ನ.16-18 ; ರಾಷ್ಟ್ರೀಯ ಕೋಳಿ ದಿನ ವಿಶೇಷ ಅಭಿಯಾನ, ಪ್ರಮುಖ ಸಂಸ್ಥೆಗಳಲ್ಲಿ ಮಾರಾಟದಲ್ಲಿ ರಿಯಾಯಿತಿ 

17-11-22 04:57 pm       Mangalore Correspondent   ಕರಾವಳಿ

ಕುಕ್ಕುಟೋದ್ಯಮದ ತಲಾವಾರು ಬಳಕೆಯನ್ನು ಹೆಚ್ಚಿಸುವುದಕ್ಕಾಗಿ ರಾಷ್ಟ್ರೀಯ ಕೋಳಿ ದಿನ ಅಭಿಯಾನವನ್ನು ಭಾರತೀಯ ಕೋಳಿಗಳ ಪಿತಾಮಹ ಎಂದು ಪರಿಗಣಿಸಲ್ಪಟ್ಟ ಪದ್ಮಶ್ರೀ ಡಾ. ಬಿ.ವಿ.ರಾವ್‍ ಅವರ ಜನ್ಮದಿನದ ನೆನಪಿಗಾಗಿ ನ.16ರಂದು ರಾಷ್ಟ್ರೀಯ ಕೋಳಿ ದಿನ ಎಂದು ಆಚರಿಸಲಾಗುತ್ತದೆ.

ಮಂಗಳೂರು, ನ.17 :  ಕುಕ್ಕುಟೋದ್ಯಮದ ತಲಾವಾರು ಬಳಕೆಯನ್ನು ಹೆಚ್ಚಿಸುವುದಕ್ಕಾಗಿ ರಾಷ್ಟ್ರೀಯ ಕೋಳಿ ದಿನ ಅಭಿಯಾನವನ್ನು ಭಾರತೀಯ ಕೋಳಿಗಳ ಪಿತಾಮಹ ಎಂದು ಪರಿಗಣಿಸಲ್ಪಟ್ಟ ಪದ್ಮಶ್ರೀ ಡಾ. ಬಿ.ವಿ.ರಾವ್‍ ಅವರ ಜನ್ಮದಿನದ ನೆನಪಿಗಾಗಿ ನ.16ರಂದು ರಾಷ್ಟ್ರೀಯ ಕೋಳಿ ದಿನ ಎಂದು ಆಚರಿಸಲಾಗುತ್ತದೆ. ಇದರ ಪ್ರಯುಕ್ತ ನ.16ರಿಂದ 18ರ ವರೆಗೆ ದೇಶದ ವಿವಿಧೆಡೆ ಅಭಿಯಾನ ನಡೆಯಲಿದ್ದು ರಿಯಾಯಿತಿ ದರ ಘೋಷಿಸಲಾಗಿದೆ. ‌

ಕುಕ್ಕುಟೋದ್ಯಮದಲ್ಲಿ ತೊಡಗಿರುವ ಸಂಸ್ಥೆಗಳು ಕರ್ನಾಟಕ, ಮಹಾರಾಷ್ಟ್ರ, ಪಶ್ಚಿಮ ಬಂಗಾಳ ಮತ್ತು ಇತರ ರಾಜ್ಯಗಳಲ್ಲಿ ಜನಸಾಮಾನ್ಯರಲ್ಲಿ ಕೋಳಿಯ ಸೇವನೆಯನ್ನು ಉತ್ತೇಜಿಸಲು ವಿವಿಧ ಕಾರ್ಯಕ್ರಮಗಳು, ಅಭಿಯಾನಗಳು, ಗ್ರಾಹಕ ಕೊಡುಗೆಗಳು ಇತ್ಯಾದಿಗಳನ್ನು ಆಯೋಜಿಸುತ್ತಿವೆ. 

ಕರ್ನಾಟಕ ಪೌಲ್ಟ್ರಿ ಫಾರ್ಮರ್ಸ್  ಆ್ಯಂಡ್ ಬ್ರೀಡರ್ಸ್ ಅಸೋಸಿಯೇಶನ್ (ಕೆಪಿಎಫ್‍ಬಿಎ) ಅಧ್ಯಕ್ಷ ಡಾ. ಸುಶಾಂತ್ ಬಿ.ರೈ ಮಾತನಾಡಿ, ನ.16ರಿಂದ 18ರ ವರೆಗೆ ವಿವಿಧ ಚಟುವಟಿಕೆಗಳನ್ನು ಆಯೋಜಿಸಲಾಗಿದ್ದು, ಇದರಲ್ಲಿ ಸಂಘದ ಸದಸ್ಯರು ರಿಯಾಯಿತಿ, ಪ್ರಚಾರ ಇತ್ಯಾದಿಗಳನ್ನು ನೀಡಲಿದ್ದಾರೆ. ಕರ್ನಾಟಕದಲ್ಲಿ 200ಕ್ಕೂ ಹೆಚ್ಚು ಚಿಲ್ಲರೆ ಮಾರಾಟ ಮಳಿಗೆಗಳಲ್ಲಿ ಈ ಅಭಿಯಾನ ಸಾಗಲಿದೆ. ಮೂರು ದಿನಗಳ ಕಾಲ ಕೋಳಿ ಖರೀದಿಯಲ್ಲಿ ಶೇ.10ರಷ್ಟು ರಿಯಾಯಿತಿ ನೀಡಲಾಗುತ್ತಿದೆ. ಭಾರತದಲ್ಲಿ ಕೋಳಿಯ ತಲಾವಾರು ಸೇವನೆಯು 3.5 ಕೆಜಿಯಷ್ಟಿದ್ದರೆ ಮಲೇಷ್ಯಾದಲ್ಲಿ ಇದು 63 ಕೆಜಿ ಮತ್ತು ಯುಎಸ್‍ನಲ್ಲಿ 58 ಕೆಜಿ ಯಷ್ಟಿದೆ ಎಂದರು. 

ಈ ಕೆಳಗಿನ ಪೌಲ್ಟ್ರಿ ಸಂಸ್ಥೆಗಳು ಮೂರು ದಿನಗಳ ಕಾಲ ಕೋಳಿ ಅಥವಾ ಇತರ ಫ್ರೀ ಬೀಸ್‍ಗಳ ಖರೀದಿಗೆ ಶೇ.10ರಷ್ಟು ಅಥವಾ ಅದಕ್ಕಿಂತ ಹೆಚ್ಚಿನ ರಿಯಾಯಿತಿಗಳನ್ನು ನೀಡಲಿದೆ. ಜತೆಗೆ ಪ್ರೋಟಿನ್‍ಯುಕ್ತ ಕೋಳಿಗಳ  ಸೇವನೆಯ ಕುರಿತು ಜಾಗೃತಿಯನ್ನು ಮೂಡಿಸಲಿದೆ. ಸಂಸ್ಥೆಗಳು ವೆಂಕಟೇಶ್ವರ ಹ್ಯಾಚರೀಸ್ (ವೆಂಕೋಬ್ ಚಿಕನ್), ನಂದುಸ್ (ಬೆಂಗಳೂರು ಮತ್ತು ಹೈದ್ರಾಬಾದ್‍ನಾದ್ಯಂತ 70 ಮಳಿಗೆಗಳು), ಶಕ್ತಿ ಹೆಲ್ತಿ ಫ್ರೆಶ್ ಮೀಟ್ಸ್ ಸಂಸ್ಥೆಯ (ಮೈ ಚಿಕನ್ 18 ಔಟ್‍ಲೆಟ್‍ಗಳು), ಮಂಗಳೂರಿನಲ್ಲಿ ಐಡಿಯಲ್ ಚಿಕನ್, ಭಾರತ್ ಫ್ರೆಶ್ ಚಿಕನ್ (10 ಮಳಿಗೆಗಳು); ಕರಾವಳಿಯ ಪ್ರಮುಖ ಕುಕ್ಕುಟೋದ್ಯಮಗಳಾದ ರುಚಿ ಚಿಕನ್, ಸೋಜಾ ಚಿಕನ್, ಕುಶಿ ಚಿಕನ್ (ಚಿಕ್ಕಮಗಳೂರು ಮತ್ತು ಮಂಗಳೂರು), ಅಲ್ ಅರೀಫ್ ಚಿಕನ್ (ಚಿಕ್ಕಮಗಳೂರು, ಉಡುಪಿ, ಕುಂದಾಪುರ, ಭಟ್ಕಳ, ಶಿವಮೊಗ್ಗ ಮತ್ತು ಮಂಗಳೂರು ಜಿಲ್ಲೆಗಳಲ್ಲಿ 11 ಮಳಿಗೆಗಳು), ಲೈಫ್‍ಲೈನ್‍ನ ಟೆಂಡರ್ ಚಿಕನ್ (ಬೆಂಗಳೂರಿನಲ್ಲಿ 43 ಮಳಿಗೆಗಳು); ಬೆಲ್ಚಿಕ್ (ಬೆಳಗಾವಿ) ಮತ್ತು ಎಸ್‍ಎಂ ಸ್ಟಾರ್ಸ್ ಪ್ರೈಮ್ ಚಿಕನ್ (ಮೈಸೂರಿನಲ್ಲಿ 3 ಮಳಿಗೆಗಳು). ನ್ಯೂಟ್ರಿ ಫೀಡ್ಸ್ ಮತ್ತು ಫಾಮ್ಸ್ ಪ್ರೈವೇಟ್ ಲಿಮಿಟೆಡ್‍ನ ನ್ಯೂಟ್ರಿ ಫ್ರೆಶ್ ಚಿಕನ್( 7 ಮಳಿಗೆಗಳು) ದಿ ಬೆಟರ್ ಚಿಕನ್‍ನ ಆರು ಮಳಿಗೆಯಲ್ಲಿ ಈ ರಿಯಾಯಿತಿ ಸಿಗಲಿದೆ. 

ಕೆಪಿಎಫ್‍ಬಿಎ ಕಳೆದ ಮೂರು ದಶಕಗಳಿಂದ ಕೋಳಿ ಸಾಕಣೆದಾರರು ಮತ್ತು ರೈತರ ಕಲ್ಯಾಣಕ್ಕಾಗಿ ಶ್ರಮಿಸುತ್ತಿದೆ ಮತ್ತು ಮುಂಬರುವ ವರ್ಷಗಳಲ್ಲಿ ತಲಾ ಬಳಕೆಯನ್ನು ಮತ್ತಷ್ಟು  ಹೆಚ್ಚಿಸುವ ಆಶಯವನ್ನು ಹೊಂದಿದೆ ಎಂದು ಕೆಪಿಎಫ್‍ಬಿಎ ಕಾರ್ಯ ನಿರ್ವಾಹಕ ಕಾರ್ಯದರ್ಶಿ ಇನಾಯತ್ ಉಲ್ಲಾ ಖಾನ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Mangalore Nov 16 to 18 celebration of National chicken Day 2022 to be celebrated, 10 percent discount by Poultry Karnataka organization.