ಬ್ರೇಕಿಂಗ್ ನ್ಯೂಸ್
15-10-20 01:04 pm Mangalore Correspondent ಕರಾವಳಿ
ಮಂಗಳೂರು, ಅಕ್ಟೋಬರ್: ಯೋಗಿ ಆದಿತ್ಯನಾಥ್ ವಿರುದ್ಧ ಸಂಸದರಾಗುವ ಹಿಂದೆಯೇ 52 ಕ್ರಿಮಿನಲ್ ಕೇಸುಗಳಿದ್ದವು. ಯೋಗಿ ಅಧಿಕಾರಕ್ಕೆ ಬಂದ ಬಳಿಕ ಪ್ರಕರಣಗಳನ್ನು ತೆಗೆದು ಹಾಕಿದ್ರು. ಯೋಗಿ ಹಿಂದೆ ಸ್ವಾಮೀಜಿ ಇರಬಹುದು. ಸಿಎಂ ಆದಬಳಿಕ ಯೋಗಿಯನ್ನು ಸ್ವಾಮೀಜಿ ಎಂದು ಒಪ್ಪಲಾಗಲ್ಲ. ಸಾರ್ವಜನಿಕ ಜೀವನದಲ್ಲಿದ್ದವರು ಆರೋಪಗಳನ್ನು ಎದುರಿಸಬೇಕು. ಮಿಥುನ್ ರೈ ಈ ಜಿಲ್ಲೆಯ ಕಾಂಗ್ರೆಸ್ ನಾಯಕರಾಗಿದ್ದು ಒಬ್ಬ ಮುಖ್ಯಮಂತ್ರಿಯನ್ನು ಟೀಕಿಸಬಾರದೇ ? ದಲಿತ ಯುವತಿಯ ಅತ್ಯಾಚಾರದ ಬಗ್ಗೆ ಮಾತನಾಡಿದ್ದು ಅಪರಾಧವೇ ಎಂದು ದಕ್ಷಿಣ ಕನ್ನಡ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹರೀಶ್ ಕುಮಾರ್ ಪ್ರಶ್ನೆ ಮಾಡಿದ್ದಾರೆ.
ಉತ್ತರ ಪ್ರದೇಶದಲ್ಲಿ ಅತ್ಯಾಚಾರ, ಅನಾಚಾರ ಪ್ರಕರಣಗಳು ನಿರಂತರ ಆಗಿವೆ. ಈ ಬಗ್ಗೆ ಬಿಜೆಪಿ ನಾಯಕರು ಮಾತನಾಡಲ್ಲ. ಯೋಗಿ ಈಗ ಸಿಎಂ ಆಗಿದ್ದು ಸ್ವಾಮೀಜಿ ಎಂದು ಕಾಂಗ್ರೆಸ್ ಒಪ್ಪಿಕೊಳ್ಳುವುದಿಲ್ಲ. ಯೋಗಿ ಬಗ್ಗೆ ಪ್ರಶ್ನೆ ಮಾಡಿದ ಮಿಥುನ್ ರೈಯ ವಿರುದ್ಧ ಕ್ರಮ ಕೈಗೊಳ್ಳಲು ದೂರು ಕೊಡುತ್ತಿದ್ದಾರೆ. ಕಮಿಷನರ್ ಗೆ ಒತ್ತಡ ಹೇರುತ್ತಿದ್ದಾರೆ. ಮಿಥುನ್ ರೈ ಬಿಜೆಪಿಯಿಂದ ಹಿಂದುತ್ವ ಕಲಿಯಬೇಕೇ..? ಮಿಥುನ್ ರೈ ದಿನವೂ ಹನುಮಾನ್ ಚಾಲೀಸ್ ಪಠಣ ಮಾಡುತ್ತಾರೆ. ಮೂಡುಬಿದ್ರೆಯಲ್ಲಿ ದನಗಳನ್ನು ರಕ್ಷಿಸಿ, ಇಲ್ಲದವರಿಗೆ ದಾನ ಮಾಡಿದ್ದಾರೆ. ಪಿಲಿ ನಲಿಕೆ ಮೂಲಕ ಹಿಂದು ಸಂಸ್ಕೃತಿ ಸಂಪ್ರದಾಯ ಉಳಿಸುತ್ತಿದ್ದಾರೆ. ಮಿಥುನ್ ರೈ ಬಳಿ ಬಿಜೆಪಿಯವರು ಹಿಂದುತ್ವ ಕಲಿಯಬೇಕು, ಎಲ್ಲ ಜಾತಿಗಳನ್ನು ಪ್ರೀತಿಸುವ ಇವರನ್ನು ಸಹಿಸಲು ಆಗುತ್ತಿಲ್ಲ. ಬಿಜೆಪಿಯವರ ಇಂಥ ರಾಜಕಾರಣ ಒಳ್ಳೆಯದಲ್ಲ. ಟೀಕೆ, ಟಿಪ್ಪಣಿ ಸಹಿಸಲು ಆಗದವರು ರಾಜಕಾರಣದಲ್ಲಿ ಇರಬಾರದು. ಈ ವಿಚಾರವನ್ನು ಜಿಲ್ಲಾ ಕಾಂಗ್ರೆಸ್ ಖಂಡಿಸುತ್ತದೆ ಎಂದು ಹರೀಶ ಕುಮಾರ್ ಕಾಂಗ್ರೆಸ್ ಭವನದಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಹೇಳಿದರು.
ಇದೇ ವೇಳೆ ಮಾತನಾಡಿದ ಮಾಜಿ ಸಚಿವ ಅಭಯಚಂದ್ರ ಜೈನ್, ಮೂಡುಬಿದ್ರೆಯ ವಿದ್ಯಾರ್ಥಿನಿ ಜಾಲತಾಣದಲ್ಲಿ ಬರೆದ ಪತ್ರಕ್ಕೆ ಸಿಎಂ ತುರ್ತು ಸ್ಪಂದಿಸಿದ್ದಕ್ಕೆ ಅಭಿನಂದಿಸಿದ್ದಾರೆ. ವಿದ್ಯಾಗಮ ಯೋಜನೆಯಿಂದಾಗಿ ಹಲವಾರು ಶಿಕ್ಷಕರು ತೊಂದರೆ ಅನುಭವಿಸಿದ್ದಾರೆ. ಹಲವು ಮಂದಿ ಕೊರೊನಾ ಪೀಡೆಗೆ ಬಲಿಯಾಗಿದ್ದಾರೆ. ಸರಕಾರ ಎಲ್ಲ ಶಿಕ್ಷಕರ ಸಮಸ್ಯೆಗೂ ಸ್ಪಂದಿಸಬೇಕು ಎಂದು ಒತ್ತಾಯಿಸಿದರು.
ಸುದ್ದಿಗೋಷ್ಟಿಯಲ್ಲಿ ಮಾಜಿ ಶಾಸಕರಾದ ಜೆ.ಆರ್ ಲೋಬೊ, ಮೊಯ್ದೀನ್ ಬಾವ, ಶಶಿಧರ್ ಹೆಗ್ಡೆ, ನಜೀರ್ ಬಜಾಲ್, ಸುರೇಂದ್ರ ಕಾಂಬ್ಲಿ, ರಕ್ಷಿತ್ ಸುವರ್ಣ ಉಪಸ್ಥಿತರಿದ್ದರು.
Video:
Mangalore Congress president Harish Kumar slammed at Up Cm Yogi Adityanath stating he himself has got more than 52 trials before he became the Cm of Uttar Pradesh.
16-09-25 11:00 pm
Bangalore Correspondent
Nanjegowda MLA, Malur: ಮಾಲೂರು ಕಾಂಗ್ರೆಸ್ ಶಾಸಕ...
16-09-25 10:54 pm
Bangalore Suicide, Air force: ಸಹೋದರಿ ಜೊತೆ ಜಗಳ...
15-09-25 08:53 pm
Actor Upendra, Wife Priyanka, Cyber Fraud, Ha...
15-09-25 04:45 pm
Pratap Simha, Banu Mushtaq: ಬಾನು ಮುಷ್ತಾಕ್ ದಸರ...
15-09-25 03:39 pm
16-09-25 10:11 pm
HK News Desk
Cloudburst, Dehradun: ಡೆಹ್ರಾಡೂನ್ನಲ್ಲಿ ಭಾರೀ ಮ...
16-09-25 02:46 pm
Waqf, Supreme Court; ವಕ್ಫ್ ತಿದ್ದುಪಡಿ ಕಾಯ್ದೆ...
15-09-25 04:57 pm
ನಾನು ಶಿವಭಕ್ತ ; ನಿಂದನೆಯ ವಿಷವನ್ನು ಕುಡಿದು ಜೀರ್ಣಿ...
14-09-25 10:49 pm
ಪ್ರಧಾನಿ ಮೋದಿ ಅಸ್ಸಾಂನಲ್ಲಿ ಇರುವಾಗಲೇ 5.8ರ ತೀವ್ರತ...
14-09-25 07:31 pm
16-09-25 07:48 pm
Mangalore Correspondent
Ex IPS Kempaiah, Professor Umeshchandra, Mang...
16-09-25 07:02 pm
Mangalore BJP Protest, UT khader, Red Stone:...
16-09-25 06:51 pm
UT Khader, Mangalore, Ullal: ಉಳ್ಳಾಲ ಕ್ಷೇತ್ರದಲ...
16-09-25 06:06 pm
ಕೆಂಪು ಕಲ್ಲು ನಿಯಮ ಸರಳೀಕರಣಕ್ಕೆ ಸಂಪುಟದಲ್ಲಿ ಒಪ್ಪಿ...
16-09-25 05:12 pm
16-09-25 10:40 pm
HK News Desk
Bidar crime: ಏಳು ವರ್ಷದ ಬಾಲಕಿಯನ್ನ ಮೂರನೇ ಮಹಡಿಯಿ...
16-09-25 07:12 pm
Bangalore Police, Inspector Suspend, Crime, D...
15-09-25 10:47 pm
Udupi, Surat Murder, Arrest: ವೃದ್ಧ ದಂಪತಿಯನ್ನು...
14-09-25 06:01 pm
Mangalore Fake Aadhar, RTC Scam, Police: ಆರೋಪ...
13-09-25 11:36 am