ಭಾರತ್ ಬ್ಯಾಂಕ್ ಸ್ಥಾಪಕ ಜಯ ಸಿ. ಸುವರ್ಣ ಇನ್ನಿಲ್ಲ

21-10-20 09:47 am       Headline Karnataka News Network   ಕರಾವಳಿ

ಭಾರತ್ ಕೋ- ಆಪರೇಟಿವ್ ಬ್ಯಾಂಕ್ ರೂವಾರಿ ಜಯ ಸಿ. ಸುವರ್ಣ ಬುಧವಾರ ಬೆಳಗ್ಗೆ ನಿಧನರಾಗಿದ್ದಾರೆ.

ಮಂಗಳೂರು, ಅಕ್ಟೋಬರ್ 21: ಭಾರತ್ ಕೋ- ಆಪರೇಟಿವ್ ಬ್ಯಾಂಕ್ ರೂವಾರಿ, ಬಿಲ್ಲವರ ಮಹಾಮಂಡಲ ಯೂನಿಯನ್ ಸ್ಥಾಪಕಾಧ್ಯಕ್ಷ , ಕುದ್ರೋಳಿ  ದೇವಸ್ಥಾನ ಅಭಿವೃದ್ಧಿ ಸಮಿತಿ ಅಧ್ಯಕ್ಷ ಜಯ ಸಿ. ಸುವರ್ಣ (82) ಬುಧವಾರ ಬೆಳಗ್ಗೆ ನಿಧನರಾಗಿದ್ದಾರೆ. 

ಮುಂಬೈಯಲ್ಲಿ ಹೊಟೇಲ್ ಉದ್ಯಮಿಯಾಗಿದ್ದ ಜಯ ಸಿ.ಸುವರ್ಣ ಸಾಮಾಜಿಕ, ಧಾರ್ಮಿಕ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದರು.  ಮುಂಬೈನಲ್ಲಿ ಭಾರತ್ ಕೋ- ಆಪರೇಟಿವ್ ಬ್ಯಾಂಕ್ ಸ್ಥಾಪಕರಾಗಿದ್ದಲ್ಲೆ ಮೊದಲ  ಅಧ್ಯಕ್ಷರಾಗಿ, ಬ್ಯಾಂಕ್ ಮಹಾರಾಷ್ಟ್ರ ಮತ್ತು ಕರ್ನಾಟಕದಲ್ಲಿ ವಿವಿಧ ಶಾಖೆಗಳನ್ನು ಸ್ಥಾಪಿಸಿ ಬೆಳವಣಿಗೆಗೆ ಕಾರಣರಾಗಿದ್ದರು. ಮಾಜಿ ಕೇಂದ್ರ ಸಚಿವ ಬಿ. ಜನಾರ್ದನ ಪೂಜಾರಿಯವರ ನಿಕಟವರ್ತಿಯಾಗಿದ್ದ ಜಯ ಸಿ. ಸುವರ್ಣ ಎಲ್ಲರೊಂದಿಗೆ ನಿಕಟ ಬಾಂಧವ್ಯ ಹೊಂದಿದ್ದರು. ಮುಂಬೈನಲ್ಲಿ ವಿವಿಧೆಡೆ ಬಿಲ್ಲವ ಭವನ, ಬಿಲ್ಲವ ಯೂನಿಯನ್ ಸ್ಥಾಪಿಸಿ, ಮೂಲ್ಕಿಯಲ್ಲಿ ಮಹಾಮಂಡಲ ಭವನ ನಿರ್ಮಿಸಿದ್ದರು. ಮೂಲತಃ ಮೂಲ್ಕಿಯ ಅಡ್ವೆಯವರಾಗಿದ್ದ ಜಯ ಸುವರ್ಣ ಸಣ್ಣ ವಯಸ್ಸಿನಲ್ಲೇ ಮುಂಬೈಗೆ ತೆರಳಿ, ಹೊಟೇಲ್ ಉದ್ಯಮ ಆರಂಭಿಸಿದ್ದರು. 

1991 ರಲ್ಲಿ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರವನ್ನು ನವೀಕರಣಗೊಳಿಸುವಲ್ಲಿ ಜನಾರ್ದನ ಪೂಜಾರಿಯವರ ಜೊತೆ ಜಯ ಸಿ. ಸುವರ್ಣ ಶ್ರಮ ವಹಿಸಿದ್ದರು. ಆಬಳಿಕ ದೇವಸ್ಥಾನದ ಪ್ರತೀ ಕಾರ್ಯಕ್ರಮದಲ್ಲಿ ತೊಡಗಿಸಿಕೊಂಡಿದ್ದರು. 

ಅಲ್ಪಕಾಲದ ಅಸೌಖ್ಯದಲ್ಲಿದ್ದ ಜಯ ಸಿ. ಸುವರ್ಣ ಇಂದು ಬೆಳಗ್ಗೆ ಮುಂಬೈನಲ್ಲಿ ನಿಧನರಾಗಿದ್ದಾರೆ. ಮೃತರ ಅಂತ್ಯಕ್ರಿಯೆ ಇಂದು (ಅ.21) ಮಧ್ಯಾಹ್ನ 3 ಗಂಟೆಗೆ ಮುಂಬೈನಲ್ಲಿ ನಡೆಯಲಿದೆ. ಇವರು ಪತ್ನಿ ಮತ್ತು ನಾಲ್ವರು ಪುತ್ರರನ್ನು ಅಗಲಿದ್ದಾರೆ.

Billawara Association Mumbai former president, honorary life president, honorary president of Rashtriya Billava Maha Mandal Mulki, and former chairman of Bharat Co-operative Bank Limited,  Karnataka Rajyotsava Awardee Jaya C Suvarna died at his Nilgiri Residence East of Goregaon early on the morning of Wednesday October 21. He was 74.