ಕರಾವಳಿಗೆ ಎರಡು ಲಕ್ಷ ಕೋಟಿ ಬಂಡವಾಳ, ಅಭಿವೃದ್ಧಿಗಾಗಿ ಡಬಲ್ ಇಂಜಿನ್ ಸರಕಾರ ಬೇಕು ; ಸಿಎಂ ಬೊಮ್ಮಾಯಿ ಪ್ರತಿಪಾದನೆ  

07-11-22 08:58 pm       Udupi Correspondent   ಕರಾವಳಿ

ರಾಜ್ಯದ ಬಿಜೆಪಿ ಸರಕಾರ ಕರಾವಳಿಯಲ್ಲಿ ಮೊದಲ ಬಾರಿಗೆ ಜನಸಂಕಲ್ಪ ಸಮಾವೇಶ ಆರಂಭಿಸಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಜಂಟಿಯಾಗಿ ಸಂಕಲ್ಪ ಯಾತ್ರೆ ಕೈಗೊಂಡಿದ್ದಾರೆ.

ಉಡುಪಿ, ನ.7: ರಾಜ್ಯದ ಬಿಜೆಪಿ ಸರಕಾರ ಕರಾವಳಿಯಲ್ಲಿ ಮೊದಲ ಬಾರಿಗೆ ಜನಸಂಕಲ್ಪ ಸಮಾವೇಶ ಆರಂಭಿಸಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಜಂಟಿಯಾಗಿ ಸಂಕಲ್ಪ ಯಾತ್ರೆ ಕೈಗೊಂಡಿದ್ದಾರೆ. ಉಡುಪಿ ಜಿಲ್ಲೆಯ ಕಾಪು ವಿಧಾನಸಭೆ ಕ್ಷೇತ್ರದಲ್ಲಿ ಸೋಮವಾರ ಜನಸಂಕಲ್ಪ ಸಭೆ ನಡೆದಿದ್ದು, ಕರಾವಳಿಯ ಜನರು ಮೋದಿ ಪರವಾಗಿದ್ದಾರೆ ಅನ್ನುವುದನ್ನು ತಿಳಿದು ಸಿಎಂ ಬೊಮ್ಮಾಯಿ ಅವರು ಅಭಿವೃದ್ಧಿಗಾಗಿ ಕೇಂದ್ರ ಮತ್ತು ರಾಜ್ಯದಲ್ಲಿ ಡಬಲ್ ಇಂಜಿನ್ ಸರಕಾರ ಇರಬೇಕೆಂದು ಪ್ರತಿಪಾದಿಸಿದ್ದಾರೆ.

Image

ಕರಾವಳಿಗೆ 2 ಲಕ್ಷ ಕೋಟಿ ಬಂಡವಾಳ

ಎಂಟು ವರ್ಷದ ಹಿಂದೆ ಭಾರತದ ಆರ್ಥಿಕ ಸ್ಥಿತಿ ದುಸ್ಥಿತಿಯಲ್ಲಿ ಇತ್ತು. ಈಗ ಇಡೀ ಜಗತ್ತು ಭಾರತವನ್ನು ನೋಡುವಂತಾಗಿದೆ. ಪ್ರಧಾನಿ ಮೋದಿ ಕರಾವಳಿ ಅಭಿವೃದ್ಧಿಗೆ ಸಾಗರ ಮಾಲಾ ಕಾರ್ಯಕ್ರಮಕ್ಕೆ ಅನುದಾನ ಕೊಟ್ಟಿದ್ದಾರೆ. ಕಡಲ ತೀರದ ಆರ್ಥಿಕತೆ ಹೆಚ್ಚಲಿದ್ದು ಇದಕ್ಕಾಗಿ ಗತಿಶಕ್ತಿ ಯೋಜನೆ ಮಾಡಿದ್ದಾರೆ. ಬಂದರನ್ನು ಮುಖ್ಯ ನಗರಗಳಿಗೆ ಜೋಡಿಸಬೇಕು ಅಂತ ಯೋಜನೆ ತಂದಿದ್ದಾರೆ. ಸುಮಾರು ಎರಡು ಲಕ್ಷ ಕೋಟಿ ಬಂಡವಾಳ ಮಂಗಳೂರು, ಉಡುಪಿ, ಕಾರವಾರಕ್ಕೆ ಬರಲಿದೆ. ಇದರ ಸಾಕಾರಕ್ಕಾಗಿ ಡಬಲ್ ಇಂಜಿನ್ ಸರ್ಕಾರ ಮುಂದುವರಿಯಬೇಕಾಗಿದೆ ಎಂದು ಬೊಮ್ಮಾಯಿ ಹೇಳಿದರು.

Image

ಕರಾವಳಿಯಲ್ಲಿ ಎರಡು ಲಕ್ಷ ಮೀನುಗಾರರ ಮಕ್ಕಳಿಗೆ ಸ್ಕಾಲರ್ಶಿಪ್ ನೀಡುತ್ತಿದ್ದೇವೆ. 20 ಲಕ್ಷ ಹೆಚ್ಚು ಮಕ್ಕಳಿಗೆ ವಿದ್ಯಾನಿಧಿ ನೀಡುತ್ತಿದ್ದೇವೆ. ಈ ಸೌಲಭ್ಯ ಬೇರೆ ಯಾವುದೇ ರಾಜ್ಯದಲ್ಲಿ ಇಲ್ಲ. ಮೀನುಗಾರರ 5 ಸಾವಿರ ಮನೆಗಳಿಗೆ ಸಾಲ ಮಂಜೂರು ಮಾಡಿದ್ದೇವೆ ಎಂದು ಹೇಳಿದ ಮುಖ್ಯಮಂತ್ರಿ, ಕರಾವಳಿ ಭಾಗದ ಜನರಿಗೆ ಕುಚ್ಚಲಕ್ಕಿ ನೀಡಲು ಕ್ರಮ ಕೈಗೊಳ್ಳಲಾಗಿದೆ. ಇಲ್ಲಿನದ್ದೇ ರೈತರ ಅಕ್ಕಿಯನ್ನು ಖರೀದಿಸಿ ನ್ಯಾಯಬೆಲೆ ಅಂಗಡಿಯಲ್ಲಿ ನೀಡುತ್ತೇವೆ ಎಂದು ಹೇಳಿದರು. ಕರಾವಳಿಯಲ್ಲಿ ಎಂಟು ಮೀನುಗಾರಿಕಾ ಬಂದರು ಅಭಿವೃದ್ಧಿ ಮಾಡಲಾಗುತ್ತದೆ. ನೂರು ಹೈಸ್ಪೀಡ್ ಬೋಟ್ ಮಂಜೂರು ಮಾಡಲಾಗಿದೆ. ಅದರಲ್ಲಿ ನಲ್ವತ್ತು ಪರ್ಸೆಂಟ್ ಸಬ್ಸಿಡಿ ನೀಡಲಾಗಿದೆ ಎಂದರು.

Karnataka: Former CM defends Lingayat saint on the pretext of Amit Shah,  said this on allegations of rape

ಅಧಿಕಾರದ ಕನಸು ಬಿಟ್ಟು ಕ್ಷೇತ್ರ ಉಳಿಸಿಕೊಳ್ಳಿ

ಸಿದ್ದರಾಮಯ್ಯ ಅಹಿಂದ, ಸಾಮಾಜಿಕ ನ್ಯಾಯ ಎಂದು ಹೇಳುತ್ತಿದ್ದರು. ಇವರ ಅಹಿಂದ ಈಗ ಎಲ್ಲಿ ಹೋಗಿದೆ, ಅಹಿಂದ ಈಗ ಉಳಿದಿಲ್ಲ, ಒಬ್ಬರೇ ಮುಂದೆ ಹೋಗಿದ್ದಾರೆ. ಕಾಂಗ್ರೆಸ್‌ವರು ನಮ್ಮದೇ ಸರ್ಕಾರ ಬರುತ್ತೆ ಅಂತಾರೆ. ಇವರು ಸರಕಾರದ ಕನಸು ಕಾಣುವುದನ್ನು ಬಿಟ್ಟು ತಮ್ಮ ಕ್ಷೇತ್ರ ಉಳಿಸಿಕೊಳ್ಳಲು ನೋಡಿ. ಮುಸ್ಲಿಮರನ್ನು ಮೋಸದಿಂದ ಬಳಸಿಕೊಂಡಿದ್ದೀರಿ. ಈಗ ಅವರೂ ಎಚ್ಚರಗೊಂಡಿದ್ದಾರೆ. ನಿಮ್ಮ ಆಳ್ವಿಕೆಯ 50 ವರ್ಷದಲ್ಲಿ ಎಷ್ಟರ ಮಟ್ಟಿಗೆ ಭ್ರಷ್ಟಾಚಾರ ಇತ್ತೆಂದರೆ, ಮಕ್ಕಳಿಗೆ ಕೊಡುವ ದಿಂಬಿನಲ್ಲೂ ಹಗರಣ ಮಾಡಿದ್ದೀರಿ. ಸೋಲಾರ್ ಹೆಸರಲ್ಲೂ ಭ್ರಷ್ಟಾಚಾರ ಮಾಡಿದ್ದೀರಿ. ಬಿಡಿಎನಲ್ಲೂ ಭ್ರಷ್ಟಾಚಾರ ಮಾಡಿದ್ದೀರಿ. ಸಣ್ಣ ನೀರಾವರಿ ಯೋಜನೆಯಡಿ ಪೂರ್ತಿ ಭ್ರಷ್ಟಾಚಾರ ಮಾಡಿದ್ದೀರಿ ಎಂದು ದೂರಿದರು.

Image

ಈ ಭಾಗದ ಬಿಲ್ಲವ ಮುಖಂಡರು ನಾರಾಯಣ ಗುರು ಹೆಸರಲ್ಲಿ ನಿಗಮದ ಬೇಡಿಕೆ ಇಟ್ಟಿದ್ದಾರೆ. ನಿಗಮ ಸ್ಥಾಪನೆ ಬಗ್ಗೆ ಶೀಘ್ರದಲ್ಲೇ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು. ಮಾಜಿ ಸಿಎಂ ಯಡಿಯೂರಪ್ಪ, ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ರಾಜ್ಯ ಕಾರ್ಯದರ್ಶಿ ರವಿಕುಮಾರ್ ಸೇರಿದಂತೆ ಉಡುಪಿ ಜಿಲ್ಲೆಯ ಶಾಸಕರು, ಬಿಜೆಪಿ ನಾಯಕರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಸುಮಾರು ಮೂರು ಸಾವಿರದಷ್ಟು ಜನರು ಸೇರಿದ್ದರು.

Karnataka Chief Minister Basavaraj Bommai Monday said the state unit of the BJP will conduct two more ‘rath yatras’ after the completion of the ongoing Jana Sankalp Yatra.