Say No To Drugs # ಮಂಗಳೂರಿನ ಖಾಸಗಿ ಬಸ್ಸಿನಲ್ಲಿ ವಿಶಿಷ್ಟ ಅಭಿಯಾನ !

20-10-20 03:51 pm       Mangalore Correspondent   ಕರಾವಳಿ

ಮಂಗಳೂರು ನಗರದಲ್ಲಿ ಸಂಚರಿಸುವ ಮಂಗಳಾದೇವಿ- ಸ್ಟೇಟ್ ಬ್ಯಾಂಕ್ ನಡುವಿನ ಖಾಸಗಿ ಬಸ್ ಒಂದಕ್ಕೆ ಡ್ರಗ್ ವಿರುದ್ಧ ಜಾಗೃತಿ ಮೂಡಿಸುವ ರೀತಿ ಬಣ್ಣ ಬಳಿಯಲಾಗಿದೆ.

ಮಂಗಳೂರು, ಅಕ್ಟೋಬರ್ 20: ಬೆಂಗಳೂರು ಮತ್ತು ಮಂಗಳೂರಿನಲ್ಲಿ ಡ್ರಗ್ಸ್ ದಂಧೆಯ ವಿರುದ್ಧ ಪೊಲೀಸರು ಬೇಟೆಗಿಳಿದಿರುವಾಗಲೇ ಮಂಗಳೂರಿನಲ್ಲಿ ಖಾಸಗಿ ಬಸ್ ಮಾಲಕರ ಸಂಘದವರು ಡ್ರಗ್ ವಿರುದ್ಧ ಜಾಗೃತಿ ಅಭಿಯಾನಕ್ಕೆ ಇಳಿದಿದ್ದಾರೆ.

ಮಂಗಳೂರು ನಗರದಲ್ಲಿ ಸಂಚರಿಸುವ ಮಂಗಳಾದೇವಿ- ಸ್ಟೇಟ್ ಬ್ಯಾಂಕ್ ನಡುವಿನ ಖಾಸಗಿ ಬಸ್ ಒಂದಕ್ಕೆ ಡ್ರಗ್ ವಿರುದ್ಧ ಜಾಗೃತಿ ಮೂಡಿಸುವ ರೀತಿ ಬಣ್ಣ ಬಳಿಯಲಾಗಿದೆ. ಅಲ್ಲದೆ, Say No to Drugs, Your life is in your Hands, Life does not Rewind, Drug will be your Doom  ಹೀಗೆ ನಾನಾ ರೀತಿಯ ಜಾಗೃತಿ ಸ್ಲೋಗನ್ ಗಳನ್ನು ಬಸ್ಸಿನ ಹೊರಭಾಗದಲ್ಲಿ ಬರೆಯಲಾಗಿದೆ. ನಗರದಲ್ಲಿ ಅತಿ ಹೆಚ್ಚು ಬಾರಿ ಓಡಾಡುವ ಮತ್ತು ಅತಿ ಹೆಚ್ಚು ಜನ ನೋಡಬಹುದಾದ ಬಸ್ ಇದಾಗಿದ್ದು ಖಾಸಗಿ ಬಸ್ಸಿನ ಡ್ರಗ್ ವಿರೋಧಿ ಜಾಗೃತಿ ಅಭಿಯಾನ ಜನರ ಗಮನ ಸೆಳೆದಿದೆ. ಅಲ್ಲದೆ, ಡ್ರಗ್ ಅನ್ನು ಪಿಶಾಚಿಯಂತೆ ಚಿತ್ರಿಸಿ ಯುವಜನರನ್ನು ಆಕರ್ಷಿಸುವ ರೀತಿ ಸಿಂಬಲ್ ಬಳಸಲಾಗಿದೆ.

ಈ ಬಗ್ಗೆ ಖಾಸಗಿ ಬಸ್ ಮಾಲಕರ ಸಂಘದ ಅಧ್ಯಕ್ಷ ದಿಲ್ ರಾಜ್ ಆಳ್ವ, ತಮ್ಮ ವಿಭಿನ್ನ ಪ್ರಯತ್ನದ ಬಗ್ಗೆ ಫೇಸ್ಬುಕ್ ನಲ್ಲಿ ಬರೆದುಕೊಂಡಿದ್ದಾರೆ. ಪ್ರಜ್ಞಾವಂತರ ನಗರ ಮಂಗಳೂರಿನಲ್ಲಿ ಇತ್ತೀಚಿನ ದಿನಗಳಲ್ಲಿ ಡ್ರಗ್ಸ್ ಹಾವಳಿ ಹೆಚ್ಚುತ್ತಿದೆ. ಈ ನಿಟ್ಟಿನಲ್ಲಿ ಜಾಗೃತಿ ಅನಿವಾರ್ಯ ಎನಿಸಿದೆ.

ನಮ್ಮ ಸಿಟಿ ಬಸ್ ಜನರ ಪ್ರಯಾಣಕ್ಕೆ ಮಾತ್ರವಲ್ಲ, ಜನಜಾಗೃತಿ ಮೂಡಿಸುವ ಮಾಧ್ಯಮವೂ ಹೌದು. ಈ ನಿಟ್ಟಿನಲ್ಲಿ ಮಾದಕ ದ್ರವ್ಯಗಳ ವಿರುದ್ಧ ಜನಜಾಗೃತಿ ಮೂಡಿಸುವ ಒಂದು ಪ್ರಯತ್ನ ಎಂದು ಬರೆದಿದ್ದಾರೆ. ಫೇಸ್ ಬುಕ್ ಬರಹಕ್ಕೆ ಭಾರೀ ಪ್ರತಿಕ್ರಿಯೆ ಬಂದಿದ್ದು, ಜನರು ಸಿಟಿ ಬಸ್ಸಿನವರ ಉತ್ತಮ ಪ್ರಯತ್ನ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. 

Video: 

Dilraj Alva, the owner of a private bus titled Sri Ganesh Prasad, plying on Route 27, has taken up a commendable initiative to spread awareness about drugs.