ಬ್ರೇಕಿಂಗ್ ನ್ಯೂಸ್
24-10-20 05:48 pm Mangalore Correspondent ಕರಾವಳಿ
ಮಂಗಳೂರು, ಅಕ್ಟೋಬರ್ 24: ಸಾಮಾನ್ಯವಾಗಿ ನೀರಿನ ಸಂಪ್ ಗಳನ್ನು ವರ್ಷಕ್ಕೊಮ್ಮೆ ಕ್ಲೀನ್ ಮಾಡಬೇಕು. ಇಲ್ಲದಿದ್ದರೆ ಸಂಪ್ ತಳಭಾಗದಲ್ಲಿ ದಪ್ಪಗೆ ಮಣ್ಣು ಹಿಡಿದಿರುತ್ತದೆ. ಅಲ್ಲಿ ಕ್ರಿಮಿಗಳು ಹುಟ್ಟಿಕೊಂಡು ನೀರನ್ನು ಮಲಿನ ಮಾಡುತ್ತದೆ. ಆದರೆ, ಮಂಗಳೂರಿನಲ್ಲಿ ಸಾರ್ವಜನಿಕರಿಗೆ ಕುಡಿಯುವ ನೀರು ಪೂರೈಸುವ ಸಂಪ್ ಜಾಲಗಳನ್ನು ಕಳೆದ 18 ವರ್ಷಗಳಲ್ಲಿ ಸ್ವಚ್ಛಗೊಳಿಸಿಯೇ ಇಲ್ಲ. ಬದಲಾಗಿ, ಪ್ರತಿ ವರ್ಷ ಸಂಪ್ ಕ್ಲೀನಿಂಗ್ ಮಾಡುವುದಕ್ಕೆಂದು ಮಹಾನಗರ ಪಾಲಿಕೆಯಿಂದ ಬಿಲ್ ಪಾಸ್ ಮಾಡಲಾಗುತ್ತಿದೆ ಎಂಬ ಆರೋಪ ಕೇಳಿಬಂದಿದೆ.
ಪಾಲಿಕೆ ವ್ಯಾಪ್ತಿಯ ನೀರಿನ ಸಂಪರ್ಕ ಜಾಲವನ್ನು 18 ವರ್ಷಗಳಲ್ಲಿ ಸ್ವಚ್ಛಗೊಳಿಸಿಲ್ಲ ಎನ್ನುವ ಗಂಭೀರ ಆರೋಪ ಕೇಳಿಬಂದಿದೆ. ಮಂಗಳೂರು ನಗರ ಮತ್ತು ಸುರತ್ಕಲ್ ಭಾಗಕ್ಕೆ ಕುಡಿಯುವ ನೀರು ಪೂರೈಸುವ ಸಂಪರ್ಕ ಜಾಲದಲ್ಲಿ 15 ಕಡೆ ಬೃಹತ್ ಟ್ಯಾಂಕ್ ಗಳಿವೆ. ಇದರ ಮೂಲಕವೇ ಮಂಗಳೂರು ವ್ಯಾಪ್ತಿಯ ನಾಲ್ಕು ಲಕ್ಷ ಜನರಿಗೆ ಕುಡಿಯುವ ನೀರು ಪೂರೈಸಲಾಗುತ್ತದೆ. ಆದರೆ, ಈ ಟ್ಯಾಂಕ್ ಗಳನ್ನು ನಿರ್ಮಿಸಿದ ಬಳಿಕ ಸ್ವಚ್ಛಗೊಳಿಸಿಯೇ ಇಲ್ಲ ಎನ್ನುತ್ತಿದ್ದಾರೆ ಸಾಮಾಜಿಕ ಕಾರ್ಯಕರ್ತ ಹನುಮಂತ ಕಾಮತ್. ವಿಶೇಷ ಅಂದ್ರೆ, ಈ ಟ್ಯಾಂಕ್ ಗಳನ್ನು ಸ್ವಚ್ಛಗೊಳಿಸದಿದ್ದರೂ ಶುಚಿಗೊಳಿಸಿದ ಬಗ್ಗೆ ಲಕ್ಷಾಂತರ ಬಿಲ್ ಪಾಸ್ ಮಾಡಲಾಗುತ್ತದೆ. ಟ್ಯಾಂಕ್ ಕ್ಲೀನಿಂಗ್ ಮಾಡೋ ಲಾಬಿ ಇದರ ಹಿಂದೆ ಕೆಲಸ ಮಾಡುತ್ತದೆ ಎನ್ನಲಾಗುತ್ತಿದೆ.
ಮಂಗಳೂರಿನ ಪಡೀಲಿನಲ್ಲಿ ಒಂದೂವರೆ ಕೋಟಿ ಲೀಟರ್ ಸಾಮರ್ಥ್ಯದ ಬೃಹತ್ ಟ್ಯಾಂಕ್ ಇದೆ, ಇಂಥದ್ದೇ ಟ್ಯಾಂಕ್ ಮಂಗಳೂರು ಮತ್ತು ಸುರತ್ಕಲ್ ಭಾಗದಲ್ಲಿದ್ದು ಇವ್ಯಾವುದನ್ನೂ ಕನಿಷ್ಠ 2-3 ವರ್ಷಕ್ಕೊಮ್ಮೆಯೂ ಶುಚಿಗೊಳಿಸುತ್ತಿಲ್ಲ ಎಂದು ಆರೋಪಿಸಲಾಗುತ್ತಿದೆ. ಮಹಾನಗರ ಪಾಲಿಕೆ ಕಚೇರಿ ಪಕ್ಕದಲ್ಲೇ ಇರುವ ಮಂಗಳಾ ಕ್ರೀಡಾಂಗಣ ಬಳಿಯ ಬೃಹತ್ ಟ್ಯಾಂಕನ್ನು 15 ವರ್ಷದ ಹಿಂದೆ ನಿರ್ಮಾಣಗೊಂಡ ಬಳಿಕ ಸ್ವಚ್ಛಗೊಳಿಸಿಯೇ ಇಲ್ಲವಂತೆ. ಬೆಂದೂರು ವೆಲ್ ನಲ್ಲಿರುವ ನೀರು ಶುದ್ಧೀಕರಣ ಘಟಕವೂ ಅಷ್ಟೇ.. ಒಳಗಿನ ಮಲಿನವನ್ನು ಪ್ರತಿ ಬಾರಿ ಶುಚಿಗೊಳಿಸಬೇಕು. ಆದರೆ ಇದ್ಯಾವುದನ್ನೂ ಸ್ವಚ್ಛಗೊಳಿಸುವ ಪದ್ಧತಿಯೇ ಇಲ್ಲ ಎನ್ನುತ್ತಾರೆ ಅಲ್ಲಿನ ಸಿಬಂದಿ.
ಹಾಗಾದ್ರೆ ಈ ಟ್ಯಾಂಕ್ ಗಳಲ್ಲಿ ಅದೆಷ್ಟು ಮಲಿನ ತುಂಬಿಕೊಂಡಿರಲಿಕ್ಕಿಲ್ಲ ಎನ್ನುವ ಪ್ರಶ್ನೆ ಎದ್ದಿದೆ. ಇಂಥ ಟ್ಯಾಂಕ್ ಗಳಿಂದಲೇ ಕಲುಷಿತ ನೀರು ಉತ್ಪನ್ನವಾಗುವುದಲ್ಲದೆ, ಆ ನೀರೇ ಮಂಗಳೂರಿನ ಜನರಿಗೆ ರೋಗ ವಾಹಕವಾಗುತ್ತಿದೆ ಎನ್ನಬೇಕಷ್ಟೆ.
ಮಂಗಳೂರಿನಲ್ಲಿ ಫ್ಲಾಟ್ ಸಂಸ್ಕೃತಿಯಿದ್ದು, ಪ್ರತಿ ಅಪಾರ್ಟ್ಮೆಂಟ್ ನಲ್ಲೂ ಸಂಪ್ ಗಳಿರುತ್ತವೆ. ಸಾಮಾನ್ಯವಾಗಿ ಪ್ರತಿವರ್ಷ ಅವನ್ನು ಕ್ಲೀನ್ ಮಾಡಲು ಲಕ್ಷಾಂತರ ರೂ. ವ್ಯಯಿಸಲಾಗುತ್ತದೆ. ಮಾಹಿತಿ ಪ್ರಕಾರ, ಮಂಗಳೂರು ನಗರದಲ್ಲಿ 70 ಸಾವಿರಕ್ಕಿಂತಲೂ ಹೆಚ್ಚು ನೀರಿನ ಸಂಪರ್ಕ ಇದೆ. ಈ ಬಗ್ಗೆ ಪಾಲಿಕೆಯ ಈಗಿನ ಮೇಯರ್ ಬಳಿ ಕೇಳಿದರೆ, ಈ ವಿಚಾರ ಗೊತ್ತೇ ಇಲ್ಲ.. ಟ್ಯಾಂಕ್ ಕ್ಲೀನ್ ಮಾಡಲು ಕ್ರಮ ಕೈಗೊಳ್ಳುತ್ತೇನೆ ಎಂದು ನಿದ್ದೆಯಿಂದ ಎಚ್ಚೆತ್ತವರ ರೀತಿ ಹೇಳುತ್ತಿದ್ದಾರೆ.
ಈ ಹಿಂದೆ ಕಾಂಗ್ರೆಸ್ ಆಡಳಿತ ಪಾಲಿಕೆಯಲ್ಲಿತ್ತು. ಅದಕ್ಕೂ ಮುನ್ನ ಬಿಜೆಪಿಯೇ ಅಧಿಕಾರದಲ್ಲಿತ್ತು. ಹೀಗಾಗಿ ಪಾಲಿಕೆಯಲ್ಲಿ ಆಡಳಿತ ಯಾರದ್ದೇ ಆಗಿದ್ದರೂ, ಜನರ ಕುಡಿಯುವ ನೀರಿನ ಬಗ್ಗೆ ಕಾಳಜಿ ವಹಿಸಿಲ್ಲ ಎನ್ನುವುದಂತೂ ಸತ್ಯ. ಕಲುಷಿತ ನೀರನ್ನೇ ಜನರಿಗೆ ಕುಡಿಸುವ ಪಾಲಿಕೆ ಆಡಳಿತವೇ ರೋಗಗಳಿಗೆ ಆಹ್ವಾನ ನೀಡುತ್ತಿದ್ಯಾ ಎನ್ನುವ ಗಂಭೀರ ಆರೋಪ ಕೇಳಿಬಂದಿದೆ. ಈಗೆಲ್ಲ ಪ್ರತಿ ಮನೆಯವರು ನೀರು ಸ್ವಚ್ಛಗೊಳಿಸಲು ವಾಟರ್ ಪ್ಯೂರಿಫೈರ್ ಕೊಳ್ಳುತ್ತಿದ್ದಾರೆ. ಇಲ್ಲದಿದ್ದರೆ ನೀರನ್ನು ಹಾಗೇ ಕುಡಿಯಲು ಆಗದ ಸ್ಥಿತಿಯಿದೆ. ಪಾಲಿಕೆಯ ಈ ವರ್ತನೆಯ ಹಿಂದೆ ವಾಟರ್ ಪ್ಯೂರಿಫೈರ್ ಕಂಪನಿ ಲಾಬಿ ಇದೆಯೇ ಗೊತ್ತಿಲ್ಲ..!
Here is an Exclusive Report by Headline Karnataka on How Mangalore City Corporation is supplying water without cleaning the tanks for the past 18 years to the people of the city of Mangalore.
15-07-25 01:32 pm
Bangalore Correspondent
ನಟಿ ಸರೋಜಾ ದೇವಿ- ಎಸ್ಸೆಂ ಕೃಷ್ಣ ಪ್ರೇಮ ಪ್ರಸಂಗ ; ಮ...
15-07-25 12:27 pm
ಕೇವಲ 2 ಸಾವಿರ ಲಂಚ ಕೇಳಿ ಸಿಕ್ಕಿಬಿದ್ದ ಪಂಚಾಯತ್ ಪಿಡ...
15-07-25 10:35 am
ಧರ್ಮಸ್ಥಳದಲ್ಲಿ 20 ವರ್ಷಗಳಲ್ಲಾದ ಯುವತಿಯರ ನಾಪತ್ತೆ-...
14-07-25 10:44 pm
Shiradi Ghat Accident, Car: ಶಿರಾಡಿ ಘಾಟ್ ; ರಸ್...
14-07-25 01:43 pm
14-07-25 03:24 pm
HK News Desk
ಅಹ್ಮದಾಬಾದ್ ವಿಮಾನ ದುರಂತ ; ಭಾರೀ ಅನುಮಾನ ಹುಟ್ಟಿಸಿ...
12-07-25 09:25 pm
Apples New COO, Sabih Khan: ಟೆಕ್ ದೈತ್ಯ ಏಪಲ್ ಸ...
12-07-25 04:21 pm
ಸಾಮೂಹಿಕ ಮತಾಂತರ ; ಮೂರೇ ವರ್ಷಕ್ಕೆ ಚಾಂಗೂರ್ ಬಾಬಾನಿ...
12-07-25 02:15 pm
Coimbatore Serial Blasts, 'Tailor Raja' Arres...
11-07-25 12:08 pm
15-07-25 02:28 pm
HK News Desk
Mangalore Accident, Alto Car: ದೆಹಲಿಯಿಂದ ಬಂದ ಗ...
15-07-25 10:32 am
ಕಲ್ಲು ಮರಳಿನ ಸಮಸ್ಯೆಯಿಂದ ಜನರ ತಲೆಗೆ ಚಪ್ಪಡಿ ಕಲ್ಲು...
14-07-25 09:55 pm
Mrpl leakgae, Death, Fight: ಅನಿಲ ಸೋರಿಕೆಯಿಂದ ಇ...
14-07-25 07:56 pm
Mangalore, Help: ಅಪಘಾತದಲ್ಲಿ ಬಡ ಮಹಿಳೆಯ ತಲೆಗೆ ತ...
13-07-25 11:13 pm
15-07-25 01:13 pm
HK News Desk
Mangalore Crime, Police: ದುಬೈನಲ್ಲಿ ವಹಿವಾಟು ;...
15-07-25 11:38 am
ಮ್ಯಾಟ್ರಿಮನಿ ಸೈಟಲ್ಲಿ ಸಿಕ್ಕ ಗೆಳತಿಯಿಂದಲೇ ಮೋಸ ; ಆ...
13-07-25 05:23 pm
ಅಪ್ರಾಪ್ತ ಬಾಲಕಿಯನ್ನು ಶಾಲೆಗೆ ಕರೆದೊಯ್ಯುವ ನೆಪದಲ್ಲ...
12-07-25 11:10 pm
Dowry Harassment, Mysuru: ಮದುವೆಯಾದ ಎರಡೇ ತಿಂಗಳ...
12-07-25 01:32 pm