ಬ್ರೇಕಿಂಗ್ ನ್ಯೂಸ್
24-10-20 07:07 pm Mangalore Reporter ಕರಾವಳಿ
ಮಂಗಳೂರು, ಅಕ್ಟೋಬರ್. 24: ರೌಡಿಸಂನಲ್ಲಿ ಈ ಮಾತು ಕಾಮನ್. ಒಂದೋ ನೀನಿರಬೇಕು, ಇಲ್ಲಾಂದ್ರೆ ನಾನೇ ಇರಬೇಕು ಅನ್ನೋದು. ಇಬ್ಬರ ಮಧ್ಯೆ ಸಣ್ಣ ವಿಚಾರದಲ್ಲಿ ವೈಮನಸ್ಸು ಹುಟ್ಕೊಂಡರೂ ಉಭಯ ಕಡೆಗಳಿಂದಲೂ ಈ ಮಾತು ಬರುತ್ತದೆ. ಅವನನ್ನು ಮುಗಿಸಿಯೇ ತೀರುತ್ತೇನೆ ಎಂಬ ಅಹಂ ಇಬ್ಬರಲ್ಲೂ ಹೊಗೆಯಾಡುತ್ತಾ ಒಂದು ದಿನ ಒಬ್ಬನ ಅವಸಾನ ಆಗುತ್ತದೆ. ಬಂಟ್ವಾಳದಲ್ಲಿ ರೌಡಿಶೀಟರ್ ಗಳಾಗಿದ್ದ ಯುವಕರಿಬ್ಬರ ಇದೇ ರೀತಿಯ ಹೊಯ್ದಾಟ ಒಬ್ಬನನ್ನು ನಡುಬೀದಿಯಲ್ಲಿ ಹೆಣವಾಗಿಸಿದೆ.
ಹೌದು... ಚೆನ್ನೆ ಫಾರೂಕ್ ಯಾನೆ ಉಮ್ಮರ್ ಫಾರೂಕ್ ಮತ್ತು ಖಲೀಲ್ ಇಬ್ಬರೂ ಸಣ್ಣ ಪ್ರಾಯದ ಹುಡುಗರು. ಹರೆಯದಲ್ಲೇ ಕೋಮುದಳ್ಳುರಿ ಪ್ರಕರಣಗಳಲ್ಲಿ ಭಾಗಿಯಾಗಿ ಕೇಸು ಮೈಗೆಳೆದುಕೊಂಡಿದ್ದರು. ಇಬ್ಬರೂ ಜೊತೆಯಾಗೇ, ಸಿಕ್ಕಿಬಿದ್ದು ಜೈಲಿಗೆ ಹೋಗಿ ಬಂದಿದ್ದವರು ಹಣಕಾಸು ವಿಚಾರದಲ್ಲಿ ವೈಮನಸ್ಸಿಗೆ ಒಳಗಾಗಿದ್ದರು. ಈ ನಡುವೆ, ವಾರದ ಹಿಂದೆ ಖಲೀಲ್ ಮನೆಗೆ ಬಂದಿದ್ದ ಫಾರೂಕ್, ಖಲೀಲ್ ತಂದೆಯ ಬಳಿ ಸವಾಲು ಹಾಕಿದ್ದ. ಖಲೀಲ್ ನನ್ನು ಮುಗಿಸಿಯೇ ಬಿಡುತ್ತೇನೆ, ನೋಡುತ್ತಾ ಇರಿ.. ಹೆಚ್ಚು ದಿನ ಇಲ್ಲ. ನನ್ನಲ್ಲಿ ಆತನ ಎಗರಾಟ ನಡೆಯೋದಿಲ್ಲ ಎಂದು ಹೇಳಿಕೊಂಡಿದ್ದ.
ವಯಸ್ಸಾದ ತಂದೆ, ಫಾರೂಕ್ ಮಾತು ಕೇಳಿ ಬೆದರಿ ಹೋಗಿದ್ದರು. ಮಗ ಖಲೀಲ್ ಬಳಿ ನೀನು ಏನಿದ್ದರೂ ಜಾಗ್ರತೆ ಮಾಡಿಕೋ ಎಂದು ಕಿವಿಮಾತು ಹೇಳಿದ್ದರು. ತಂದೆಯ ಎದುರಲ್ಲೇ ಸವಾಲು ಹಾಕಿದ್ದನ್ನು ಕೇಳಿದ ಖಲೀಲ್ ಕ್ರುದ್ಧನಾಗಿದ್ದ. ಜೊತೆಗೇ ಧಮ್ ಎಳೀತಿದ್ದ ನಾಲ್ಕು ಮಂದಿ ಹುಡುಗರ ಜೊತೆ ಸೇರಿ ತಲವಾರು ರೆಡಿ ಮಾಡಿದ್ದ. ಶುಕ್ರವಾರ ಸಂಜೆ ಮೆಲ್ಕಾರ್ ಬಳಿಯ ಗುಡ್ಡೆಯಂಗಡಿ ಎಂಬಲ್ಲಿ ಇದ್ಯಾವುದರ ಗೊಡವೆ ಇಲ್ಲದೆ ತನ್ನ ಬೈಕಿನಲ್ಲಿ ಬರುತ್ತಿದ್ದ ಫಾರೂಕ್ ನನ್ನು ಅಡ್ಡಹಾಕಿದ್ದ ಖಲೀಲ್ ಅಂಡ್ ಗ್ಯಾಂಗ್, ನೆಲಕ್ಕೆ ಬಿದ್ದ ಒಂದು ಕಾಲದ ಆಪ್ತನ ಮೇಲೆಯೇ ತಲವಾರು ಬೀಸಿದ್ದಾರೆ. ಅಲ್ಲಿನ ಜನ ನೋಡ ನೋಡುತ್ತಲೇ ಫಾರೂಕನ್ನು ಓಡುವುದಕ್ಕೂ ಬಿಡದೆ ತಲೆ, ಕೈಕಾಲು ಎಂದು ಕಡಿದು ಹಾಕಿದ್ದಾರೆ. ಫಾರೂಕ್ ರಕ್ತದ ಮಡುವಿನಲ್ಲಿ ಬಿದ್ದು ಹೊರಳಾಡುತ್ತಿದ್ದರೆ, ಜನ ಸೇರುತ್ತಿದ್ದಂತೆ ಖಲೀಲ್ ಮತ್ತು ತಂಡ ಅಲ್ಲಿಂದ ಕಾರಿನಲ್ಲಿ ಪರಾರಿಯಾಗಿತ್ತು.
ಗುಡ್ಡೆಯಂಗಡಿ ಮುಸ್ಲಿಮರೇ ಹೆಚ್ಚಿರುವ ಪ್ರದೇಶ. ಫಾರೂಕ್ ಮತ್ತು ಖಲೀಲ್ ಇಬ್ಬರೂ ಅಲ್ಲೇ ಓಡಾಡಿಕೊಂಡಿದ್ದ ಗೆಳೆಯರು. ಅದೇನು ವೈರತ್ವವೋ, ಗಾಂಜಾ ಮಸಲತ್ತೋ ಇಬ್ಬರ ನಡುವೆ ದ್ವೇಷ ಬೆಳೆದು ಜೊತೆಗಾರನೇ ಫಾರೂಕನ್ನು ನಡುಬೀದಿಯಲ್ಲಿ ಹೆಣವಾಗಿಸಿದ್ದಾನೆ. ಒಂದೋ ನಾನಿರಬೇಕು, ಇಲ್ಲಾ ನೀನಿರಬೇಕು ಎಂಬ ರೌಡಿಸಂ ಒಳಗಿನ ಅಲಿಖಿತ ನಿಯಮವನ್ನು ಅಲ್ಲಿ ಯಥಾವತ್ ಜಾರಿಗೆ ತಂದಿದ್ದಾರೆ. ಯಾರು ಮಾಡಿದ್ದೆಂದು ಪೊಲೀಸರಿಗೂ ಗೊತ್ತಿತ್ತು. ಅಲ್ಲಿನ ಸ್ಥಳೀಯರಿಗೂ ಗೊತ್ತಿತ್ತು. ಆದ್ರೂ ಪೊಲೀಸರ ಭಯದಿಂದ ಏರಿದ್ದ ಪಿತ್ಥ ಇಳಿಯುತ್ತಿದ್ದಂತೆ ಆರೋಪಿಗಳು ಎಸ್ಕೇಪ್ ಆಗಲು ನೋಡಿದ್ದಾರೆ. ಈ ವಿಚಾರ ತಿಳಿಯುತ್ತಿದ್ದಂತೆ ಎಲರ್ಟ್ ಆದ ಪೊಲೀಸರು, ಫಾಲೋ ಮಾಡುತ್ತಲೇ ಎಗರಾಡಿದ ಖಲೀಲ್ ಮೇಲೆ ಗುಂಡು ಹಾರಿಸಿ ಬಂಧಿಸಿದ್ದಾರೆ. ಸದ್ಯಕ್ಕೆ ಮೊದಲು ಎಗರಾಡಿದವನು ಸತ್ತು ಹೋದರೆ, ಕ್ಷಣದ ಮೈಮರೆವಿನಲ್ಲಿ ತಲವಾರು ಬೀಸಿದವನು ತಗ್ಲಾಕ್ಕೊಂಡಿದ್ದಾನೆ. ರೌಡಿಸಂ ಕತೆ ಇಷ್ಟೇ.. ಇಂದು ಆತ, ನಾಳೆ ಈತ..!
Rowdy-sheeter Umar Farooq was hacked to death by gang in Bogodi, Melkar in Bantwal, Mangalore with machetes. Detailed report by Headline Karnataka about the revenge murder of Farooq.
15-07-25 01:32 pm
Bangalore Correspondent
ನಟಿ ಸರೋಜಾ ದೇವಿ- ಎಸ್ಸೆಂ ಕೃಷ್ಣ ಪ್ರೇಮ ಪ್ರಸಂಗ ; ಮ...
15-07-25 12:27 pm
ಕೇವಲ 2 ಸಾವಿರ ಲಂಚ ಕೇಳಿ ಸಿಕ್ಕಿಬಿದ್ದ ಪಂಚಾಯತ್ ಪಿಡ...
15-07-25 10:35 am
ಧರ್ಮಸ್ಥಳದಲ್ಲಿ 20 ವರ್ಷಗಳಲ್ಲಾದ ಯುವತಿಯರ ನಾಪತ್ತೆ-...
14-07-25 10:44 pm
Shiradi Ghat Accident, Car: ಶಿರಾಡಿ ಘಾಟ್ ; ರಸ್...
14-07-25 01:43 pm
14-07-25 03:24 pm
HK News Desk
ಅಹ್ಮದಾಬಾದ್ ವಿಮಾನ ದುರಂತ ; ಭಾರೀ ಅನುಮಾನ ಹುಟ್ಟಿಸಿ...
12-07-25 09:25 pm
Apples New COO, Sabih Khan: ಟೆಕ್ ದೈತ್ಯ ಏಪಲ್ ಸ...
12-07-25 04:21 pm
ಸಾಮೂಹಿಕ ಮತಾಂತರ ; ಮೂರೇ ವರ್ಷಕ್ಕೆ ಚಾಂಗೂರ್ ಬಾಬಾನಿ...
12-07-25 02:15 pm
Coimbatore Serial Blasts, 'Tailor Raja' Arres...
11-07-25 12:08 pm
15-07-25 02:28 pm
HK News Desk
Mangalore Accident, Alto Car: ದೆಹಲಿಯಿಂದ ಬಂದ ಗ...
15-07-25 10:32 am
ಕಲ್ಲು ಮರಳಿನ ಸಮಸ್ಯೆಯಿಂದ ಜನರ ತಲೆಗೆ ಚಪ್ಪಡಿ ಕಲ್ಲು...
14-07-25 09:55 pm
Mrpl leakgae, Death, Fight: ಅನಿಲ ಸೋರಿಕೆಯಿಂದ ಇ...
14-07-25 07:56 pm
Mangalore, Help: ಅಪಘಾತದಲ್ಲಿ ಬಡ ಮಹಿಳೆಯ ತಲೆಗೆ ತ...
13-07-25 11:13 pm
15-07-25 01:13 pm
HK News Desk
Mangalore Crime, Police: ದುಬೈನಲ್ಲಿ ವಹಿವಾಟು ;...
15-07-25 11:38 am
ಮ್ಯಾಟ್ರಿಮನಿ ಸೈಟಲ್ಲಿ ಸಿಕ್ಕ ಗೆಳತಿಯಿಂದಲೇ ಮೋಸ ; ಆ...
13-07-25 05:23 pm
ಅಪ್ರಾಪ್ತ ಬಾಲಕಿಯನ್ನು ಶಾಲೆಗೆ ಕರೆದೊಯ್ಯುವ ನೆಪದಲ್ಲ...
12-07-25 11:10 pm
Dowry Harassment, Mysuru: ಮದುವೆಯಾದ ಎರಡೇ ತಿಂಗಳ...
12-07-25 01:32 pm