ಬ್ರೇಕಿಂಗ್ ನ್ಯೂಸ್
10-05-23 12:36 pm Udupi Correspondent ಕರಾವಳಿ
ಉಡುಪಿ, ಮೇ 10: ಈ ಬಾರಿ ಮತ ಚಲಾವಣೆಗೆ ಹಿಂದಿಗಿಂತ ಹೆಚ್ಚು ಹುರುಪು ಬಂದ ಹಾಗಿದೆ. ಇಲ್ಲೊಬ್ಬಳು ಮಧುಮಗಳು ಹಸೆಮಣೆಗೆ ಕಾಲಿಡುವ ಮೊದಲೇ ಮತಗಟ್ಟೆಗೆ ಬಂದು ಮತ ಚಲಾಯಿಸಿದ್ದಾರೆ.
ಕಾಪು ಕ್ಷೇತ್ರದ ಪಲಿಮಾರು ಗ್ರಾಮ ಪಂಚಾಯಿತಿ ಅವರಾಲು ಮಟ್ಟು ಎಂಬಲ್ಲಿನ ಮತಗಟ್ಟೆಯಲ್ಲಿ ನವ ವಧು ಮೆಲಿಟಾ ಬೆಳಗ್ಗಿನ ಹೊತ್ತಲ್ಲೇ ಮತ ಚಲಾಯಿಸಿ ಮಾದರಿಯಾಗಿದ್ದಾರೆ.
ಮದುವೆಗೆ ಹೋಗುವ ಮಹಿಳೆಯರೂ ಆಕರ್ಷಕ ಸೀರೆಗಳನ್ನು ಉಟ್ಟು ಬೆಳಗ್ಗೆಯೇ ಸರತಿ ಸಾಲಿನಲ್ಲಿ ನಿಂತಿದ್ದರು. ಮದುವೆ ಮಂಟಪಕ್ಕೆ ಹೋಗಿ ಹಕ್ಕು ಚಲಾಯಿಸುವುದು ಮಿಸ್ ಆಗಬಾರದೆಂದು ಮಹಿಳೆಯರ ಸಾಲು ಕೆಲವೆಡೆ ಮಾರುದ್ದ ಇತ್ತು.
ತಾಳಿಕಟ್ಟುವ ಮುನ್ನ ಮತ ಚಲಾಯಿಸಿದ ಮದುಮಗ;
ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಶಿವಪ್ಪನಾಯಕ ನಗರ ಬಡಾವಣೆಯ ನಾರಾಯಣ ಅವರ ಪುತ್ರ ವಿನೋದ್ ಕುಮಾರ್ ಮದುವೆ ಮಂಟಪಕ್ಕೆ ಹೊರಡುವ ಮುನ್ನ ಮತ ಚಲಾಯಿಸಿದ್ದಾರೆ.
ವಿನೋದ್ ಅವರ ವಿವಾಹ ರಿಪ್ಪನ್ ಪೇಟೆಯಲ್ಲಿ ಪಲ್ಲವಿ ಅವರೊಂದಿಗೆ ಬುಧವಾರ ನಡೆಯುವುದೆಂದು ನಿಶ್ಚಯವಾಗಿತ್ತು.ಚುನಾವಣೆ ದಿನಾಂಕ ಘೋಷಣೆಯಾಗುವ ಮೊದಲೆ ಮದುವೆ ದಿನಾಂಕ ನಿಗದಿಯಾಗಿತ್ತು.
ಮದುವೆ ದಿನವೆ ಚುನಾವಣೆ ದಿನ ಎಂದು ತಿಳಿದು ಆರಂಭದಲ್ಲಿ ಬೇಸರವಾಗಿತ್ತು.ಆದರೆ ನಾನು ನನ್ನ ಕುಟುಂಬದ ಎಲ್ಲರೂ ಬೆಳಿಗ್ಗೆ ಯೆ ಮತ ಚಲಾಯಿಸಿ ಮದುವೆಗೆ ಹೊರಟಿದ್ದೇವೆ. ನಮ್ಮ ಹಕ್ಕನ್ನು ನಾವು ಮರೆಯಬಾರದು ಎಂದು ವಿನೋದ್ ತಿಳಿಸಿದ್ದಾರೆ
ಮುಹೂರ್ತಕ್ಕೂ ಮುನ್ನ ವಧುವಿನ ಮತದಾನ
ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಮಾಕೋನಹಳ್ಳಿಯ ಮತಗಟ್ಟೆಯಲ್ಲಿ ಮುಹೂರ್ತಕ್ಕೂ ಮುನ್ನ ನವ ವಧು ಮತದಾನ ಮಾಡಿ ಗಮನ ಸೆಳೆದಿದ್ದಾರೆ. ರೇಷ್ಮೆ ಸೀರೆ ಉಟ್ಟಿದ್ದ ಮದುವಣಗಿತ್ತಿ ಸಂಪೂರ್ಣ ರೆಡಿಯಾಗಿ ಬಂದು ಮತ ಚಲಾಯಿಸಿ ಮದುವೆ ಮಂಟಪಕ್ಕೆ ಹೋಗಿದ್ದಾರೆ.
Karnataka election 2023, brides visit polling booths on their wedding day at Udupi and Chikmagalur to cast their votes before their wedding. The bridegroom from Sagar, Shivamogga, cast his vote before reaching the marriage hall.
19-05-25 04:00 pm
HK News Desk
Bjp, Radha Mohan Das Agarwal: 1971ರ ಯುದ್ಧ ಗೆಲ...
17-05-25 01:44 pm
Santosh Lad, Modi, Pak, War: ಮೋದಿ ತಾವೇ ಸುಪ್ರೀ...
16-05-25 10:04 am
Davanagere Sp, Constable Accident: ದಾವಣಗೆರೆಯಲ...
15-05-25 10:16 pm
Yatnal FIR, Mahatma Gandhi; ಮಹಾತ್ಮ ಗಾಂಧಿ ಪಾಕಿ...
15-05-25 11:59 am
19-05-25 02:25 pm
HK News Desk
ಚಾರ್ಮಿನಾರ್ ಬಳಿಯ ಗುಲ್ಜಾರ್ ಹೌಸ್ನಲ್ಲಿ ಬೆಂಕಿ ಅವ...
19-05-25 01:46 pm
Brijesh Chowta, Tejaswi Surya: ಪಾಕ್ ಪ್ರೇರಿತ ಭ...
18-05-25 08:23 pm
ಪಾಕ್ ಪರವಾಗಿ ಬೇಹುಗಾರಿಕೆ ; ಭಾರತೀಯ ಸೇನಾ ಮಾಹಿತಿ ಸ...
17-05-25 10:51 pm
Donald Trump, Asim Munir: ಡೊನಾಲ್ಡ್ ಟ್ರಂಪ್ ಕುಟ...
17-05-25 03:42 pm
19-05-25 05:22 pm
Mangalore Correspondent
Akanksha Suicide, Dharmasthala, Mangalore: ಏರ...
19-05-25 12:31 pm
Akanksha Death, Punjab, Dharmasthala, Mangalo...
18-05-25 12:42 pm
Ullal, U T Khader, Mangalore: ಎರಡು ವರ್ಷವಾದರೂ...
17-05-25 10:09 pm
Mangalore Balmatta Accident, Bus, Video: ನಿಂತ...
17-05-25 08:52 pm
19-05-25 03:35 pm
HK News Desk
Reshma Bariga, FIR, Mangalore; ಆಪರೇಶನ್ ಸಿಂಧೂರ...
18-05-25 07:45 pm
Suhas Shetty, BJP Corporator Shweta Poojary,...
18-05-25 07:35 pm
Bangalore Cigarette Murder, Video Viral: ಕಾರಿ...
17-05-25 05:00 pm
Mangalore Stabbing, Panemangalore, Crime, Att...
16-05-25 11:06 pm