ಬ್ರೇಕಿಂಗ್ ನ್ಯೂಸ್
15-10-20 02:43 pm Mangaluru Correspondent ಕರಾವಳಿ
ಪುತ್ತೂರು, ಅಕ್ಟೋಬರ್ 15: ಅಧಿಕೃತ ಏಜೆನ್ಸಿ ಹೆಸರಲ್ಲಿ ನಕಲಿ ವಾಹನ ವಿಮೆ ಮಾಡಿ ವಂಚಿಸುತ್ತಿರುವ ಪ್ರಕರಣ ಪುತ್ತೂರಿನಲ್ಲಿ ಕಂಡುಬಂದಿದೆ.
ಪುತ್ತೂರು ಆರ್‌ಟಿಒ ನಲ್ಲಿ ರಿಜಿಸ್ಟರ್ ಆಗಿದ್ದ ವಾಹನ ವಿಮೆಯನ್ನು ತನ್ನ ಹೆಸರಿಗೆ ವರ್ಗಾಯಿಸಲು ವ್ಯಕ್ತಿಯೊಬ್ಬ ಪುತ್ತೂರಿನ ವಿಮಾ ಕಚೇರಿಗೆ ಬಂದಿದ್ದಾಗ ನಕಲಿ ವಿಮೆಯ ಪ್ರಕರಣ ಬೆಳಕಿಗೆ ಬಂದಿದೆ.
ಹಳೆ ಕಾರು ಖರೀದಿಸಿದ್ದ ವ್ಯಕ್ತಿಯೊಬ್ಬ ತನ್ನ ಹೆಸರಿಗೆ ವಾಹನ ವಿಮೆ ಮಾಡಿಸಿಕೊಳ್ಳಲು ಕಚೇರಿಗೆ ಬಂದಿದ್ದ. ಪುತ್ತೂರಿನ ವಾಹನ ವಿಮೆಯ ಅಧಿಕೃತ ಏಜೆಂಟ್ ಜಯಾನಂದ ಅವರ ಏಜೆನ್ಸಿ ಸಂಖ್ಯೆ ಹೊಂದಿತ್ತು. ಅವಧಿ ಮುಗಿಯದ ವಿಮೆಯ ಬಗ್ಗೆ ಮಾಹಿತಿ ಕೆದಕಿದಾಗ, ಅದು ನಕಲಿಯಾಗಿರುವುದು ಕಂಡು ಬಂತು. ಬಳಿಕ ಅದರಲ್ಲಿ ನಮೂದಾಗಿದ್ದ ಏಜೆಂಟ್ ಕೋಡ್, ಜಯಾನಂದ ಅವರನ್ನು ಸಂಪರ್ಕಿಸಿದರು. ವಿಮೆ ನೋಂದಣಿಯಾದ ದಿನಾಂಕ ಏಜೆನ್ಸಿ ವತಿಯಿಂದ ಸದ್ರಿ ವಾಹನಕ್ಕೆ ವಿಮೆ ಮಾಡಿಲ್ಲ ಎಂದು ಕಂಪೆನಿಗೆ ತಿಳಿಸಿದ್ದರು. ಈ ವೇಳೆ ಇದು ನಕಲಿ ವಿಮೆ ಎಂಬ ಅನುಮಾನ ಖಾತರಿ ಆಗಿದೆ. ಇದೇ ವೇಳೆ, ಅದೇ ನಂಬರಿನ ಏಜೆನ್ಸಿ ಕೋಡ್‌ನಲ್ಲಿ ಇನ್ನೊಬ್ಬ ವ್ಯಕ್ತಿಗೂ ನಕಲಿ ವಿಮೆ ನೀಡಿರುವ ಮಾಹಿತಿ ಬಯಲಾಗಿದೆ.

ಪೊಲೀಸರು ತಪಾಸಣೆ ವೇಳೆ ವಿಮೆಯ ಅವಧಿ ದಿನಾಂಕ, ಹೆಸರು ಮಾತ್ರ ಗಮನಿಸುವ ಕಾರಣ ವಿಮೆಯ ಅಸಲಿ, ನಕಲಿ ಅಂಶ ಬಯಲಿಗೆ ಬರುವುದಿಲ್ಲ. ಜತೆಗೆ ಗ್ರಾಹಕರಿಗೂ ಈ ಬಗ್ಗೆ ಯಾವ ಸುಳಿವು ದೊರೆಯುವುದಿಲ್ಲ. ನಿಯಮಾನುಸಾರ ಆಯಾ ವಾಹನಗಳಿಗೆ ನಿರ್ದಿಷ್ಟ ಶುಲ್ಕ ಪಾವತಿಸಬೇಕಿದ್ದರೂ ನಕಲಿ ವಿಮೆಯಲ್ಲಿ ಕಡಿಮೆ ಹಣ ಪಡೆದು ಪಾಲಿಸಿ ನೀಡಿರುವುದು ಕಂಡುಬಂದಿದೆ. ಇದರಿಂದ ನಿಯಮ ಅನುಸಾರ ವಿಮೆ ನೀಡುವ ಏಜೆನ್ಸಿಗಳ ಕೋಡ್ ದುರ್ಬಳಕೆ ಮಾಡಿಕೊಳ್ಳುವ ಕಾರಣ ಅವರಿಗೂ ತೊಂದರೆ ಉಂಟಾಗಿದೆ.
ಈಗಾಗಲೇ ನೂರಾರು ವಾಹನಗಳಿಗೆ ಇಂತಹ ನಕಲಿ ವಿಮೆ ನೀಡಿ ವಂಚಿಸಿರುವ ಸಾಧ್ಯತೆ ಮೇಲ್ನೋಟಕ್ಕೆ ಕಂಡು ಬಂದಿದೆ. ಸಂಚಾರ ಪೊಲೀಸರು ತಪಾಸಣೆ ವೇಳೆ ವಿಮೆ ಪಾಲಿಸಿಗಳನ್ನು ಸೂಕ್ಷವಾಗಿ ಪರಿಶೀಲಿಸಬೇಕಾಗಿದೆ. ನಕಲಿ ಕಂಡುಬಂದರೆ ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎಂದು ವಾಹನ ಮಾಲಕರು ಹಾಗೂ ಅಧಿಕೃತ ಏಜೆನ್ಸಿದಾರರು ಆಗ್ರಹಿಸಿದ್ದಾರೆ.
Puttur fake insurance copies being issued in the name of insurance companies have come to light after one of the persons vehicle insurance was claimed fake when he visited the Insurance office in Puttur.
25-08-26 03:39 pm
HK News Staffer
ಕರ್ನಾಟಕದಲ್ಲಿ H1N1 ಆತಂಕ ; 8 ತಿಂಗಳಲ್ಲಿ 4,212 ಪ...
24-08-26 03:16 pm
ಕರ್ನಾಟಕದಲ್ಲಿ ‘ಅನಲಾಗ್ ಪನ್ನೀರ್’ಗೆ ಒಂದು ವರ್ಷ ನಿಷ...
22-08-26 10:15 pm
ಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್ ನಾಪತ್ತೆ ; ಏ...
22-08-26 03:01 pm
500 ಕೆಪಿಎಸ್ ಶಾಲೆಗಳ ಸಮಗ್ರ ಅಭಿವೃದ್ಧಿಗೆ ₹2500 ಕೋ...
22-08-26 11:10 am
24-08-26 04:55 pm
HK News Staffer
ಪಾಲ್ಘಾಟ್ ರೈಲ್ವೇ ವಿಭಾಗದಿಂದ ಮಂಗಳೂರು ಹೊರಕ್ಕೆ ; ವ...
22-08-26 08:37 pm
ದೇಹದಲ್ಲಿಡೀ ಉರಿ ಉರಿ! ಕೆರೆಯಲ್ಲೇ ವಾಸ, ಅಲ್ಲೇ ಆಹಾ...
20-08-26 10:55 am
ತಮಿಳುನಾಡು ಮಹಿಳಾ ಸರ್ಕಾರಿ ನೌಕರರಿಗೆ ಸರ್ಕಾರದ ಬಂಪರ...
19-08-26 02:13 pm
ಲಷ್ಕರ್ ಸ್ಥಾಪಕ ಹಫೀಜ್ ಸಯೀದ್ 10,000 ಯುವಕರನ್ನು ಕಾ...
19-08-26 01:06 pm
25-08-26 02:55 pm
HK News Staffer
ಕೆಎಸ್ ಹೆಗ್ಡೆ ಮೆಡಿಕಲ್ ಕಾಲೇಜಿನ ಪ್ರೊಫೆಸರ್, ಮಂಗಳೂ...
24-08-26 06:25 pm
ಈದ್ ಮಿಲಾದ್ ; ಬೆಳಗ್ಗೆ ಕೋಟೆಪುರದಿಂದ ಉಳ್ಳಾಲ ದರ್ಗಾ...
24-08-26 04:14 pm
ಅಡಿಕೆ ಎಲೆ ಚುಕ್ಕಿ ರೋಗ ನಿಯಂತ್ರಣಕ್ಕೆ ಸಿಪಿಸಿಆರ್ ಐ...
24-08-26 04:11 pm
ಎಂಆರ್ ಪಿಎಲ್ ನಲ್ಲಿ 26 ಇಂಜಿನಿಯರಿಂಗ್ ಹುದ್ದೆಗಳ ಭರ...
24-08-26 01:13 pm
25-08-26 12:46 pm
HK News Staffer
ಮಲ್ಪೆ ಬಂದರಿನಲ್ಲಿ ಮೀನುಗಾರರಿಬ್ಬರ ಗಲಾಟೆ ಕೊಲೆಯಲ್ಲ...
25-08-26 12:45 pm
ಡೇವಿಡ್ ಡಿಸೋಜ ಹತ್ಯೆ ಪ್ರಕರಣದಲ್ಲಿ ಮಹತ್ತರ ತಿರುವು...
25-08-26 11:38 am
ಪಡಿತರ ಅಕ್ಕಿ ಸಾಗಾಟದ ಲಾರಿಗೆ ಸ್ಕೂಟರ್ ಢಿಕ್ಕಿ! ಸಚಿ...
24-08-26 09:06 pm
ಸಾವಿರಾರು ಕೋಟಿ ವಂಚಕ, ಶಿವಂ ಅಸೋಸಿಯೇಟ್ಸ್ ಮಾಲೀಕ ಶಿ...
24-08-26 07:04 pm