ಮತ್ಸ್ಯ ಕೃಷಿಗೆ ಒತ್ತು ; 15 ಸಾವಿರ ಮೀನು ಮರಿಗಳನ್ನು ಬಿಟ್ಟ ಧನಲಕ್ಷ್ಮೀ ಗಟ್ಟಿ

12-10-20 12:16 pm       Mangalore Correspondent   ಕರಾವಳಿ

ನಶಿಸುತ್ತಿರುವ ಕೆರೆ ಮೀನುಗಳ ಸಂತತಿಯನ್ನು ಬೆಳೆಸಲು ಧನಲಕ್ಷ್ಮೀ ಗಟ್ಟಿ ಅವರು 15 ಸಾವಿರಕ್ಕೂ ಹೆಚ್ಚು ಮೀನು ಮರಿಗಳನ್ನು ಕೆರೆಗೆ ಬಿಟ್ಟು ಮತ್ಸ್ಯ ಕೃಷಿಗೆ ಒತ್ತು ನೀಡಿದ್ದಾರೆ. 

ಉಳ್ಳಾಲ, ಅಕ್ಟೋಬರ್ 12: ನಶಿಸುತ್ತಿರುವ ಕೆರೆ ಮೀನುಗಳ ಸಂತತಿಯನ್ನು ಬೆಳೆಸಲು ದ.ಕ. ಜಿಲ್ಲಾ ಪಂಚಾಯತ್ ಶಿಕ್ಷಣ ಮತ್ತು ಸ್ಥಾಯಿ ಸಮಿತಿ ಅಧ್ಯಕ್ಷೆ ಧನಲಕ್ಷ್ಮೀ ಗಟ್ಟಿ ತಾನು ಪ್ರತಿನಿಧಿಸುತ್ತಿರುವ ಸೋಮೇಶ್ವರ ಕ್ಷೇತ್ರ ವ್ಯಾಪ್ತಿಯಲ್ಲಿ 15 ಸಾವಿರಕ್ಕೂ ಹೆಚ್ಚು ಮೀನು ಮರಿಗಳನ್ನು ಕೆರೆಗೆ ಬಿಟ್ಟು ಮತ್ಸ್ಯ ಕೃಷಿಗೆ ಒತ್ತು ನೀಡಿದ್ದಾರೆ. 

ದಕ್ಷಿಣ ಕನ್ನಡ ಮೀನುಗಾರಿಕಾ ಇಲಾಖೆಯ ವತಿಯಿಂದ ಮುನ್ನೂರು, ಅಂಬ್ಲಮೋಗರು, ಹರೆಕಳ, ಪಾರಿಯಾಳ ಗ್ರಾ.ಪಂ ವ್ಯಾಪ್ತಿಯ ಕೆರೆಗೆ ದ.ಕ. ಜಿಲ್ಲಾ ಪಂಚಾಯತ್ ಸದಸ್ಯೆ ಹಾಗೂ ಶಿಕ್ಷಣ ಮತ್ತು ಸ್ಧಾಯಿ ಸಮಿತಿ ಅಧ್ಯಕ್ಷೆ ಧನಲಕ್ಷ್ಮೀ ಗಟ್ಟಿ ಮತ್ತು ಇಲಾಖೆಯ ಅಧಿಕಾರಿಗಳ ನೇತೃತ್ವದಲ್ಲಿ ಸುಮಾರು 15 ಸಾವಿರಕ್ಕೂ ಹೆಚ್ಚು ಮೀನುಮರಿಗಳನ್ನು ಕೆರೆಗೆ ಬಿಡಲಾಗಿದೆ. ಈ ಮುಖಾಂತರ ನಶಿಸಿ ಹೋಗುತ್ತಿರುವ ಮತ್ಸ್ಯ ಸಂಪತ್ತನ್ನು ಮತ್ತೆ ಜೀವಂತವಾಗಿಸಲು ಪಣ ತೊಟ್ಟಿದ್ದು ಈ ಸಮಾಜ ಮುಖಿ ಕಾರ್ಯ ಗ್ರಾಮಸ್ಥರಿಂದ ಪ್ರಶಂಸೆಗೆ ಪಾತ್ರವಾಗಿದೆ. 

ಮುನ್ನೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಭಂಡಾರಬೈಲ್ ಕೆರೆ, ಸರಕಾರಿ ಬಾವಿ, ಬಸ್ತಿಕಟ್ಟೆ ಕೆರೆ, ಹರೇಕಳ ಗ್ರಾಮದ ದೆಬ್ಬೇಲಿ ಸಾರ್ವಜನಿಕ ಕೆರೆ, ಒಟ್ಟು ಏಳು ಕೆರೆಗಳಲ್ಲಿ ತಿನ್ನಲು ಯೋಗ್ಯವಾದ ಸುಮಾರು 15,000 ಕ್ಕೂ ಹೆಚ್ಚು ಮೀನಿನ ಮರಿಗಳನ್ನು ಬಿಡಲಾಯ್ತು. ಕಳೆದ ವರುಷ ಸೋಮೇಶ್ವರದ ಗದಾತೀರ್ಥ ಕೆರೆಗೂ ಇಲಾಖೆ ವತಿಯಿಂದ ಸಾವಿರಾರು ಮೀನುಗಳನ್ನು ಬಿಡಲಾಗಿತ್ತು.