ಬ್ರೇಕಿಂಗ್ ನ್ಯೂಸ್
24-11-22 12:48 pm Mangalore Correspondent ಕರಾವಳಿ
ಮಂಗಳೂರು, ನ.24: ಮಹತ್ವದ ಬೆಳವಣಿಗೆಯಲ್ಲಿ ಮಂಗಳೂರಿನ ಕುಕ್ಕರ್ ಬಾಂಬ್ ಬ್ಲಾಸ್ಟ್ ಪ್ರಕರಣವನ್ನು ನಾವೇ ಮಾಡಿದ್ದಾಗಿ ಯಾವುದೋ ಅನಾಮಧೇಯ ಇಸ್ಲಾಮಿಕ್ ಸಂಘಟನೆಯೊಂದು ಹೇಳಿಕೊಂಡಿದೆ. ಇಸ್ಲಾಮಿಕ್ ರೆಸಿಸ್ಟೆನ್ಸ್ ಕೌನ್ಸಿಲ್ ಹೆಸರಲ್ಲಿ ಇನ್ ಸ್ಟಾ ಗ್ರಾಮಿನಲ್ಲಿ ಈ ಬಗ್ಗೆ ಪೋಸ್ಟ್ ಮಾಡಲಾಗಿದ್ದು, ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ.
ಆ ಪೋಸ್ಟ್ ನಲ್ಲಿ ನಮ್ಮ ಟಾರ್ಗೆಟ್ ಕದ್ರಿ ದೇವಸ್ಥಾನ ಆಗಿತ್ತು. ಆದರೆ ಬಾಂಬ್ ಅಲ್ಲಿಗೆ ತಲುಪುವ ಮೊದಲೇ ಬ್ಲಾಸ್ಟ್ ಆಗಿತ್ತು ಅಂತ ಉಲ್ಲೇಖ ಮಾಡಲಾಗಿದೆ. ಉರ್ದು ಭಾಷೆಯಲ್ಲಿ ಆರಂಭದಲ್ಲಿ ಬರೆಯಲಾಗಿದ್ದು, ಆನಂತರ ಇಂಗ್ಲಿಷ್ ನಲ್ಲಿ ಬರೆಯಲಾಗಿದೆ. ಇದಲ್ಲದೆ, ಕಾನೂನು ಸುವ್ಯವಸ್ಥೆ ವಿಭಾಗದ ಎಡಿಜಿಪಿ ಅಲೋಕ್ ಕುಮಾರ್ ಅವರನ್ನು ಕುರಿತಾಗಿ ನಿಮ್ಮ ಸಂಭ್ರಮ ಕ್ಷಣಿಕವಾದದ್ದು. ತಕ್ಕ ಪರಿಣಾಮ ಸದ್ಯದಲ್ಲೇ ಎದುರಿಸಲಿದ್ದೀರಿ ಎಂದು ಎಚ್ಚರಿಕೆ ನೀಡಲಾಗಿದೆ.

ಮುಸ್ಲಿಮರ ಮೇಲಿನ ಗುಂಪು ಹತ್ಯೆ, ಕಿರುಕುಳಕ್ಕೆ ಪ್ರತಿಯಾಗಿ ಈ ಕೆಲಸ ಮಾಡುತ್ತಿದ್ದೇವೆ. ಜನರು ಸೇರುವ ಜಾಗದಲ್ಲೇ ಬಾಂಬ್ ಬ್ಲಾಸ್ಟ್ ಆಗಲಿದೆ. ಅದನ್ನು ಎದುರಿಸಲು ತಯಾರಾಗಿ ಎಂದು ಪರೋಕ್ಷವಾಗಿ ರಾಜ್ಯ ಪೊಲೀಸರಿಗೆ ಸವಾಲು ಹಾಕಲಾಗಿದೆ. ಈ ರೀತಿಯ ಹೇಳಿಕೆಯನ್ನು ಪ್ರತಿ ಘಟನೆಯ ಬಳಿಕವೂ ನಾವು ನೀಡುತ್ತೇವೆ ಎಂದು ಕೊನೆಯಲ್ಲಿ ಬರೆಯಲಾಗಿದೆ. ಆದರೆ ಈ ಹೇಳಿಕೆ ಬಗ್ಗೆ ಹಿರಿಯ ಪೊಲೀಸ್ ಅಧಿಕಾರಿಗಳಲ್ಲಿ ಕೇಳಿದರೆ, ಅಂಥಹ ಸಂಘಟನೆಯ ಹೆಸರನ್ನೇ ಕೇಳಿಲ್ಲ. ಯಾರೋ ಪ್ರಚಾರಕ್ಕಾಗಿ ಹೀಗೆ ಮಾಡಿರಬಹುದು. ಏನಿದ್ದರೂ, ಈ ಬಗ್ಗೆ ವೆರಿಫೈ ಮಾಡುತ್ತೇವೆ ಎಂದು ಹೇಳಿದ್ದಾರೆ.



ಬಾಂಬ್ ಸ್ಫೋಟ ಪ್ರಕರಣದ ಆರೋಪಿ ಮೊಹಮ್ಮದ್ ಶಾರೀಕ್ ಲಷ್ಕರ್ ಮತ್ತು ತಾಲಿಬಾನ್ ಸಂಘಟನೆಗಳ ನಂಟು ಹೊಂದಿದ್ದಾನೆಂದು ಹೇಳಲಾಗಿತ್ತು. ಆದರೆ ಅಂಥ ಜಾಗತಿಕ ಭಯೋತ್ಪಾದಕ ಸಂಘಟನೆಗಳು ಈ ಬಗ್ಗೆ ಯಾವುದೇ ಹೇಳಿಕೆ ನೀಡಿಲ್ಲ. ಯಾವುದೋ ಹೊಸ ಸಂಘಟನೆ ಇನ್ ಸ್ಟಾ ಗ್ರಾಮ್ ಪೇಜ್ ನಲ್ಲಿ ನಕಲಿ ಐಡಿಯಲ್ಲಿ ಪೋಸ್ಟ್ ಮಾಡಿದ್ದು ಸದ್ಯಕ್ಕೆ ಕುತೂಹಲ ಉಂಟು ಮಾಡಿದೆ.
In a major development in the Mangaluru blast case, an unknown Islamist group has claimed responsibility for the explosion that injured two people, including the main accused and the driver. A press statement of an unknown group - Islamic Resistance Council - has surfaced claiming responsibility for the Mangalore autorickshaw blast. In the statement shared by IRC, the group said that their target was a temple in Kadri, which is a bastion of "saffron terrorism" in Mangaluru, but the bomb exploded before reaching the target.
01-04-26 12:28 pm
HK News Staffer
ಕೇರಳದಲ್ಲಿ ಮಹಿಳೆಗೆ ಸಿಎಂ ಸ್ಥಾನ, ಉಚಿತ ಸಾರಿಗೆ ಪ್ರ...
31-03-26 10:13 am
ತಮಿಳುನಾಡಿನಲ್ಲಿ ಬಿಜೆಪಿ ಸೀಟು ಹಂಚಿಕೆಯಲ್ಲಿ ಲೋಪ ;...
29-03-26 10:19 am
RCB ಗೆಲುವಿಗೆ ರಕ್ತದಾನ ಅಭಿಯಾನ ; ಚಿನ್ನಸ್ವಾಮಿ ಉದ್...
28-03-26 08:39 pm
ಆಸ್ತಿ ಕಲಹ ; ಮೂವರು ಪುಟ್ಟ ಮಕ್ಕಳೊಂದಿಗೆ ಬಾವಿಗೆ ಹಾ...
28-03-26 02:54 pm
01-04-26 12:46 pm
HK News Staffer
ಯುದ್ಧ ವಿರಾಮ ಉಲ್ಲಂಘಿಸಿ ಇರಾನ್ ಅಣು ಸ್ಥಾವರಕ್ಕೆ ಬಾ...
31-03-26 11:00 pm
ಜೈಶ್-ಎ-ಮೊಹಮ್ಮದ್ ಮುಖ್ಯಸ್ಥ ಮಸೂದ್ ಅಜರ್ ಸೋದರ ತಾಹಿ...
31-03-26 03:30 pm
ಸಂಧಾನ ಮಾತುಕತೆ ಒಪ್ಪದಿದ್ದರೆ ಇರಾನ್ ಸರ್ವನಾಶ ; ಭೂದ...
31-03-26 10:43 am
ಗಲ್ಫ್ ಯುದ್ಧ ಎಫೆಕ್ಟ್ ; ಡಾಲರ್ ಮುಂದೆ ರುಪಾಯಿ ಮಹಾಪ...
30-03-26 10:31 pm
31-03-26 10:06 pm
HK News Desk
Moodbidri Accident: ಮೂಡುಬಿದ್ರೆ ; ರಸ್ತೆ ಬದಿ ನಿ...
31-03-26 09:02 pm
ಅವಳೇ ಮಗನನ್ನು ವಿಷ ಕೊಟ್ಟು ಕೊಂದಿದ್ದಾಳೆ, ವಿಷಯ ಮುಚ...
31-03-26 06:27 pm
ಚಲಿಸುತ್ತಿದ್ದ ಕೆಎಸ್ಆರ್ಟಿಸಿ ಬಸ್ಸಿನಿಂದ ಹೊರಬಿದ್...
31-03-26 03:01 pm
ಮಂಗಳೂರು ಬಂದರಿಗೆ ಬರಲಿದೆ ಮತ್ತೆರಡು ಎಲ್ಪಿಜಿ ಹೊತ್ತ...
30-03-26 11:13 pm
01-04-26 02:54 pm
HK News Staffer
ಕುಂಜತ್ ಬೈಲಿನಲ್ಲಿ ಫಲ್ಗುಣಿ ನದಿಗೆ ಬಿದ್ದು ಇಬ್ಬರು...
01-04-26 02:16 pm
ಜೈಲಿನಲ್ಲಿದ್ದ ಪತಿಯ ನೋಡಲು ಖಾಸಗಿ ಅಂಗದಲ್ಲಿ ಡ್ರಗ್ಸ...
31-03-26 11:11 am
ಮದುವೆ ಆಗಿದ್ರೂ ಲವರ್ ನಂಟು ; ಹಣಕ್ಕಾಗಿ ಪೀಡಿಸಿ ಬ್ಲ...
30-03-26 07:35 pm
ತಿಂಗಳ ಹಿಂದಷ್ಟೇ ರಿಜಿಸ್ಟರ್ ಮದುವೆಯಾಗಿದ್ದ ಬೆಳ್ತಂಗ...
29-03-26 10:36 pm