ಬ್ರೇಕಿಂಗ್ ನ್ಯೂಸ್
10-05-23 11:11 am Mangalore Correspondent ಕರಾವಳಿ
ಮಂಗಳೂರು, ಮೇ 10 : ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಬೆಳಗ್ಗಿನಿಂದಲೇ ಬಿರುಸಿನ ಮತದಾನ ನಡೆದಿದೆ. ಮೊದಲ ಎರಡು ಗಂಟೆಯ ಅಂದರೆ, 9 ಗಂಟೆ ವರೆಗಿನ ಮತದಾನದಲ್ಲಿ ಜಿಲ್ಲೆಯಲ್ಲಿ 12.47 ಶೇಕಡಾ ಮತದಾನ ದಾಖಲಾಗಿದೆ.
ಹಗಲಿನಲ್ಲಿ ಭಾರೀ ಬಿಸಿಲು ಇರುವುದರಿದಲೋ ಏನೋ ಮಂಗಳೂರು ನಗರ ಸೇರಿದಂತೆ ಬಹುತೇಕ ಹೆಚ್ಚಿನ ಮತಗಟ್ಟೆಗಳಲ್ಲಿ ಬೆಳಗ್ಗೆಯೇ ಮತದಾರರು ಸಾಲುಗಟ್ಟಿದ್ದರು. ಹಿರಿಯ ನಾಗರಿಕರು ಕೂಡ ಇನ್ನೊಬ್ಬರ ಸಹಾಯದಿಂದ ಮತ ಚಲಾಯಿಸಲು ಆಗಮಿಸಿದ್ದರು. ಈ ಬಾರಿ 80 ವರ್ಷ ಮೀರಿದವರಿಗೆ ಮನೆಯಿಂದಲೇ ಮತ ಚಲಾಯಿಸಲು ಅವಕಾಶ ನೀಡಲಾಗಿತ್ತು. ಆದರೆ ಇದಕ್ಕೆ ನೋಂದಣಿ ಮಾಡದವರಿಗೆ ವೋಟ್ ಮಾಡಲು ಅವಕಾಶ ಇರಲಿಲ್ಲ.
ಮಂಗಳೂರಿನ ಲೇಡಿಹಿಲ್ ಬಳಿಯ ಉರ್ವಾ ಶಾಲೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಮತ ಚಲಾಯಿಸಿದ್ದಾರೆ. ಸರತಿ ಸಾಲಿನಲ್ಲಿ ನಿಂತುಕೊಂಡೇ ಮತ ಹಾಕಿದ್ದಾರೆ. ಇದೇ ವೇಳೆ, ಮಂಗಳೂರು ದಕ್ಷಿಣ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಗಾಂಧಿನಗರ ಮತಗಟ್ಟೆಯಲ್ಲಿ ಮತ್ತು ಕಾಂಗ್ರೆಸ್ ಅಭ್ಯರ್ಥಿ ಜೆಆರ್ ಲೋಬೊ ಕುಟುಂಬ ಸಹಿತ ಬಂದು ಕಂಕನಾಡಿಯ ಬೆಂದೂರುವೆಲ್ ಶಾಲೆಯಲ್ಲಿ ಮತ ಚಲಾಯಿಸಿದ್ದಾರೆ.
ಈ ಬಾರಿ ಜಿಲ್ಲಾಡಳಿತದ ಸ್ವೀಪ್ ಕಮಿಟಿ ಮತದಾನ ಜಾಗೃತಿಗೆ ಬಹಳಷ್ಟು ಕೆಲಸ ಮಾಡಿತ್ತು. ಹೀಗಾಗಿ ಕರಾವಳಿ ಜಿಲ್ಲೆಗಳಲ್ಲಿ ಮತದಾನ ಪ್ರಮಾಣ ಹೆಚ್ಚುವ ಸಾಧ್ಯತೆಯಿದೆ. 9 ಗಂಟೆ ವರೆಗಿನ ಮಾಹಿತಿ ಪ್ರಕಾರ, ಮಂಗಳೂರು ಉತ್ತರದಲ್ಲಿ 15.50 ಪರ್ಸೆಂಟ್, ಪುತ್ತೂರಿನಲ್ಲಿ 13.34 ಪರ್ಸೆಂಟ್ ಮತದಾನ ಆಗಿದೆ.
ಮಂಗಳೂರು ಉತ್ತರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಭರತ್ ಶೆಟ್ಟಿ ಕೆಪಿಟಿ ಮತಗಟ್ಟೆಯಲ್ಲಿ ಪತ್ನಿಯೊಂದಿಗೆ ಬಂದು ಮತ ಚಲಾಯಿಸಿದ್ದಾರೆ. ಉಳಿದಂತೆ, ಧರ್ಮಸ್ಥಳ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ, ಬೆಳ್ತಂಗಡಿ ಬಿಜೆಪಿ ಅಭ್ಯರ್ಥಿ ಹರೀಶ್ ಪೂಂಜ ಗರ್ಡಾಡಿಯ ಶಾಲೆಯಲ್ಲಿ, ಪುತ್ತೂರು ಪಕ್ಷೇತರ ಅಭ್ಯರ್ಥಿ ಅರುಣ್ ಪುತ್ತಿಲ ಮುಂಡೂರಿನ ಮತಗಟ್ಟೆಯಲ್ಲಿ ಮತ ಹಾಕಿದರು.
ಉಳ್ಳಾಲ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಯು.ಟಿ ಖಾದರ್ ಬೋಳಿಯಾರ್ ಗ್ರಾಮದ ಜಾರದಗುಡ್ಡೆ ಮತದಾನ ಕೇಂದ್ರದಲ್ಲಿ ಮತ ಚಲಾಯಿಸಿ, ಪತ್ನಿ, ಪುತ್ರಿ ಮತ್ತು ಬೆಂಬಲಿಗರೊಂದಿಗೆ ಫೋಟೊಗೆ ಪೋಸು ನೀಡಿದರು. ಶಾಸಕ ಯು.ಟಿ ಖಾದರ್ ಅವರ ಏಕೈಕ ಪುತ್ರಿ ಹವ್ವಾ ನಸೀಮ ತಮ್ಮ ಮೊದಲ ಹಕ್ಕನ್ನು ಜಾರದಗುಡ್ಡೆ ಶಾಲೆಯಲ್ಲಿ ತಂದೆ, ತಾಯಿಯ ಜೊತೆಗೆ ಚಲಾಯಿಸಿದರು.
Karnataka Election 2023 live, people throng to polling booths in large numbers, JR Lobo, Vedevyas Kamat, Khader, Poonja, UT Khader, Bharath Shetty, Arun Puthila casted thier votes with famiily. Voters queued up in front of their respective polling booths in large numbers in Dakshina Kannada (DK) and Udupi districts as polling for the Karnataka assembly elections began at 7 am.
19-05-25 04:00 pm
HK News Desk
Bjp, Radha Mohan Das Agarwal: 1971ರ ಯುದ್ಧ ಗೆಲ...
17-05-25 01:44 pm
Santosh Lad, Modi, Pak, War: ಮೋದಿ ತಾವೇ ಸುಪ್ರೀ...
16-05-25 10:04 am
Davanagere Sp, Constable Accident: ದಾವಣಗೆರೆಯಲ...
15-05-25 10:16 pm
Yatnal FIR, Mahatma Gandhi; ಮಹಾತ್ಮ ಗಾಂಧಿ ಪಾಕಿ...
15-05-25 11:59 am
19-05-25 02:25 pm
HK News Desk
ಚಾರ್ಮಿನಾರ್ ಬಳಿಯ ಗುಲ್ಜಾರ್ ಹೌಸ್ನಲ್ಲಿ ಬೆಂಕಿ ಅವ...
19-05-25 01:46 pm
Brijesh Chowta, Tejaswi Surya: ಪಾಕ್ ಪ್ರೇರಿತ ಭ...
18-05-25 08:23 pm
ಪಾಕ್ ಪರವಾಗಿ ಬೇಹುಗಾರಿಕೆ ; ಭಾರತೀಯ ಸೇನಾ ಮಾಹಿತಿ ಸ...
17-05-25 10:51 pm
Donald Trump, Asim Munir: ಡೊನಾಲ್ಡ್ ಟ್ರಂಪ್ ಕುಟ...
17-05-25 03:42 pm
19-05-25 05:22 pm
Mangalore Correspondent
Akanksha Suicide, Dharmasthala, Mangalore: ಏರ...
19-05-25 12:31 pm
Akanksha Death, Punjab, Dharmasthala, Mangalo...
18-05-25 12:42 pm
Ullal, U T Khader, Mangalore: ಎರಡು ವರ್ಷವಾದರೂ...
17-05-25 10:09 pm
Mangalore Balmatta Accident, Bus, Video: ನಿಂತ...
17-05-25 08:52 pm
19-05-25 03:35 pm
HK News Desk
Reshma Bariga, FIR, Mangalore; ಆಪರೇಶನ್ ಸಿಂಧೂರ...
18-05-25 07:45 pm
Suhas Shetty, BJP Corporator Shweta Poojary,...
18-05-25 07:35 pm
Bangalore Cigarette Murder, Video Viral: ಕಾರಿ...
17-05-25 05:00 pm
Mangalore Stabbing, Panemangalore, Crime, Att...
16-05-25 11:06 pm