ಬ್ರೇಕಿಂಗ್ ನ್ಯೂಸ್
09-03-23 07:00 pm Mangalore Correspondent ಕರಾವಳಿ
ಮಂಗಳೂರು, ಮಾ.9: ಕರಾವಳಿಯಲ್ಲಿ ಬಿಸಿಲ ಝಳ ಗರಿಷ್ಠಕ್ಕೇರುತ್ತಿದ್ದು, ಮಂಗಳೂರಿನಲ್ಲಿ ದೇಶದಲ್ಲೇ ಅತಿ ಹೆಚ್ಚು ಉಷ್ಣಾಂಶ ದಾಖಲಾಗಿದೆ. ಮಂಗಳೂರಿನ ಪಣಂಬೂರಿನಲ್ಲಿ ಮಾ.9ರ ಗುರುವಾರ ಮಧ್ಯಾಹ್ನ ಗರಿಷ್ಠ 38.8 ಡಿಗ್ರಿ ಸೆಲ್ಶಿಯಸ್ ಉಷ್ಣಾಂಶ ದಾಖಲಾಗಿದ್ದು ಇದು ಈ ಸಾಲಿನಲ್ಲಿ ದೇಶದಲ್ಲಿ ದಾಖಲಾದ ಗರಿಷ್ಠ ಉಷ್ಣ ವಾತಾವರಣ ಎಂದು ಹವಾಮಾನ ಇಲಾಖೆ ದಾಖಲಿಸಿದೆ. ಇದೇ ವೇಳೆ, ರಾಜ್ಯ ಹವಾಮಾನ ಇಲಾಖೆಯಿಂದ ಮುಂದಿನ 48 ಗಂಟೆಗಳಲ್ಲಿ ಕರಾವಳಿಯ ನಿರ್ದಿಷ್ಟ ಭಾಗಗಳಲ್ಲಿ ಅತಿ ಹೆಚ್ಚು ಉಷ್ಣಾಂಶ ಎದುರಾಗುವ ಸಾಧ್ಯತೆಯಿದೆ ಎಂದು ಎಚ್ಚರಿಕೆ ನೀಡಲಾಗಿದೆ.
ಮಂಗಳೂರಿನ ಪಣಂಬೂರಿನಲ್ಲಿ 38.8 ಡಿಗ್ರಿ, ಕಾರವಾರದಲ್ಲಿ 38.6 ಡಿಗ್ರಿ, ಬ್ರಹ್ಮಾವರದಲ್ಲಿ 38.4 ಡಿಗ್ರಿ, ಹೊನ್ನಾವರದಲ್ಲಿ 38.2 ಡಿಗ್ರಿ ಉಷ್ಣಾಂಶ ದಾಖಲಾಗಿದೆ. ಮುಂದಿನ 48 ಗಂಟೆಗಳಲ್ಲಿ ಕರಾವಳಿಯಲ್ಲಿ ಗರಿಷ್ಠ ಬಿಸಿ ಗಾಳಿ ಬೀಸಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಇದೇ ವೇಳೆ ಭಾರತೀಯ ಹವಾಮಾನ ಇಲಾಖೆಯಿಂದ ದಕ್ಷಿಣ ಕೊಂಕಣ, ಗೋವಾ, ಕರ್ನಾಟಕದ ಕರಾವಳಿಯ ಪ್ರತ್ಯೇಕ ಸ್ಥಳಗಳಲ್ಲಿ ಗರಿಷ್ಠ ಉಷ್ಣಾಂಶದ ಬಿಸಿ ಗಾಳಿಯ ಪರಿಸ್ಥಿತಿಗಳು ಉಂಟಾಗುವ ಸಾಧ್ಯತೆಯಿದೆ ಎಂದು ಮುನ್ಸೂಚನೆ ನೀಡಲಾಗಿದೆ. ಮಾ.9ರಿಂದ 13ರ ವರೆಗೆ 5 ದಿನಗಳ ಎಚ್ಚರಿಕೆ ನೀಡಲಾಗಿದ್ದು, ಬಿಸಿ ಗಾಳಿಯಿಂದಾಗಿ ಜನಜೀವನಕ್ಕೆ ತೊಂದರೆಯಾಗುವ ಸಾಧ್ಯತೆ ಬಗ್ಗೆ ಸೂಚಿಸಲಾಗಿದೆ.


ದೇಶದಲ್ಲೇ ಗರಿಷ್ಠ ಉಷ್ಣಾಂಶ
ಇದಲ್ಲದೆ, ಮಂಗಳೂರಿನಲ್ಲಿ ದಾಖಲಾಗಿರುವ 38.8 ಡಿಗ್ರಿ ಉಷ್ಣತೆ ದೇಶದಲ್ಲೇ ಗರಿಷ್ಠ ಎಂದು ಸೂಚಿಸಲಾಗಿದೆ. ಜಮ್ಮು ಡಿವಿಶನ್ ಮತ್ತು ಕರ್ನಾಟಕದ ಕರಾವಳಿಯಲ್ಲಿ ಎಂದಿಗಿಂತ 4ರಿಂದ 6 ಡಿಗ್ರಿ ಹೆಚ್ಚುವರಿ ಉಷ್ಣಾಂಶ ಇರಲಿದೆ. ಗೋವಾ, ಕರ್ನಾಟಕ ಕರಾವಳಿ, ಗುಜರಾತಿನ ಕಛ್, ವಿದರ್ಭ, ಸೌರಾಷ್ಟ್ರ ಭಾಗದಲ್ಲಿ ಕೆಲವೆಡೆ 37ರಿಂದ 39 ಡಿಗ್ರಿ ಉಷ್ಣತೆ ದಾಖಲಾಗಿದೆ. ಇದೇ ವೇಳೆ, ಕೇರಳ, ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ, ಒಡಿಶಾದಲ್ಲಿ 35ರಿಂದ 37 ಡಿಗ್ರಿ ಉಷ್ಣಾಂಶ ಕಂಡುಬಂದಿದೆ.
Highest temperature of 38.8 deg C in the country is recorded in the city for the second time on Wednesday. Public are concerned about the soaring mercury day-by-day. IMD has warned of rise of about two to three degrees in temperature in coming days.
09-07-26 02:56 pm
HK News Staffer
ಸಚಿವ ಸಂಪುಟ ವಿಸ್ತರಣೆಯಾದರೆ ಸರ್ಕಾರ ಸ್ವಲ್ಪಮಟ್ಟಿಗೆ...
09-07-26 02:56 pm
ಬೆಳಗಾವಿಯಲ್ಲಿ ಆರೆಸ್ಸೆಸ್ ಪ್ರತಿನಿಧಿ ಸಭೆ ; ಖಾಸಗಿ...
08-07-26 02:06 pm
ಗುಂಡ್ಲುಪೇಟೆ ಬಳಿಯ ಮಲ್ಲಯ್ಯನಪುರ ಗುಡ್ಡದಲ್ಲಿ ಅಪರೂಪ...
08-07-26 01:13 pm
ಮೈಸೂರಿನಲ್ಲಿ ಹುಲಿ ದಾಳಿ ; ಒಂದೂವರೆ ಗಂಟೆ ಮರ ಏರಿ...
07-07-26 09:02 pm
09-07-26 03:40 pm
HK News Staffer
18 ವರ್ಷಗಳ ಬಳಿಕ ಅಹಮದಾಬಾದ್ ಸರಣಿ ಬಾಂಬ್ ಸ್ಫೋಟ ಪ್ರ...
07-07-26 03:22 pm
ವಯನಾಡಿನಲ್ಲಿ ಮತ್ತೆ ಭೀಕರ ಭೂಕುಸಿತ ; ಭಾರೀ ಮಳೆಗೆ ಸ...
07-07-26 01:51 pm
ಮುಂಬೈನಲ್ಲಿ ಮರಣ ಮಳೆಗೆ 13 ಮಂದಿ ಬಲಿ; ಕುಸಿದ ರಸ್ತ...
06-07-26 01:14 pm
ಅಟ್ಲಾಂಟಿಕ್ ಸಾಗರದಲ್ಲಿ 80 ವರ್ಷಗಳ ಹಿಂದೆ ಮುಳುಗಿದ್...
05-07-26 08:39 pm
10-07-26 05:25 pm
HK News Staffer
ಬಾಲಕನಿಗೆ ಛಡಿಯೇಟು ; ಕಾಟಿಪಳ್ಳ ಮದ್ರಸಾ ಶಿಕ್ಷಕ ಉಸ್...
09-07-26 11:09 pm
ಮೋದಿಯನ್ನ ಪ್ರಶ್ನಿಸುವ ಕೈ ಮುಖಂಡ ಅಭಿಷೇಕ್ ಮೂಡಾ ಭ್ರ...
09-07-26 10:47 pm
ಕೆಪಿಟಿ ಜಂಕ್ಷನ್ ಬಳಿಯಲ್ಲಿ ಡಿವೈಡರ್ ಡಿಕ್ಕಿಯಾಗಿ ಬೈ...
08-07-26 11:04 pm
ಸಚಿವರಿಲ್ಲದ ಶಿಕ್ಷಣ ಇಲಾಖೆ ಬಣ ಬಣ ; ಪಿಯು ಕಾಲೇಜಿಗೆ...
08-07-26 08:38 pm
10-07-26 03:25 pm
HK News Staffer
ಕಟ್ಟಡ ಕಾರ್ಮಿಕರ ಸೋಗಿನಲ್ಲಿ ಅಡಗಿದ್ದ ಎಂಟು ಮಂದಿ ಬಾ...
10-07-26 02:22 pm
ಟೀಚರ್ ಬುದ್ಧಿವಾದ ಹೇಳಿದ್ದೇ ತಪ್ಪಾಯ್ತು ; ಈ ಅವಮಾನ...
09-07-26 09:11 pm
ಹೆಂಗಸರ ವಿಷ್ಯ ಬೇಡವೋ ಶಿಷ್ಯಾ..! ಚಾಡಿ ಹೇಳಿ ಸಾವಿಗೆ...
09-07-26 07:52 pm
ಬೆಳಗಾವಿ ಸಂತೆಯಲ್ಲಿ ಎತ್ತು ಖರೀದಿಸಿ ಕೇರಳಕ್ಕೆ ಸಾಗಿ...
09-07-26 07:49 pm