ಬ್ರೇಕಿಂಗ್ ನ್ಯೂಸ್
14-11-22 03:42 pm Mangalore Correspondent ಕರಾವಳಿ
ಮಂಗಳೂರು, ನ.14: ಎಂಟು ವರ್ಷದ ಮಗುವಿಗೆ ವಿಪರೀತ ಅನ್ನುವಷ್ಟು ಮಧುಮೇಹದ ಕಾಯಿಲೆ ಇತ್ತು. ಈ ಕಾಯಿಲೆಗೆ ಜೀವನ ಪೂರ್ತಿ ಇನ್ಸುಲಿನ್ ಇಂಜೆಕ್ಷನ್ ಕೊಡುವುದಷ್ಟೇ ಪರ್ಯಾಯ ಅನ್ನುವುದು ಅಲೋಪತಿ ವೈದ್ಯರ ಮಾತಾಗಿತ್ತು. ಆದರೆ ದೂರದ ಉಕ್ರೇನ್ ದೇಶದಿಂದ ಮಂಗಳೂರಿಗೆ ಬಂದಿದ್ದ ದಂಪತಿಯ ಎಂಟು ವರ್ಷದ ಮಗು ಕೇವಲ ಮೂರೂವರೆ ತಿಂಗಳಲ್ಲಿ ಟೈಪ್ ವನ್ ಶುಗರ್ ಕಾಯಿಲೆಯಿಂದ ಪಾರಾಗಿ ಬಂದಿದೆ. ಇದಕ್ಕೆ ಕಾರಣವಾಗಿದ್ದು ತುಳುನಾಡಿನ ದೈವ ಕೊರಗಜ್ಜ ನೀಡಿದ ಅಭಯ ಮತ್ತು ಭಕ್ತಿಭೂಷಣದಾಸ್ ಗುರೂಜಿ ನೀಡಿದ್ದ ಆಯುರ್ವೇದ ಚಿಕಿತ್ಸೆ.
ಉಕ್ರೇನ್ ದೇಶದ ಆಂಡ್ರ್ಯೂ ಮತ್ತವರ ಪತ್ನಿ ಎಲೆನಾ ತಮ್ಮ ಮಗುವಿನಲ್ಲಾದ ಬದಲಾವಣೆ ಕಂಡು ಪವಾಡವೋ ಅನ್ನುವಂತೆ ಖುಷಿಯಲ್ಲಿದ್ದಾರೆ. ಮಧ್ಯಪ್ರದೇಶದಲ್ಲಿರುವ ಇಸ್ಕಾನ್ ಸಂಸ್ಥೆಗೆ ಸೇರಿದ ಕೃಷ್ಣನ ವೃಂದಾವನಕ್ಕೆ ಬಂದಿದ್ದ ಕೆಲವು ವಿದೇಶಿ ಪ್ರಜೆಗಳು, ಮಧುಮೇಹ ಕಾಯಿಲೆಗೆ ಅಲ್ಲಿನ ಗುರೂಜಿ ಚಿಕಿತ್ಸೆ ನೀಡುತ್ತಾರೆಂದು ಆಂಡ್ರ್ಯೂ ದಂಪತಿಗೆ ತಿಳಿಸಿದ್ದರು. ಅದರಂತೆ, ಭಕ್ತಿಭೂಷಣದಾಸ್ ಗುರೂಜಿ ಅವರನ್ನು ಸಂಪರ್ಕಿಸಿ ಉಕ್ರೇನ್ ದಂಪತಿ ಹುಡುಕಿಕೊಂಡು ಬಂದಿದ್ದರು. ಮೊದಲಿಗೆ, ಭಕ್ತಿಭೂಷಣದಾಸ್ ಉಡುಪಿಯ ಮಲ್ಪೆಯಲ್ಲಿ ಗೋಶಾಲೆ ಮಾಡುತ್ತಿದ್ದಾಗ ಆಂಡ್ರ್ಯೂ ದಂಪತಿ ಅಲ್ಲಿಗೆ ಬಂದಿದ್ದರಂತೆ. ಅಂದಿನಿಂದಲೇ ಪಂಚಗವ್ಯ ಇನ್ನಿತರ ಆಯುರ್ವೇದ ಚಿಕಿತ್ಸೆಯನ್ನೂ ಗುರೂಜಿ ಆರಂಭಿಸಿದ್ದರು. ಒಮ್ಮೆ ಚಿಕಿತ್ಸೆ ಪಡೆದು ಮರಳಿದ್ದ ದಂಪತಿ ಮೂರು ತಿಂಗಳ ಹಿಂದೆ ಮತ್ತೆ ಬಂದಿದ್ದರು. ಭಕ್ತಿಭೂಷಣದಾಸ್ ಈ ಬಾರಿ ಬಂಟ್ವಾಳ ತಾಲೂಕಿನ ಕುಮ್ಡೇಲಿನಲ್ಲಿ ಗೋಶಾಲೆ ಆರಂಭಿಸಿದ್ದು, ಸ್ಥಳೀಯರ ಸಹಕಾರದಲ್ಲಿ ದೇಸಿ ಗಿಡ್ಡ ತಳಿಗಳ ಗೋವನ್ನು ಸಲಹುತ್ತಿದ್ದಾರೆ.
ಗೋಶಾಲೆಯಲ್ಲಿ ನಡೆದಿತ್ತು ಪವಾಡ
ಉಕ್ರೇನ್ ದಂಪತಿ ಕಳೆದ ಮೂರು ತಿಂಗಳಿನಿಂದ ಕುಮ್ಡೇಲಿನ ರಾಧಾ ಸುರಭಿ ಗೋಶಾಲೆಯಲ್ಲಿದ್ದುಕೊಂಡೇ ಮಗುವಿಗೆ ಚಿಕಿತ್ಸೆ ಪಡೆಯುತ್ತಿದ್ದರು. ಈ ನಡುವೆ, ಕಳೆದ ಕೃಷ್ಣಾಷ್ಟಮಿ ಸಂದರ್ಭದಲ್ಲಿ ಗೋಶಾಲೆಯಲ್ಲಿ ಕೊರಗಜ್ಜನಿಗೆ ಕೋಲ ನಡೆದಿತ್ತು. ಆರು ತಿಂಗಳ ಹಿಂದೆ ಗೋಶಾಲೆ ಆರಂಭಿಸಿದಾಗ, ಗುಡ್ಡದ ತುದಿಯ 20 ಅಡಿ ಎತ್ತರದಿಂದ ನೆಲಕ್ಕೆ ಬಿದ್ದಿದ್ದ ಗೋವು ಎದ್ದು ನಿಲ್ಲದಾಗಿತ್ತು. ಕೈಕಾಲು ಬಲ ಕಳಕೊಂಡಂತೆ ನೆಲದಲ್ಲಿ ಬಿದ್ದುಕೊಂಡಿತ್ತು. ಸ್ಥಳೀಯ ಕೆಲವರ ಸೂಚನೆಯಂತೆ, ಗುರೂಜಿಯವರು ಗೋವು ಎದ್ದು ನಡೆದಲ್ಲಿ ಕೊರಗಜ್ಜನಿಗೆ ಕೋಲದ ಹರಕೆ ನೀಡುವುದಾಗಿ ಹೇಳಿದ್ದರು. ಪ್ರಾರ್ಥನೆ ನೆರವೇರಿಸಿದ ಕೆಲವೇ ಹೊತ್ತಲ್ಲಿ ಗೋವು ಎದ್ದು ನಡೆದಿದ್ದು ಗುರೂಜಿಗೂ ಪವಾಡ ಎನಿಸಿತ್ತು. ಆನಂತರ, ಕೊರಗಜ್ಜನ ಬಗ್ಗೆ ವಿಶೇಷ ಭಕ್ತಿ ಇಟ್ಟುಕೊಂಡಿರುವ ಗುರೂಜಿ ಗೋಶಾಲೆಯಲ್ಲೇ ಕೊರಗಜ್ಜನಿಗೆ ಕಟ್ಟೆ ಮಾಡಿಸಿದ್ದಾರೆ. ಅಲ್ಲದೆ, ಅಷ್ಟಮಿ ಸಂದರ್ಭದಲ್ಲಿ ಗೋವಿನ ಹೆಸರಲ್ಲಿ ಕೋಲದ ಹರಕೆಯನ್ನೂ ನೆರವೇರಿಸಿದ್ದರು. ಇದೇ ವೇಳೆ, ಅಲ್ಲಿದ್ದ ವಿದೇಶಿ ದಂಪತಿಯ ಮಗುವನ್ನು ಕೊರಗಜ್ಜನ ಪಾತ್ರಧಾರಿಯ ಕೈಯಲ್ಲಿ ಕೊಟ್ಟು ರೋಗ ವಾಸಿ ಮಾಡುವಂತೆ ಗುರೂಜಿ ಕೇಳಿಕೊಂಡಿದ್ದರು.
ವೀಳ್ಯದೆಲೆಯ ಪ್ರಸಾದವನ್ನು ವಿದೇಶಿ ದಂಪತಿಗೆ ಕೊಟ್ಟಿದ್ದ ಕೊರಗಜ್ಜ, 21 ದಿನದ ಒಳಗೆ ರೋಗ ವಾಸಿ ಮಾಡಿಸುತ್ತೇನೆ ಎಂದು ಅಭಯ ನೀಡಿತ್ತು. ಕೊರಗಜ್ಜನ ಅಭಯಕ್ಕೆ ಪ್ರತಿಯಾಗಿ ಗುರೂಜಿಯವರು ರೋಗ ವಾಸಿಯಾದಲ್ಲಿ ವಿದೇಶಿ ದಂಪತಿ ಹೆಸರಲ್ಲಿ ಅಗೇಲು ಸೇವೆ ಕೊಡಿಸುತ್ತೇನೆ ಎಂದು ಹೇಳಿಕೊಂಡಿದ್ದರು. ಕೊರಗಜ್ಜನ ಪವಾಡವೋ ಎನ್ನುವಂತೆ ಕೃಶಕಾಯ ಆಗಿದ್ದ ಎಂಟು ವರ್ಷದ ಮಗು ಮ್ಯಾಕ್ಸಿಂ ದಿನ ಕಳೆದಂತೆ ಹುಷಾರಾಗಿದ್ದಾನೆ. 500 ಪಾಯಿಂಟ್ ಮೇಲಿದ್ದ ಸಕ್ಕರೆ ಪ್ರಮಾಣ ಇಳಿಕೆಯಾಗುತ್ತಾ ಬಂದಿತ್ತು. ಮೂರು ತಿಂಗಳಲ್ಲಿ ಸಕ್ಕರೆ ಪ್ರಮಾಣ ನೂರರ ಒಳಗೆ ಬಂದಿದ್ದು, ಸಾಮಾನ್ಯ ಮಕ್ಕಳಂತೆ ಚುರುಕಾಗಿದ್ದಾನೆ. ಹಿಂದೆ ಇನ್ಸುಲಿನ್ ಇಲ್ಲದಿದ್ದರೆ, ಎದ್ದು ನಡೆಯಲು ಸಾಧ್ಯವಾಗದೇ ಇದ್ದ ಮಗು ಆಟ ಆಡುತ್ತಿರುವುದನ್ನು ನೋಡಿ ತಾಯಿ ಎಲೆನಾ ತಮ್ಮ ಕಣ್ಣನ್ನು ನಂಬದಾಗಿದ್ದಾರೆ.
ಭಕ್ತಿಭೂಷಣದಾಸ್ ಹೇಳುವ ಪ್ರಕಾರ, ಮಗುವಿಗೆ ಟೈಪ್ ವನ್ ಶುಗರ್ ಇತ್ತು. ಸಣ್ಣ ಮಕ್ಕಳಲ್ಲಿ ಕಾಣಿಸಿಕೊಳ್ಳುವ ಈ ಕಾಯಿಲೆಗೆ ನಿರಂತರ ಚಿಕಿತ್ಸೆ ನೀಡಿದರೆ ಮಾತ್ರ ನಿಯಂತ್ರಣ ಸಾಧ್ಯ. ಅತಿ ಹೆಚ್ಚು ಶುಗರ್ ಇರುವುದರಿಂದ ಇದಕ್ಕೆ ಅಲೋಪತಿಯಲ್ಲಿ ಚಿಕಿತ್ಸೆ ಇಲ್ಲ. ಸಕ್ಕರೆ ಪ್ರಮಾಣದ ನಿಯಂತ್ರಣಕ್ಕಾಗಿ ಇನ್ಸುಲಿನ್ ಮಾತ್ರ ಕೊಡುತ್ತಾರೆ. ಆದರೆ ಆಯುರ್ವೇದದಲ್ಲಿ ಬೇರೆ ರೀತಿಯ ಔಷಧ ಇದೆ ಎನ್ನುತ್ತಾರೆ. ಗುರೂಜಿಯವರು ನಾಡಿ ಚಿಕಿತ್ಸೆ ಮತ್ತು ಆಯುರ್ವೇದ ಬಗ್ಗೆ ತಿಳಿದುಕೊಂಡಿದ್ದು, 30 ವರ್ಷಗಳ ಕಾಲ ವೃಂದಾವನ ಮತ್ತು ಹಿಮಾಲಯದಲ್ಲಿದ್ದುಕೊಂಡು ಪ್ರಕೃತಿಯಲ್ಲೇ ಔಷಧಿ ಇರುವುದನ್ನು ಅರಿತುಕೊಂಡಿದ್ದಾರೆ.
ಕೊರಗಜ್ಜನ ಕಾರಣಿಕವೋ, ಗುರೂಜಿ ನೀಡಿದ ಔಷಧಿಯೋ ಒಟ್ನಲ್ಲಿ ಎಂಟು ವರ್ಷದ ಮಗು ಹುಷಾರಾಗಿದ್ದಾನೆ. ಇದಕ್ಕೆ ಪ್ರತಿಯಾಗಿ ಗುರೂಜಿ ಸಲಹೆಯಂತೆ, ಗೋಶಾಲೆಯಲ್ಲಿಯೇ ದಂಪತಿ ಹೆಸರಲ್ಲಿ ಅಗೇಲು ಸೇವೆ ನೆರವೇರಿಸಿದ್ದಾರೆ. ವಿಶೇಷ ಅಂದ್ರೆ, ಕೊರಗಜ್ಜನಿಗೆ ಇತರೆಡೆ ಇರುವಂತೆ ಮದ್ಯ, ಮಾಂಸದ ಬದಲು ಕೇವಲ ಹಾಲಿನ ಪಾಯಸ ಇಟ್ಟು ಸೇವೆ ಮಾಡಿಸಿದ್ದಾರೆ. ಕೊರಗಜ್ಜ ನಮ್ಮನ್ನು ಕಾಯುತ್ತಾನೆ, ಭಕ್ತಿ, ಶ್ರದ್ಧೆ ಇದ್ದಲ್ಲಿ ಕೊರಗಜ್ಜ ಎಂದಿಗೂ ಜೊತೆಗಿರುತ್ತಾನೆ ಎಂದು ಗುರೂಜಿ ಹೇಳುತ್ತಾರೆ. ಕಾಂತಾರ ಸಿನಿಮಾದ ಬಳಿಕ ಜಗತ್ತಿನಾದ್ಯಂತ ತುಳುನಾಡಿನ ದೈಗಳ ಮಹತ್ವ ಹರಡುತ್ತಿದೆ. ಇಂಥ ಸಂದರ್ಭದಲ್ಲೇ ಭಾರತೀಯ ಸಂಸ್ಕಾರ, ದೈವಾರಾಧನೆಯ ಬಗ್ಗೆ ಕಿಂಚಿತ್ ಅರಿವಿರದ ವಿದೇಶಿ ದಂಪತಿ ತುಳುನಾಡಿನ ದೈವಕ್ಕೆ ಹರಕೆ ಹೊತ್ತು ಅಗೇಲು ಸೇವೆ ನೆರವೇರಿಸಿದ್ದು ಕುತೂಹಲ ಮೂಡಿಸಿದೆ. ತೀವ್ರ ತರದ ಸಕ್ಕರೆ ಕಾಯಿಲೆಯಿಂದ ಬಳಲುತ್ತಿದ್ದ ಮಗು ಹುಷಾರಾಗಿದ್ದು ಕೊರಗಜ್ಜನ ಪವಾಡ ಎನ್ನುವಂತೆ ಸುದ್ದಿಯಾಗಿದೆ.
Mangalore Family from Ukraine offers Agelu Seve to Koragajja in Bantwal, eight year old son was suffering from Type 1 Diabetes and was taking insulin injections everyday. But in three months time their was healed and as a result the family has offered Agelu Pooja.
13-05-25 09:50 pm
HK News Desk
Davangere Accident, police constable death: ಲ...
13-05-25 09:37 pm
ಅರ್ಧದಲ್ಲಿ ಕದನ ನಿಲ್ಲಿಸಿದ್ದು ಯಾಕೆ? ಇಷ್ಟಕ್ಕೆ ನಮ್...
13-05-25 01:14 pm
Dr Subbanna Ayyappan Dead, Mandya: ಪದ್ಮಶ್ರೀ ಪ...
11-05-25 01:21 pm
Minister zameer ahmed, Pak, India: ಮೋದಿ ಹೇಳಿದ...
10-05-25 10:40 pm
13-05-25 08:47 pm
HK News Desk
ಪಾಕ್ ಅಣ್ವಸ್ತ್ರ ಗೋದಾಮಿನಲ್ಲಿ ವಿಕಿರಣ ಸೋರಿಕೆ ; ಅಮ...
13-05-25 06:46 pm
ಪಂಜಾಬ್ನಲ್ಲಿ ವಿಷಪೂರಿತ ಮದ್ಯ ಸೇವಿಸಿ 17 ಮಂದಿ ಬಲಿ...
13-05-25 04:39 pm
ಪಾಕಿಸ್ತಾನದಲ್ಲಿ ಬೆನ್ನು ಬೆನ್ನಿಗೆ ಭೂಕಂಪನ ; ಪರಮಾಣ...
13-05-25 02:51 pm
ಮೋದಿ ಎಚ್ಚರಿಕೆ ಬೆನ್ನಲ್ಲೇ ಮತ್ತೆ ಡ್ರೋಣ್ ದಾಳಿ ; ಕ...
12-05-25 11:21 pm
13-05-25 10:33 pm
Mangalore Correspondent
ಹೆದ್ದಾರಿ ಬದಿಯಲ್ಲಿ ಕಸ ಎಸೆಯುವವರ ಮೇಲೆ ನಿಗಾ ವಹಿಸಿ...
13-05-25 07:33 pm
ಕರಾವಳಿಗೆ ಮತ್ತೊಂದು ಸುಸಜ್ಜಿತ ವಿಮಾನ ನಿಲ್ದಾಣ ; ಕಾ...
12-05-25 08:22 pm
Comedy Khiladigalu Rakesh Poojary Death: 'ಕಾಮ...
12-05-25 11:26 am
Mangalore, Pilikula, Dr Suryaprakash Shenoy:...
11-05-25 05:01 pm
13-05-25 07:55 pm
HK News Desk
Abdul Rauf Azhar; ಕಂದಹಾರ್ ವಿಮಾನ ಹೈಜಾಕ್ ಮಾಸ್ಟರ...
08-05-25 05:32 pm
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm