ಬ್ರೇಕಿಂಗ್ ನ್ಯೂಸ್
14-02-23 09:56 pm Mangalore Correspondent ಕರಾವಳಿ
ಮಂಗಳೂರು, ಫೆ.14 : ಮಂಗಳೂರು ಲಿಟ್ ಫೆಸ್ಟ್ ಐದನೇ ಆವೃತ್ತಿಯು ಫೆ.18-19 ರಂದು ಎರಡು ದಿನಗಳ ಕಾಲ ನಗರದ ಟಿಎಂಎ ಪೈ ಇಂಟರ್‌ನ್ಯಾಷನಲ್ ಕನ್ವೆನ್ಷನ್ ಸೆಂಟರ್‌ನಲ್ಲಿ ನಡೆಯಲಿದೆ. ʼThe Idea of Bharath’ ಎಂಬ ಥೀಮ್‌ನಡಿ ಈ ಸಲದ ಲಿಟ್ ಫೆಸ್ಟ್ ಜರುಗಲಿದೆ.
ಒಟ್ಟು 25 ಸೆಷನ್‌ಗಳ ವಿಚಾರ ಸಂಕಿರಣ ಆಯೋಜಿಸಲಾಗಿದ್ದು, 50ಕ್ಕೂ ಅಧಿಕ ವಾಗ್ಮಿಗಳು ಭಾಗವಹಿಸಲಿದ್ದಾರೆ. ಪ್ರತಿ ಸೆಷನ್ ಕೊನೆಗೆ ಸಾಹಿತ್ಯಕ್ಕೆ ಸಂಬಂಧಿಸಿದ ರಸಪ್ರಶ್ನೆ ಇರಲಿದ್ದು, ಗೆದ್ದವರಿಗೆ ಪುಸ್ತಕವನ್ನು ಬಹುಮಾನವಾಗಿ ನೀಡಲಾಗುತ್ತದೆ. ಲಿಟ್ ಫೆಸ್ಟ್‌ನಲ್ಲಿ ಎರಡು ಸಿನಿಮಾಗಳ ಪ್ರದರ್ಶನ ಜರುಗಲಿದೆ. ಅಲ್ಲದೆ, 16 ಪುಸ್ತಕ ಮಳಿಗೆಗಳು ಕೂಡ ಇರಲಿವೆ. ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರ ಅಧ್ಯಕ್ಷ ತುಕಾರಾಮ್ ಪೂಜಾರಿ ಇವರಿಗೆ ಈ ಬಾರಿಯ ಲಿಟ್ ಫೆಸ್ಟ್ ಪ್ರಶಸ್ತಿ ನೀಡಲಾಗುತ್ತಿದೆ. ಪುಸ್ತಕ ಮಳಿಗೆ, ತುಳು ಅಕ್ಷರ ಕಲಿಕಾ ಕಾರ್ಯಾಗಾರ, ಮಕ್ಕಳ ಸಾಹಿತ್ಯ ಅಭಿರುಚಿ ಮತ್ತು ಕಥೆಯ ಬಗ್ಗೆ ಪಾಲಕರಿಗೆ ಆಸಕ್ತಿ ಬೆಳೆಸುವ ದೃಷ್ಟಿಯಿಂದ ಅವಧಿ, ಲೇಖಕರೊಂದಿಗೆ ಸಂವಾದ - (ಹರಟೆ ಕಟ್ಟೆ) ಈ ಬಾರಿಯ ಲಿಟ್ ಫೆಸ್ಟ್‌ನ ವಿಶೇಷತೆಯಾಗಿದೆ ಎಂದು ಲಿಟ್ ಫೆಸ್ಟ್ ಆಯೋಜಿಸುವ ಭಾರತ್ ಫೌಂಡೇಶನ್ ಟ್ರಸ್ಟಿಗಳಾದ ಬೃಜೇಶ್ ಚೌಟ ಮತ್ತು ಸುನಿಲ್ ಕುಲಕರ್ಣಿ ಸುದ್ದಿಗೋಷ್ಟಿಯಲ್ಲಿ ತಿಳಿಸಿದ್ದಾರೆ.
ಉದ್ಘಾಟನಾ ಅವಧಿ ʼThe Idea of Bharath In Amrithkal: Reclaiming The Right Path- The Way Forward ಪರಿಕಲ್ಪನೆಯ ಅಡಿ ಜರುಗಲಿದ್ದು, ಆರ್. ಜಗ್ನನಾಥ್, ವಿನಯ್ ಹೆಗ್ಡೆ, ವಿ. ನಾಗರಾಜ್ ಭಾಗಿಯಾಗಲಿದ್ದಾರೆ. ಎರಡು ದಿನದ ಸಂಕಿರಣದಲ್ಲಿ ಚಿತ್ರ ನಟ ರಿಷಬ್ ಶೆಟ್ಟಿ, ಪ್ರಕಾಶ್ ಬೆಳವಾಡಿ, ಸ್ಮಿತಾ ಪ್ರಕಾಶ್, ಶಿವ್ ಅರೂರ್, ಇಂದಿರಾ ಹೆಗ್ಡೆ, ಲಕ್ಷ್ಮೀಶ ತೋಳ್ಪಾಡಿ, ಅರವಿಂದ ಚೊಕ್ಕಾಡಿ, ಅಜಿತ್ ಹನುಮಕ್ಕನವರ್, ಅಡ್ಡಂಡ ಕಾರ್ಯಪ್ಪ, ಬಾಸುಮ, ದಕ್ಕುಲ ಮುನಿಸ್ವಾಮಿ ಅನೇಕ ವಿಷಯ ಪರಿಣತರು ಭಾಗವಹಿಸಲಿದ್ದಾರೆ. ಸುದ್ದಿಗೋಷ್ಟಿಯಲ್ಲಿ ಶ್ರೀರಾಜ್ ಗುಡಿ, ಸಂಜಯ ಪ್ರಭು, ಈಶ್ವರ್ ಶೆಟ್ಟಿ, ಸುಜಿತ್ ಪ್ರತಾಪ್ ಮತ್ತಿತರರಿದ್ದರು.
Mangaluru Lit Fest on Feb 18 and 19 to showcase The Idea of Bharat. Mangaluru Lit Fest intends to highlight the literary & cultural diversity, creating a conducive platform for thought provoking & captivating intellectual deliberations. The festival is an autonomous community sponsored literary conclave.
21-02-25 10:47 pm
Bangalore Correspondent
Rohini Sindhuri, Roopa moudgil, latest news:...
21-02-25 10:12 pm
Santosh Lad, Modi, Nitin Gadkari: ಬಿಜೆಪಿ ಅಧಿಕ...
21-02-25 04:36 pm
Bidar accident, Prayagraj, five killed; ಬೀದರ್...
21-02-25 02:00 pm
Siddaramaiah, MUDA case, Vijayendra: ಮುಡಾ ಹಗರ...
20-02-25 10:06 pm
22-02-25 09:48 pm
HK News Desk
ದುಬೈ ಉದ್ಯಮಿ ಬಿ.ಆರ್ ಶೆಟ್ಟಿಗೆ ದುಬೈ ಕೋರ್ಟಿನಿಂದ ಮ...
22-02-25 07:51 pm
Kerala school teacher suicide, catholic Churc...
22-02-25 03:53 pm
Kasargod News, Crime: ಉಕ್ಕಿನಡ್ಕ ; ಕೆರೆಗೆ ಬಿದ್...
22-02-25 01:31 pm
Donald Trump, Modi, India: ಭಾರತದಲ್ಲಿ ಮೋದಿಯನ್ನ...
21-02-25 01:23 pm
22-02-25 05:21 pm
Mangalore Correspondent
Singari Beedi Robbery, IPS, crime: ಸಿಂಗಾರಿ ಬೀ...
21-02-25 08:22 pm
Thumbay Group, Fergana College, Uzbekistan: ಉ...
21-02-25 07:54 pm
Mangalore, Ullal, B R Rao, Kannada literary c...
21-02-25 07:21 pm
Mangalore Congress, Satish Jarkiholi; ಗಾಂಧಿ-...
21-02-25 12:40 am
22-02-25 10:36 pm
Bangalore Correspondent
Ankola Car Robbery, Rajendra Pawar, Gold Smug...
20-02-25 01:22 pm
Mangalore, Puttur, Cheating, paras traders: ಲ...
19-02-25 09:26 pm
Mangalore CCB police, 119 kg ganja, Crime: ಮೀ...
18-02-25 07:19 pm
Madikeri police, Fake Scheme, Mangalore crime...
18-02-25 06:04 pm