ಟೋಲ್ ಗೇಟ್ ರದ್ದು ಎಂದು ಸಂಸದ ನಳಿನ್ ಟ್ವೀಟ್ ; ಶುಲ್ಕ ಸಂಗ್ರಹ ನಿಲ್ಲದಿದ್ದರೆ ರದ್ದಾಗುತ್ತಾ ಟೋಲ್ ಗೇಟ್ ?

14-11-22 05:28 pm       Mangalore Correspondent   ಕರಾವಳಿ

ಸುರತ್ಕಲ್ ಟೋಲ್ ಗೇಟ್ ವಿರೋಧಿ ಹೋರಾಟ ಪರಾಕಾಷ್ಠೆಗೆ ತಲುಪಿರುವ ನಡುವಲ್ಲೇ ಸಂಸದ ನಳಿನ್ ಕುಮಾರ್, ಸುರತ್ಕಲ್ ಟೋಲ್ ಸಂಗ್ರಹ ಕೇಂದ್ರ ರದ್ದುಗೊಂಡಿದ್ದು ಇದಕ್ಕೆ ಕಾರಣವಾದ ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಮತ್ತು ಪ್ರಧಾನಿ ಮೋದಿಗೆ ಅಭಿನಂದನೆಗಳು ಎಂದು ಟ್ವೀಟ್ ಮಾಡಿ ಸುದ್ದಿಯಾಗಿದ್ದಾರೆ.

ಮಂಗಳೂರು, ನ.14: ಸುರತ್ಕಲ್ ಟೋಲ್ ಗೇಟ್ ವಿರೋಧಿ ಹೋರಾಟ ಪರಾಕಾಷ್ಠೆಗೆ ತಲುಪಿರುವ ನಡುವಲ್ಲೇ ಸಂಸದ ನಳಿನ್ ಕುಮಾರ್, ಸುರತ್ಕಲ್ ಟೋಲ್ ಸಂಗ್ರಹ ಕೇಂದ್ರ ರದ್ದುಗೊಂಡಿದ್ದು ಇದಕ್ಕೆ ಕಾರಣವಾದ ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಮತ್ತು ಪ್ರಧಾನಿ ಮೋದಿಗೆ ಅಭಿನಂದನೆಗಳು ಎಂದು ಟ್ವೀಟ್ ಮಾಡಿ ಸುದ್ದಿಯಾಗಿದ್ದಾರೆ.

ಟೋಲ್ ಗೇಟ್ ವಿರೋಧಿ ಹೋರಾಟ ರಾತ್ರಿ –ಹಗಲೆನ್ನದೆ ಕಳೆದ 17 ದಿನಗಳಿಂದ ನಡೆಯುತ್ತಿದ್ದು, ಪ್ರತಿಭಟನೆ, ಹೋರಾಟ ಸಂಸದ ನಳಿನ್ ಕುಮಾರ್ ವಿರುದ್ಧವೇ ತಿರುಗಿದೆ. ಸಂಸದ ನಳಿನ್ ಕುಮಾರ್ ಒಂದು ತಿಂಗಳ ಹಿಂದೆಯೇ 20 ದಿನಗಳಲ್ಲಿ ಟೋಲ್ ಗೇಟ್ ರದ್ದಾಗುತ್ತೆ ಎಂದು ಹೇಳಿಕೆ ನೀಡಿದ್ದರು. ಆ ಗಡುವು ನವೆಂಬರ್ 7ಕ್ಕೆ ಮುಗಿದಿದ್ದು, ಭರವಸೆ ಹುಸಿಯಾಗಿದ್ದಕ್ಕೆ ನಗೆಪಾಟಲಿಗೂ ಈಡಾಗಿದ್ದರು. ಸಂಸದರ ಮತ್ತು ಹೆದ್ದಾರಿ ಅಧಿಕಾರಿಗಳ ಭರವಸೆಗಳೆಲ್ಲ ಗಾಳಿಗೆ ತೂರಿ ಹೋಗಿದ್ದವು. ಟೋಲ್ ಗೇಟ್ ತೆರವಾಗದೆ ಹೋರಾಟ ನಿಲ್ಲಲ್ಲ ಎಂದು ಹೋರಾಟಗಾರರು ಹೇಳಿದ್ದು ಧರಣಿ ಮುಂದುವರಿದಿತ್ತು.

NHAI urged not to renew collection contract for NITK Toll Plaza - The Hindu

ಇಂಥ ಸಂದರ್ಭದಲ್ಲೇ ಸಂಸದ ನಳಿನ್ ಕುಮಾರ್ ಟ್ವೀಟ್ ಬಂದಿದ್ದು, ಮತ್ತೆ ಸಾರಿಗೆ ಸಚಿವ ನಿತಿನ್ ಗಡ್ಕರಿಗೆ ಅಭಿನಂದಿಸುವ ಹಳೆ ರಾಗವನ್ನು ಹಾಡಿದ್ದಾರೆ. ಟೋಲ್ ಗೇಟ್ ರದ್ದುಗೊಳಿಸುವ ಯಾವುದೇ ಆದೇಶ ಪತ್ರವನ್ನು ಹಾಕಿಲ್ಲ. ಟೋಲ್ ರದ್ದುಗೊಳಿಸಲು ಈ ಮೊದಲೇ ಕೇಂದ್ರ ಸಚಿವರು ಭರವಸೆ ನೀಡಿದ್ದರು. ಈಗ ತಾಂತ್ರಿಕ ಅಂಶ ಪೂರೈಸಿದ್ದಾರೆ ಎಂದು ಟ್ವೀಟ್ ನಲ್ಲಿ ನಳಿನ್ ತಿಳಿಸಿದ್ದಾರೆ. ಸುರತ್ಕಲ್ ಟೋಲ್ ಗೇಟ್ ರದ್ದಾಗುತ್ತೆ ಎಂದು ಸಂಸದ ನಳಿನ್ ಕುಮಾರ್ ಹೇಳುತ್ತಿರುವುದು ಇದು ಮೊದಲೇನಲ್ಲ. ಕಳೆದ ಮೂರು ವರ್ಷಗಳಲ್ಲಿ ಹತ್ತಾರು ಬಾರಿ ಇದೇ ರೀತಿಯ ಮಾತು ಹೇಳಿಕೊಂಡು ಬಂದಿದ್ದಾರೆ. ಇದೇ ಕಾರಣಕ್ಕೆ ಸಂಸದ ನಳಿನ್ ಟೋಲ್ ಹೆಸರಲ್ಲಿ ನಗೆಪಾಟಲಿಗೂ ಈಡಾಗಿದ್ದಾರೆ. ಈ ಬಾರಿ ಚುನಾವಣೆ ಕಾಲದಲ್ಲಿ ಪ್ರತಿಭಟನಕಾರರು ತುಳುನಾಡು ವಿರುದ್ಧ ಬಿಜೆಪಿ ಎನ್ನುವ ರೀತಿ ಬಿಂಬಿಸಿದ್ದರೂ, ಸಂಸದರು ಎಚ್ಚತ್ತಿರಲಿಲ್ಲ.

ಸಂಸದ ನಳಿನ್ ಕುಮಾರ್ ಟ್ವೀಟ್ ಬಗ್ಗೆ ಹೆದ್ದಾರಿ ಪ್ರಾಧಿಕಾರದ ಯೋಜನಾ ನಿರ್ದೇಶಕ ಲಿಂಗೇಗೌಡರಲ್ಲಿ ಕೇಳಿದರೆ, ನಮಗೇನು ಮಾಹಿತಿ ಇಲ್ಲ ಎಂದಿದ್ದಾರೆ. ಕೇಂದ್ರ ಮಟ್ಟದಲ್ಲಿ ಆದೇಶ ಆಗಿದ್ದಿರಬಹುದು. ಅದರ ಪ್ರತಿಯನ್ನು ಟ್ವಿಟರ್ ನಲ್ಲಿ ಹಾಕಿರುತ್ತಿದ್ದರೆ ನಳಿನ್ ಟ್ವೀಟ್ ಗೆ ಹೆಚ್ಚು ಬಲ ಬರುತ್ತಿತ್ತು. ಇಲ್ಲದಿದ್ದರೆ ಸಂಸದರ ಮಾತಿಗೆ ಕಿಮ್ಮತ್ತು ಬರೋದಿಲ್ಲ.

The long-running campaign from the public and like-minded organisations has finally yielded a result. Surathkal toll gate has stopped collecting toll. BJP state president MP Nilin Kumar Kateel has confirmed it through a tweet.