12 ಗೋವುಗಳನ್ನು ಪಿಕಪ್ ವಾಹನದಲ್ಲಿ ಕುತ್ತಿಗೆ ಬಿಗಿದು ಕಟ್ಟಿದ್ದ ಕಿರಾತಕರು ; ಬಜರಂಗಿ ಕಾರ್ಯಾಚರಣೆ

25-10-20 10:26 am       Mangalore Reporter   ಕರಾವಳಿ

ಇಂದು ಬೆಳಗ್ಗೆ ಹಿಂಸಾತ್ಮಕ ರೀತಿಯಲ್ಲಿ ಕಸಾಯಿಖಾನೆಗೆ ಸಾಗಿಸುತ್ತಿದ್ದ ಗೋವುಗಳನ್ನು ಬಜರಂಗದಳದ ಕಾರ್ಯಕರ್ತರು ರಕ್ಷಣೆ ಮಾಡಿದ್ದಾರೆ.

ಮಂಗಳೂರು, ಅಕ್ಟೋಬರ್ 25 : ಮಂಗಳೂರಿನಲ್ಲಿ ಅಕ್ರಮ ಗೋಸಾಗಾಟ ವಿರುದ್ಧ ಕಾರ್ಯಾಚರಣೆ ಮುಂದುವರಿಸಿರುವ ಬಜರಂಗದಳ ಇಂದು ಬೆಳ್ಳಂಬೆಳಗ್ಗೆ ಹಿಂಸಾತ್ಮಕ ರೀತಿಯಲ್ಲಿ ಕಸಾಯಿಖಾನೆಗೆ ಸಾಗಿಸುತ್ತಿದ್ದ ಗೋವುಗಳನ್ನು ರಕ್ಷಣೆ ಮಾಡಿದೆ. 

ಬಂಟ್ವಾಳದಿಂದ ಉಳ್ಳಾಲಕ್ಕೆ ಅಕ್ರಮ ಗೋಸಾಗಣೆ ಮಾಡುತ್ತಿದ್ದ ಬಗ್ಗೆ ಖಚಿತ ಮಾಹಿತಿ ಪಡೆದ ಕಾರ್ಯಕರ್ತರು, ಬಿ.ಸಿ.ರೋಡ್ ನಿಂದ ಬೆನ್ನಟ್ಟಿಕೊಂಡು ಬಂದಿದ್ದಾರೆ. ಉಳ್ಳಾಲದ ಅಕ್ರಮ ಕಸಾಯಿಖಾನೆಗೆ ತೆರಳುತ್ತಿದ್ದ ಪಿಕಪ್ ಟೆಂಪೋವನ್ನು ಪಂಪ್ವೆಲ್ ನಲ್ಲಿ ತಡೆದಿದ್ದಾರೆ. 

ಈ ವೇಳೆ ಟೆಂಪೋದಲ್ಲಿ ಹಿಂಸಾತ್ಮಕ ರೀತಿಯಲ್ಲಿ ಕಟ್ಟಿದ್ದ 12 ಗೋವುಗಳು ಪತ್ತೆಯಾಗಿದ್ದು ಅವುಗಳನ್ನು ರಕ್ಷಣೆ ಮಾಡಲಾಗಿದೆ. ಮೀನು ಸಾಗಾಟದ ಸೋಗಿನಲ್ಲಿ ಗೋವುಗಳನ್ನು ಪಿಕಪ್ ಟೆಂಪೋದಲ್ಲಿ ತಲೆಕೆಳಗಾಗಿಸಿ ಕಟ್ಟಿ ಒಯ್ಯಲಾಗುತ್ತಿತ್ತು. ಕುತ್ತಿಗೆ ಬಿಗಿದು ಕಟ್ಟಿದ್ದರಿಂದ ಗೋವುಗಳು ಉಸಿರುಕಟ್ಟಿ ಅರೆಜೀವ ಆದಂತಿದ್ದವು. 

ಟೆಂಪೋ ಅಡ್ಡಗಟ್ಟಿದಾಗ ಅದರಲ್ಲಿದ್ದ ಆರೋಪಿಗಳು ಪರಾರಿಯಾಗಿದ್ದಾರೆ. ಟೆಂಪೋ ಮತ್ತು ಗೋವುಗಳನ್ನು ಕಂಕನಾಡಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.

12 Cows were rescued from Cattle Trafficking by Bajarang Dal Workers at Pumpwell in Mangalore. It is said that the tempo was coming from Bantwal and going towards Ullal slaughter house.