ಬ್ರೇಕಿಂಗ್ ನ್ಯೂಸ್
27-10-20 10:05 am Mangalore Correspondent ಕರಾವಳಿ
ಮಂಗಳೂರು, ಅಕ್ಟೋಬರ್ 27: ಮಂಗಳೂರು ದಸರಾ ಹೆಸರಲ್ಲಿ ಬಲು ಅದ್ದೂರಿಯಿಂದ ನಡೆಯುತ್ತಿದ್ದ ಕುದ್ರೋಳಿ ಗೋಕರ್ಣನಾಥ ಕ್ಷೇತ್ರದ ದಸರಾ ಉತ್ಸವ ಶೋಭಾಯಾತ್ರೆಯ ಮೆರುಗಿಲ್ಲದೆ, ಟ್ಯಾಬ್ಲೋಗಳ ಧಾಂ ಧೂಂ ಗೌಜಿಗಳಿಲ್ಲದೆ ಸರಳವಾಗಿ ಸಂಪನ್ನಗೊಂಡಿದೆ.
ವಿಜಯದಶಮಿಯ ಸೋಮವಾರ ಸಂಜೆ 6.30ಕ್ಕೆ ವಿಗ್ರಹ ವಿಸರ್ಜನಾ ಪೂಜೆ ನಡೆದಿತ್ತು. ಇದೇ ವೇಳೆ, ಸಂಪ್ರದಾಯ ಹೆಸರಲ್ಲಿ ವೇಷ ಹಾಕಿದ್ದ ಹುಲಿ ವೇಷಧಾರಿಗಳಿಗೆ ದೇವಸ್ಥಾನದ ಅಂಗಣದಲ್ಲಿ ಕುಣಿಯಲು ಅವಕಾಶ ನೀಡಲಾಗಿತ್ತು. ರಂಗು ರಂಗಿನ ವಿದ್ಯುತ್ ದೀಪಗಳ ರಂಗವಲ್ಲಿಯ ಮಧ್ಯೆ ಸೇರಿದ್ದ ಭಕ್ತ ಸಮೂಹದ ಸಮ್ಮುಖದಲ್ಲಿ ಶಾರದೆ ಮತ್ತು ನವದುರ್ಗೆಯರಿಗೆ ಪೂಜೆ ನಡೆದು ವಿಸರ್ಜನ ಪ್ರಕ್ರಿಯೆ ಆರಂಭಿಸಲಾಯ್ತು.
ರಾತ್ರಿ 8.30 ರ ಸುಮಾರಿಗೆ ಗಣಪತಿ, ಆದಿಶಕ್ತಿ ಮತ್ತು ನವದುರ್ಗೆಯರ ಮಣ್ಣಿನ ಮೂರ್ತಿಗಳನ್ನು ಸಭಾಂಗಣದಿಂದ ಹೊರತಂದು ಗೋಕರ್ಣನ ಕ್ಷೇತ್ರಕ್ಕೆ ಒಂದು ಪ್ರದಕ್ಷಿಣೆ ಹಾಕಿ ಬಳಿಕ ಕ್ಷೇತ್ರದ ಪುಷ್ಕರಣಿಯಲ್ಲಿ ಒಂದೊಂದನ್ನೇ ವಿಸರ್ಜಿಸಲಾಯಿತು. ಮಧ್ಯರಾತ್ರಿ 12 ಗಂಟೆ ವೇಳೆಗೆ ಶಾರದಾ ಮಾತೆಯ ಮೂರ್ತಿಯನ್ನು ಕೇತ್ರದ ಮುಖ್ಯದ್ವಾರದ ವರೆಗೂ ಮೆರವಣಿಗೆಯಲ್ಲಿ ಕೊಂಡೊಯ್ದು ಕ್ಷೇತ್ರಕ್ಕೆ ಪ್ರದಕ್ಷಿಣೆ ಹಾಕಲಾಯಿತು. ಬಳಿಕ ಕ್ಷೇತ್ರದ ದೇವರುಗಳಾದ ಗೋಕರ್ಣನಾಥ ಹಾಗೂ ಅನ್ನಪೂರ್ಣೇಶ್ವರಿಯ ಬಲಿ ಮೂರ್ತಿಯ ಅವಭೃತ ಸ್ನಾನ ನಡೆಯಿತು.
ತಡರಾತ್ರಿ 2 ಗಂಟೆ ಸುಮಾರಿಗೆ ಕ್ಷೇತ್ರದ ಪುಷ್ಕರಣಿ ಕೆರೆಯಲ್ಲಿ ಶಾರದಾ ಮಾತೆಯ ಮೂರ್ತಿಗೆ ಕೊನೆಯ ಬಾರಿಗೆ ಪೂಜೆ ಸಲ್ಲಿಸಿ ವಿಸರ್ಜನೆ ಮಾಡಲಾಯಿತು.
ಪ್ರತಿ ಬಾರಿ ನಗರ ಪ್ರದಕ್ಷಿಣೆ ನೆಪದಲ್ಲಿ ಒಂಬತ್ತು ಕಿಮೀ ಉದ್ದಕ್ಕೆ ಅದ್ದೂರಿ ಶೋಭಾಯಾತ್ರೆ ನಡೆಯುತ್ತದೆ. ದಾರಿಯುದ್ದಕ್ಕೂ ಲಕ್ಷಾಂತರ ಭಕ್ತರು ಶಾರದೆ, ನವದುರ್ಗೆಯರನ್ನು ಕಣ್ತುಂಬಿಕೊಳ್ಳುತ್ತಿದ್ದರು. ಹುಲಿ ವೇಷಧಾರಿಗಳು, ಅಪೂರ್ವ ಸ್ತಬ್ಧಚಿತ್ರಗಳು, ವಿವಿಧ ಜನಪದ ಕಲಾಪ್ರಕಾರಗಳು ನೋಡುಗರನ್ನು ಭಾವನಾ ಲೋಕಕ್ಕೆ ಕರೆದೊಯ್ಯುತ್ತಿದ್ದವು. ಸಂಜೆ 5 ಗಂಟೆಗೆ ಆರಂಭಗೊಳ್ಳುವ ಶೋಭಾಯಾತ್ರೆ ಮರಳಿ ದೇವಸ್ಥಾನಕ್ಕೆ ಬಂದು ವಿಸರ್ಜನೆ ಆಗುವಾಗ ಮರುದಿನ 8 ಗಂಟೆ ಆಗುತ್ತಿತ್ತು.. ಆದರೆ, ಈ ಬಾರಿ ಟ್ಯಾಬ್ಲೋಗಳ ಅಬ್ಬರವೂ ಇಲ್ಲ.. ಮಂಗಳೂರು ದಸರಾ ಎಂದು ಹೆಸರು ಬರಲು ಕಾರಣವಾದ ಶೋಭಾಯಾತ್ರೆಯ ವೈಭವವೂ ಇರಲಿಲ್ಲ.
ಕೊರೊನಾ ನಿರ್ಬಂಧಗಳ ನಡುವೆ ಸಂಪ್ರದಾಯ ಉಳಿಸಿಕೊಂಡು ದಸರಾ ಉತ್ಸವವನ್ನು 26 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಮೆರವಣಿಗೆ ಇಲ್ಲದೆ ಸರಳವಾಗಿ ಮುಗಿಸಲಾಗಿದೆ..
Video:
Dasara celebrations 2020 associated with Lord Gokarnanatha temple at Kudroli here, which is popularly known as 'Mangaluru Dasara', were held without the customary procession.
15-07-25 01:32 pm
Bangalore Correspondent
ನಟಿ ಸರೋಜಾ ದೇವಿ- ಎಸ್ಸೆಂ ಕೃಷ್ಣ ಪ್ರೇಮ ಪ್ರಸಂಗ ; ಮ...
15-07-25 12:27 pm
ಕೇವಲ 2 ಸಾವಿರ ಲಂಚ ಕೇಳಿ ಸಿಕ್ಕಿಬಿದ್ದ ಪಂಚಾಯತ್ ಪಿಡ...
15-07-25 10:35 am
ಧರ್ಮಸ್ಥಳದಲ್ಲಿ 20 ವರ್ಷಗಳಲ್ಲಾದ ಯುವತಿಯರ ನಾಪತ್ತೆ-...
14-07-25 10:44 pm
Shiradi Ghat Accident, Car: ಶಿರಾಡಿ ಘಾಟ್ ; ರಸ್...
14-07-25 01:43 pm
14-07-25 03:24 pm
HK News Desk
ಅಹ್ಮದಾಬಾದ್ ವಿಮಾನ ದುರಂತ ; ಭಾರೀ ಅನುಮಾನ ಹುಟ್ಟಿಸಿ...
12-07-25 09:25 pm
Apples New COO, Sabih Khan: ಟೆಕ್ ದೈತ್ಯ ಏಪಲ್ ಸ...
12-07-25 04:21 pm
ಸಾಮೂಹಿಕ ಮತಾಂತರ ; ಮೂರೇ ವರ್ಷಕ್ಕೆ ಚಾಂಗೂರ್ ಬಾಬಾನಿ...
12-07-25 02:15 pm
Coimbatore Serial Blasts, 'Tailor Raja' Arres...
11-07-25 12:08 pm
15-07-25 02:28 pm
HK News Desk
Mangalore Accident, Alto Car: ದೆಹಲಿಯಿಂದ ಬಂದ ಗ...
15-07-25 10:32 am
ಕಲ್ಲು ಮರಳಿನ ಸಮಸ್ಯೆಯಿಂದ ಜನರ ತಲೆಗೆ ಚಪ್ಪಡಿ ಕಲ್ಲು...
14-07-25 09:55 pm
Mrpl leakgae, Death, Fight: ಅನಿಲ ಸೋರಿಕೆಯಿಂದ ಇ...
14-07-25 07:56 pm
Mangalore, Help: ಅಪಘಾತದಲ್ಲಿ ಬಡ ಮಹಿಳೆಯ ತಲೆಗೆ ತ...
13-07-25 11:13 pm
15-07-25 01:13 pm
HK News Desk
Mangalore Crime, Police: ದುಬೈನಲ್ಲಿ ವಹಿವಾಟು ;...
15-07-25 11:38 am
ಮ್ಯಾಟ್ರಿಮನಿ ಸೈಟಲ್ಲಿ ಸಿಕ್ಕ ಗೆಳತಿಯಿಂದಲೇ ಮೋಸ ; ಆ...
13-07-25 05:23 pm
ಅಪ್ರಾಪ್ತ ಬಾಲಕಿಯನ್ನು ಶಾಲೆಗೆ ಕರೆದೊಯ್ಯುವ ನೆಪದಲ್ಲ...
12-07-25 11:10 pm
Dowry Harassment, Mysuru: ಮದುವೆಯಾದ ಎರಡೇ ತಿಂಗಳ...
12-07-25 01:32 pm