ವಾರದೊಳಗೆ ಸುರತ್ಕಲ್ ಟೋಲ್ ತೆರವು ; ಪ್ರತಿಭಟನೆ ಓಕೆ, ಬಿಜೆಪಿ ವಿರುದ್ಧ ಬಿಂಬಿಸಿದ್ದು ಸರಿಯಲ್ಲ, ಟೋಲ್ ತೆರವಿಗೆ ಕಾಂಗ್ರೆಸಿನವರೇನು ಮಾಡಿದ್ದಾರೆ ?  

15-11-22 09:46 pm       Mangalore Correspondent   ಕರಾವಳಿ

ಸುರತ್ಕಲ್ ಟೋಲ್ ಗೇಟ್ ತೆರವಿನ ಬಗ್ಗೆ ಕ್ಷೇತ್ರದ ಶಾಸಕ ಭರತ್ ಶೆಟ್ಟಿ ಕಡೆಗೂ ಮೌನ ಮುರಿದಿದ್ದಾರೆ. ಕಳೆದ ಒಂದು ತಿಂಗಳಿನಿಂದ ಪ್ರತಿಭಟನೆ, ಧರಣಿ ನಡೆಯುತ್ತಿದ್ದರೂ, ಸ್ಥಳೀಯ ಬಿಜೆಪಿ ಶಾಸಕ ತುಟಿ ಬಿಚ್ಚಿಲ್ಲ ಎಂಬ ಆರೋಪ ಕೇಳಿಬಂದಿತ್ತು.

ಮಂಗಳೂರು, ನ.15: ಸುರತ್ಕಲ್ ಟೋಲ್ ಗೇಟ್ ತೆರವಿನ ಬಗ್ಗೆ ಕ್ಷೇತ್ರದ ಶಾಸಕ ಭರತ್ ಶೆಟ್ಟಿ ಕಡೆಗೂ ಮೌನ ಮುರಿದಿದ್ದಾರೆ. ಕಳೆದ ಒಂದು ತಿಂಗಳಿನಿಂದ ಪ್ರತಿಭಟನೆ, ಧರಣಿ ನಡೆಯುತ್ತಿದ್ದರೂ, ಸ್ಥಳೀಯ ಬಿಜೆಪಿ ಶಾಸಕ ತುಟಿ ಬಿಚ್ಚಿಲ್ಲ ಎಂಬ ಆರೋಪ ಕೇಳಿಬಂದಿತ್ತು. ಈ ಬಗ್ಗೆ ಉತ್ತರ ನೀಡಿರುವ ಭರತ್ ಶೆಟ್ಟಿ, ಕಳೆದ ಎರಡು ವರ್ಷಗಳಲ್ಲಿ ತಾನೆಷ್ಟು ಬಾರಿ ಕೇಂದ್ರ ಸಾರಿಗೆ ಸಚಿವರಿಗೆ ಪತ್ರ ಬರೆದಿದ್ದೇನೆ. ಯಾವೆಲ್ಲ ಪ್ರಯತ್ನಗಳನ್ನು ಮಾಡಿದ್ದೇನೆ ಎಂಬುದನ್ನು ವಿವರಿಸಿದ್ದಾರೆ. ಅಲ್ಲದೆ, ಈ ಬಗ್ಗೆ ಹಿಂದಿನ ಕಾಂಗ್ರೆಸ್ ಶಾಸಕರು, ಸಚಿವರು ಏನು ಮಾಡಿದ್ದಾರೆ. ಅವರಿಗೆ ಹೊಣೆಗಾರಿಕೆ ಇರಲಿಲ್ಲವೇ ಎಂದು ಪ್ರಶ್ನೆ ಮಾಡಿದ್ದಾರೆ.

ನಗರದಲ್ಲಿ ಸುದ್ದಿಗೋಷ್ಟಿ ನಡೆಸಿದ ಭರತ್ ಶೆಟ್ಟಿ, ಟೋಲ್ ಗೇಟ್ ವಿರೋಧಿ ಪ್ರತಿಭಟನೆಯ ಬಗ್ಗೆ ಟೀಕಿಸುವುದಿಲ್ಲ. ಸಾರ್ವಜನಿಕ ಸಮಸ್ಯೆ ವಿಚಾರದಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ಆದರೆ ಅದರಲ್ಲಿ ತೊಡಗಿಕೊಂಡ ಕೆಲವು ಮಾಜಿ ಶಾಸಕರು, ಮಾಜಿ ಸಚಿವ ಅಭಯಚಂದ್ರ ಜೈನ್ ಹಾಲಿ ಶಾಸಕರು, ಸಂಸದರ ವಿರುದ್ಧ ಟೀಕಿಸುತ್ತಿದ್ದಾರೆ. ಇಡೀ ಪ್ರತಿಭಟನೆಯನ್ನು ತುಳುನಾಡು ವಿರುದ್ಧ ಬಿಜೆಪಿಯೆಂದು ಬಿಂಬಿಸುತ್ತಿದ್ದಾರೆ. ಬಿಜೆಪಿಯವರೇ ಟೋಲ್ ಗೇಟ್ ಸ್ಥಾಪಿಸಿರುವ ರೀತಿ ಬಿಂಬಿಸುತ್ತಿದ್ದಾರೆ. 2013ರಲ್ಲಿ ಸುರತ್ಕಲ್ ಟೋಲ್ ಗೇಟ್ ಬಗ್ಗೆ ನೋಟಿಫಿಕೇಶನ್ ಆಗಿದ್ದು, 2015ರ ನಂತರ ಟೋಲ್ ವಸೂಲಿ ಮಾಡಿಕೊಂಡು ಬಂದಿದೆ. ಯುಪಿಎ ಸರಕಾರವೇ ಇದನ್ನು ಜಾರಿಗೆ ತಂದಿತ್ತು. ಹಾಗಿದ್ದರೂ, ಹಿಂದಿನ ಶಾಸಕರು ಮೌನ ವಹಿಸಿದ್ದು ಯಾಕೆ. ಅವರೆಲ್ಲ ಈ ಟೋಲ್ ಗೇಟ್ ತೆರವು ಮಾಡಲು ಯಾವ ಪ್ರಯತ್ನ ಮಾಡಿದ್ದಾರೆ ಎಂದು ಪ್ರಶ್ನಿಸಿದರು.

Nitin Gadkari inaugurates NHAI's new building in Nagpur, says the authority  needs reforms - The Daily Guardian

ನಾನು ಕಳೆದ ಎರಡು ವರ್ಷಗಳಲ್ಲಿ ಕೇಂದ್ರ ಸಾರಿಗೆ ಸಚಿವಾಲಯಕ್ಕೆ ಮತ್ತು ಹೆದ್ದಾರಿ ಪ್ರಾಧಿಕಾರಕ್ಕೆ ಪತ್ರ ಬರೆದಿದ್ದೇನೆ. ಟೋಲ್ ಗೇಟ್ ತೆರವಿನ ಜೊತೆಗೆ ಸುರತ್ಕಲ್, ಕುಳೂರು, ಕೊಟ್ಟಾರದ ಅವೈಜ್ಞಾನಿಕ ಮೇಲ್ಸೇತುವೆಯ ಬಗ್ಗೆಯೂ ಗಮನ ಸೆಳೆದಿದ್ದೇನೆ. ಅಲ್ಲಿ ಪ್ರತ್ಯೇಕ ಫ್ಲೈ ಓವರ್ ಮಾಡಬೇಕು ಎಂಬ ಬಗ್ಗೆಯೂ ಒತ್ತಾಯ ಮಾಡಿದ್ದೇನೆ. ಈ ಬಗ್ಗೆ ಉತ್ತರವನ್ನೂ ನೀಡಿದ್ದು, ಪ್ರತ್ಯೇಕ ಸರ್ವಿಸ್ ರೋಡ್ ಮಾಡಿಕೊಡುವುದಾಗಿ ಸಚಿವ ನಿತಿನ್ ಗಡ್ಕರಿ ಭರವಸೆ ನೀಡಿದ್ದಾರೆ ಎಂದರು.

Surathkal toll: Report on concession agreement sought | Deccan Herald

ಸದ್ಯಕ್ಕೆ ಸುರತ್ಕಲ್ ಟೋಲ್ ಗೇಟ್ ಹೆಜಮಾಡಿ ಟೋಲ್ ಜೊತೆಗೆ ವಿಲೀನ ಆಗಿರುವ ಬಗ್ಗೆ ನೋಟಿಫಿಕೇಶನ್ ಬಂದಿದೆ. ಈ ಬಗ್ಗೆ ಜಿಲ್ಲಾಧಿಕಾರಿ ಒಂದು ವಾರದಲ್ಲಿ ಆದೇಶ ಹೊರಡಿಸಿ, ಟೋಲ್ ತೆರವು ಮಾಡಲಿದ್ದಾರೆ. ಜಿಲ್ಲಾಧಿಕಾರಿಯ ಆದೇಶದ ಬಳಿಕ ಎಷ್ಟರ ಮಟ್ಟಿಗೆ ಶುಲ್ಕ ಹೆಚ್ಚಳ ಆಗುತ್ತದೆ ಅನ್ನುವುದು ತಿಳಿದುಬರಲಿದೆ. ಏನಿದ್ದರೂ, ನನ್ನ ಕ್ಷೇತ್ರದ ದೊಡ್ಡ ಸಮಸ್ಯೆ ನಿವಾರಣೆಯಾಗಿದೆ. ಅದಕ್ಕಾಗಿ ಸಚಿವ ನಿತಿನ್ ಗಡ್ಕರಿಯವರಿಗೆ ಮತ್ತು ಈ ಬಗ್ಗೆ ಪ್ರಯತ್ನಪಟ್ಟ ಸಂಸದರಿಗೆ ಅಭಿನಂದನೆ ಹೇಳುತ್ತೇನೆ. ಟೋಲ್ ತೆರವಿನಿಂದ ಮಂಗಳೂರು ಸಿಟಿ ಹಾದು ಹೋಗುವಲ್ಲಿ ಯಾವುದೇ ಟೋಲ್ ಕಿರಿ ಕಿರಿ ಇರುವುದಿಲ್ಲ. ತಲಪಾಡಿಯಿಂದ ಹೆಜಮಾಡಿ ವರೆಗೆ ಸರಾಗವಾಗಿ ಸಾಗಬಹುದು ಎಂದರು.

Udupi: Hejamady inner road toll, local vehicles exempted temporarily -  Daijiworld.com

ಹೆಜಮಾಡಿ ಟೋಲ್ ಗೇಟ್ ನಲ್ಲಿ ಶುಲ್ಕ ಡಬಲ್ ಆಗುತ್ತಲ್ಲ ಎಂಬ ಪ್ರಶ್ನೆಗೆ, ಡಬಲ್ ಅಂತೂ ಆಗುವುದಿಲ್ಲ. ಒಂದಷ್ಟು ಹೆಚ್ಚಳ ಆಗುತ್ತದೆ. ಹೆದ್ದಾರಿ ನಿರ್ವಹಣೆಯ ಕಾರಣಕ್ಕೆ ಶುಲ್ಕ ಹೆಚ್ಚಳ ಮಾಡಲಾಗುತ್ತದೆ. ವಾರ್ಷಿಕ ಹೆದ್ದಾರಿ ನಿರ್ವಹಣೆಗೆ ಹತ್ತು ಕೋಟಿ ಬೇಕಾಗುತ್ತದೆ. ಆದರೆ ಹೆಜಮಾಡಿಯಿಂದ 20 ಕಿಮೀ ಸುತ್ತಳತೆಯಲ್ಲಿ ಪ್ರಯಾಣಿಸುವ ಮಂದಿ ತಿಂಗಳಿಗೆ 315 ರೂಪಾಯಿ ಕೊಟ್ಟು ಪಾಸ್ ಮಾಡಿಸಿಕೊಳ್ಳಬಹುದು. 315 ರೂ. ಪಾಸ್ ನಲ್ಲಿ ಎಷ್ಟು ಬಾರಿಯೂ ಪ್ರಯಾಣಕ್ಕೆ ಅವಕಾಶ ಇರುತ್ತದೆ. ಸ್ಥಳೀಯರು ಈ ಅವಕಾಶ ಬಳಸಿಕೊಳ್ಳಬಹುದು ಎಂದು ಹೇಳಿದರು.

ಬಿಕರ್ನಕಟ್ಟೆ ಫ್ಲೈಓವರ್ ವೆಚ್ಚವನ್ನೂ ಹೆಜಮಾಡಿ ಟೋಲ್ ಗೇಟ್ ನಲ್ಲಿ ಸೇರಿಸಿದ್ದಾರೆ ಯಾಕೆ ಎಂದು ಕೇಳಿದ ಪ್ರಶ್ನೆಗೆ, ಆ ಬಗ್ಗೆ ನನಗೆ ಮಾಹಿತಿ ಇಲ್ಲ. ಗಜೆಟ್ ನೋಟಿಫಿಕೇಶನ್ನಲ್ಲಿ ಬಂದಿದ್ದರೆ ಜಿಲ್ಲಾಧಿಕಾರಿಯ ಗಮನಕ್ಕೆ ತರುತ್ತೇನೆ ಎಂದು ಹೇಳಿದರು. ಸುರತ್ಕಲ್ ಟೋಲ್ ಗೇಟ್ ಹೆಸರಲ್ಲಿ ಈವರೆಗೂ 300 ಕೋಟಿ ಕಲೆಕ್ಷನ್ ಮಾಡಿದ್ದಾರೆ, ಇನ್ನೂ ಯಾಕೆ ಕಲೆಕ್ಷನ್ ಮಾಡಬೇಕು. ಅದನ್ನು ರದ್ದು ಮಾಡಬಹುದಲ್ಲಾ ಎಂದು ಕೇಳಿದ್ದಕ್ಕೆ, ಆಗ ರಸ್ತೆಗೆ ಎಷ್ಟು ವೆಚ್ಚವಾಗಿತ್ತು ಮತ್ತು ಎಷ್ಟು ಕಲೆಕ್ಷನ್ ಆಗಿದೆಯೆಂದು ನನಗೆ ಮಾಹಿತಿ ಇಲ್ಲ. ಅದನ್ನು ತಿಳಿದು ಮುಂದುವರಿಯಬೇಕು ಎಂದರು.

ಸುದ್ದಿಗೋಷ್ಠಿಯಲ್ಲಿ ಮೇಯರ್ ಜಯಾನಂದ ಅಂಚನ್, ವರುಣ್ ಚೌಟ, ಭರತ್ ಕೃಷ್ಣಾಪುರ ಸೇರಿದಂತೆ ಮಂಗಳೂರು ಉತ್ತರ ಬಿಜೆಪಿ ಕ್ಷೇತ್ರದ ಕಾರ್ಪೊರೇಟರ್, ಬಿಜೆಪಿ ಮುಖಂಡರು ಉಪಸ್ಥಿತರಿದ್ದರು.

Mangalore Surathkal toll will be closed by a weeks time says MLA Bharath Shetty says protesters to stay calm