ಬ್ರೇಕಿಂಗ್ ನ್ಯೂಸ್
06-05-23 10:42 pm Mangalore Correspondent ಕರಾವಳಿ
ಬಂಟ್ವಾಳ, ಮೇ 6: ಬಂಟ್ವಾಳ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ರಾಜೇಶ್ ನಾಯ್ಕ್ ಪರವಾಗಿ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಅದ್ದೂರಿ ರೋಡ್ ಶೋ ನಡೆಸಿದ್ದಾರೆ. ಬಿಸಿ ರೋಡ್ ಪೇಟೆಯಲ್ಲಿ ನಡೆದ ರೋಡ್ ಶೋದಲ್ಲಿ ಕೇಸರಿ ಕಾರ್ಯಕರ್ತರ ಹೆದ್ದೆರೆಯೇ ಕಾಣಿಸಿಕೊಂಡಿದ್ದು ಸಾವಿರಾರು ಕಾರ್ಯಕರ್ತರು ಸೇರಿ ಸಂಭ್ರಮಿಸಿದ್ದಾರೆ.
ಪೊಳಲಿ ರಾಜರಾಜೇಶ್ವರಿ ದೇವಿಗೆ ನನ್ನ ನಮನ. ಕಟೀಲು ದುರ್ಗಾಪರಮೇಶ್ವರಿ, ಪೊಳಲಿ ರಾಜರಾಜೇಶ್ವರಿಗೆ ಕೋಟಿ ಕೋಟಿ ನಮಸ್ಕಾರಗಳು. ಪರಶುರಾಮನ ಭೂಮಿಗೆ ಕೋಟಿ ಕೋಟಿ ನಮನ ಎನ್ನುತ್ತಲೇ ಭಾಷಣ ಆರಂಭಿಸಿದ ಯೋಗಿ ಆದಿತ್ಯನಾಥ್, ಕರ್ನಾಟಕ ಚುನಾವಣೆಯಲ್ಲಿ ಬಿಜೆಪಿ ವಿಕಾಸದ ಮೂಲಕ ನಿಮ್ಮ ಮುಂದೆ ಬಂದಿದೆ. ಕಾಂಗ್ರೆಸ್ ರಾಷ್ಟ್ರ ವಿರೋಧಿ ಮತ್ತು ನಕಾರಾತ್ಮಕ ವಿಷಯಗಳ ಮುಂದಿಟ್ಟು ಚುನಾವಣೆ ಎದುರಿಸುತ್ತಿದೆ. ಇವತ್ತು ಭಾರತವನ್ನು ಮೋದಿ ನೇತೃತ್ವದಲ್ಲಿ ಅಭಿವೃದ್ಧಿ ಪಡಿಸಲಾಗ್ತಿದೆ. ಇದಕ್ಕಾಗಿ ಕ್ಷೇತ್ರದ ಜನತೆ ಬಿಜೆಪಿಗೆ ಮತ ನೀಡಬೇಕಾಗಿದೆ ಎಂದರು.


ಕಾಂಗ್ರೆಸ್ ಸರ್ಕಾರ ಬಂದ್ರೆ ಭಜರಂಗದಳ ಬ್ಯಾನ್ ಮಾಡ್ತೀವಿ ಅಂದಿದಾರೆ. ಭಜರಂಗದಳ ಒಂದು ಸಾಂಸ್ಕೃತಿಕ ಮತ್ತು ಸಾಮಾಜಿಕ ಸಂಘಟನೆ. ಭಜರಂಗದಳ ರಾಷ್ಟ್ರವಾದಿ ಸಂಘಟನೆ, ಕರ್ನಾಟಕದ ಜನರು ಇದನ್ನ ಒಪ್ಪಲ್ಲ. ಇದೇ ವೇಳೆ, ಕಾಂಗ್ರೆಸ್ ರಾಷ್ಟ್ರ ವಿರೋಧಿ ಸಂಘಟನೆ ಪಿಎಫ್ಐಯನ್ನು ಪ್ರೋತ್ಸಾಹಿಸುತ್ತದೆ. ಎರಡು ತದ್ವಿರುದ್ಧ ವಿಚಾರಗಳ ಬಗ್ಗೆ ಜನರು ಗಮನ ಹರಿಸಬೇಕು ಎಂದರು.


ವಿಧಾನಸಭೆ ಚುನಾವಣೆಯಲ್ಲಿ ರಾಜೇಶ್ ನಾಯ್ಕ್ ರನ್ನ ಗೆಲ್ಲಿಸಬೇಕು ಯಾಕಂದ್ರೆ, ಅಭಿವೃದ್ಧಿ ಮತ್ತು ರಾಷ್ಟ್ರವಾದ ಗೆಲ್ಲಬೇಕಾಗಿದೆ. ಶ್ರೀರಾಮನ ಜನ್ಮಸ್ಥಳದಿಂದ ಹನುಮನ ಜನ್ಮಸ್ಥಳಕ್ಕೆ ನಾನು ಬಂದಿದ್ದೇನೆ. ಜನವರಿಯಲ್ಲಿ ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ಉದ್ಘಾಟನೆ ಆಗಲಿದೆ. ಭಜರಂಗಿಬಲಿ ಜನ್ಮಸ್ಥಳದ ಕರ್ನಾಟಕದ ಜನರಿಗೆ ಈಗಲೇ ಆಮಂತ್ರಣ ನೀಡ್ತಾ ಇದೀನಿ. ಇಡೀ ಉತ್ತರ ಪ್ರದೇಶ ನಿಮ್ಮನ್ನ ರಾಮನ ಜನ್ಮಭೂಮಿಗೆ ಸ್ವಾಗತಿಸುತ್ತದೆ ಎಂದು ಹೇಳಿದರು.


ರೋಡ್ ಶೋದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್, ಕ್ಷೇತ್ರದ ಬಿಜೆಪಿ ಅಭ್ಯರ್ಥಿ ರಾಜೇಶ್ ನಾಯ್ಕ್ ಇದ್ದರು. ರೋಡ್ ಶೋ ಸಲುವಾಗಿ ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನ ಸಂಚಾರ ನಿಲ್ಲಿಸಲಾಗಿತ್ತು. ಕೈಕಂಬ ದ್ವಾರದ ವರೆಗೂ ಜಾಥಾ ನಡೆದು ಬಂತು. ಭಾರೀ ಸಂಖ್ಯೆಯಲ್ಲಿ ಕೇಸರಿ ಕಾರ್ಯಕರ್ತರು ಸೇರಿದ್ದು ಹಿಂದು ಹೆದ್ದೆರೆ ಎದ್ದು ನಿಂತಂತೆ ಕಂಡಿತ್ತು.
Uttar Pradesh (UP) chief minister (CM) Yogi Adityanath campaigned for BJP candidates in Puttur, Bantwal and Karkala on Saturday May 6. He campaigned for Asha Thimmappa Gowda in Puttur. A massive road show started from Shri Mahalingeshwara Temple.
15-02-26 10:38 pm
HK News Desk
Nelamangala Accident, 5 Killed: ಹೊಸಕೋಟೆ ದುರಂತ...
15-02-26 10:22 am
ಲೋಕಾಯುಕ್ತ ಬಲೆಗೆ ಬಿದ್ದ 'ಜನರ ಧನ ನುಂಗಿದ ಜನಾರ್ಧನ'...
13-02-26 10:45 pm
Hoskote Accident, Latest Update: ಹೊಸಕೋಟೆ ಅಪಘಾ...
13-02-26 09:18 pm
ಹೊಸಕೋಟೆ ಬಳಿ ಸರಣಿ ಅಪಘಾತ ; ಕ್ಯಾಂಟರ್ ಡ್ರೈವರ್ ಎಡವ...
13-02-26 10:41 am
15-02-26 04:01 pm
HK Desk
ಖಲಿಸ್ತಾನಿ ಉಗ್ರನ ಹತ್ಯೆಗೆ ಸಂಚು ; ತಪ್ಪೊಪ್ಪಿಕೊಂಡ...
14-02-26 10:55 pm
ಬಾಂಗ್ಲಾದಲ್ಲಿ ಚುನಾವಣೆ ; ಒಂದು ಸ್ಥಾನ ಗೆದ್ದ ಬಿಜೆಪ...
14-02-26 08:13 pm
ಜಗತ್ತು ನೋಡುವ ಮುನ್ನವೇ ಕಣ್ಮುಚ್ಚಿ 5 ಮಕ್ಕಳಿಗೆ ಜೀವ...
14-02-26 01:51 pm
80 ವರ್ಷಗಳ ಬಳಿಕ ಪ್ರಧಾನಿ ಕಚೇರಿಗೆ ಹೊಸ ಭವನ, 'ಸೇವಾ...
13-02-26 11:00 pm
15-02-26 08:52 pm
Mangalore Correspondent
Pumpwell Road Close, Mangalore: ಪಂಪ್ವೆಲ್ ಸರ್...
14-02-26 07:16 pm
CT Ravi, Mangalore: ಕಾಂಗ್ರೆಸ್ ಸಂಭ್ರಮ ಭ್ರಷ್ಟಾ...
14-02-26 05:16 pm
Lotus Builder Jitendra Kottary, FIR: ಗನ್ ಹಿಡಿ...
14-02-26 04:38 pm
ವಿದೇಶಿ ಉದ್ಯೋಗ ; ಗಲ್ಫ್, ದಕ್ಷಿಣ ಏಷ್ಯಾ ರಾಷ್ಟ್ರಗ...
13-02-26 09:52 pm
15-02-26 05:08 pm
Mangaluru Staffer
ಪ್ರೇಮಿಗಳ ದಿನವೇ ದುರಂತ ಅಂತ್ಯ ಕಂಡ ಜೋಡಿ ; ಪ್ರೀತಿಗ...
14-02-26 10:47 pm
Indian Bank Gold Robbery, Bangalore: ಬೆಂಗಳೂರು...
14-02-26 07:37 pm
Mangalore Drugs, CCB Police: ಬೆಂಗಳೂರಿನಿಂದ ಎಂಡ...
13-02-26 03:35 pm
ಕಾಂಬೋಡಿಯಾದಲ್ಲಿ ನಕಲಿ ಭಾರತೀಯ ಪೊಲೀಸ್ ಠಾಣೆ ಪತ್ತೆ...
13-02-26 11:52 am