ಬ್ರೇಕಿಂಗ್ ನ್ಯೂಸ್
06-12-22 09:27 pm Mangalore Correspondent ಕರಾವಳಿ
ಮಂಗಳೂರು, ಡಿ.6: ಕೆಲವೊಮ್ಮೆ ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಎನ್ನುವ ಗಾದೆ ಮಾತು ಸ್ವತಃ ಅನುಭವಕ್ಕೆ ಬರುತ್ತದೆ. ಮಂಗಳೂರಿನಲ್ಲಿ ಒಬ್ಬ ಬಡಪಾಯಿ ಪಾಲಿಗೆ ಈ ಮಾತು ಅಕ್ಷರಶಃ ನಿಜವಾಗಿದೆ. ಹತ್ತು ಲಕ್ಷಕ್ಕೂ ಹೆಚ್ಚಿದ್ದ ನೋಟಿನ ಕಂತೆಗಳು ಬಿದ್ದು ಸಿಕ್ಕರೂ, ಒಂದಂಶ ಪೊಲೀಸರ ಕೈಸೇರಿದರೂ, ಮತ್ತೊಂದಷ್ಟು ನೋಟಿನ ಕಂತೆ ಇನ್ಯಾರದ್ದೋ ಪಾಲಾದ ಅವಾಂತರ ತಡವಾಗಿ ಬೆಳಕಿಗೆ ಬಂದಿದೆ.
ಕನ್ಯಾಕುಮಾರಿ ಮೂಲದ ಶಿವರಾಜ್ (49) ಎಂಬವರು ಮಂಗಳೂರಿನಲ್ಲಿ ವೃತ್ತಿಯಲ್ಲಿ ಮೆಕ್ಯಾನಿಕ್ ಆಗಿ ಕೆಲಸ ಮಾಡುತ್ತಿರುವ ವ್ಯಕ್ತಿ. ಆದರೆ ವಿಪರೀತ ಕುಡಿತದ ಚಟದಿಂದಾಗಿ ದಿನವೂ ಕುಡಿದು ಬೀಳುವುದೇ ಆಗಿತ್ತು. ಇಂಥ ವ್ಯಕ್ತಿ ವಾರದ ಹಿಂದೆ ನವೆಂಬರ್ 27ರಂದು ಪಂಪ್‌ವೆಲ್ ನಲ್ಲಿ ವೈನ್‌ಶಾಪ್ ಒಂದರಲ್ಲಿ ಮಟ ಮಟ ಮಧ್ಯಾಹ್ನವೇ ಎಣ್ಣೆ ಹೊಡೆಯಲು ಬಂದಿದ್ದ. ಹೊಟ್ಟೆಗೆ ಎಣ್ಣೆ ಹಾಕಿ ಬಂದು ರಸ್ತೆ ಬದಿ ನಿಂತಿರುವಾಗಲೇ ಅಲ್ಲೊಂದು ಪ್ಯಾಕೆಟ್ ಕಂಡಿತ್ತು. ಅಲ್ಲಿದ್ದ ಬೈಕ್ ಪಾರ್ಕಿಂಗ್ ಸ್ಥಳದಲ್ಲಿ ಸಣ್ಣ ಚೀಲದ ಪ್ಯಾಕೆಟ್ ಬಿದ್ದಿರುವುದು ಕಣ್ಣಿಗೆ ಬಿದ್ದಿತ್ತು.
ಇನ್ನೊಬ್ಬ ಕೂಲಿ ಕಾರ್ಮಿಕ ಕೂಡ ಅದೇ ಚೀಲವನ್ನು ಗಮನಿಸುತ್ತಿದ್ದರಿಂದ ಇಬ್ಬರು ಸೇರಿ ಪ್ಯಾಕೆಟ್ ಬಿಚ್ಚಿ ನೋಡಿದ್ದರು. ಅದರಲ್ಲಿ ಗರಿ ಗರಿ ನೋಟುಗಳ ಕಂತೆಯೇ ಕಾಣಿಸಿದಾಗ ಪರಮಾಶ್ಚರ್ಯ ಆಗಿತ್ತು. ಅದಾಗಲೇ ನೈಂಟಿ ಹೊಡೆದು ಕಣ್ಣು ಮಂಜು ಮಾಡಿಕೊಂಡಿದ್ದ ಕಾರ್ಮಿಕರು ಇಬ್ಬರೂ ಪ್ಯಾಕೆಟ್ ನೋಡಿ ಹೌಹಾರಿದ್ದಲ್ಲದೆ, ಅದನ್ನು ಎತ್ತಿಕೊಂಡು ಸ್ವಲ್ಪ ದೂರ ಹೋಗಿ ಹಂಚಿಕೊಂಡಿದ್ದಾರೆ. ಪಾಲು ಕೇಳಿದ ಕೂಲಿ ಕಾರ್ಮಿಕನ ಕೈಗೆ ಶಿವರಾಜ್, ಕೈಚೀಲದಿಂದ ಪಿಂಕ್ ನೋಟುಗಳಿದ್ದ ಎರಡು ಕಂತೆಯನ್ನು ತೆಗೆದು ನೀಡಿದ್ದಾನೆ. ಆದರೆ ಶಿವರಾಜ್ ತನಗೆ ಐಶ್ವರ್ಯ ಸಿಕ್ತು ಎಂದು ಹಣದ ಕಂತೆಯನ್ನು ಮನೆಗೊಯ್ಯುವ ಬದಲು ಮತ್ತೆ ಅದೇ ವೈನ್ ಶಾಪ್ ಹೋಗಿ ಎಣ್ಣೆ ಹೀರಲು ಆರಂಭಿಸಿದ್ದ. ಪ್ಯಾಕೆಟ್ ಒಳಗಿನಿಂದ ಎರಡು ಸಾವಿರದ ನೋಟನ್ನು ತೆಗೆದು ವೈನ್ ಶಾಪ್ ಸಿಬಂದಿ ಕೈಗಿತ್ತಿದ್ದ. ಆನಂತರ, ಹಣದ ಕಂತೆಯನ್ನು ಹಿಡ್ಕೊಂಡು ಅಲ್ಲಿಂದ ಹೊರ ಬಿದ್ದಿದ್ದ.
ಆದರೆ ಟೈಟ್ ಆಗಿದ್ದ ಬಡ ಕೂಲಿ ಕಾರ್ಮಿಕನ ಕೈಯಲ್ಲಿ ಹಣದ ಕಂತೆ ಇರುವುದನ್ನು ನೋಡಿದ ಅಲ್ಲಿದ್ದವರು ಯಾರೋ ಪೊಲೀಸರ ಗಮನಕ್ಕೆ ತಂದಿದ್ದರು. ಮಾಹಿತಿಯಂತೆ ಗಸ್ತುನಿರತ ಪೊಲೀಸರು ಸ್ಥಳಕ್ಕೆ ಬಂದು ಟೈಟ್ ಆಗಿ ನಿಂತುಕೊಂಡಿದ್ದ ಶಿವರಾಜ್ ಅವರನ್ನು ನೇರವಾಗಿ ಕಂಕನಾಡಿ ನಗರ ಠಾಣೆಗೆ ಕರೆದೊಯ್ದಿದ್ದರು. ಅಲ್ಲಿ ಹೋದರೂ, ಶಿವರಾಜ್ ತಲೆಗೆ ಹತ್ತಿದ್ದ ನಶೆ ಇಳಿಯುವಾಗ ರಾತ್ರಿಯಾಗಿತ್ತು. ಪೊಲೀಸರು ದುಡ್ಡಿನ ಕಂತೆ ಬಗ್ಗೆ ಕೇಳಿದಾಗ, ನನಗೆ ದಾರಿಯಲ್ಲಿ ಬಿದ್ದು ಸಿಕ್ಕಿದ್ದು ಎಂದು ಉತ್ತರಿಸಿದ್ದಾನೆ. ಅಲ್ಲದೆ, ಒಂದು ಬಂಡಲ್ ಒಬ್ಬಾತನಿಗೆ ಕೊಟ್ಟಿರುವ ವಿಷಯವನ್ನೂ ತಿಳಿಸಿದ್ದಾನೆ.
ಪೊಲೀಸರು ಮರುದಿನ ಶಿವರಾಜ್ ಜೊತೆಗೆ ಬಂದು ಪಂಪ್ವೆಲ್ ಬಳಿಯ ವೈನ್ ಶಾಪ್ ಇರುವಲ್ಲಿಯೇ ಇನ್ನೊಬ್ಬ ಕೂಲಿ ಕಾರ್ಮಿನನ್ನು ಹುಡುಕಾಡಿದ್ದಾರೆ. ಆದರೆ ಹಣದ ಎರಡು ಕಂತೆ ಹಿಡಿದುಕೊಂಡು ಜಾಗ ಖಾಲಿ ಮಾಡಿದ್ದ ಕಾರ್ಮಿಕ ಮರಳಿ ಬಂದಿರಲಿಲ್ಲ. ಇತ್ತ ಶಿವರಾಜ್ ಬಳಿಯಿದ್ದ ಹಣದ ಕಂತೆಯನ್ನು ಕಂಕನಾಡಿ ನಗರ ಪೊಲೀಸರು ವಶಕ್ಕೆ ಪಡೆದಿದ್ದು ಆತನನ್ನು ಠಾಣೆಯಿಂದ ಬಿಟ್ಟು ಕಳುಹಿಸಿದ್ದಾರೆ.
ಆದರೆ ಘಟನೆ ನಡೆದು ವಾರ ಕಳೆದರೂ, ಯಾರು ಕೂಡ ಹಣ ಕಳಕೊಂಡ ಬಗ್ಗೆ ಪೊಲೀಸ್ ದೂರು ದಾಖಲಿಸಿಲ್ಲ. ಈ ನಡುವೆ, ತನಗೆ ಬಿದ್ದು ಸಿಕ್ಕ ಹಣ, ಹಿಂತಿರುಗಿಸಿ ಕೊಡುವಂತೆ ಶಿವರಾಜ್ ಪೊಲೀಸರ ಬಳಿ ಕೇಳಿದ್ದಾರೆ. ಪೊಲೀಸರು ಹಣ ನೀಡಲು ನಿರಾಕರಣೆ ಮಾಡಿದ್ದರು. ಪ್ಯಾಕೆಟ್ ನಲ್ಲಿ 5ರಿಂದ 10 ಲಕ್ಷ ಇರಬಹುದು ಎಂದು ಶಿವರಾಜ್ ಮಾಧ್ಯಮಕ್ಕೆ ಹೇಳಿಕೆ ನೀಡಿದ್ದರಿಂದ ಗುಟ್ಟು ರಟ್ಟಾಗಿದೆ. ಆದರೆ ತಮಗೆ ದೊರೆತ ಬಾಕ್ಸ್ನಲ್ಲಿ 49 ಸಾವಿರ ರೂ. ಮಾತ್ರ ಇತ್ತು ಎಂದು ಕಂಕನಾಡಿ ಪೊಲೀಸರು ತಿಳಿಸಿದ್ದಾರೆ.
ಹಣ ಕಳಕೊಂಡ ಬಗ್ಗೆ ಯಾರು ಕೂಡ ದೂರು ದಾಖಲು ಮಾಡದೇ ಇರುವುದರಿಂದ ಹತ್ತು ಲಕ್ಷಕ್ಕೂ ಹೆಚ್ಚು ಹಣ ಅದರಲ್ಲಿ ಇದ್ದಿರುವ ಸಾಧ್ಯತೆಯಿದೆ. ಮತ್ತು ಆ ಹಣದ ಕಂತೆ ಹವಾಲಾ ಹಣವೇ ಆಗಿದ್ದಿರಬೇಕು ಎನ್ನುವ ಶಂಕೆ ಇದೆ. ಈ ನಡುವೆ, ಪ್ಯಾಕೆಟ್ ಒಳಗಿದ್ದ ಲಕ್ಷ ಲಕ್ಷ ರೂಪಾಯಿ ಯಾರ ಕೈಸೇರಿದೆ ಎನ್ನುವ ಸಂಶಯ ಎದುರಾಗಿದೆ.
A bag containing Rs 10 lac had fallen on the roadside. When a drunkard saw it, his joy knew no bounds. However, because of his addiction, within half an hour the money was taken by police. Though it is one week, the incident has not come to light. The money is safe with the police.
28-09-25 12:39 pm
Bangalore Correspondent
ದಾವಣಗೆರೆಗೆ ಕಾಲಿಟ್ಟ 'ಐ ಲವ್ ಮೊಹಮ್ಮದ್ʼ ಫ್ಲೆಕ್ಸ್...
27-09-25 02:40 pm
ಪಿಐಎಲ್ ಹಾಕಿದವರಿಗೆ ಸುಪ್ರೀಂ ಕೋರ್ಟ್ ಬೈದು ಕಳುಹಿಸಿ...
27-09-25 02:20 pm
ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿ ಭೈರಪ್ಪ ಪಂಚಭೂತಗಳಲ್ಲ...
26-09-25 07:39 pm
ಬಾನು ಮುಷ್ತಾಕ್ ಮನೆಯಲ್ಲಿ ಒಂದು ವಾರ ಉಳಿದುಕೊಂಡಿದ್ದ...
26-09-25 07:37 pm
28-09-25 10:02 pm
HK News Desk
ಮೋದಿ ಕಾರ್ಯಕ್ರಮದಲ್ಲಿ ಸಣ್ಣ ಎಡವಟ್ಟು ; ಹುದ್ದೆ ಕಳಕ...
28-09-25 08:33 pm
ತಮಿಳುನಾಡಿನಲ್ಲಿ ವಿಜಯ್ ರ್ಯಾಲಿ ವೇಳೆ ಘೋರ ದುರಂತ ;...
27-09-25 11:16 pm
HDFC Banks Dubai branch: ಎಚ್ ಡಿಎಫ್ ಸಿ ದುಬೈ ಶಾ...
27-09-25 05:53 pm
ಧರ್ಮಸ್ಥಳ ಪ್ರಕರಣ ; ಕನ್ನಡ ಸುದ್ದಿವಾಹಿನಿಗಳಿಂದ ಸುಪ...
25-09-25 10:38 pm
28-09-25 08:12 pm
Mangalore Correspondent
ಯುವಜನರಲ್ಲಿ ಹೃದಯದ ಕೊಲೆಸ್ಟ್ರಾಲ್ ಪ್ರಮಾಣ ಹೆಚ್ಚುತ್...
27-09-25 07:35 pm
Puttur Baby News, DNA: ಸಹಪಾಠಿಗೆ ಮಗು ಕರುಣಿಸಿದ...
27-09-25 01:33 pm
Sandhya Shenoy: ಶ್ರೀನಿವಾಸ್ ಎಂಜಿನಿಯರಿಂಗ್ ಕಾಲೇಜ...
27-09-25 01:02 pm
ನಿಗಮ ಮಂಡಳಿಗೆ ನೇಮಕ ; ಮೆಸ್ಕಾಂ ಹರೀಶ್ ಕುಮಾರ್, ಕರಾ...
26-09-25 11:02 pm
28-09-25 11:08 pm
Mangalore Correspondent
ವಾಟ್ಸಪ್ ಮೆಸೇಜ್ ನಂಬಿ ಷೇರು ಮಾರುಕಟ್ಟೆ ಹೂಡಿಕೆ ; ನ...
28-09-25 05:04 pm
ಉಡುಪಿ ಬಸ್ ಚಾಲಕ ಸೈಫುದ್ದೀನ್ ಸ್ನೇಹಿತರಿಂದಲೇ ಕೊಲೆ...
28-09-25 04:57 pm
Robbery in Mangalore: ಒಂದೂವರೆ ಕೋಟಿ ಮೌಲ್ಯದ ಚಿನ...
28-09-25 12:25 pm
Malpe Onwer Murder, AKMS: ಮಲ್ಪೆಯಲ್ಲಿ ಹಾಡಹಗಲೇ...
27-09-25 02:16 pm