ಮಂಗಳೂರಿನ ಅತ್ಯಂತ ಹಿರಿಯ ಆಟೋ ಚಾಲಕ, ಪರೋಪಕಾರಿ ಮೋಂತು ಲೋಬೊ ಇನ್ನಿಲ್ಲ

06-11-22 11:31 am       Mangalore Correspondent   ಕರಾವಳಿ

ದಕ್ಷಿಣ ಕನ್ನಡ ಜಿಲ್ಲೆಯ ಅತ್ಯಂತ ಹಿರಿಯ ಆಟೋ ಚಾಲಕ, ಸಮಾಜ ಸೇವಕ 86 ವರ್ಷದ ಮೋಂತು ಲೋಬೋ ಇನ್ನಿಲ್ಲ. ಮಂಗಳೂರಿನಲ್ಲಿ ಸುದೀರ್ಘ 50 ವರ್ಷಗಳಿಂದಲೂ ಹೆಚ್ಚು ಕಾಲ ಆಟೋ ಚಾಲಕನಾಗಿ ಜನರಿಗೆ ಸೇವೆ ನೀಡುತ್ತಿದ್ದ ವೆಲೆನ್ಸಿಯಾ ನಿವಾಸಿ ಮೋಂತು ಲೋಬೊ ಶನಿವಾರ ನಿಧನರಾಗಿದ್ದಾರೆ.

ಮಂಗಳೂರು, ನ.6: ದಕ್ಷಿಣ ಕನ್ನಡ ಜಿಲ್ಲೆಯ ಅತ್ಯಂತ ಹಿರಿಯ ಆಟೋ ಚಾಲಕ, ಸಮಾಜ ಸೇವಕ 86 ವರ್ಷದ ಮೋಂತು ಲೋಬೋ ಇನ್ನಿಲ್ಲ. ಮಂಗಳೂರಿನಲ್ಲಿ ಸುದೀರ್ಘ 50 ವರ್ಷಗಳಿಂದಲೂ ಹೆಚ್ಚು ಕಾಲ ಆಟೋ ಚಾಲಕನಾಗಿ ಜನರಿಗೆ ಸೇವೆ ನೀಡುತ್ತಿದ್ದ ವೆಲೆನ್ಸಿಯಾ ನಿವಾಸಿ ಮೋಂತು ಲೋಬೊ ಶನಿವಾರ ನಿಧನರಾಗಿದ್ದಾರೆ.

ಆಟೋ ಚಾಲಕರಾಗಿದ್ದುಕೊಂಡೇ ಪರೋಪಕಾರಿ ಜೀವನ ಮಾಡುತ್ತಿದ್ದ ಮೋಂತು ಲೋಬೋ ಅವರನ್ನು ಭಾರತೀಯ ವಾಹನ ಚಾಲಕ ಚಾಲಕರ ಸಂಘದವರು 2012ರಲ್ಲಿ ಸಾರಥಿ ನಂಬರ್ ವನ್ ಎಂದು ಬಿರುದನ್ನಿತ್ತು ಗೌರವಿಸಿದ್ದರು. ಬೆಂಗಳೂರಿನ ಪುಟ್ಟಣ್ಣ ಚೆಟ್ಟಿ ಸಭಾಂಗಣದಲ್ಲಿ ನಡೆದ ವಿಶ್ವ ಚಾಲಕರ ದಿನದಂದು ಮೋಂತು ಲೋಬೊ ಅವರಿಗೆ ಈ ಬಿರುದು ನೀಡಲಾಗಿತ್ತು.

ಕಂಕನಾಡಿ ಜಂಕ್ಷನ್ನಲ್ಲಿ ಆಟೋ ಚಾಲಕರಾಗಿ ಸೇವೆ ನೀಡುತ್ತಿದ್ದ ಲೋಬೊ ಅವರು ಬಡವರ ಸೇವೆಗೆ ಸದಾ ಸನ್ನದ್ಧ ಇರುತ್ತಿದ್ದರು. ಬಡವರ ಮನೆಗಳಲ್ಲಿ ನೀರಿನ ಪೈಪ್, ಶಾಲೆ, ಕಾಲೇಜು, ಆಸ್ಪತ್ರೆಗಳಲ್ಲಿ ನೀರಿನ ಪೈಪ್ ಕೆಟ್ಟು ಹೋಗಿದ್ದರೆ ಲೋಬೊ ಅವರು ಸರಿಪಡಿಸುತ್ತಿದ್ದರು. ಬಡ ಶಾಲಾ ಮಕ್ಕಳಿಗೆ ಯೂನಿಫಾರ್ಮ್ ಬಟ್ಟೆಗಳನ್ನು ತೆಗೆಸಿಕೊಡುತ್ತಿದ್ದರು. ಅನಾಥಾಶ್ರಮಗಳಿಗೆ ತರಕಾರಿ ತಂದು ಮುಟ್ಟಿಸುವ ಕೆಲಸವನ್ನೂ ಮಾಡುತ್ತಿದ್ದರು. ಹೀಗಾಗಿ ಅವರನ್ನು ಸ್ಥಳೀಯರು ಪರೋಪಕಾರಿ ಲೋಬೊ ಮಾಮ್ ಎಂದೇ ಗುರುತಿಸುತ್ತಿದ್ದರು.

50 ವರ್ಷಗಳಿಂದ ಸುದೀರ್ಘ ಕಾಲದಿಂದ ಆಟೋ ಚಾಲಕರಾಗಿದ್ದರೂ ಒಂದು ಬಾರಿಯೂ ಅವರ ಕೈಯಲ್ಲಿ ಅಪಘಾತ ಆಗಿರಲಿಲ್ಲ. ಪೊಲೀಸ್ ಕೇಸನ್ನೂ ಎದುರಿಸಿರಲಿಲ್ಲ. ಲೋಬೊ ಅವರ ಅವಿರತ ಸೇವೆಯನ್ನು ಪರಿಗಣಿಸಿ ಮಂಗಳೂರಿನ ಆರ್ ಟಿಓ ಅಧಿಕಾರಿಗಳು ಮತ್ತು ಜಿಲ್ಲಾಡಳಿತದ ವತಿಯಿಂದ ಗೌರವಿಸಲಾಗಿತ್ತು. 2008ರಲ್ಲಿ ಆಗಿನ ಜಿಲ್ಲಾಧಿಕಾರಿ ಮಹೇಶ್ವರ ರಾವ್ ಸ್ವತಃ ಮೋಂತು ಲೋಬೊ ಅವರನ್ನು ಗೌರವಿಸಿದ್ದರು. 1957ರಲ್ಲಿ ಆಟೋ ಚಾಲಕರಾಗಿ ಮೊದಲ ಬಾರಿಗೆ ಲೈಸನ್ಸ್ ಪಡೆದಿದ್ದರು. ಆ ಕಾಲದಲ್ಲಿ ಆಟೋ ಚಾಲಕ ಲೈಸನ್ಸ್ ಪಡೆದ ಲೋಬೊ ಅವರು ಜಿಲ್ಲೆಯಲ್ಲಿ ಮೊದಲ ಅಧಿಕೃತ ಆಟೋ ಚಾಲಕ ಎಂಬ ಹೆಸರನ್ನೂ ಪಡೆದಿದ್ದಾರೆ.

Monthu Lobo, an auto rickshaw driver and an avid philanthropist, passed away on Saturday November 5. He was 86. Hailing from Valencia parish, Lobo, a zealous auto driver, was an example to his colleagues. He rendered his service to society for after work.