ಟೋಲ್ ಗೇಟ್ ವಿಲೀನದಿಂದ ಮೂಲ್ಕಿ-ಪಡುಬಿದ್ರೆ ಜನರಿಗೆ ಹೊರೆ, ಶಾಸಕ, ಸಂಸದರಿಗೆ ಕಾಳಜಿ ಇರ್ತಿದ್ದರೆ ತೆರವು ಮಾಡುತ್ತಿದ್ದರು ! 

16-11-22 04:20 pm       Mangalore Correspondent   ಕರಾವಳಿ

ಸುರತ್ಕಲ್ ಟೋಲ್ ಗೇಟನ್ನು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಮತ್ತು ಎನ್ಎಂಪಿಟಿ ಜಂಟಿಯಾಗಿ ಮಾಡಿಸಿದ್ದು, ಇದಕ್ಕಾಗಿ ಜನರ ಮೇಲೆ ಹೊರೆ ಹೊರಿಸಬೇಕಿಲ್ಲ. ಕೇಂದ್ರ ಸರಕಾರ ಮನಸ್ಸು ಮಾಡಿದರೆ ಟೋಲ್ ಗೇಟ್ ರದ್ದು ಮಾಡಬಹುದು ಎಂದು ವಿಪಕ್ಷ ಉಪನಾಯಕ, ಕಾಂಗ್ರೆಸ್ ಶಾಸಕ ಯುಟಿ ಖಾದರ್ ಹೇಳಿದ್ದಾರೆ.

ಮಂಗಳೂರು, ನ.16: ಸುರತ್ಕಲ್ ಟೋಲ್ ಗೇಟನ್ನು ಹೆಜಮಾಡಿಗೆ ವಿಲೀನ ಮಾಡಿದ್ದು ಸರಿಯಲ್ಲ. ಇದರಿಂದ ಮೂಲ್ಕಿ- ಪಡುಬಿದ್ರೆ ಜನರಿಗೆ ಹೊರೆ ಹೊರಿಸಿದಂತಾಗಿದೆ. ಇಲ್ಲಿನ ಶಾಸಕರಿಗೆ ಕಾಳಜಿ ಇದ್ದರೆ, ಕೇಂದ್ರಕ್ಕೆ ಮನವರಿಕೆ ಮಾಡಿಸಿ ಟೋಲ್ ರದ್ದು ಮಾಡಬೇಕಿತ್ತು. ಸುರತ್ಕಲ್ ಟೋಲ್ ಗೇಟನ್ನು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಮತ್ತು ಎನ್ಎಂಪಿಟಿ ಜಂಟಿಯಾಗಿ ಮಾಡಿಸಿದ್ದು, ಇದಕ್ಕಾಗಿ ಜನರ ಮೇಲೆ ಹೊರೆ ಹೊರಿಸಬೇಕಿಲ್ಲ. ಕೇಂದ್ರ ಸರಕಾರ ಮನಸ್ಸು ಮಾಡಿದರೆ ಟೋಲ್ ಗೇಟ್ ರದ್ದು ಮಾಡಬಹುದು ಎಂದು ವಿಪಕ್ಷ ಉಪನಾಯಕ, ಕಾಂಗ್ರೆಸ್ ಶಾಸಕ ಯುಟಿ ಖಾದರ್ ಹೇಳಿದ್ದಾರೆ.

ನಗರದಲ್ಲಿ ಸುದ್ದಿಗೋಷ್ಟಿ ನಡೆಸಿದ ಅವರು, ಸದ್ಯಕ್ಕೆ ಸುರತ್ಕಲ್ ಟೋಲ್ ಗೇಟನ್ನು ಶಿಫ್ಟ್ ಮಾಡಲಾಗಿದೆ. ಅದು ಮಂಗಳೂರಿನ ಜನರ ಗೆಲುವು. ನಿರಂತರ ಪ್ರತಿಭಟನೆ ನಡೆಸಿದ್ದಕ್ಕೆ ಸರಕಾರ ತಲೆಬಾಗಿದೆ. ಆದರೆ ಈಗ ಶಿಫ್ಟ್ ಆಗುವ ತನಕ ಅದರ ಬಗ್ಗೆ ಮಾತನಾಡದವರು, ಅಸೆಂಬ್ಲಿಯಲ್ಲಿ ಧ್ವನಿ ಎತ್ತದವರು ರಾಜಕೀಯ ಲಾಭಕ್ಕಾಗಿ ಮಾತನಾಡುತ್ತಿದ್ದಾರೆ. ವಿಶಾಲ ಮನಸ್ಸಿನಿಂದ ಜನರ ಗೆಲುವೆಂದು ಹೇಳಬಹುದಿತ್ತು. ಕೇಂದ್ರ ಸರಕಾರ ನೋಟಿಫಿಕೇಶನ್ ಮಾತ್ರ ಮಾಡಿದ್ದು, ಜಿಲ್ಲಾಧಿಕಾರಿ ಈ ಬಗ್ಗೆ ಶುಲ್ಕ ನಿರ್ಧಾರ ಮಾಡಬೇಕು. ಈಗ ಮರ್ಜರ್ ಆಗಿರುವುದರಿಂದ ಮೂಲ್ಕಿ-ಪಡುಬಿದ್ರೆ ಜನರು ತೊಂದರೆ ಪಡಬೇಕಾಗಿದೆ. ಅಲ್ಲಿನ ಶಾಸಕರು ಯಾಕೆ ಈಗ ಮೌನವಾಗಿದ್ದಾರೆ ಎಂದು ಪ್ರಶ್ನಿಸಿದರು.

Parari rape & murder case: MLA Bharat Shetty condemns heinous crime;  demands harsh punishment for guilty | udayavani

Surathkal toll: Report on concession agreement sought | Deccan Herald

ಕೇಂದ್ರದ್ದೇ ಹಣ, ಟೋಲ್ ಗೇಟ್ ಅಗತ್ಯ ಇರಲಿಲ್ಲ

ನನ್ನ ಬಗ್ಗೆ ಪ್ರಶ್ನೆ ಮಾಡುವ ಭರತ್ ಶೆಟ್ಟಿ ಸ್ವಲ್ಪ ಮೆಚ್ಯುರಿಟಿ ತೋರಬೇಕು. ಟೋಲ್ ಗೇಟ್ ತೆರವು ಮಾಡೋದು ಕೇಂದ್ರ ಸರಕಾರ ಅಲ್ಲವೇ.. ನಾನು ಮಾಡೋದಲ್ಲ. ನಾನು ಉಸ್ತುವಾರಿ ಮಂತ್ರಿಯಾಗಿದ್ದಾಗ ರಾಜ್ಯದ ಮುಖ್ಯ ಕಾರ್ಯದರ್ಶಿ, ಜಿಲ್ಲಾಧಿಕಾರಿ ಜೊತೆ ಮಾತನಾಡಿ ತೆರವು ಮಾಡುವುದಕ್ಕೆ ಕೇಂದ್ರಕ್ಕೆ ಅಹವಾಲು ನೀಡಿದ್ದೆ ಎಂದು ಹೇಳಿದ ಯುಟಿ ಖಾದರ್, ಸುರತ್ಕಲ್ ನಿಂದ ಬಿಸಿ ರೋಡ್ ತನಕದ 36 ಕಿಮೀ ರಸ್ತೆಯನ್ನು ಕೇಂದ್ರ ಸರಕಾರ 75 ಶೇಕಡಾ ಮತ್ತು ಎನ್ಎಂಪಿಟಿ 25 ಶೇಕಡಾ ವೆಚ್ಚ ಭರಿಸಿ ಮಾಡಲಾಗಿತ್ತು. ಇದನ್ನೇನು ಬಿಲ್ಟ್ ಅಂಡ್ ಆಪರೇಟ್ ಒಪ್ಪಂದದಲ್ಲಿ ಮಾಡಿದ್ದಲ್ಲ. ಕೇಂದ್ರ ಸರಕಾರವೇ ಹಣ ಸುರಿದು ಮಾಡಿದ ಬಳಿಕ ಅದಕ್ಕಾಗಿ ಟೋಲ್ ಗೇಟ್ ಮಾಡುವ ಅಗತ್ಯವಿರಲಿಲ್ಲ ಎಂದರು. 2013ರಲ್ಲಿ ಯುಪಿಎ ಸರಕಾರ ಇದ್ದಾಗಲೇ ನೋಟಿಫಿಕೇಶನ್ ಆಗಿತ್ತಲ್ಲ, ಯಾಕೆ ನೀವು ವಿರೋಧಿಸಿಲ್ಲ ಎಂದು ಕೇಳಿದ್ದಕ್ಕೆ, ಆಗ ನಮಗೂ ಇದರಿಂದಾಗುವ ತೊಂದರೆ ಅರಿವಿರಲಿಲ್ಲ. ಆನಂತರ ಎಂಟತ್ತು ವರ್ಷಗಳಿಂದ ಕೇಂದ್ರದಲ್ಲಿ ಬಿಜೆಪಿ ಸರಕಾರ ಇದೆ. ಯಾಕೆ ಅದನ್ನು ನಿಲ್ಲಿಸಿಲ್ಲ. ಉಡುಪಿ, ದಕ್ಷಿಣ ಕನ್ನಡ ಸಂಸದರು ಬಿಜೆಪಿಯವರೇ ಇದ್ದರಲ್ಲಾ ಎಂದು ಪ್ರಶ್ನಿಸಿದರು.

Nandini milk price hiked by ₹3 a litre - The Hindu

ಹಾಲಿನ ದರ ಏರಿಸಿದ್ದು ಗಾಯಕ್ಕೆ ಬರೆ

ಜನಸಾಮಾನ್ಯರು ಬಳಸುವ ಹಾಲಿಗೆ ಲೀಟರಿಗೆ 3 ರೂ. ಹೆಚ್ಚಳ ಮಾಡಿದ್ದು ಗಾಯದ ಮೇಲೆ ಬರೆ ಎಳೆದಂತಾಗಿದೆ. ಜನರು ನಿರುದ್ಯೋಗದಿಂದ ಕೈಯಲ್ಲಿ ಕಾಸಿಲ್ಲದೆ ಪರದಾಡುತ್ತಿದ್ದಾರೆ. ಇಂಥ ಸ್ಥಿತಿಯಲ್ಲಿ ಹಾಲಿನ ದರ ಏರಿಕೆ ಮಾಡುತ್ತಾರೆ. ಮುಖ್ಯಮಂತ್ರಿ ಈ ಬಗ್ಗೆ ಮೀಟಿಂಗ್ ಮಾಡುತ್ತೇನೆ ಎನ್ನುತ್ತಾರೆ. ಕಾಂಗ್ರೆಸ್ ಇದನ್ನು ಖಂಡಿಸುತ್ತಿದ್ದು, ಕೂಡಲೇ ಮುಖ್ಯಮಂತ್ರಿ ಹಾಲಿನ ದರ ಏರಿಸಲ್ಲ ಎಂದು ಸ್ಪಷ್ಟನೆ ನೀಡಬೇಕು. ಕಾಂಗ್ರೆಸ್ ಸರಕಾರ ಇದ್ದಾಗ ಲೀಟರ್ ಹಾಲಿಗೆ 28 ರು. ಮತ್ತು 5 ರು. ಸಬ್ಸಿಡಿ ಇತ್ತು. 38 ರೂ.ಗೆ ಜನರಿಗೆ ಹಾಲು ಸಿಗುತ್ತಿತ್ತು. ಈಗ ಹಾಲಿನ ದರ 46 ರೂ. ಆಗಿದೆ. ಹೆಚ್ಚಿಸಿದ ಎಂಟು ರೂಪಾಯಿ ಎಲ್ಲಿ ಹೋಗುತ್ತದೆ. ಹಾಲಿನ ದರ ಏರಿಕೆ ಮೂಲಕ ತಿಂಗಳಿಗೆ 30 ಕೋಟಿ ರೂಪಾಯಿ ಹೆಚ್ಚುವರಿ ಕಸಿಯುತ್ತಿದ್ದಾರೆ. ಹಾಲು ದರ ಹೆಚ್ಚಳ ಮಾಡಿದರೆ ಕಾಂಗ್ರೆಸ್ ಸುಮ್ಮನೆ ಕೂರುವುದಿಲ್ಲ ಎಂದು ಹೇಳಿದರು.

8 Uses of Aadhaar Card – How and Why to Link It?

ಮತದಾರ ಪಟ್ಟಿಗೆ ಸೇರಲ್ ಆಧಾರ್ ಬೇಕಿಲ್ಲ

ಮತದಾರ ಪಟ್ಟಿಯಿಂದ ಹೆಸರು ತೆಗೆದು ಹಾಕಿದ ಬಗ್ಗೆ ಕೇಳಿದ ಪ್ರಶ್ನೆಗೆ, ನನ್ನ ಕ್ಷೇತ್ರದಲ್ಲಿ 16 ಸಾವಿರ ಹೆಸರನ್ನು ತೆಗೆದು ಹಾಕಲಾಗಿದೆ ಎಂದು ಮಾಹಿತಿಯಿದೆ. ಈ ಬಗ್ಗೆ ಪರಿಶೀಲನೆ ಮಾಡುತ್ತೇನೆ. ಅದೆಲ್ಲವೂ ನನ್ನ ಮತದಾರರು ಅಂತಲ್ಲ. ಯಾರೇ ಆದ್ರೂ 18 ವರ್ಷ ಮೇಲ್ಪಟ್ಟವರಿಗೆ ಮತದಾನದ ಅವಕಾಶ ಸಿಗಬೇಕು. ವೋಟರ್ ಐಡಿ ಪಡೆಯಲು ಆಧಾರ್ ಕಾರ್ಡ್ ಕಡ್ಡಾಯವಲ್ಲ. ಚುನಾವಣೆ ಆಯೋಗವೇ ಈ ಬಗ್ಗೆ ಸ್ಪಷ್ಟಪಡಿಸಿದ್ದು, ಕೆಲವು ಸ್ಥಳೀಯ ಅಧಿಕಾರಿಗಳು ಆಧಾರ್ ಕಾರ್ಡ್ ಕೇಳುತ್ತಿದ್ದಾರಂತೆ. ಇದು ಸರಿಯಲ್ಲ. ಯಾರೇ ಆದರೂ ಆರು ತಿಂಗಳ ಕಾಲ ಒಂದು ಪ್ರದೇಶದಲ್ಲಿ ವಾಸವಿದ್ದರೆ ಆತನಿಗೆ ವೋಟು ಹಾಕುವ ಹಕ್ಕು ಬರುತ್ತದೆ ಎಂದರು. ಸುದ್ದಿಗೋಷ್ಟಿಯಲ್ಲಿ ಮಮತಾ ಎಸ್. ಗಟ್ಟಿ ಇದ್ದರು.

Every decision of BJP led state govt troubling public slams U T Khader in Mangalore