ಬ್ರೇಕಿಂಗ್ ನ್ಯೂಸ್
15-11-22 07:15 pm Mangalore Correspondent ಕರಾವಳಿ
ಉಳ್ಳಾಲ, ನ.15 : ಜಗತ್ತಿನಾದ್ಯಂತ ಕಾಂತಾರ ಚಿತ್ರವು ಹೌಸ್ ಫುಲ್ ಪ್ರದರ್ಶನದೊಂದಿಗೆ 50 ದಿವಸ ಪೂರೈಸುತ್ತಿದ್ದು ಚಿತ್ರದ ಅದ್ಭುತ ಯಶಸ್ಸಿಗೆ ದೈವಗಳ ಆಶೀರ್ವಾದವೇ ಕಾರಣ ಎಂದು ಕಾಂತಾರ ಚಿತ್ರದ ಲೀಲಾ ಖ್ಯಾತಿಯ ನಾಯಕಿ ನಟಿ ಸಪ್ತಮಿ ಗೌಡ ಹೇಳಿದರು.
ಅವರಿಂದು ಕಲ್ಲಾಪಿನ ಬುರ್ದುಗೋಳಿಯ ಗುಳಿಗ, ಕೊರಗ ತನಿಯ ದೈವಗಳ ಉದ್ಭವ ಶಿಲೆಯ ಆದಿಸ್ಥಳಕ್ಕೆ ಕುಟುಂಬ, ಸ್ನೇಹಿತರೊಂದಿಗೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದರು. ಬುರ್ದುಗೋಳಿ ಆದಿಸ್ಥಳ ಕ್ಷೇತ್ರದ ಸಮಿತಿ ಅಧ್ಯಕ್ಷರಾದ ವಿಶ್ವನಾಥ್ ನಾಯ್ಕ್ ಅವರು ಸಪ್ತಮಿ ಗೌಡ ಅವರನ್ನ ಬರಮಾಡಿ ಕ್ಷೇತ್ರದ ಐತಿಹ್ಯವನ್ನ ತಿಳಿಸಿದರು.
ಈ ವೇಳೆ ಮಾತನಾಡಿದ ಸಪ್ತಮಿ ಅವರು ವಿಶ್ವದಾದ್ಯಂತ ಕಾಂತಾರ ಸಿನಿಮಾ ಸದ್ದು ಮಾಡುತ್ತಿದೆ. ಸಿನಿಮಾ ನಿರ್ಮಾಣದ ವೇಳೆ ಕರಾವಳಿ ಭಾಗದ ಆಚರಣೆ, ಸಂಸ್ಕೃತಿ, ದೈವಾರಾಧನೆ ಬಗ್ಗೆ ನಾನು ತಿಳಿದುಕೊಂಡೆ. ಇತ್ತೀಚೆಗೆ ನಡೆದ ವೈಯಕ್ತಿಕ ಘಟನೆಯೊಂದು ದೈವಗಳ ಬಗ್ಗೆ ಹುಟ್ಟಿದ ನಂಬಿಕೆ ಗಟ್ಟಿಯಾಗುವಂತೆ ಮಾಡಿದೆ. ಈಗಾಗಲೇ ಸಿನಿಮಾಗಳಲ್ಲಿ ನಟಿಸಲು ಸಾಕಷ್ಟು ಅವಕಾಶಗಳು ಬಂದಿದ್ದು ಸ್ಕ್ರಿಪ್ಟ್ ರೀಡಿಂಗ್ ನಡೀತಾ ಇದೆ. ಜನರ ಪ್ರೀತಿಯಿಂದ ಜಗತ್ತಿನಾದ್ಯಂತ ಕಾಂತಾರ ಹೌಸ್ ಫುಲ್ ಆಗಿ ಓಡುತ್ತಿದ್ದು ತುಳುನಾಡಿನ ದೈವಗಳ ಆಶೀರ್ವಾದವೇ ಚಿತ್ರಕ್ಕೆ ಶ್ರೀರಕ್ಷೆ ಎಂದರು.
ಬಳಿಕ ಅವರು ಕುತ್ತಾರಿನ ಕೊರಗಜ್ಜನ ಆದಿಸ್ಥಳಕ್ಕೂ ತೆರಳಿ ಪ್ರಾರ್ಥನೆ ಸಲ್ಲಿಸಿದರು. ಸಪ್ತಮಿ ಗೌಡರ ತಾಯಿ ಶಾಂತ, ನಟ ಸನಿಲ್ ಗುರು, ತೊಕ್ಕೊಟ್ಟು ಸಾಯಿ ಪರಿವಾರ್ ಟ್ರಸ್ಟ್ ನ ಪ್ರಮುಖರಾದ ಪ್ರವೀಣ್ ಎಸ್ .ಕುಂಪಲ, ಪುರುಷೋತ್ತಮ ಕಲ್ಲಾಪು, ಕಿಶೋರ್ ಕುಂಪಲ, ಕೌಶಿಕ್ ಸೇವಂತಿ ಗುಡ್ಡೆ, ಗೀತೇಶ್ ಮೊದಲಾದವರು ಜತೆಗಿದ್ದರು.
Kantara movie actress Sapthami Gowda visits koraga daiva temple at Ullal in Mangalore. Says success of the Kantara movie is only because of Daiva.
13-05-25 09:50 pm
HK News Desk
Davangere Accident, police constable death: ಲ...
13-05-25 09:37 pm
ಅರ್ಧದಲ್ಲಿ ಕದನ ನಿಲ್ಲಿಸಿದ್ದು ಯಾಕೆ? ಇಷ್ಟಕ್ಕೆ ನಮ್...
13-05-25 01:14 pm
Dr Subbanna Ayyappan Dead, Mandya: ಪದ್ಮಶ್ರೀ ಪ...
11-05-25 01:21 pm
Minister zameer ahmed, Pak, India: ಮೋದಿ ಹೇಳಿದ...
10-05-25 10:40 pm
13-05-25 08:47 pm
HK News Desk
ಪಾಕ್ ಅಣ್ವಸ್ತ್ರ ಗೋದಾಮಿನಲ್ಲಿ ವಿಕಿರಣ ಸೋರಿಕೆ ; ಅಮ...
13-05-25 06:46 pm
ಪಂಜಾಬ್ನಲ್ಲಿ ವಿಷಪೂರಿತ ಮದ್ಯ ಸೇವಿಸಿ 17 ಮಂದಿ ಬಲಿ...
13-05-25 04:39 pm
ಪಾಕಿಸ್ತಾನದಲ್ಲಿ ಬೆನ್ನು ಬೆನ್ನಿಗೆ ಭೂಕಂಪನ ; ಪರಮಾಣ...
13-05-25 02:51 pm
ಮೋದಿ ಎಚ್ಚರಿಕೆ ಬೆನ್ನಲ್ಲೇ ಮತ್ತೆ ಡ್ರೋಣ್ ದಾಳಿ ; ಕ...
12-05-25 11:21 pm
13-05-25 10:33 pm
Mangalore Correspondent
ಹೆದ್ದಾರಿ ಬದಿಯಲ್ಲಿ ಕಸ ಎಸೆಯುವವರ ಮೇಲೆ ನಿಗಾ ವಹಿಸಿ...
13-05-25 07:33 pm
ಕರಾವಳಿಗೆ ಮತ್ತೊಂದು ಸುಸಜ್ಜಿತ ವಿಮಾನ ನಿಲ್ದಾಣ ; ಕಾ...
12-05-25 08:22 pm
Comedy Khiladigalu Rakesh Poojary Death: 'ಕಾಮ...
12-05-25 11:26 am
Mangalore, Pilikula, Dr Suryaprakash Shenoy:...
11-05-25 05:01 pm
13-05-25 07:55 pm
HK News Desk
Abdul Rauf Azhar; ಕಂದಹಾರ್ ವಿಮಾನ ಹೈಜಾಕ್ ಮಾಸ್ಟರ...
08-05-25 05:32 pm
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm