ಸಿದ್ದರಾಮಯ್ಯ ಜನರ ನಂಬಿಕೆ ಕಳಕೊಂಡಿದ್ದಾರೆ, ನೀವು ಪ್ರಾಮಾಣಿಕರಾಗಿದ್ದರೆ ಕ್ಷೇತ್ರ ಪಲಾಯನ ಮಾಡಬೇಕೇ ? 

29-10-22 01:45 pm       Mangalore Correspondent   ಕರಾವಳಿ

ಎಲ್ಲಿಯೂ ಕೂಡ ಚುನಾವಣೆಗೆ ನಿಂತು ಗೆಲ್ಲುವ ವಿಶ್ವಾಸ ಸಿದ್ದರಾಮಯ್ಯಗಿಲ್ಲ.‌ ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸಲು ಅವರು ಕ್ಷೇತ್ರ ಹುಡುಕುತ್ತಿದ್ದಾರೆ, ಯಾವುದೂ ಸಿಕ್ಕಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಕುಟುಕಿದ್ದಾರೆ.‌

ಮಂಗಳೂರು, ಅ.29: ಎಲ್ಲಿಯೂ ಕೂಡ ಚುನಾವಣೆಗೆ ನಿಂತು ಗೆಲ್ಲುವ ವಿಶ್ವಾಸ ಸಿದ್ದರಾಮಯ್ಯಗಿಲ್ಲ.‌ ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸಲು ಅವರು ಕ್ಷೇತ್ರ ಹುಡುಕುತ್ತಿದ್ದಾರೆ, ಯಾವುದೂ ಸಿಕ್ಕಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಕುಟುಕಿದ್ದಾರೆ.‌

ಖಾಸಗಿ ಕಾರ್ಯಕ್ರಮ ನಿಮಿತ್ತ ಮಂಗಳೂರಿಗೆ ಆಗಮಿಸಿದ್ದ ಯಡಿಯೂರಪ್ಪ ಬಳಿ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕೋಲಾರದಿಂದ ಸ್ಪರ್ಧಿಸಲು ಚಿಂತನೆ ನಡೆಸುತ್ತಿದ್ದಾರೆ ಎಂಬ ಬಗ್ಗೆ ಕೇಳಿದ ಪ್ರಶ್ನೆಗೆ, ಸಿದ್ದರಾಮಯ್ಯ ಒಮ್ಮೆ ಕೋಲಾರ ಅಂತ ಹೇಳುತ್ತಿದ್ದಾರೆ.‌ ಮಗದೊಮ್ಮೆ ಮೈಸೂರು ಅಂತಾರೆ. ಕೋಲಾರದಿಂದ ನಿಲ್ತಾರೆ ಅಂತಾದ್ರೆ ಅಲ್ಲಿದ್ದವರು ಇನ್ನೊಂದು ಕ್ಷೇತ್ರ ಹುಡುಕಬೇಕಾಗುತ್ತೆ.‌ ಇವರು ಮೈಸೂರು, ಬಾದಾಮಿ ಬಿಟ್ಟು ಮತ್ತೊಂದು ಕ್ಷೇತ್ರ ಹುಡುಕುತ್ತಿದ್ದಾರೆ ಯಾಕೆ ? 

Not A Political Sanyasi, Will Become Chief Minister After Next Assembly  Polls: Former Karnataka CM Siddaramaiah

ಬಾದಾಮಿ ಕ್ಷೇತ್ರದಿಂದ ಈಗ ಯಾಕೆ ನಿಲ್ತಿಲ್ಲ? ಬಾದಾಮಿ ಜನ ತಿರಸ್ಕಾರ ಮಾಡಿದ್ದಾರೆ ಎಂಬುದು ಈಗ ಸಿದ್ದರಾಮಯ್ಯ ಅವರಿಗೆ ಅರ್ಥವಾಗಿದೆ. ಅವರ ಬಗ್ಗೆ ಇದ್ದ ವಿಶ್ವಾಸ, ನಂಬಿಕೆಯನ್ನು ಅಲ್ಲಿಯ ಜನರು ಕಳೆದುಕೊಂಡಿದ್ದಾರೆ.‌ ಇದರಿಂದಲೇ ಗೊತ್ತಾಗುತ್ತೆ ಅವರ ಪಾಪ್ಯುಲಾರಿಟಿ ಎಷ್ಟಿದೆ ಅಂತ. ನೀವು ಪ್ರಾಮಾಣಿಕರಾಗಿದ್ದರೆ, ನೀವು ಎಲ್ಲಿಂದ ಗೆದ್ದಿದ್ರಿ ಅಲ್ಲಿಂದಲೇ ಚುನಾವಣೆ ಎದುರಿಸಿ.‌ ಇಲ್ಲ ಅಂದ್ರೆ ನೀವು ಹೆದರಿ ಬೆದರಿ ಪಲಾಯನ ಮಾಡುತ್ತಿದ್ದೀರಿ ಎಂಬುದು ಸಾಬೀತಾಗುತ್ತೆ ಎಂದು ವ್ಯಂಗ್ಯವಾಡಿದರು.‌

ರಾಜ್ಯದಲ್ಲಿ ಕಾಂಗ್ರೆಸ್ ಯಾತ್ರೆಗಳು ಪ್ರಭಾವ ಬೀರುತ್ತಾ ಎಂಬ ಪ್ರಶ್ನೆಗೆ, ಅವರ ಬಗ್ಗೆ ನಾನು ಮಾತಾನಾಡೋದಿಲ್ಲ. ಅದು ಅವರ ಪಕ್ಷಕ್ಕೆ ಬಿಟ್ಟ ವಿಚಾರ.‌ ಕಲ್ಬುರ್ಗಿಯಿಂದ ನಾಡಿದ್ದು ನಮ್ಮ ಕಾರ್ಯಕ್ರಮಗಳು ಆರಂಭವಾಗುತ್ತವೆ. ಅವರ ಯಾವುದೇ ಯಾತ್ರೆಗಳು, ಬಸ್ ಸಂಚಾರ ನಮ್ಮ ಮೇಲೆ ಚುನಾವಣೆ ಮೇಲೆ ಯಾವುದೇ ಪರಿಣಾಮ ಬೀರಲ್ಲ. ನರೇಂದ್ರ ಮೋದಿ ನೇತೃತ್ವದಲ್ಲಿ ಬಿಜೆಪಿ ಸರ್ಕಾರವನ್ನು ರಾಜ್ಯದಲ್ಲಿ ಅಧಿಕಾರಕ್ಕೆ ತರಲು ರಾಜ್ಯದ ಜನರು ಈಗಾಗಲೇ ತೀರ್ಮಾನ ಮಾಡಿದ್ದಾರೆ. ಕಾಂಗ್ರೆಸ್ ನ ಯಾವುದೇ ಕಾರ್ಯಕ್ರಮಗಳು ನಮ್ಮನ್ನು ಅಧಿಕಾರಕ್ಕೆ ಬರದಂತೆ ತಡೆಯಲು ಶಕ್ತಿಯಿಲ್ಲ.‌ ನಾಡಿದ್ದು ನಾನು ರಾಜ್ಯ ಪ್ರವಾಸ ಅರಂಭಿಸಲಿದ್ದೇನೆ ಎಂದು ಹೇಳಿದರು.

People have lost faith in Siddaramaiah slams B. S. Yediyurappa in Mangalore during an inaugural program or a private function here in the city.