ಗೋಕಳ್ಳರ ಮೇಲಿನ ಫೈರಿಂಗ್ ; ಪೊಲೀಸರ ನಡೆಗೆ ಶಾಸಕ ಕೋಟ್ಯಾನ್ ಸಮರ್ಥನೆ 

11-10-20 07:15 pm       Mangaluru Correspondent   ಕರಾವಳಿ

ಮೂಡುಬಿದ್ರೆಯ ಶಿರ್ತಾಡಿಯಲ್ಲಿ ಇಂದು ಬೆಳಗ್ಗೆ ನಡೆದ ಗೋಕಳ್ಳರ ತಂಡದ ಮೇಲಿನ ಪೊಲೀಸ್ ಫೈರಿಂಗ್ ಅನ್ನು ಮೂಡುಬಿದ್ರೆ ಶಾಸಕ ಉಮಾನಾಥ ಕೋಟ್ಯಾನ್ ಸಮರ್ಥಿಸಿಕೊಂಡಿದ್ದಾರೆ.

ಮಂಗಳೂರು, ಅಕ್ಟೋಬರ್ 11: ಮೂಡುಬಿದ್ರೆಯ ಶಿರ್ತಾಡಿಯಲ್ಲಿ ಇಂದು ಬೆಳಗ್ಗೆ ನಡೆದ ಗೋಕಳ್ಳರ ತಂಡದ ಮೇಲಿನ ಪೊಲೀಸ್ ಫೈರಿಂಗ್ ಅನ್ನು ಮೂಡುಬಿದ್ರೆ ಶಾಸಕ ಉಮಾನಾಥ ಕೋಟ್ಯಾನ್ ಸಮರ್ಥಿಸಿಕೊಂಡಿದ್ದಾರೆ.

ಮೂಡಬಿದ್ರಿ ಪೊಲೀಸರ ಕೆಲಸ ಅಭಿನಂದನಿಸುವಂಥದ್ದು.‌ ಗೋಕಳ್ಳರ ವಿರುದ್ಧ ನಿಜಕ್ಕೂ ಕಠಿಣ ಕ್ರಮದ ಅಗತ್ಯವಿದೆ.‌ ಹಿಂದೆಯೂ ನಾವು ಈ ಬಗ್ಗೆ ಸರಕಾರವನ್ನ ಒತ್ತಾಯಿಸಿದ್ದೆವು. ಗೃಹ ಸಚಿವರಿಗೂ ಈ ಕುರಿತು ಮನವಿ ನೀಡಿದ್ದು ಕಠಿಣ ಕ್ರಮಕ್ಕೆ ಒತ್ತಾಯಿಸಿದ್ದೇನೆ ಎಂದು ಉಮಾನಾಥ ಕೋಟ್ಯಾನ್ ತಿಳಿಸಿದ್ದಾರೆ. ‌

ಹಟ್ಟಿಗೆ ನುಗ್ಗಿ ಗೋವುಗಳನ್ನು ಕದ್ದುಕೊಂಡು ಹೋಗುವ ಕೃತ್ಯ ನಡೆಯುತ್ತಿದೆ. ರಿಟ್ಸ್, ಸ್ವಿಫ್ಟ್ ಕಾರಿನಲ್ಲಿ ಆರೇಳು ದನಗಳನ್ನು ತುಂಬಿಸಿಕೊಂಡು ಅಕ್ರಮವಾಗಿ ಕಸಾಯಿಖಾನೆಗೆ ಸಾಗಿಸುತ್ತಿದ್ದಾರೆ. ಗೋವು ಬಡ ರೈತರ ಪಾಲಿಗೆ ಕಾಮಧೇನು ಇದ್ದಂತೆ. ನಾಲ್ಕು ದನಗಳನ್ನು ಸಾಕಿ ಅದರಿಂದ ಬರುವ ಹಣದಲ್ಲಿ ಜೀವನ ಸಾಗಿಸುವ ರೈತರಿದ್ದಾರೆ. ಇಂಥ ಸಂದರ್ಭದಲ್ಲಿ ಗೋಕಳ್ಳರು ಹಟ್ಟಿಗೆ ನುಗ್ಗಿ ಗೋವುಗಳನ್ನು ಕದ್ದು ಸಾಗಿಸುವುದನ್ನು ಸಹಿಸಲಾಗದು. ಈ ಬಗ್ಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಮೂಡುಬಿದ್ರೆ ಪೊಲೀಸರಿಗೆ ಸೂಚನೆ ನೀಡಿದ್ದೆ.

ಇಂದು ಬೆಳಗ್ಗೆ ಪೊಲೀಸರು ನಿಲ್ಲಿಸಲು ಸೂಚನೆ ನೀಡಿದಾಗ ಲೆಕ್ಕಿಸದೆ ಪರಾರಿಯಾದ ಗೋಕಳ್ಳರ ಕಾರಿನ ಮೇಲೆ ಗುಂಡು ಹಾರಿಸಿದ್ದು ಸೂಕ್ತ ಕ್ರಮ. ಆರೋಪಿಗಳು ಕಾರು ಬಿಟ್ಟು ಪರಾರಿಯಾಗಿದ್ದಾರೆ. ಅದರಲ್ಲಿದ್ದ ಆರೇಳು ದನಗಳು ಮತ್ತು ಕಾರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಜಿಲ್ಲೆಯ ಎಲ್ಲೆಡೆ ಕಾರ್ಯಾಚರಣೆ ನಡೆಸಿ ಗೋಕಳ್ಳನ್ನು ಬಂಧಿಸಬೇಕೆಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯನ್ನು ಒತ್ತಾಯಿಸುತ್ತೇನೆ ಎಂದು ಶಾಸಕ ಕೋಟ್ಯಾನ್ ಹೇಳಿದ್ದಾರೆ.

Moodbidri MLA Umanath Kotain applauds the work done by Moodbidre police and protecting the illegally transported cattle in the car. I have ordered the cops to take stringent action against illegal cattle traffickers he added.