ನವದುರ್ಗೆಯ ಅವತಾರದಲ್ಲಿ ವಿಷ್ಣುಪ್ರಿಯಾ !

21-10-20 01:26 pm       Mangalore Correspondent   ಕರಾವಳಿ

ನವದುರ್ಗೆಯ ರೂಪದಲ್ಲಿ ಕಂಗೋಳಿಸಿದ ಅಭಿನಯ ಚತುರೆ ವಿಷ್ಣುಪ್ರಿಯಾ.

ಮಂಗಳೂರು, ಅಕ್ಟೋಬರ್ 21: ಕೃಷ್ಣಾಷ್ಟಮಿಯಂದು ಪುಟಾಣಿ ಮಕ್ಕಳಿಗೆ ಕೃಷ್ಣನ ವೇಷ ತೊಡಿಸಿ, ಸಂಭ್ರಮಿಸುವುದನ್ನು ನೋಡಿದ್ದೇವೆ. ಈ ಬಾರಿ ಗಣೇಶೋತ್ಸವ, ನವರಾತ್ರಿಗೂ ಆ ಟ್ರೆಂಡ್ ಮುಂದುವರಿದಿದೆ. ನವರಾತ್ರಿಯ ಸಂಭ್ರಮದ ನಡುವೆ ತಮ್ಮ ಮಗುವನ್ನೂ ನವದುರ್ಗೆಯಾಗಿ ನೋಡಲು ಹೆತ್ತವರು ಇನ್ನಿಲ್ಲದ ಕಸರತ್ತು ಮಾಡಿದ್ದಾರೆ. ನುರಿತ ಛಾಯಾಗ್ರಾಹಕರ ಕೈಚಳಕದಲ್ಲಿ ಮೂಡಿಬಂದ ನವದುರ್ಗೆಯರ ಫೋಟೋಗಳು ಜಾಲತಾಣದಲ್ಲಿ ಈಗ ಭಾರೀ ವೈರಲ್ ಆಗಿವೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಯಜಮಾನ ಉಪ್ಪಿನಕಾಯಿ ಮೂಲಕ ಫೇಮಸ್ ಆಗಿರುವ ಬಂಟ್ವಾಳದ ವರದರಾಯ ಪೈ – ಸಂಧ್ಯಾ ಪೈಯವರ ಮಗಳು ವಿಷ್ಣುಪ್ರಿಯಾ. ಸಂಗೀತ, ಭರತನಾಟ್ಯ, ಅಭಿನಯ ಚತುರೆ ಆಗಿರುವ ವಿಷ್ಣುಪ್ರಿಯಾಳನ್ನು ಈ ಬಾರಿ ಹೆತ್ತವರು ನವದುರ್ಗೆಯ ರೂಪದಲ್ಲಿ ಕಂಡಿದ್ದಾರೆ. ದೇವಿ ಲಕ್ಷ್ಮಿಯ ಅವತಾರಗಳಾಗಿರುವ ಆದಿಶಕ್ತಿ, ಸ್ಕಂದಮಾತ, ಭದ್ರಕಾಳಿ, ಶಾರದೆ, ಕಾತ್ಯಾಯಿನಿ, ಬ್ರಹ್ಮಚಾರಿಣಿ, ಮಹಾಗೌರಿ, ಸಿದ್ಧಿಧಾತ್ರಿ, ದುರ್ಗಾಮಾತೆ ಹೀಗೆ ನವರೂಪಗಳನ್ನು ಧರಿಸಿ, ಸಾಕ್ಷಾತ್ ನವಶಕ್ತಿಯರ ಅವತಾರಗಳಲ್ಲಿ ವಿಷ್ಣುಪ್ರಿಯಾಳನ್ನು ಫೋಟೋಶೂಟ್ ಮಾಡಿಸಿದ್ದಾರೆ. ಕಾರಿಂಜ ಮತ್ತು ಕುದ್ರೋಳಿ ದೇವಸ್ಥಾನಗಳಲ್ಲಿ ಈ ಫೋಟೋಗಳನ್ನು ಶೂಟ್ ಮಾಡಲಾಗಿದ್ದು, ಜನರ ಮೆಚ್ಚುಗೆಗೆ ಪಾತ್ರವಾಗಿದೆ.

ಅಂದಹಾಗೆ, 4ನೇ ತರಗತಿ ಕಲಿಯುತ್ತಿರುವ ವಿಷ್ಣುಪ್ರಿಯಾ ಮೂಡುಬಿದ್ರೆ ರೋಟರಿ ಇಂಗ್ಲಿಷ್ ಮೀಡಿಯಂ ಸ್ಕೂಲ್ ವಿದ್ಯಾರ್ಥಿನಿ. ಬಾಲಕಿಯ ನವದುರ್ಗೆಯರ ಸ್ವರೂಪಗಳು ಮಂಗಳೂರಿನ ಛಾಯಾಗ್ರಾಹಕ ಪುನೀಕ್ ಶೆಟ್ಟಿ ಕ್ಯಾಮರಾ ಕಣ್ಣಲ್ಲಿ ಕಂಡಿದ್ದು ಹೀಗೆ.. 

ಇನ್ನಷ್ಟು ಪೋಟೋಗಳಿಗೆ: Photo Gallery