ಮಾಜಿ ಸಚಿವ ಗಂಗಾಧರ ಗೌಡರಿಗೆ ಐಟಿ ಶಾಕ್ ; ಬೆಳ್ತಂಗಡಿಯ ಶಿಕ್ಷಣ ಸಂಸ್ಥೆ, ಮನೆಯಲ್ಲಿ ಪರಿಶೀಲನೆ 

24-04-23 11:16 am       Mangalore Correspondent   ಕರಾವಳಿ

ಬೆಳ್ತಂಗಡಿಯ ಕಾಂಗ್ರೆಸ್ ಮುಖಂಡ, ಮಾಜಿ ಸಚಿವ ಕೆ.ಗಂಗಾಧರ ಗೌಡ ಅವರ ಮನೆಗೆ ಬೆಳ್ಳಂಬೆಳಗ್ಗೆ ಆದಾಯ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ಮಂಗಳೂರು, ಎ.24: ಬೆಳ್ತಂಗಡಿಯ ಕಾಂಗ್ರೆಸ್ ಮುಖಂಡ, ಮಾಜಿ ಸಚಿವ ಕೆ.ಗಂಗಾಧರ ಗೌಡ ಅವರ ಮನೆಗೆ ಬೆಳ್ಳಂಬೆಳಗ್ಗೆ ಆದಾಯ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಗಂಗಾಧರ ಗೌಡರಿಗೆ ಸೇರಿದ ಶಿಕ್ಷಣ ಸಂಸ್ಥೆ ಹಾಗೂ ಮನೆಯ ಮೇಲೆ ಅಧಿಕಾರಿಗಳು ದಾಳಿ ನಡೆಸಿದ್ದು ಪರಿಶೀಲನೆ ನಡೆಸಿದ್ದಾರೆ. 

ಇಂದಬೆಟ್ಟಿನಲ್ಲಿರುವ ಮನೆ ಮತ್ತು ಲಾಯ್ಲದಲ್ಲಿರುವ ಪ್ರಸನ್ನ ಶಿಕ್ಷಣ ಸಂಸ್ಥೆಯಲ್ಲಿ ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ. ಬೆಳಗ್ಗೆ ಪೊಲೀಸರ ಜೊತೆಗೆ ಆಗಮಿಸಿದ ಅಧಿಕಾರಿಗಳು, ಪರಿಶೀಲನೆಯಲ್ಲಿ ತೊಡಗಿದ್ದಾರೆ. 

ಈ ಬಾರಿ ಬೆಳ್ತಂಗಡಿ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದ ಅವರು ಇತ್ತೀಚೆಗೆ ಟಿಕೆಟ್‌ ತಪ್ಪಿದ ಬೆನ್ನಲ್ಲೇ ಪಕ್ಷದ ರಾಜಕೀಯ ಚಟುವಟಿಕೆಯಿಂದ ದೂರ ಸರಿದಿದ್ದರು. ಮೊನ್ನೆ ಡಿಕೆಶಿ ಬೆಳ್ತಂಗಡಿಗೆ ಬಂದಿದ್ದ ವೇಳೆಯೂ ಗಂಗಾಧರ ಗೌಡ ಕಾಣಿಸಿಕೊಂಡಿರಲಿಲ್ಲ. ಇದೀಗ ಮಾಜಿ ಸಚಿವ, ಕೆಪಿಸಿಸಿ ಉಪಾಧ್ಯಕ್ಷ ಗಂಗಾಧರ ಗೌಡರಿಗೆ ಚುನಾವಣೆ ಹೊತ್ತಲ್ಲಿ ಐಟಿ ಶಾಕ್ ನೀಡಿದಂತಾಗಿದೆ.

Mangalore Income tax raids former minister and vice president of KPCC Gangadhar Gowda and his son Ranjan Gowda on Monday April 24 morning. It may be recalled, Gowda had recently withdrew from politics after losing the Congress ticket to Rakshit Shivaram from Beltangady constituency.