ನಂತೂರು ವೃತ್ತದ ಎಡವಟ್ಟು ; ಟಿಪ್ಪರ್ ಧಾವಂತಕ್ಕೆ ಅಮಾಯಕರಿಬ್ಬರು ಬಲಿ, ಉದ್ರಿಕ್ತರಿಂದ ಚಾಲಕನಿಗೆ ಯತ್ವಾತದ್ವಾ ಥಳಿತ

18-03-23 04:26 pm       Mangalore Correspondent   ಕರಾವಳಿ

ನಗರದ ನಂತೂರು ವೃತ್ತದಲ್ಲಿ ಲಾರಿ ಚಾಲಕನ ಧಾವಂತಕ್ಕೆ ಸ್ಕೂಟರ್ ನಲ್ಲಿದ್ದ ಇಬ್ಬರು ಬಲಿಯಾಗಿದ್ದು ಸ್ಥಳದಲ್ಲಿ ಸೇರಿದ ಸಾರ್ವಜನಿಕರು ರೊಚ್ಚಿಗೆದ್ದು ಲಾರಿ ಚಾಲಕನನ್ನು ಹಿಡಿದು ಥಳಿಸಿದ್ದಾರೆ. 

ಮಂಗಳೂರು, ಮಾ.18 : ನಗರದ ನಂತೂರು ವೃತ್ತದಲ್ಲಿ ಲಾರಿ ಚಾಲಕನ ಧಾವಂತಕ್ಕೆ ಸ್ಕೂಟರ್ ನಲ್ಲಿದ್ದ ಇಬ್ಬರು ಬಲಿಯಾಗಿದ್ದು ಸ್ಥಳದಲ್ಲಿ ಸೇರಿದ ಸಾರ್ವಜನಿಕರು ರೊಚ್ಚಿಗೆದ್ದು ಲಾರಿ ಚಾಲಕನನ್ನು ಹಿಡಿದು ಥಳಿಸಿದ್ದಾರೆ. 

ಪಂಪ್ವೆಲ್ ಕಡೆಯಿಂದ ನಂತೂರು ಮೂಲಕ ತೆರಳುತ್ತಿದ್ದ ಟಿಪ್ಪರ್ ಲಾರಿಯನ್ನು ಚಾಲಕ ಸತೀಶ್ ಗೌಡ ಪಾಟೀಲ್ ಅಜಾಗರೂಕತೆಯಿಂದ ಚಲಾಯಿಸಿದ್ದು ಅದೇ ಮಾರ್ಗದಲ್ಲಿ ಮುಂದಿನಿಂದ ಹೋಗುತ್ತಿದ್ದ ಸ್ಕೂಟರ್ ಮೇಲೆ ಹರಿದಿದೆ. ಸ್ಕೂಟರಿನಲ್ಲಿದ್ದ ಸುಲ್ತಾನ್ ಬತ್ತೇರಿ ನಿವಾಸಿ ಸ್ಯಾಮುಯೆಲ್ ಜೇಸುದಾಸ್ (66) ಮತ್ತು ಅವರ ಸಂಬಂಧಿಕರಾದ ಭೂಮಿಕಾ (17) ಮೇಲೆ ಲಾರಿ ಹರಿದಿದ್ದು ಸ್ಥಳದಲ್ಲೇ ಸಾವು ಕಂಡಿದ್ದಾರೆ. ಕಾರ್ಯ ನಿಮಿತ್ತ ನಂತೂರಿಗೆ ಬಂದು ಅವರು ಹಿಂದೆ ತೆರಳುತ್ತಿದ್ದರು. 

ಸ್ಥಳದಲ್ಲಿ ಸೇರಿದ ಸಾರ್ವಜನಿಕರು ಘಟನೆ ನೋಡಿ ಉದ್ರಿಕ್ತರಾಗಿದ್ದು ಲಾರಿ ಚಾಲಕನನ್ನು ಟಿಪ್ಪರ್ ನಿಂದ ಕೆಳಕ್ಕೆ ಎಳೆದು ಹಾಕಿದ್ದಾರೆ. ಬಳಿಕ ಬೈಕ್ ಸವಾರರು, ಆಟೋ ಚಾಲಕರು ಸೇರಿ ಲಾರಿ ಚಾಲಕನಿಗೆ ಯದ್ವಾತದ್ವಾ ಥಳಿಸಿದ್ದಾರೆ. ಟಿಪ್ಪರ್ ಸ್ಥಳೀಯವೇ ಆಗಿದ್ದು ಚಾಲಕ ಉತ್ತರ ಕರ್ನಾಟಕ ಮೂಲದ ನಿವಾಸಿಯಾಗಿದ್ದಾನೆ. ಈ ವೇಳೆ, ಟ್ರಾಫಿಕ್ ಬ್ಲಾಕ್ ಆಗಿದ್ದು ಆರೋಪಿ ಚಾಲಕನನ್ನು ಕದ್ರಿ ಸಂಚಾರಿ ಠಾಣೆ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ನಂತೂರು ವೃತ್ತದಲ್ಲಿ ಭೀಕರ ಅಪಘಾತ ; ಸ್ಕೂಟರ್ ಮೇಲೆ ಹರಿದ ಟಿಪ್ಪರ್, ಸ್ಥಳದಲ್ಲೇ ತಂದೆ, ಮಗಳು ಸಾವು 

Mangalore accident, truck hits scooter at Nanthoor junction, grandfather and granddaughter killed on spot, driver thrashed. The deceased have been identified as Samuel Jesudas (66) and 17 year old granddaughter Bhoomika (17). Angry public thrashed the Truck driver. Kadri police have arrested the driver.