದಿಂದ ಎಲ್ಲ ರೀತಿಯ ಸಹಕಾರ ನೀಡಲಾಗುವುದು ಎಂದು ಜಿಲ್ಲಾಧಿಕಾರಿ ಸಲ್ಲಿಸಿದ್ದ ವರದಿಯಲ್ಲಿ ಹೇಳಿದ್ದರು. ಇದೇ ವೇಳೆ ಬೋಂದೆಲ್ ನಲ್ಲಿ ಹಾರ್ಸ್ ಅಕಾಡೆಮಿ ಮತ್ತು ಪೊಲೀಸ್ ಫೈರಿಂಗ್ ಸೆಂಟರ್ ನಿರ್ಮಿಸುವುದಕ್ಕೆ ಐದು ಎಕರೆ ಭೂಮಿ ಗುರುತಿಸಲಾಗಿದೆ.

Sites for an international-level cricket stadium, a police firing training centre and a horse academy have been identified in and around the city. The long and much-awaited dream of an international cricket stadium in the coastal district is likely to fructify soon. A proposal to build a cricket stadium at Konaje has been submitted to the government.