ಬ್ರೇಕಿಂಗ್ ನ್ಯೂಸ್
26-10-22 07:39 pm Mangalore Correspondent ಕರಾವಳಿ
ಮಂಗಳೂರು, ಅ.26: ಹೆಚ್ಚಿನ ಆನ್ಲೈನ್ ಡೆಲಿವರಿ ಕಂಪನಿಗಳು ದೀಪಾವಳಿ ಸಂದರ್ಭದಲ್ಲಿ ಭರ್ಜರಿ ಡಿಸ್ಕೌಂಟ್, ಗಿಫ್ಟ್ ಆಫರ್ ನೀಡುತ್ತದೆ. ಇಲ್ಲೊಬ್ಬರು ದೀಪಾವಳಿ ಆಫರ್ ನಂಬಿ ಲ್ಯಾಪ್ ಟಾಪ್ ಆರ್ಡರ್ ಮಾಡಿದ್ದರು. ಆದರೆ ಫ್ಲಿಪ್ ಕಾರ್ಟ್ ಕಂಪನಿಯಿಂದ ಬಂದಿದ್ದು ಅವರಿಗೆ ಕಲ್ಲಿನ ತುಂಡು ಮತ್ತು ಇಲೆಕ್ಟ್ರಾನಿಕ್ ವೇಸ್ಟ್ ಮಾತ್ರ.
ಮಂಗಳೂರು ಮೂಲದ ಚಿನ್ಮಯ ರಮಣ ಎಂಬವರು ಈ ಬಗ್ಗೆ ಟ್ವಿಟರ್ ನಲ್ಲಿ ಪೋಸ್ಟ್ ಹಾಕಿದ್ದರು. ಲ್ಯಾಪ್ ಟಾಪ್ ಆರ್ಡರ್ ಮಾಡಿದ್ದಕ್ಕೆ ಫ್ಲಿಪ್ ಕಾರ್ಟ್ ಕಂಪನಿ ಕಡೆಯಿಂದ ನನಗೆ ಕಲ್ಲು ಮತ್ತು ಇಲೆಕ್ಟ್ರಾನಿಕ್ ವೇಸ್ಟ್ ಬಂದಿದೆ ಎಂದು ಹೇಳಿದ್ದರು. ಈ ಪೋಸ್ಟ್ ವೈರಲ್ ಆಗಿದ್ದು, ಹಲವರು ತಮಗಾದ ಅನುಭವ ಹೇಳಿಕೊಂಡಿದ್ದಾರೆ. ರಮಣ್ ಅವರು, ನಾನು ಪ್ರತಿ ಬಾರಿ ಫ್ಲಿಪ್ ಕಾರ್ಟ್ ಬಳಸುತ್ತಿದ್ದುದಕ್ಕೆ ವಿಷಾದ ಅನಿಸುತ್ತಿದೆ. ಇದನ್ನು ಓದಿದವರು ತಮಗೂ ಇದೇ ಫೀಲ್ ಆಗಿದ್ದರೆ, ಫ್ಲಿಪ್ ಕಾರ್ಟ್ ಬಳಕೆ ಮಾಡಬೇಡಿ. ಏನಾದರೂ ತಪ್ಪು ಆದಲ್ಲಿ ಕಂಪನಿ ನಮ್ಮ ನೆರವಿಗೆ ಬರುವುದಿಲ್ಲ. ಜವಾಬ್ದಾರಿ ಹೊತ್ತುಕೊಳ್ಳುವುದಿಲ್ಲ. ಆವಾಗ ನಾವು ಅಸಹಾಯಕರಾಗುತ್ತೇವೆ ಎಂದು ಬರೆದಿದ್ದರು.
ಫ್ಲಿಪ್ ಕಾರ್ಟ್ ನಲ್ಲಿ ಆರ್ಡರ್ ಬಾಕ್ಸ್ ಓಪನ್ ಮಾಡಬೇಕಿದ್ದರೆ, ಹಣ ಪಾವತಿ ಮಾಡಿರಬೇಕು. ಉತ್ಪನ್ನ ನೋಡಿ ಹಣ ಕೊಡುವ ವ್ಯವಸ್ಥೆ ಇಲ್ಲ. ಹೀಗಾಗಿ ಮೋಸ ಹೋಗುತ್ತಿದ್ದೇವೆ ಎಂದು ಹೇಳಿದ್ದಲ್ಲದೆ, ತನಗೆ ಬಂದಿದ್ದ ಕಲ್ಲು ಮತ್ತು ಇಲೆಕ್ಟ್ರಾನಿಕ್ ವೇಸ್ಟ್ ಬೋರ್ಡಿನ ಫೋಟೋ ಮತ್ತು ವಿಡಿಯೋ ಹಂಚಿಕೊಂಡಿದ್ದರು. ಕಂಪನಿ ಬಳಿ ದೂರು ಕೊಟ್ಟು ಅಸಹಾಯಕನಾಗಿ ರಮಣ್ ಅವರು ಈ ರೀತಿ ಪೋಸ್ಟ್ ಮಾಡಿದ್ದರು ಎನ್ನಲಾಗುತ್ತಿದೆ.
ಟ್ವಿಟರ್ ಪೋಸ್ಟ್ ವೈರಲ್ ಆಗಿ ಸುದ್ದಿಯಾಗುತ್ತಿದ್ದಂತೆ ಎಚ್ಚೆತ್ತ ಫ್ಲಿಪ್ ಕಾರ್ಟ್ ಕಂಪನಿ ರಮಣ್ ಅವರಿಗೆ ಅವರು ನೀಡಿದ್ದ ಹಣವನ್ನು ವಾಪಸ್ ಮಾಡಿದೆ. ಫ್ಲಿಪ್ ಕಾರ್ಟ್ ಕಂಪನಿ ತನ್ನ ಸಹಾಯಕ್ಕೆ ಬಂದಿದ್ದು, ನೀಡಿದ್ದ ಹಣವನ್ನು ವಾಪಸ್ ಕೊಟ್ಟಿದೆ ಎಂದು ರಮಣ್ ಮರು ಪೋಸ್ಟ್ ಮಾಡಿದ್ದಾರೆ. ಇದೇ ರೀತಿ ಕೆಲವರು ಆನ್ಲೈನ್ ಮಾರುಕಟ್ಟೆಯಲ್ಲಿ ಆಗಿರುವ ಎಟವಟ್ಟಿನ ಬಗ್ಗೆ ಬರೆದುಕೊಂಡಿದ್ದಾರೆ. ಬಿಹಾರದಲ್ಲಿ ಡ್ರೋಣ್ ಕ್ಯಾಮರಾಕ್ಕೆ ಆರ್ಡರ್ ಮಾಡಿದ್ದ ವ್ಯಕ್ತಿಗೆ ಚೀಲದಲ್ಲಿ ಬಟಾಟೆ ಪಾರ್ಸೆಲ್ ಬಂದಿದ್ದ ಸಂಗತಿ ಕಳೆದ ಸೆಪ್ಟಂಬರ್ ತಿಂಗಳಲ್ಲಿ ಸುದ್ದಿಗೆ ಗ್ರಾಸವಾಗಿತ್ತು.
Flipkart’s big Diwali sale has just concluded, but the e-commerce giant faced backlash online after a Mangaluru customer complained of a curious case. Chinmaya Ramana ordered a laptop on Flipkart and to his shock, received a big stone and some e-waste instead. Ramana said in a series of tweets that he was regretting making the purchase on Flipkart and urged others not to shop on the platform as they would be left feeling “helpless" like him. However, a day later, Ramana said that Flipkart had refunded the full amount and that he would be continuing to shop with the platform.
17-12-25 10:30 pm
HK News Desk
ಯಶವಂತಪುರ - ಕಾರವಾರ ಗೋಮಟೇಶ್ವರ ಎಕ್ಸ್ ಪ್ರೆಸ್ ರೈಲು...
17-12-25 12:45 pm
ಶೃಂಗೇರಿ ; ಬಿಕಾಂ ಓದುತ್ತಿದ್ದ ವಿದ್ಯಾರ್ಥಿನಿ ಹಠಾತ್...
17-12-25 12:42 pm
ಶಿವಮೊಗ್ಗ, ಧಾರವಾಡ ಸೇರಿ ಹಲವೆಡೆ ಲೋಕಾಯುಕ್ತ ದಾಳಿ ;...
16-12-25 03:08 pm
ಮಂಗಳೂರು ಬೆನ್ನಲ್ಲೇ ತುಮಕೂರು ಜಿಲ್ಲಾಧಿಕಾರಿ ಕಚೇರಿಗ...
16-12-25 12:57 pm
17-12-25 10:27 pm
HK News Desk
ಆಸ್ಟ್ರೇಲಿಯಾ ಬೋಂಡಿ ಬೀಚ್ ದಾಳಿ ; ಹೈದ್ರಾಬಾದ್ ಮೂಲದ...
17-12-25 01:38 pm
ಯುಕೆಯ ಮಿಡ್ಲಾಂಡ್ಸ್ ನಲ್ಲಿ ಕನ್ನಡ ರಾಜ್ಯೋತ್ಸವ ; ಬರ...
16-12-25 06:33 pm
ಭಟ್ಕಳ ತಹಸೀಲ್ದಾರ್ ಕಚೇರಿಗೂ ಸ್ಫೋಟದ ಬೆದರಿಕೆ ; ತಮಿ...
16-12-25 01:56 pm
ಪಾಕಿಸ್ತಾನದ ಎರಡು ವಿವಿಗಳಲ್ಲಿ ಸಂಸ್ಕೃತ ಕಲಿಯಲು ಕೋರ...
15-12-25 08:12 pm
17-12-25 08:54 pm
Mangalore Correspondent
New year 2026, Mangalore Rules: ಹೊಸ ವರ್ಷಾಚರಣೆ...
17-12-25 08:19 pm
Udupi, Baby death: ಉಡುಪಿ ; ತಾಯಿ ಕೈಯಿಂದ ಜಾರಿ ಬ...
17-12-25 05:23 pm
Mangalore Jail, Fight, Ccb Police: ಮಂಗಳೂರು ಜೈ...
17-12-25 05:05 pm
Mangalore Landslide, Death: ಗುಡ್ಡ ಕುಸಿದು ಕಾರ್...
16-12-25 10:25 pm
17-12-25 11:14 am
Bangalore Correspondent
ಕದ್ರಿಯಲ್ಲಿ ಬೈಕ್ ಕದ್ದು ಭಟ್ಕಳದಲ್ಲಿ ಮಹಿಳೆಯ ಸರ ಕಸ...
16-12-25 10:35 pm
Mangalore Crime, Robbery, Mukka: 'ಬಂಗಾರ್ ಒಲ್ಪ...
15-12-25 10:26 pm
Udupi Murder, Brahmavar, Update: ಕುಡಿದ ಮತ್ತಿನ...
15-12-25 05:37 pm
Brahmavar Murder, Udupi Crime: ಎಣ್ಣೆ ಪಾರ್ಟಿಯಲ...
15-12-25 12:19 pm