ಹಿಂದು ಹೆಣ್ಮಕ್ಕಳಿಂದ ಆಜಾನ್ ; ಕುಂದಾಪುರದಲ್ಲಿ ಹಿಂಜಾವೇ ಪ್ರತಿಭಟನೆ, ವಿವಾದಕ್ಕೆ ಕಾರಣವಾದ ಶಾಲಾಡಳಿತ ಮಂಡಳಿಯ ನಡೆ 

16-11-22 02:46 pm       Udupi Correspondent   ಕರಾವಳಿ

​​​​​ಇಲ್ಲಿನ ಶಂಕರನಾರಾಯಣ ಸರಕಾರಿ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ಮಂಗಳವಾರ (ನ.15) ನಡೆದ ಮದರ್ ತೆರೆಸಾ ಶಾಲೆಯ ಕ್ರೀಡಾಕೂಟ ಕಾರ್ಯಕ್ರಮದಲ್ಲಿ ಮುಸ್ಲಿಮರ ಆಜಾನ್ ಹಾಡಿಗೆ ಹಿಂದು ವಿದ್ಯಾರ್ಥಿಗಳನ್ನು ಬಳಸಲಾಗಿದೆ ಎಂಬ ಹಿಂದು ಸಂಘಟನೆಗಳ ಆಕ್ರೋಶಕ್ಕೆ ಕಾರಣವಾಗಿದ್ದು ಸಂಘಟನೆ ಕಾರ್ಯಕರ್ತರು ಶಾಲಾಡಳಿತದ ವಿರುದ್ಧ ಪ್ರತಿಭಟನೆಗೆ ಇಳಿದಿದ್ದಾರೆ. 

ಕುಂದಾಪುರ, ನ.16 : ಇಲ್ಲಿನ ಶಂಕರನಾರಾಯಣ ಸರಕಾರಿ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ಮಂಗಳವಾರ (ನ.15) ನಡೆದ ಮದರ್ ತೆರೆಸಾ ಶಾಲೆಯ ಕ್ರೀಡಾಕೂಟ ಕಾರ್ಯಕ್ರಮದಲ್ಲಿ ಮುಸ್ಲಿಮರ ಆಜಾನ್ ಹಾಡಿಗೆ ಹಿಂದು ವಿದ್ಯಾರ್ಥಿಗಳನ್ನು ಬಳಸಲಾಗಿದೆ ಎಂಬ ಹಿಂದು ಸಂಘಟನೆಗಳ ಆಕ್ರೋಶಕ್ಕೆ ಕಾರಣವಾಗಿದ್ದು ಸಂಘಟನೆ ಕಾರ್ಯಕರ್ತರು ಶಾಲಾಡಳಿತದ ವಿರುದ್ಧ ಪ್ರತಿಭಟನೆಗೆ ಇಳಿದಿದ್ದಾರೆ. 

ಮದರ್ ತೆರೆಸಾ ಶಾಲೆಯ ವತಿಯಿಂದ ನಡೆದ ಕುಂದಾಪುರ ತಾಲೂಕು ಮಟ್ಟದ ಕ್ರೀಡಾಕೂಟದಲ್ಲಿ ಹಿಂದೂ ಹುಡುಗಿಯರಿಂದ ನಮಾಜ್ ಮತ್ತು ಬಾಂಗ್ (ಆಜಾನ್) ಮಾಡಿಸಿದ್ದಾರೆ ಎನ್ನುವ ಆರೋಪ ಕೇಳಿಬಂದಿದೆ. ಇದರ ಸಂಬಂಧಿತ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದ್ದು, ಶಾಲೆಯಲ್ಲಿ ಈ ರೀತಿ ಮಾಡಿಸಿದ್ದು ತಪ್ಪು ಎಂಬುದಾಗಿ ಹಿಂದು ಸಂಘಟನೆಗಳ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಹಿಂದು ಜಾಗರಣ ವೇದಿಕೆಯ ಕಾರ್ಯಕರ್ತರು ಶಾಲೆಯ ಹಿಂದೂ ವಿರೋಧಿ ನೀತಿಯನ್ನು ವಿರೋಧಿಸಿ, ಕ್ರಮಕ್ಕಾಗಿ ಆಗ್ರಹಿಸಿದ್ದಾರೆ. ಶಿಕ್ಷಣ ಸಂಸ್ಥೆ ಹಾಗೂ ಪ್ರಾಂಶುಪಾಲರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಕಾರ್ಯಕರ್ತರು ಕುಂದಾಪುರ ಸರ್ಕಲ್‌ ಇನ್ಸ್‌ ಪೆಕ್ಟರ್‌ ಗೋಪಿಕೃಷ್ಣ ಅವರಿಗೆ ಮನವಿ ಸಲ್ಲಿಸಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಶಾಲಾ ಆಡಳಿತ ಮಂಡಳಿ ಕ್ಷಮೆ ಕೇಳಿದ್ದಾರೆ. ಆದರೆ ಹಿಂದೂ ಸಂಘಟನೆಗಳು ಕ್ರಮಕ್ಕಾಗಿ ಆಗ್ರಹಿಸಿ ಪ್ರತಿಭಟನೆ ನಡೆಸಿದ್ದಾರೆ.

Pro-Hindu activists in Karnataka's Udupi protested against the authorities of a private school after the institution’s students staged a performance of the “Azan” (Muslim call to prayer) song. Activists confronted school authorities and demanded an apology.The Mother Teresa memorial school had conducted its annual sports day celebrations and students were performing welcome songs during the event. Students performed songs from all three religions.