ಉಡುಪಿ ಜಿಲ್ಲೆಯಲ್ಲಿ ಮತ್ತೆ ಭಾರೀ ಮಳೆ ಮುನ್ಸೂಚನೆ 

21-10-20 07:20 pm       Udupi Correspondent   ಕರಾವಳಿ

ಇತ್ತೀಚೆಗೆ ಭಾರೀ ಮಳೆಯಿಂದ ನಲುಗಿದ್ದ ಉಡುಪಿ ಜಿಲ್ಲೆಯಲ್ಲಿ ಮತ್ತೆ ಭಾರೀ ಮಳೆಯ ಮುನ್ಸೂಚನೆ ನೀಡಲಾಗಿದೆ. 

ಉಡುಪಿ, ಅಕ್ಟೋಬರ್ 21: ಇತ್ತೀಚೆಗೆ ಭಾರೀ ಮಳೆಯಿಂದ ನಲುಗಿದ್ದ ಉಡುಪಿ ಜಿಲ್ಲೆಯಲ್ಲಿ ಮತ್ತೆ ಭಾರೀ ಮಳೆಯ ಮುನ್ಸೂಚನೆ ನೀಡಲಾಗಿದೆ. 

ಭಾರತೀಯ ಹವಾಮಾನ ಇಲಾಖೆಯಿಂದ ಉಡುಪಿ ಜಿಲ್ಲೆಗೆ ಹಳದಿ ಅಲರ್ಟ್ ಘೋಷಣೆ ಮಾಡಲಾಗಿದೆ. ಇಲಾಖೆಯ ಬೆಂಗಳೂರು ಪ್ರಾದೇಶಿಕ ಕೇಂದ್ರದ ವರದಿಯ ಪ್ರಕಾರ, ಅ.22 ಮತ್ತು 23ರಂದು ಉಡುಪಿ ಜಿಲ್ಲೆಯ ಹಲವೆಡೆ ಗುಡುಗು ಸಹಿತ 65 ಮಿ.ಮೀ.ಗಿಂತಲೂ ಅಧಿಕ ಮಳೆಯಾಗುವ ಸಾಧ್ಯತೆ ಇದೆ ಎಂದು ವರದಿ ನೀಡಿದೆ.  

ಬುಧವಾರ ಬೆಳಗ್ಗೆ 8.30ಕ್ಕೆ ಕೊನೆಗೊಂಡ 24 ತಾಸುಗಳಲ್ಲಿ ಉಡುಪಿ ಜಿಲ್ಲೆಯಲ್ಲಿ ಸರಾಸರಿ 4 ಮಿ.ಮೀ. ಮಳೆಯಾಗಿದೆ. ಉಡುಪಿ ತಾಲೂಕಿನಲ್ಲಿ 12.6 ಮಿ.ಮೀ., ಕುಂದಾಪುರ ತಾಲೂಕಿನಲ್ಲಿ 0.5 ಮಿ.ಮೀ. ಹಾಗೂ ಕಾರ್ಕಳ ತಾಲೂಕಿನಲ್ಲಿ 2 ಮಿ.ಮೀ. ಮಳೆ ಬಿದ್ದಿದೆ. ಜಿಲ್ಲೆಯ ಉದ್ಯಾವರ ಗ್ರಾಮದಲ್ಲಿ ಅತಿ ಹೆಚ್ಚು 61 ಮಿ.ಮೀ., ಪಡುಬಿದ್ರಿಯಲ್ಲಿ 58 ಮಿ.ಮೀ., ಕಡೆಕಾರು ಗ್ರಾಮದಲ್ಲಿ 51 ಮಿ.ಮೀ. ಮತ್ತು ಬೆಳಪುವಿನಲ್ಲಿ 49 ಮಿ.ಮೀ. ಮಳೆ ಸುರಿದಿದೆ.

The Udupi city may have to brace up heavy rains as government issues yellow alert as on 21 wednesday, October 2020.