ಕುಕ್ಕೆಯಲ್ಲಿ ಭಾರೀ ಸಂಖ್ಯೆಯಲ್ಲಿ ಭಕ್ತರ ದಟ್ಟಣೆ ; ಆಶ್ಲೇಷ ಬಲಿ‌ ಸೇವೆಗೆ ಮುಗಿಬಿದ್ದ ಜನ !

12-10-20 03:17 pm       Headline Karnataka News Network   ಕರಾವಳಿ

ಕುಕ್ಕೆ‌ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ಲಾಕ್ಡೌನ್ ಬಳಿಕ ಮೊದಲ ಬಾರಿಗೆ ಅತಿ ಹೆಚ್ಚು ಭಕ್ತರ ಸಂದಣಿ ಕಂಡುಬಂದಿದೆ.

ಸುಬ್ರಹ್ಮಣ್ಯ, ಅಕ್ಟೋಬರ್ 12: ಕುಕ್ಕೆ‌ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ಲಾಕ್ಡೌನ್ ಬಳಿಕ ಮೊದಲ ಬಾರಿಗೆ ಅತಿ ಹೆಚ್ಚು ಭಕ್ತರ ಸಂದಣಿ ಕಂಡುಬಂದಿದೆ. ಇಂದು (ಅ.12) ಆಶ್ಲೇಷ ನಕ್ಷತ್ರ ಆಗಿರುವುದರಿಂದ ಹೆಚ್ಚಿನ ಸಂಖ್ಯೆಯ ಭಕ್ತರು ಆಶ್ಲೇಷ ಬಲಿ ಸೇವೆ ನೆರವೇರಿಸಲು ಸಾವಿರಾರು ಜನ ಮುಗಿಬಿದ್ದಿದ್ದಾರೆ. 

ಕುಕ್ಕೆಯಲ್ಲಿ ಸೇವೆಗಳನ್ನು ನಡೆಸಲು ಬೆಳಗ್ಗೆ 6 ಗಂಟೆಗೆ ರಶೀದಿ ನೀಡಲು ಪ್ರಾರಂಭಿಸುತ್ತಾರೆ. ಆದರೆ ಆಶ್ಲೇಷ ಬಲಿ ಸೇವೆಗೆ ಹೆಚ್ಚು ಜನ ಸೇರುವ ನಿರೀಕ್ಷೆ ಇದ್ದುದರಿಂದ ಭಕ್ತರು ಭಾನುವಾರ ರಾತ್ರಿಯೇ ದೇವಾಲಯದ ಕಚೇರಿ ಬಳಿ ಸರತಿ‌ ಸಾಲಿನಲ್ಲಿ ನಿಂತಿದ್ದರು. ಆಶ್ಲೇಷ ನಕ್ಷತ್ರ ದಿನದಂದು ಹೆಚ್ಚಿನ ಭಕ್ತರು ಆಶ್ಲೇಷ ಬಲಿ ಸೇವೆ ಮಾಡಿಸುತ್ತಾರೆ. ಈ ಬಾರಿ ಕೋವಿಡ್ ಹಿನ್ನಲೆಯಲ್ಲಿ ಸೇವೆಗಳಿಗೆ ಮಿತಿ ಇರುವುದರಿಂದ ಭಕ್ತರು ರಾತ್ರಿಯೇ ಸೇರಿದ್ದರು.

People throng in large number at kukke Subramanya temple for special pooja. As limited number of people are allowed to enter the temple due to covid 19 token system has been launched at the temple.