ಚಾರ್ಮಾಡಿ ಹೆದ್ದಾರಿಯಲ್ಲಿ ಕೆಟ್ಟು ನಿಂತ ಪೊಲೀಸ್ ವಾಹನ ; ಕಿಮೀ ಉದ್ದಕ್ಕೂ ಟ್ರಾಫಿಕ್ ಜಾಮ್, ಪ್ರಯಾಣಿಕರ ಪರದಾಟ 

13-11-22 08:40 pm       Mangalore Correspondent   ಕರಾವಳಿ

ಚಾರ್ಮಾಡಿ ಘಾಟಿ ಹೆದ್ದಾರಿಯಲ್ಲಿ ಭಾನುವಾರ ಘಾಟಿಯ ಹನ್ನೊಂದನೇ ತಿರುವಿನಲ್ಲಿ ಪೊಲೀಸ್ ಡಿಆರ್ ವಾಹನ ಕೆಟ್ಟು ನಿಂತ ಕಾರಣ ಗಂಟೆಗಟ್ಟಲೆ ಟ್ರಾಫಿಕ್ ಜಾಮ್ ಉಂಟಾಗಿದ್ದು ವಾಹನ ಸವಾರರು ಪರದಾಟ ನಡೆಸಬೇಕಾಯಿತು.

ಬೆಳ್ತಂಗಡಿ, ನ.13 : ಚಾರ್ಮಾಡಿ ಘಾಟಿ ಹೆದ್ದಾರಿಯಲ್ಲಿ ಭಾನುವಾರ ಘಾಟಿಯ ಹನ್ನೊಂದನೇ ತಿರುವಿನಲ್ಲಿ ಪೊಲೀಸ್ ಡಿಆರ್ ವಾಹನ ಕೆಟ್ಟು ನಿಂತ ಕಾರಣ ಗಂಟೆಗಟ್ಟಲೆ ಟ್ರಾಫಿಕ್ ಜಾಮ್ ಉಂಟಾಗಿದ್ದು ವಾಹನ ಸವಾರರು ಪರದಾಟ ನಡೆಸಬೇಕಾಯಿತು.

ಚಿಕ್ಕಮಗಳೂರಿನ ಪೊಲೀಸ್ ಡಿಆರ್ ವಾಹನ ರಸ್ತೆಯ ಮಧ್ಯೆ ಕೆಟ್ಟು ನಿಂತಿದ್ದರಿಂದ ವಾಹನಗಳು ಸಾಲುಗಟ್ಟಿದವು. ದೂರದಿಂದ ಆಗಮಿಸಿದ್ದ ಪ್ರವಾಸಿಗರು ಪರದಾಟ ನಡೆಸಿದರು. ಒಂದು ಬದಿಯಿಂದ ಮಾತ್ರ ನಿಧಾನಕ್ಕೆ ವಾಹನ ಚಲಿಸುವಂತಾಗಿತ್ತು. ಎರಡು ಬದಿಯಿಂದ ವಾಹನಗಳು ಸಂಚರಿಸಲಾಗದೇ ಕಿ.ಮೀ ಉದ್ದಕ್ಕೆ ವಾಹನಗಳು ಸಾಲುಗಟ್ಟಿ ನಿಂತಿದ್ದವು. 

ತಿರುವಿನಲ್ಲಿ ವಾಹನ ಕೆಟ್ಟು ನಿಂತಿದ್ದರಿಂದ ಇಡೀ ಹೆದ್ದಾರಿಯೇ ನರಕವಾಗಿತ್ತು. ಒಂದು ಬದಿಯಿಂದಲೂ ಟ್ರಾಫಿಕ್ ಜಾಮ್ ನಡುವೆ ವಾಹನ ಸಾಗಲು ಹರಸಾಹಸ ಪಡಬೇಕಾಯಿತು. ವಾರಾಂತ್ಯ ಆಗಿದ್ದರಿಂದ ವಾಹನಗಳ ಸಂಖ್ಯೆ ಹೆಚ್ಚಾಗಿತ್ತು. ಸಂಜೆ ಏಳು ಗಂಟೆ ಆದರೂ ವಾಹನ ರಿಪೇರಿ ಮುಗಿದಿಲ್ಲ. ವಾಹನವನ್ನು ಸ್ಥಳದಿಂದ ತೆರವು ಮಾಡೋದಕ್ಕೂ ಆಗಿಲ್ಲ. ಟ್ರಾಫಿಕ್ ಜಾಮ್ ನಿಂದಾಗಿ ಜನರು ತೀವ್ರ ತೊಂದರೆ ಅನುಭವಿಸ ಬೇಕಾಯಿತು.

Police vehicle blocks Charmadi Ghat for hours after getting repaired in the middle of the road in Belthangady.