ಬ್ರೇಕಿಂಗ್ ನ್ಯೂಸ್
23-02-23 07:37 pm Mangalore Correspondent ಕರಾವಳಿ
ಪುತ್ತೂರು, ಫೆ.23 : ಅರಣ್ಯ ಇಲಾಖೆಯ ಅಧಿಕಾರಿಗಳು ಆರಂಭಿಸಿದ್ದ ಆಪರೇಷನ್ ಎಲಿಫೆಂಟ್ ಯಶಸ್ವಿಯಾಗಿದೆ. ಇಬ್ಬರನ್ನು ಬಲಿ ತೆಗೆದುಕೊಂಡಿದೆ ಎನ್ನಲಾದ ಆನೆಯನ್ನು ಸುಬ್ರಹ್ಮಣ್ಯ ಅರಣ್ಯ ವಲಯದ ಕೊಂಬಾರು ಸಮೀಪದ ಮಂಡೆಕರ ಕಾಡಿನಲ್ಲಿ ಸೆರೆಹಿಡಿಯಲಾಗಿದೆ.
ಗುರುವಾರ ಸಂಜೆ ಆನೆ ಪತ್ತೆಯಾಗುತ್ತಲೇ ತಜ್ಞ ವೈದ್ಯರು ಅರಿವಳಿಕೆ ಚುಚ್ಚುಮದ್ದು ಬಿಟ್ಟು ಆನೆಯನ್ನು ಸೆರೆಹಿಡಿಯುವ ಕೆಲಸ ಮಾಡಿದ್ದಾರೆ. ಸೋಮವಾರ ಬೆಳಗ್ಗೆ ಇಬ್ಬರನ್ನು ಬಲಿ ತೆಗೆದುಕೊಂಡ ಘಟನೆ ಬಳಿಕ ಅರಣ್ಯ ಸಿಬಂದಿ ಎಲಿಫೆಂಟ್ ಆಪರೇಷನ್ ಕಾರ್ಯಾಚರಣೆ ಆರಂಭಿಸಿದ್ದರು.
ಸುಬ್ರಹ್ಮಣ್ಯ, ಪುತ್ತೂರು, ಪಂಜ ವಿಭಾಗದ 100ಕ್ಕೂ ಮಿಕ್ಕಿದ ಅರಣ್ಯ ಇಲಾಖೆಯ ಸಿಬಂದಿ ಮತ್ತು ಸ್ಥಳೀಯರು ಸೇರಿ ಕಾರ್ಯಾಚರಣೆ ನಡೆಸಿದ್ದರು. ಡ್ರೋಣ್ ಬಳಸಿ ಆನೆಯ ಚಲನವಲನ ಪತ್ತೆ ಮಾಡುವ ಕಾರ್ಯ ನಡೆದಿತ್ತು. ಇದೀಗ ಆನೆ ಸೆರೆಸಿಕ್ಕಿರುವ ಕೊಂಬಾರು ಗ್ರಾಮದ ಒಂದು ಕಿಲೋಮೀಟರ್ ವ್ಯಾಪ್ತಿಯಲ್ಲಿ ಸಾರ್ವಜನಿಕ ಸಂಚಾರಕ್ಕೆ ನಿಷೇಧ ವಿಧಿಸಲಾಗಿದೆ. ಆನೆ ಗುಂಪಾಗಿದ್ದರೆ, ತಿರುಗಿ ಬೀಳಬಹುದೆಂಬ ಮುನ್ನೆಚ್ಚರಿಕೆಯಿಂದ ಜನರು ಸಂಚಾರ ನಡೆಸದಂತೆ ಸೂಚಿಸಲಾಗಿದೆ. 5 ಸಾಕಾನೆಗಳು, ತಜ್ಞ ವೈದ್ಯರು, ಅರಣ್ಯ ಅಧಿಕಾರಿಗಳು ಸೇರಿ ಕಾರ್ಯಾಚರಣೆ ಆರಂಭಿಸಿದ್ದರು.
ಫೆ.20ರ ಸೋಮವಾರ ಬೆಳಗ್ಗೆ ಏಳು ಗಂಟೆ ಸುಮಾರಿಗೆ ಹಾಲು ಸೊಸೈಟಿಗೆ ತೆರಳುತ್ತಿದ್ದ ರಂಜಿತಾ ರೈ (24) ಮೇಲೆ ದಾರಿಯಲ್ಲಿ ಆನೆ ದಾಳಿ ನಡೆಸಿತ್ತು. ಆಕೆಯ ಚೀರಾಟ ಕೇಳಿ ಪರಿಸರದ ನಿವಾಸಿ ರಮೇಶ್ ರೈ (52) ಸಹಾಯಕ್ಕೆ ಧಾವಿಸಿದ್ದರು. ಆದರೆ ಕಾಡಾನೆಯ ತಿವಿತಕ್ಕೆ ಸಿಲುಕಿ ಇಬ್ಬರೂ ಬಲಿಯಾಗಿದ್ದರು. ಈಗ ಸೆರೆ ಸಿಕ್ಕಿರುವ ಆನೆಯೇ ಅಂದು ದಾಳಿ ನಡೆಸಿತ್ತು ಎನ್ನುವ ಬಗ್ಗೆ ಖಾತರಿಯಿಲ್ಲ. ಈ ಭಾಗದ ಅರಣ್ಯ ಪ್ರದೇಶದಲ್ಲಿ ಇನ್ನಷ್ಟು ಕಾಡಾನೆಗಳು ಅರಿತುಕೊಂಡಿರುವ ಮಾಹಿತಿಗಳಿವೆ. ಹೀಗಾಗಿ ಯಾವ ಆನೆ ಅಂದು ದಾಳಿ ನಡೆಸಿತ್ತು ಎನ್ನುವುದನ್ನು ನೋಡಿದವರಿಲ್ಲ. ಬಂಧನ ಆಗಿರುವ ಆನೆಯನ್ನು ನೋಡಲು ಭಾರೀ ಸಂಖ್ಯೆಯಲ್ಲಿ ಜನರು ಬರುತ್ತಿದ್ದಾರೆ.
Elephant attack two killed in Kadaba, one wild tusker captured by Forest officials. The operation to capture the rogue elephant that claimed the lives of two people in Renjilady-Naila of Kadaba taluk, Dakshina Kannada district, on February 20, Monday morning, has been underway. Meanwhile, it has been reported that the forest department officials have successfully captured the rogue elephant. However, it needs to be ascertained whether it is the same elephant that killed two persons.
19-04-25 03:04 pm
HK Staff
Janivara, Shivamogga, Suspend: ಜನಿವಾರ ತೆಗೆಸಿದ...
19-04-25 12:24 pm
Bidar Cet Exam, Janivara issue: ಜನಿವಾರ ಹಾಕಿದ್...
18-04-25 05:38 pm
Tumkur, Tiptur, Kidnap, Protest: ಹಾಡಹಗಲೇ ಮಗಳ...
18-04-25 03:38 pm
Grace Ministry Bangalore, Budigere, Ark of th...
17-04-25 05:01 pm
18-04-25 02:21 pm
HK News Desk
ನ್ಯಾಷನಲ್ ಹೆರಾಲ್ಡ್ ಪ್ರಕರಣ ; ಸೋನಿಯಾ, ರಾಹುಲ್ ವಿರ...
16-04-25 03:54 pm
ಮುಂಬೈ- ದುಬೈ ಮಧ್ಯೆ ಅಂಡರ್ ವಾಟರ್ ಪ್ರಾಜೆಕ್ಟ್ ; ಎರ...
15-04-25 04:40 pm
Mumbai terror attack, Tahawwur Rana David He...
14-04-25 11:25 pm
14 ಸಾವಿರ ಕೋಟಿ ವಂಚನೆ ಎಸಗಿ ದೇಶ ಬಿಟ್ಟು ಹೋಗಿದ್ದ ಮ...
14-04-25 05:38 pm
19-04-25 06:19 pm
Mangaluru Correspondent
Mangalore Waqf protest, Traffic ACP Najma Far...
19-04-25 04:24 pm
Mangalore Bappanadu Mukii, Chariot Collapses;...
19-04-25 10:51 am
Mangalore Waqf protest, Adyar, Police: ವಕ್ಫ್...
18-04-25 10:17 pm
Mangalore Waqf Protest, Adyar, Police, Live:...
18-04-25 12:54 pm
19-04-25 10:46 pm
Mangalore Correspondent
Ullal Gang Rape, Crime, Update, Mangalore: ಗ್...
19-04-25 09:22 pm
Ricky Rai Shot, Crime, Rakesh Malli, Mangalor...
19-04-25 11:01 am
ರಾಣಾ ಬಳಿಕ ಮತ್ತೊಬ್ಬ ಮೋಸ್ಟ್ ವಾಂಟೆಡ್ ಖಲೀಸ್ತಾನಿ ಉ...
19-04-25 10:55 am
Mangalore Kuthar, Ullal Gang Rape, Arrest: ಕು...
18-04-25 10:59 pm