ಬ್ರೇಕಿಂಗ್ ನ್ಯೂಸ್
26-10-20 06:16 pm Mangalore Correspondent ಕರಾವಳಿ
ಮಂಗಳೂರು, ಅಕ್ಟೋಬರ್ 26: ಮಂಗಳೂರು ನಗರದ ಅಲ್ಲಲ್ಲಿ ಪೊಲೀಸ್ ಇಲಾಖೆಯಿಂದ ಹಾಕಿರುವ ಸಿಸಿಟಿವಿಗಳಿವೆ. ಸಿಗ್ನಲ್, ಜಂಕ್ಷನ್, ಪ್ರಮುಖ ವೃತ್ತಗಳಲ್ಲಿ ಸಿಸಿಟಿವಿ ಅಳವಡಿಸಲಾಗಿದ್ದು, ಸಿಗ್ನಲ್ ಜಂಪ್, ಅಪಘಾತ, ಅಪರಾಧ ಚಟುವಟಿಕೆ ಸಂದರ್ಭಗಳಲ್ಲಿ ಈ ಸಿಸಿಟಿವಿಗಳನ್ನು ಆಧರಿಸಿಯೇ ಪೊಲೀಸರು ತನಿಖೆ ನಡೆಸುತ್ತಾರೆ. ಆದರೆ ಕಳೆದ 2-3 ತಿಂಗಳಿನಿಂದ ಈ ಸಿಸಿಟಿವಿಗಳು ವರ್ಕ್ ಆಗ್ತಾ ಇಲ್ಲ ಎನ್ನೋ ಮಾಹಿತಿ ಹೊರಬಿದ್ದಿದೆ.
ಇಂದು ಬೆಳಗ್ಗೆ ಲಾಲ್ ಬಾಗ್ ಜಂಕ್ಷನ್ನಲ್ಲಿ ಒಂದು ಅಪಘಾತ ಆಗಿತ್ತು. ಅಪಘಾತದ ಬಗ್ಗೆ ಯುವಕನೊಬ್ಬ ದೂರು ಕೊಡಲು ಪೊಲೀಸ್ ಠಾಣೆಗೆ ಹೋದಾಗ ಸಿಸಿಟಿವಿ ಸಂಪರ್ಕ ಕಡಿತ ಆಗಿರುವ ವಿಚಾರವನ್ನು ಪೊಲೀಸರೇ ಹೇಳಿಕೊಂಡು ಅಸಹಾಯಕತೆ ವ್ಯಕ್ತಪಡಿಸಿದ್ದಾರಂತೆ! ಪಿವಿಎಸ್ ಕಡೆಯಿಂದ ಬರುತ್ತಿದ್ದ ಸ್ಕೂಟರ್ ಸವಾರನೊಬ್ಬ ಲಾಲ್ ಬಾಗ್ ಜಂಕ್ಷನ್ನಲ್ಲಿ ಸಿಗ್ನಲ್ ಜಂಪ್ ಮಾಡಿ, ಕೆಎಸ್ಸಾರ್ಟಿಸಿ ಕಡೆಗೆ ತಿರುಗಿದ್ದು, ಲೇಡಿಹಿಲ್ ಕಡೆಯಿಂದ ಬರುತ್ತಿದ್ದ ಸ್ಕೂಟರ್ ಸವಾರನಿಗೆ ಡಿಕ್ಕಿಯಾಗಿದ್ದ. ಇದರಿಂದ ಎದುರಿನ ಸ್ಕೂಟರ್ ರಸ್ತೆಗೆ ಬಿದ್ದು ಮುಂಭಾಗ ಜಖಂ ಆಗಿತ್ತು. ಘಟನೆ ನಡೆದ 11 ಗಂಟೆ ವೇಳೆಗೆ ಅಲ್ಲಿ ಪೊಲೀಸರು ಇರಲಿಲ್ಲ. ಡಿಕ್ಕಿಯಾದ ಸ್ಕೂಟರ್ ಹೊಸತಾಗಿದ್ದು (ಟಿವಿಎಸ್ ಎಂಟಾರ್ಕ್- 125) ಇನ್ನೂ ನಂಬರ್ ಪ್ಲೇಟ್ ಆಗಿರಲಿಲ್ಲ. ಸ್ಕೂಟರಿನಲ್ಲಿ ಒಬ್ಬ ಹುಡುಗ ಮತ್ತು ಹುಡುಗಿ ಇದ್ದಳು. ಡಿಕ್ಕಿಯಾಗಿಸಿ ಪರಾರಿಯಾಗಿದ್ದ ಸ್ಕೂಟರನ್ನು ಅಪಘಾತಕ್ಕೀಡಾದ ಸ್ಕೂಟರ್ ಸವಾರ ಯುವಕ ಮಂಜುನಾಥ ಹಿಂಬಾಲಿಸಿದ್ದಾನೆ. ಆದರೆ, ಅವರು ಕೆಎಸ್ಸಾರ್ಟಿಸಿ, ಬಿಜೈ ಬಳಿಕ ತಪ್ಪಿಸಿಕೊಂಡಿದ್ದಾರೆ.
ಆಬಳಿಕ ಬರ್ಕೆ ಠಾಣೆಗೆ ತೆರಳಿದ ಮಂಜುನಾಥ್, ಪೊಲೀಸರಲ್ಲಿ ದೂರು ಹೇಳಿದ್ದಾನೆ. ಅದು ಟ್ರಾಫಿಕ್ ಬರೋದ್ರಿಂದ ನೀನು ಪಾಂಡೇಶ್ವರ ಠಾಣೆಗೆ ಹೋಗು, ಅಲ್ಲಿ ದೂರು ದಾಖಲಿಸುತ್ತಾರೆಂದು ಬರ್ಕೆ ಪೊಲೀಸರು ಸಾಗಹಾಕಿದ್ದಾರೆ. ಮಂಜುನಾಥ್, ಪಾಂಡೇಶ್ವರಕ್ಕೆ ತೆರಳಿ ದೂರು ಹೇಳಿಕೊಂಡಿದ್ದಾನೆ. ಡಿಕ್ಕಿಯಾದ ಸ್ಕೂಟರ್ ನಂಬರ್ ಇಲ್ಲದಿರುವುದರಿಂದ ದೂರು ಕೊಟ್ಟು ಏನು ಪ್ರಯೋಜನ. ಕದ್ರಿ ಠಾಣೆಯಲ್ಲಿ ಸಿಸಿಟಿವಿ ಕಂಟ್ರೋಲ್ ಇದ್ದು, ಟ್ರಾಫಿಕ್ ಠಾಣೆಯೂ ಇದೆ. ಅಲ್ಲೇ ಹೋಗಿ ದೂರು ಕೊಟ್ಟು ವಿಚಾರಿಸಿದಲ್ಲಿ ಪತ್ತೆ ಮಾಡಬಹುದು ಎಂದಿದ್ದಾರೆ. ಅದರಂತೆ, ಕದ್ರಿ ಠಾಣೆಗೆ ಬಂದ ಯುವಕನಿಗೆ ಪೊಲೀಸರ ಮಾತು ಕೇಳಿ ಶಾಕ್ ಆಗಿತ್ತು.
ಸಿಸಿಟಿವಿ ಈಗ ವರ್ಕ್ ಆಗ್ತಾ ಇಲ್ಲ. ಎರಡು ತಿಂಗಳು ಮೇಲಾಯ್ತು. ರೋಡ್ ರಿಪೇರಿ ಕೆಲಸದ ವೇಳೆ ಸಿಸಿಟಿವಿ ಸಂಪರ್ಕ ಕಡಿತ ಆಗಿದ್ದು ಇನ್ನೂ ಸರಿಯಾಗಿಲ್ಲ. ಬೆಂದೂರು ವೆಲ್ ಬಿಟ್ಟರೆ ಬೇರೆ ಯಾವುದೂ ವರ್ಕ್ ಆಗಲ್ಲ. ಇದರಿಂದಾಗಿ ಹಲವು ಅಪಘಾತ ಪ್ರಕರಣಗಳು ಟ್ರೇಸ್ ಆಗದೆ ಉಳಿದಿವೆ. ನಾವು ಏನು ಮಾಡಕ್ಕಾಗತ್ತೆ ಎಂದು ಅಲ್ಲಿನ ಪೊಲೀಸರು ಅಸಹಾಯಕತೆ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ನೀವು ಇನ್ಶೂರೆನ್ಸ್ ಕ್ಲೈಮ್ ಮಾಡ್ಕೊಳ್ಳಿ. ಅದಕ್ಕೆ ಬೇಕಾದ್ರೆ ಪಾಂಡೇಶ್ವರ ಠಾಣೆಗೆ ಹೋಗಿ ಎನ್ ಸಿ ಮಾಡಿಕೊಳ್ಳಿ ಎಂದು ಪುಕ್ಕಟೆ ಸಲಹೆ ನೀಡಿದ್ದಾರೆ.
ಬಳಿಕ ಪಾಂಡೇಶ್ವರಕ್ಕೆ ಹೋಗಿ, ಇನ್ಸೂರೆನ್ಸ್ ಪಡೆಯುವ ಸಲುವಾಗಿ ದೂರು ನೀಡಿದ್ದೇನೆ. ದೂರಿನ ಕೊನೆಯಲ್ಲಿ ಈ ಬಗ್ಗೆ ಕಾನೂನು ಕ್ರಮದ ಅಗತ್ಯವಿರುವುದಿಲ್ಲ ಎಂದು ಪೊಲೀಸರು ಬರೆಸಿದ್ದಾರೆ. ಇವರ ಸಿಸಿಟಿವಿಯ ಕರ್ಮದಿಂದಾಗಿ ನಮ್ಮ ಹೊಟ್ಟೆಗೆ ಹೊಡಿಯೋದು ಯಾಕೆ..? ಸ್ಕೂಟರ್ ರಿಪೇರಿಗೆ ಹತ್ತು ಸಾವಿರ ಖರ್ಚು ಆಗುವುದಂತೆ ಎಂದು ಮಂಜುನಾಥ್ ಅಲವತ್ತುಕೊಂಡಿದ್ದಾರೆ. ಮಂಗಳೂರಿನಲ್ಲಿ ಡೆಲಿವರಿ ಸರ್ವಿಸ್ ಕೆಲಸ ಮಾಡುವ ಮಂಜುನಾಥ್, ಸ್ಕೂಟರ್ ರಿಪೇರಿಗೆ ಇನ್ಸೂರೆನ್ಸ್ ಸಿಗಬಹುದೇ ಎನ್ನುವ ನಿರೀಕ್ಷೆಯಲ್ಲಿದ್ದಾನೆ.
Mangalore most of the cc cameras are in disorder since 2 months putting public in trouble as no footages are recorded during accidents causing public angry.
15-07-25 01:32 pm
Bangalore Correspondent
ನಟಿ ಸರೋಜಾ ದೇವಿ- ಎಸ್ಸೆಂ ಕೃಷ್ಣ ಪ್ರೇಮ ಪ್ರಸಂಗ ; ಮ...
15-07-25 12:27 pm
ಕೇವಲ 2 ಸಾವಿರ ಲಂಚ ಕೇಳಿ ಸಿಕ್ಕಿಬಿದ್ದ ಪಂಚಾಯತ್ ಪಿಡ...
15-07-25 10:35 am
ಧರ್ಮಸ್ಥಳದಲ್ಲಿ 20 ವರ್ಷಗಳಲ್ಲಾದ ಯುವತಿಯರ ನಾಪತ್ತೆ-...
14-07-25 10:44 pm
Shiradi Ghat Accident, Car: ಶಿರಾಡಿ ಘಾಟ್ ; ರಸ್...
14-07-25 01:43 pm
14-07-25 03:24 pm
HK News Desk
ಅಹ್ಮದಾಬಾದ್ ವಿಮಾನ ದುರಂತ ; ಭಾರೀ ಅನುಮಾನ ಹುಟ್ಟಿಸಿ...
12-07-25 09:25 pm
Apples New COO, Sabih Khan: ಟೆಕ್ ದೈತ್ಯ ಏಪಲ್ ಸ...
12-07-25 04:21 pm
ಸಾಮೂಹಿಕ ಮತಾಂತರ ; ಮೂರೇ ವರ್ಷಕ್ಕೆ ಚಾಂಗೂರ್ ಬಾಬಾನಿ...
12-07-25 02:15 pm
Coimbatore Serial Blasts, 'Tailor Raja' Arres...
11-07-25 12:08 pm
15-07-25 02:28 pm
HK News Desk
Mangalore Accident, Alto Car: ದೆಹಲಿಯಿಂದ ಬಂದ ಗ...
15-07-25 10:32 am
ಕಲ್ಲು ಮರಳಿನ ಸಮಸ್ಯೆಯಿಂದ ಜನರ ತಲೆಗೆ ಚಪ್ಪಡಿ ಕಲ್ಲು...
14-07-25 09:55 pm
Mrpl leakgae, Death, Fight: ಅನಿಲ ಸೋರಿಕೆಯಿಂದ ಇ...
14-07-25 07:56 pm
Mangalore, Help: ಅಪಘಾತದಲ್ಲಿ ಬಡ ಮಹಿಳೆಯ ತಲೆಗೆ ತ...
13-07-25 11:13 pm
15-07-25 01:13 pm
HK News Desk
Mangalore Crime, Police: ದುಬೈನಲ್ಲಿ ವಹಿವಾಟು ;...
15-07-25 11:38 am
ಮ್ಯಾಟ್ರಿಮನಿ ಸೈಟಲ್ಲಿ ಸಿಕ್ಕ ಗೆಳತಿಯಿಂದಲೇ ಮೋಸ ; ಆ...
13-07-25 05:23 pm
ಅಪ್ರಾಪ್ತ ಬಾಲಕಿಯನ್ನು ಶಾಲೆಗೆ ಕರೆದೊಯ್ಯುವ ನೆಪದಲ್ಲ...
12-07-25 11:10 pm
Dowry Harassment, Mysuru: ಮದುವೆಯಾದ ಎರಡೇ ತಿಂಗಳ...
12-07-25 01:32 pm