ಚುನಾವಣೆ ಕಾಲದಲ್ಲಿ ಆಡಳಿತ ಯಂತ್ರದ ದುರುಪಯೋಗ, ಅಧಿಕಾರಿಗಳ ಮೇಲೆ ಬಿಜೆಪಿ ನಾಯಕರು ಪ್ರಭಾವ ಬೀರುತ್ತಿದ್ದಾರೆ ; ರಮಾನಾಥ ರೈ  

17-11-22 10:37 pm       Mangalore Correspondent   ಕರಾವಳಿ

​​​​​ರಾಜ್ಯ ಸರಕಾರ ಸರಕಾರಿ ಅಧಿಕಾರಿಗಳ ಮೇಲೆ ಪ್ರಭಾವ ಬೀರುತ್ತಿದ್ದು, ಚುನಾವಣೆ ಕಾಲದಲ್ಲಿ ಕೊರೊನಾ ಕೆಲಸ ಮಾಡಿದ್ದಾರೆಂದು ಪಂಚಾಯತ್ ಮಟ್ಟದ ಅಧಿಕಾರಿಗಳನ್ನು ಸನ್ಮಾನಿಸುತ್ತಿದ್ದಾರೆ. ಬಿಎಲ್ ಓಗಳನ್ನು ಗೌರವಿಸುತ್ತಿದ್ದಾರೆ.

ಮಂಗಳೂರು, ನ.17: ರಾಜ್ಯ ಸರಕಾರ ಸರಕಾರಿ ಅಧಿಕಾರಿಗಳ ಮೇಲೆ ಪ್ರಭಾವ ಬೀರುತ್ತಿದ್ದು, ಚುನಾವಣೆ ಕಾಲದಲ್ಲಿ ಕೊರೊನಾ ಕೆಲಸ ಮಾಡಿದ್ದಾರೆಂದು ಪಂಚಾಯತ್ ಮಟ್ಟದ ಅಧಿಕಾರಿಗಳನ್ನು ಸನ್ಮಾನಿಸುತ್ತಿದ್ದಾರೆ. ಬಿಎಲ್ ಓಗಳನ್ನು ಗೌರವಿಸುತ್ತಿದ್ದಾರೆ. ಈಮೂಲಕ ರಾಜ್ಯ ಸರಕಾರ ಆಡಳಿತ ಯಂತ್ರವನ್ನು ದುರುಪಯೋಗ ಮಾಡುತ್ತಿದೆ ಎಂದು ಮಾಜಿ ಸಚಿವ. ಕೆಪಿಸಿಸಿ ಉಪಾಧ್ಯಕ್ಷ ರಮಾನಾಥ ರೈ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಕಳೆದ ಬಾರಿ ಪ್ರಧಾನಿ ಮೋದಿ ಕಾರ್ಯಕ್ರಮಕ್ಕೆ ಫಲಾನುಭವಿಗಳನ್ನು ಕರೆಸುವ ಹೆಸರಲ್ಲಿ ಅಧಿಕಾರಿಗಳನ್ನು ಪಾಲ್ಗೊಳ್ಳುವಂತೆ ಒತ್ತಡ ಹೇರಲಾಗಿತ್ತು. ಪುರಸಭೆ ಅಧ್ಯಕ್ಷರನ್ನೂ ಒತ್ತಾಯದಿಂದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವಂತೆ ಮಾಡಿದ್ದರು. ಅಂಗನವಾಡಿ ಕಾರ್ಯಕರ್ತೆಯೊಬ್ಬರು ಪುರಸಭೆ ಅಧ್ಯಕ್ಷರಾಗಿದ್ದರೂ, ಮೋದಿ ಕಾರ್ಯಕ್ರಮಕ್ಕೆ ಹೋಗುವಂತೆ ಆಗಿತ್ತು. ಜಿಲ್ಲೆಯಲ್ಲಿ ಎಲ್ಲ ಅಂಗನವಾಡಿ ಕಾರ್ಯಕರ್ತೆಯರನ್ನು ಮೋದಿ ಕಾರ್ಯಕ್ರಮಕ್ಕೆ ಕರೆಸಿದ್ದರು. ಆಮೂಲಕ ಅವರನ್ನು ದುರುಪಯೋಗ ಪಡಿಸುವ, ಪ್ರಭಾವ ಬೀರುವ ಯತ್ನ ನಡೆದಿತ್ತು. ಈಗ ಚುನಾವಣೆಗೆ ಇನ್ನೇನು ಕೆಲವು ದಿನಗಳು ಇರುವಾಗ ಅಧಿಕಾರಿಗಳ ಮೇಲೆ ಬಿಜೆಪಿ ನಾಯಕರು ಪ್ರಭಾವ ಬೀರುತ್ತಿದ್ದಾರೆ ಎಂದರು.

PM Modi: Centre nod for over 220 projects worth Rs 2 lakh crore for  Maharashtra | Cities News,The Indian Express

ಸಮುದಾಯ ಆರೋಗ್ಯ ಕೇಂದ್ರದಲ್ಲಿರುವ ಆರೋಗ್ಯ ಮಿತ್ರರನ್ನು ನೋಂದಾಯಿತ ಖಾಸಗಿ ಆಸ್ಪತ್ರೆಗಳಿಗೆ ನಿಯೋಜನೆ ಮಾಡಲು ರಾಜ್ಯ ಸರಕಾರ ಆದೇಶ ಮಾಡಿದೆ. ಆರೋಗ್ಯ ಕೇಂದ್ರಗಳಲ್ಲಿ ರೋಗಿಗಳ ದಾಖಲಾತಿ ಕಡಿಮೆ ಇರುವುದರಿಂದ ಈ ರೀತಿ ಮಾಡಲಾಗುತ್ತಿದೆ ಎಂದು ಆದೇಶದಲ್ಲಿ ಸ್ಪಷ್ಟನೆ ನೀಡಿದೆ. ಸರಕಾರಿ ಸಂಬಳ ಕೊಟ್ಟು ಅವರನ್ನು ಖಾಸಗಿ ಆಸ್ಪತ್ರೆಗಳಿಗೆ ನಿಯೋಜಿಸುವ ಉದ್ದೇಶ ಏನು ಎಂದು ಮಾಜಿ ಸಚಿವ, ಕೆಪಿಸಿಸಿ ಉಪಾಧ್ಯಕ್ಷ ರಮಾನಾಥ ರೈ ಪ್ರಶ್ನಿಸಿದ್ದಾರೆ.

ಸಮುದಾಯ ಆರೋಗ್ಯ ಕೇಂದ್ರ ಸುಸ್ಥಿತಿಯಲ್ಲಿ ಇಲ್ಲವೇ, ಅಲ್ಲಿಗೆ ರೋಗಿಗಳು ಬರುತ್ತಿಲ್ಲ ಅಂದರೆ ಅಲ್ಲಿನ ಸ್ಥಿತಿ ಉತ್ತಮವಾಗಿಲ್ಲ ಎಂದಲ್ಲವೇ.. ಆರೋಗ್ಯ ಕೇಂದ್ರಕ್ಕೆ ನೇಮಕ ಮಾಡಿರುವ ಆರೋಗ್ಯ ಮಿತ್ರರನ್ನು ಖಾಸಗಿ ಆಸ್ಪತ್ರೆಗಳಿಗೆ ನಿಯೋಜನೆ ಮಾಡುವ ಔಚಿತ್ಯವೇನೆಂದು ಅರ್ಥವಾಗುತ್ತಿಲ್ಲ. ರೋಗಿಗಳ ಸಂಖ್ಯೆ ಕಡಿಮೆಯಿದೆಯೆಂದು ಅವರನ್ನು ಖಾಸಗಿ ಆಸ್ಪತ್ರೆಗಳಿಗೆ ನೇಮಕ ಮಾಡುವುದಂದ್ರೆ ಏನರ್ಥ ಎಂದು ಪ್ರಶ್ನೆ ಮಾಡಿದರು. ರಾಜ್ಯ ಸರಕಾರದ ಭ್ರಷ್ಟಾಚಾರದಿಂದಾಗಿ ಆರೋಗ್ಯ ಕೇಂದ್ರಗಳಿಗೂ ಸೂಕ್ತ ವ್ಯವಸ್ಥೆಯಿಲ್ಲದಾಗಿದೆ ಎಂದು ಹೇಳಿದರು.

ಕನ್ನಡ ಹಬ್ಬಕ್ಕೆ ಶಿಕ್ಷಕರಿಗೆ ಸುತ್ತೋಲೆ ಯಾಕೆ

ಮಂಗಳೂರಿನ ಸಂಘನಿಕೇತನದಲ್ಲಿ ಕನ್ನಡ ಶಾಲೆಗಳ ಮಕ್ಕಳನ್ನು ಕರೆಸಿ ಕಾರ್ಯಕ್ರಮ ಮಾಡುತ್ತಿದ್ದಾರೆ. ಇದಕ್ಕೆ ಕಡ್ಡಾಯ ಪಾಲ್ಗೊಳ್ಳಲು ಸರಕಾರಿ ಶಾಲೆಯ ಶಿಕ್ಷಕರಿಗೆ ಸುತ್ತೋಲೆ ಕಳುಹಿಸಲಾಗಿದೆ. ಖಾಸಗಿ ಅದರಲ್ಲೂ ಒಂದು ಪಕ್ಷದ ನೇತಾರರು ಮಾಡುತ್ತಿರುವ ಕಾರ್ಯಕ್ರಮಕ್ಕೆ ಸರಕಾರಿ ಶಿಕ್ಷಕರನ್ನು ಮತ್ತು ಅಲ್ಲಿನ ವಿದ್ಯಾರ್ಥಿಗಳನ್ನು ಕರೆಸುವುದು, ಅವರನ್ನು ಕಡ್ಡಾಯ ರಜೆ ಕೊಟ್ಟು ಬರುವಂತೆ ಮಾಡಿಸುವುದನ್ನು ನಾನು ಒಪ್ಪುವುದಿಲ್ಲ. ಚುನಾವಣೆ ಕಾಲದಲ್ಲಿ ಬಡ ಮಕ್ಕಳನ್ನು ಕರೆಸಿ ಅವರನ್ನು ಓಲೈಸಿದಂತೆ ಆಗುತ್ತದೆ. ಆದರೆ ಕಾರ್ಯಕ್ರಮ ಮಾಡುವುದಕ್ಕೆ ನಮ್ಮ ಆಕ್ಷೇಪವಿಲ್ಲ. ಸರಕಾರಿ ಶಿಕ್ಷಕರನ್ನು ಪಾಲ್ಗೊಳ್ಳುವಂತೆ ಕಡ್ಡಾಯ ಸುತ್ತೋಲೆ ಕಳುಹಿಸಿದ್ದನ್ನು ಖಂಡಿಸುತ್ತೇನೆ ಎಂದರು.

ಸುದ್ದಿಗೋಷ್ಟಿಯಲ್ಲಿ ಶಶಿಧರ್ ಹೆಗ್ಡೆ, ಇಬ್ರಾಹಿಂ ಕೋಡಿಜಾಲ್, ಉಮೇಶ್ ದಂಡಕೇರಿ ಸೇರಿದಂತೆ ಹಲವು ನಾಯಕರು ಉಪಸ್ಥಿತರಿದ್ದರು.

Former minister B Ramanath Rai alleged that the BJP government is misusing the administration system as the assembly election is fast approaching in the state.He was addressing media at Congress Bhavan here on Thursday November 17.He said, “When Narendra Modi arrived to the district, the PDOs and beneficiaries were asked to attend the event. Anganwadi workers who are booth level officers are being pressurized.