ಬ್ರೇಕಿಂಗ್ ನ್ಯೂಸ್
17-10-20 06:25 pm Udupi Correspondent ಕರಾವಳಿ
ಉಡುಪಿ, ಅಕ್ಟೋಬರ್ 17: ಡ್ರಗ್ಸ್ ಜಾಲ ವಿರುದ್ಧ ಉಡುಪಿಯಲ್ಲೂ ಪೊಲೀಸರು ಬೇಟೆ ಆರಂಭಿಸಿದ್ದಾರೆ. ನಶೆಮುಕ್ತ ಜಿಲ್ಲೆ ನಿರ್ಮಾಣಕ್ಕಾಗಿ ಪೊಲೀಸರು ಅಭಿಯಾನ ಆರಂಭಿಸಿದ್ದು, ನಾಲ್ವರನ್ನು ಬಂಧಿಸಿದ್ದು 73.39 ಲಕ್ಷ ಮೌಲ್ಯದ ಡ್ರಗ್ಸ್ ವಶಪಡಿಸಿದ್ದಾರೆ.
ಈ ಬಗ್ಗೆ ಉಡುಪಿ ಎಸ್ಪಿ ಎನ್. ವಿಷ್ಣುವರ್ಧನ್ ಮಾಧ್ಯಮಕ್ಕೆ ಮಾಹಿತಿ ನೀಡಿದ್ದಾರೆ. ಡಾರ್ಕ್ ವೆಬ್ ನೆಟ್ವರ್ಕ್ ಮೂಲಕ ಡ್ರಗ್ ಖರೀದಿ ಮಾಡುತ್ತಿದ್ದರು. ಅದಕ್ಕಾಗಿ ಬಿಟ್ ಕಾಯಿನ್ ಖರೀದಿಸಿ, ಡಾರ್ಕ್ ವೆಬ್ ನಲ್ಲಿ ಯುರೋಪ್ ರಾಷ್ಟ್ರಗಳಿಂದ ಡ್ರಗ್ ತರಿಸುತ್ತಿದ್ದರು. ಎಎಸ್ಪಿ ಕುಮಾರಚಂದ್ರ ನೇತೃತ್ವದಲ್ಲಿ ಡ್ರಗ್ ವಿರುದ್ಧ ಕಾರ್ಯಾಚರಣೆಗಾಗಿ ವಿಶೇಷ ತಂಡ ರಚಿಸಲಾಗಿದ್ದು ಇದೇ ಮೊದಲ ಬಾರಿಗೆ ದೊಡ್ಡ ಮಟ್ಟದ ಸಿಂಥೆಟಿಕ್ ಡ್ರಗ್ ವಶಕ್ಕೆ ಪಡೆಯಲಾಗಿದೆ. ಕಳೆದ ಎರಡು ವಾರಗಳಿಂದ ನಡೆದ ಕಾರ್ಯಾಚರಣೆಯಲ್ಲಿ ಓರ್ವ ವಿದ್ಯಾರ್ಥಿನಿ ಸಹಿತ ನಾಲ್ವರನ್ನು ಬಂಧಿಸಲಾಗಿದೆ ಎಂದು ಮಾಹಿತಿ ನೀಡಿದರು.
ಮಣಿಪಾಲ ಸಮೀಪದ ಶಿಂಬ್ರಾದಲ್ಲಿ ಮೊದಲ ಪ್ರಕರಣ ಭೇದಿಸಲಾಗಿತ್ತು. ಆಬಳಿಕ ಬ್ರಹ್ಮಾವರ ಹಾಗೂ ಮಣಿಪಾಲ ಬಳಿ ದಾಳಿ ನಡೆಸಿದ್ದು ಮತ್ತಿಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ. ಆರೋಪಿಗಳಿಂದ ನಿಷೇಧಿತ ಎಂಡಿಎಂಎ 540 ಗ್ರಾಂ ತೂಕದ 1019 ಮಾತ್ರೆಗಳು ( ಮೌಲ್ಯ 30,57,000 ರೂ.), 1000 ಎಲ್‍ಎಸ್‍ಡಿ ಸ್ಟ್ಯಾಂಪ್ಸ್ (30,00,000 ರೂ.), 30 ಗ್ರಾಂ ತೂಕದ ಬ್ರೌನ್ ಶುಗರ್ (3,00,000) ಹಾಗೂ 131 ಗ್ರಾಂ. ತೂಕದ ಹೆಚ್ಚು ಗುಣಮಟ್ಟದ ಹೈಡ್ರೋವಿಡ್ ಗಾಂಜಾ (9,82,500 ರೂ.)ವನ್ನು ವಶಪಡಿಸಲಾಗಿದೆ ಎಂದರು.
ಜಿಲ್ಲೆಯ ಪಬ್, ರೆಸ್ಟೋರೆಂಟ್, ಹೋಟೆಲ್ ಸಹಿತ ಜನ ಸೇರುವ ಪ್ರದೇಶಗಳಲ್ಲಿ ನಡೆಯುವ ಪಾರ್ಟಿಗಳಲ್ಲಿ ಮಾದಕ ವಸ್ತು ಬಳಕೆಯಾಗುತ್ತಿರುವ ಬಗ್ಗೆ ಮಾಹಿತಿ ಸಿಕ್ಕಿದೆ. ಈ ಸಂಬಂಧ ಅಬಕಾರಿ ಇಲಾಖೆಯ ಡಿಸಿ ಜೊತೆಗೆ ಸಭೆ ನಡೆಸಿ ಅಗತ್ಯ ಕ್ರಮಕ್ಕೆ ಸೂಚಿಸಿದ್ದೇನೆ. ಈ ಬಗ್ಗೆ ಜಿಲ್ಲಾಕಾರಿಗಳ ಗಮನಕ್ಕೂ ತರಲಾಗಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಎಎಸ್ಪಿ ಕುಮಾರಚಂದ್ರ, ಸಹಾಯಕ ಪೊಲೀಸ್ ಅಧೀಕ್ಷಕ ಹರಿರಾಂ ಶಂಕರ್, ಡಿವೈಎಸ್ಪಿ ಭರತ್ ಎಸ್. ರೆಡ್ಡಿ ಉಪಸ್ಥಿತರಿದ್ದರು.
Udupi district has so far recovered Narcotic drugs worth of Rs 73,39,500 said SP Visnuvardhan. No one involved in the drug trade will be spared he added.
15-05-25 11:59 am
HK News Desk
Pro Pakistan slogan, Arrest, Bangalore: ಬೆಂಗಳ...
14-05-25 05:16 pm
Hassan Kidnap: ಅಪ್ಪನ ಎದುರೇ ಮಗಳ ಅಪಹರಣ ; ಬೇಲೂರಿ...
13-05-25 09:50 pm
Davangere Accident, police constable death: ಲ...
13-05-25 09:37 pm
ಅರ್ಧದಲ್ಲಿ ಕದನ ನಿಲ್ಲಿಸಿದ್ದು ಯಾಕೆ? ಇಷ್ಟಕ್ಕೆ ನಮ್...
13-05-25 01:14 pm
14-05-25 11:08 pm
HK News Desk
Masood Azhar; ಐಎಂಎಫ್ ಸಾಲದ ಹಣವನ್ನೂ ಉಗ್ರರಿಗೆ ಹಂ...
14-05-25 11:08 pm
ಪಾಕ್ ವಶದಲ್ಲಿದ್ದ ಬಿಎಸ್ಎಫ್ ಯೋಧ ಕೊನೆಗೂ ಬಿಡುಗಡೆ ;...
14-05-25 07:33 pm
ಆಪರೇಷನ್ ಸಿಂಧೂರ ಬಗ್ಗೆ ಹೇಳಿಕೆ, ದೇಶವಿರೋಧಿ ಪೋಸ್ಟ್...
14-05-25 04:45 pm
ಆದಂಪುರ ವಾಯುನೆಲೆ ಧ್ವಂಸ ಮಾಡಿದ್ದೇವೆಂದ ಪಾಕಿಗಳಿಗೆ...
13-05-25 08:47 pm
15-05-25 01:34 pm
Udupi Correspondent
Manjunath Bhandary, Kukke Temple, Mangalore:...
14-05-25 08:05 pm
Lokayuta, Arrest, Bantwal, Mangalore: ಗಂಡನ ಪಿ...
14-05-25 06:33 pm
Harish Injadi, President of Kukke Subrahmanya...
14-05-25 01:42 pm
Agumbe, Accident, Yakshagana: ಆಗುಂಬೆ ; ಭಾರೀ ಮ...
14-05-25 01:28 pm
15-05-25 12:14 pm
HK Staff
ಕೊಲ್ಕತ್ತಾದಲ್ಲಿ ಕಾರು ಅಡ್ಡಗಟ್ಟಿ 2.66 ಕೋಟಿ ದರೋಡೆ...
14-05-25 10:22 pm
Suhas Shetty Murder, Arrest, CCB Police: ಸುಹಾ...
14-05-25 09:23 pm
Hubballi Schoolboy Murder, Crime, Minor: ಹುಬ್...
13-05-25 07:55 pm
Abdul Rauf Azhar; ಕಂದಹಾರ್ ವಿಮಾನ ಹೈಜಾಕ್ ಮಾಸ್ಟರ...
08-05-25 05:32 pm