ಬ್ರೇಕಿಂಗ್ ನ್ಯೂಸ್
08-11-22 07:08 pm Mangalore Correspondent ಕರಾವಳಿ
ಮಂಗಳೂರು, ನ.8: ಬಿಜೆಪಿಯದ್ದು ಜನ ಸಂಕಷ್ಟದ ಯಾತ್ರೆ, ಜನ ಸಂಕಲ್ಪ ಅಲ್ಲ. ಬಿಜೆಪಿ ಪ್ರಣಾಳಿಕೆಯಲ್ಲಿ ಹೇಳಿದ್ದ ಯಾವುದನ್ನೂ ಈಡೇರಿಸಿಲ್ಲ. ಆಪರೇಶನ್ ಮಾಡಿ ಬೇರೆ ಪಕ್ಷದವರನ್ನು ಕರೆತಂದು ಅಧಿಕಾರಕ್ಕೇರಿ ತಮ್ಮದು ಡಬಲ್ ಇಂಜಿನ್ ಸರಕಾರವೆಂದು ಹೇಳ್ತಾರೆ. ಇವರೇನಾದ್ರೂ ಜನಾದೇಶದಿಂದ ಅಧಿಕಾರ ಪಡೆದಿದ್ದಾರೆಯೇ.. ಇವರ ಡಬಲ್ ಇಂಜಿನ್ ಸರಕಾರಕ್ಕೆ ಕನಿಷ್ಠ ರಸ್ತೆ ಗುಂಡಿ ಮುಚ್ಚುವ ಯೋಗ್ಯತೆಯಿಲ್ಲ ಎಂದು ವಿಧಾನಸಭೆ ವಿಪಕ್ಷ ಉಪನಾಯಕ ಯು.ಟಿ ಖಾದರ್ ಕಿಡಿಕಾರಿದ್ದಾರೆ.
ಮುಖ್ಯಮಂತ್ರಿ ಬೊಮ್ಮಾಯಿ ಅವರು ಕಾಪು ಜನಸಂಕಲ್ಪ ಯಾತ್ರೆಯಲ್ಲಿ ತಮ್ಮದು ಡಬಲ್ ಇಂಜಿನ್ ಸರಕಾರ ಎಂದು ಹೇಳಿದ್ದರು. ಈ ಬಗ್ಗೆ ಪ್ರಶ್ನೆ ಮಾಡಿದ ಖಾದರ್, ಹೈವೇ, ಪ್ರಮುಖ ರಸ್ತೆಗಳಲ್ಲಿಯೇ ಜನ ಗುಂಡಿಗೆ ಬಿದ್ದು ಸಾಯುತ್ತಿದ್ದಾರೆ. ಪ್ರತೀ ವಿಧಾನಸಭಾ ಕ್ಷೇತ್ರಕ್ಕೆ ಗುಂಡಿ ಮುಚ್ಚಲು ಸರಕಾರದಿಂದ ಕೊಟ್ಟಿದ್ದು ಬರೀ ಐದು ಲಕ್ಷ, ಏನು ಮಾಡಕ್ಕಾಗುತ್ತೆ ಇದರಲ್ಲಿ. ಕನಿಷ್ಠ 50 ಲಕ್ಷ ಆದ್ರೂ ರಸ್ತೆ ಗುಂಡಿ ಮುಚ್ಚಲು ಬೇಕಾಗುತ್ತದೆ. ಇವರ ಡಬಲ್ ಇಂಜಿನ್ನಲ್ಲಿ ಇಂಜಿನ್ ಕೆಟ್ಟೋಗಿದೆ, ಸೈಲೆನ್ಸರ್ ಮಾತ್ರ ಶಬ್ದ ಆಗ್ತಾ ಇದೆ. ಜನರಿಗೆ ಸರ್ಕಸ್ ಕಂಪೆನಿಯಲ್ಲಿ ಕುಳಿತ ರೀತಿ ಆಗಿದೆ, ಸೈಲನ್ಸರ್ ಶಬ್ದ ಕೇಳ್ತಾ ಇದೆಯಷ್ಟೆ ಎಂದು ವ್ಯಂಗ್ಯವಾಡಿದರು.
ಬಿಜೆಪಿಯವರು ಮೂರು ವರ್ಷಗಳಲ್ಲಿ ಸಾಗರ್ ಮಾಲಾ ಪ್ರಾಜೆಕ್ಟ್ ಬಗ್ಗೆ ಹೇಳುತ್ತಾ ಬಂದಿದ್ದಾರೆ, ಏನು ಮಾಡಿದ್ದಾರೆ. ಪಣಜಿಯಿಂದ ಮೋಟರ್ ವೇ ಅಂತ ಹೇಳಿದ್ದರು, ಎಲ್ಲಿಗೆ ಹೋಯ್ತು ಮೋಟರ್ ಬೋಟ್ ? ಡೀಪ್ ಫಿಶಿಂಗ್ ಬೋಟ್ ತರುವುದು, ಮೀನುಗಾರರಿಗೆ ಸಾವಿರ ಮನೆ ಕೊಡುವುದು ಎಲ್ಲಿ ಮುಟ್ಟಿದೆ ? ಮೀನುಗಾರರ ಮುಗ್ಧತೆಯನ್ನು ಬಿಜೆಪಿ ದುರುಪಯೋಗ ಮಾಡುತ್ತಿದೆ. ವಿಧಾನಸಭೆಯಲ್ಲಿ ಈ ಬಗ್ಗೆ ಕೇಳಿದರೆ ಫೈನಾನ್ಸ್ ಕಮಿಟಿಯಲ್ಲಿದೆ ಎಂದು ಹೇಳುತ್ತಿದ್ದಾರೆ. ಬಿಜೆಪಿ ರಾಜ್ಯ ಮಟ್ಟದಲ್ಲಿ ಮಾಡಿದ 600 ಘೋಷಣೆಗಳಲ್ಲಿ ಕೇವಲ 40 ಮಾತ್ರ ಈಡೇರಿದೆ.
ಮೂರು ವರ್ಷಗಳಿಂದ ಕುಚಲಕ್ಕಿ ಹೇಳುತ್ತಿದ್ದಾರೆ, ಬಂದಿಲ್ಲ ಯಾಕೆ ?
ಕರಾವಳಿ ಜನರಿಗೆ ಕುಚ್ಚಲಕ್ಕಿ ಕೊಡುವ ಬಗ್ಗೆ ಮೂರು ವರ್ಷಗಳಿಂದ ಹೇಳುತ್ತಿದ್ದಾರೆ, ಅಕ್ಕಿ ಬಂದೇ ಇಲ್ಲ. ಕುಚಲಕ್ಕಿ ಬಗ್ಗೆ ಪ್ರತಿ ಬಾರಿ ನಿಯೋಗ ಹೋಗಿದ್ದೇ ಬಂತು. ಪಡಿತರದಲ್ಲಿ ಒಳ್ಳೆ ಕ್ವಾಲಿಟಿ ಅಕ್ಕಿಯನ್ನಾದರೂ ಕೊಡಲಿ ಎಂದು ಹೇಳಿದ ಖಾದರ್, ಕಡಲ್ಕೊರೆತ ತಡೆಗೆ ಪ್ಯಾಕೇಜ್ ತರುವುದಾಗಿ ಹೇಳಿದ್ದರು. ಇನ್ನು ಅದರ ಗೊಡವೆಗೆ ಹೋಗಲ್ಲ. ಪ್ರತಿ ವರ್ಷ ಕಡಲ್ಕೊರೆತ ತಡೆ ಕಾಮಗಾರಿ ನಿರ್ವಹಣೆ ಮಾಡದೇ ಇದ್ದರೆ ಮುಂದಿನ ಬಾರಿ ಮನೆಗಳೇ ಕೊಚ್ಚಿ ಹೋಗ್ತವೆ. ಈಗ ರಸ್ತೆಯಷ್ಟೇ ಹೋಗಿದೆ, ಎಡಿಬಿ ಯೋಜನೆಯಲ್ಲಿ ಆಗಿರುವ ಕಾಮಗಾರಿಯನ್ನು ಪ್ರತಿ ವರ್ಷ ಮೈಂಟೇನ್ ಮಾಡಬೇಕಿದೆ. ಬಿಜೆಪಿ ಸರಕಾರ ತಾವು ಹೇಳಿದ್ದನ್ನು ಯಾವುದನ್ನೂ ಮಾಡಿಲ್ಲ, ಜನರ ಸಂಕಷ್ಟ ನೋಡಲು ಇವರು ಯಾತ್ರೆ ಹೋಗುತ್ತಿದ್ದಾರೆ ಎಂದು ಟಾಂಗ್ ನೀಡಿದರು.
ಬಿಜೆಪಿಗೆ ಸ್ಪಾನ್ಸರ್ ಮಾಡುವವರೇ ಬೀಫ್ ಫ್ಯಾಕ್ಟರಿ ಹೊಂದಿದ್ದಾರೆ !
ಮಂಗಳೂರಿನ ಸೆಂಟ್ರಲ್ ಮಾರುಕಟ್ಟೆಯಲ್ಲಿ ಬೀಫ್ ಸ್ಟಾಲ್ ಗೆ ಬಿಜೆಪಿ ಶಾಸಕರ ವಿರೋಧ ವಿಚಾರದ ಬಗ್ಗೆ ಕೇಳಿದ ಪ್ರಶ್ನೆಗೆ, ಬಿಜೆಪಿಗೆ ರಾಜ್ಯದಲ್ಲಿ ಸ್ಪಾನ್ಸರ್ ಮಾಡುವ ಮಂದಿಯೇ ಬೀಫ್ ಫ್ಯಾಕ್ಟರಿ ಹೊಂದಿದ್ದಾರೆ. ರಾಜ್ಯದಲ್ಲಿ 11 ಬೀಫ್ ರಫ್ತು ಫ್ಯಾಕ್ಟರಿಗಳಿದ್ದು ಇವರು ತಾಕತ್ತಿದ್ದರೆ ಲೈಸನ್ಸ್ ಕ್ಯಾನ್ಸಲ್ ಮಾಡಲಿ. ಬಿಜೆಪಿಯವರು ಯಾಕೆ ಬೀಫ್ ಫ್ಯಾಕ್ಟರಿಗೆ ಲೈಸನ್ಸ್ ಕೊಟ್ಟಿದ್ದಾರೆ. ಅಲ್ಲಿನ ಬೀಫ್ ಸ್ಟಾಲ್ ಗಳಿಗೆ ಎಲ್ಲಿಂದ ಮಾಂಸ ಹೋಗುತ್ತದೆ. ಅದೇ ರೀತಿ ಸೆಂಟ್ರಲ್ ಮಾರುಕಟ್ಟೆಯಲ್ಲಿ ಕಾನೂನು ಪ್ರಕಾರ ಸ್ಟಾಲ್ ಮಾಡಲಿ, ಬೇಡ ಎನ್ನುವುದು ಹೇಗೆ?
ಇಷ್ಟೆಲ್ಲ ಹೇಳುವ ಬಿಜೆಪಿಯವರು ರಾಜ್ಯದಲ್ಲಿ ಗೋವಿನ ಸಂತತಿ ಹೆಚ್ಚಿಸಲು ಏನು ಮಾಡಿದ್ದಾರೆ. ಕಾಂಗ್ರೆಸ್ ಕಾಲದಲ್ಲಿ ಪಶು ಭಾಗ್ಯ ಯೋಜನೆಯಡಿ ಉಚಿತವಾಗಿ ಗೋವು ಕೊಟ್ಟಿದ್ದೆವು. ಗೋಶಾಲೆ ನಿರ್ವಹಣೆಗೆ ಅನುದಾನ ಕೊಟ್ಟಿದ್ದೇವೆ, ಇವರು ಒಂದಾದ್ರೂ ಗೋಶಾಲೆ ಮಾಡಿದ್ದಾರೆಯೇ ?ಕೆಂಜಾರಿನ ಕಪಿಲಾ ಗೋಶಾಲೆಯನ್ನು ಒಡೆದು ಹಾಕಿದಾಗ ಇವರಿಗೆ ಕಾಳಜಿ ಇರಲಿಲ್ಲವೇ ? ಅಪರೂಪದ ಕಪಿಲಾ ಗೋವುಗಳನ್ನು ಸಾಕುವವರಿಗೆ ರಾಜ್ಯೋತ್ಸವ ಕೊಡಬೇಕಿತ್ತು. ಯಾರದ್ದೋ ಕಂಪನಿ ಮಾತು ಕೇಳಿ ಗೋಶಾಲೆಯನ್ನು ಕೆಡವಿ ಹಾಕಿದ್ದರು ಎಂದು ಶಾಸಕ ಯುಟಿ ಖಾದರ್ ಕಿಡಿಕಾರಿದರು.
Deputy leader of opposition in the Karnataka assembly, U T Khader on Tuesday November 8 termed BJP's Jan Sankalp Yatra as 'Jan Sankasta Yatra'. Addressing media he said, “During the elections, BJP had promised several schemes for the people of the state, but failed to fulfill the assured promises. To divert the attention of the people from major crises like corruption in the state, the BJP is organising such yatras.”
19-05-25 04:00 pm
HK News Desk
Bjp, Radha Mohan Das Agarwal: 1971ರ ಯುದ್ಧ ಗೆಲ...
17-05-25 01:44 pm
Santosh Lad, Modi, Pak, War: ಮೋದಿ ತಾವೇ ಸುಪ್ರೀ...
16-05-25 10:04 am
Davanagere Sp, Constable Accident: ದಾವಣಗೆರೆಯಲ...
15-05-25 10:16 pm
Yatnal FIR, Mahatma Gandhi; ಮಹಾತ್ಮ ಗಾಂಧಿ ಪಾಕಿ...
15-05-25 11:59 am
19-05-25 02:25 pm
HK News Desk
ಚಾರ್ಮಿನಾರ್ ಬಳಿಯ ಗುಲ್ಜಾರ್ ಹೌಸ್ನಲ್ಲಿ ಬೆಂಕಿ ಅವ...
19-05-25 01:46 pm
Brijesh Chowta, Tejaswi Surya: ಪಾಕ್ ಪ್ರೇರಿತ ಭ...
18-05-25 08:23 pm
ಪಾಕ್ ಪರವಾಗಿ ಬೇಹುಗಾರಿಕೆ ; ಭಾರತೀಯ ಸೇನಾ ಮಾಹಿತಿ ಸ...
17-05-25 10:51 pm
Donald Trump, Asim Munir: ಡೊನಾಲ್ಡ್ ಟ್ರಂಪ್ ಕುಟ...
17-05-25 03:42 pm
19-05-25 11:07 pm
Mangalore Correspondent
Jail Attack, Suhas Shetty, Mangalore, Chotte...
19-05-25 10:14 pm
Konaje Suicide, Mangalore, Hair loss: ಕೂದಲು ಉ...
19-05-25 09:41 pm
Mangalore Job Scam, Police, Lawrence Dsouza,...
19-05-25 05:22 pm
Akanksha Suicide, Dharmasthala, Mangalore: ಏರ...
19-05-25 12:31 pm
19-05-25 09:38 pm
Mangalore Correspondent
Belagavi Murder, Mother in law: ಸೊಸೆಗೆ ಮಕ್ಕಳಾ...
19-05-25 03:35 pm
Reshma Bariga, FIR, Mangalore; ಆಪರೇಶನ್ ಸಿಂಧೂರ...
18-05-25 07:45 pm
Suhas Shetty, BJP Corporator Shweta Poojary,...
18-05-25 07:35 pm
Bangalore Cigarette Murder, Video Viral: ಕಾರಿ...
17-05-25 05:00 pm