ಬ್ರೇಕಿಂಗ್ ನ್ಯೂಸ್
21-05-23 04:02 pm Udupi Correspondent ಕರಾವಳಿ
ಉಡುಪಿ, ಮೇ 20 : ಜಿಲ್ಲೆಯ ಹಿರಿಯ ರಾಜಕಾರಣಿ, ಕಾಂಗ್ರೆಸ್ ಮುಖಂಡ, ಮಾಜಿ ಶಾಸಕ ಯು.ಆರ್. ಸಭಾಪತಿ(71) ಅಲ್ಪಕಾಲದ ಅನಾರೋಗ್ಯದಿಂದ ಭಾನುವಾರ ಬೆಳಗ್ಗೆ ನಿಧನರಾಗಿದ್ದಾರೆ.
ಮೃತರು ಪತ್ನಿ, ಇಬ್ಬರು ಪುತ್ರರು ಹಾಗೂ ಓರ್ವ ಪುತ್ರಿಯನ್ನು ಅಗಲಿದ್ದಾರೆ. ರಾಷ್ಟ್ರೀಯ ಜನತಾದಳ ಬಳಿಕ, ಜಾತ್ಯತೀತ ಜನತಾದಳದಲ್ಲಿ ಗುರುತಿಸಿಕೊಂಡಿದ್ದ ಯು.ಆರ್. ಸಭಾಪತಿ 80-90ರ ದಶಕದಲ್ಲಿ ಕರಾವಳಿ ಭಾಗದ ಪ್ರಭಾವಿ ನಾಯಕರಲ್ಲೊಬ್ಬರಾಗಿದ್ದರು.
ಮಾಜಿ ಮುಖ್ಯಮಂತ್ರಿ ಎಸ್. ಬಂಗಾರಪ್ಪ ಅವರ ಅನುಯಾಯಿಯಾಗಿದ್ದ ಯು.ಆರ್. ಸಭಾಪತಿ ಅವರು, ಉಡುಪಿ ವಿಧಾನಸಭಾ ಕ್ಷೇತ್ರದಲ್ಲಿ ಎರಡು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದರು. 1994ರಲ್ಲಿ ಕೆಸಿಪಿಯಿಂದ ಶಾಸಕರಾಗಿದ್ದ ಅವರು, 1999ರಲ್ಲಿ ಕಾಂಗ್ರೆಸ್‌ನಿಂದ ಶಾಸಕರಾಗಿ ಚುನಾಯಿತರಾಗಿದ್ದರು. 1987ರಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಪರಿಷತ್ತಿನ ಉದ್ಯಾವರ ಕ್ಷೇತ್ರದ ಸದಸ್ಯರಾಗಿದ್ದ ಸಭಾಪತಿ, ಪರಿಷತ್‌ನ ಶಿಕ್ಷಣ ಸ್ಥಾಯಿ ಸಮಿತಿಯ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದರು.
1989ರಲ್ಲಿ ಉಡುಪಿ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧೆ ಬಯಸಿದ್ದ ಅವರಿಗೆ ಕಾಂಗ್ರೆಸ್ ಟಿಕೆಟ್ ನಿರಾಕರಿಸಿತ್ತು. ಬಂಡಾಯ ಅಭ್ಯರ್ಥಿಯಾಗಿ ಮನೋರಮಾ ಮಧ್ವರಾಜ್ ವಿರುದ್ಧ ಸ್ಪರ್ಧಿಸಿ ಅಲ್ಪ ಮತಗಳ ಅಂತರದಲ್ಲಿ ಸೋಲು ಕಂಡಿದ್ದರು. 1994ರಲ್ಲಿ ಎಸ್. ಬಂಗಾರಪ್ಪ ನೇತೃತ್ವದ ಕರ್ನಾಟಕ ಕಾಂಗ್ರೆಸ್ ಪಕ್ಷದಿಂದ ಉಡುಪಿಯಿಂದಲೇ ಸ್ಪರ್ಧಿಸಿ ಜಯಭೇರಿ ಬಾರಿಸಿದ್ದರು. ಬಳಿಕ ಕಾಂಗ್ರೆಸ್ ಸೇರ್ಪಡೆಗೊಂಡಿದ್ದು, 1999ರಲ್ಲಿ ಶಾಸಕರಾಗಿ ಚುನಾಯಿತರಾದ್ದರು. 2004ರ ಚುನಾವಣೆಯಲ್ಲಿ ಇವರು ಬಿಜೆಪಿಯ ರಘುಪತಿ ಭಟ್ ವಿರುದ್ಧ ಸೋಲು ಕಂಡಿದ್ದರು. ಆನಂತರ ರಾಜಕೀಯದಲ್ಲಿ ನೇಪಥ್ಯಕ್ಕೆ ಸರಿದಿದ್ದರು.
U R Sabhapathi, a prominent Congress leader and former MLA, passed away after a brief illness here on Sunday, May 21. U R Sabhapathi had served as the MLA for the Udupi constituency in 1994 and 1999, leaving a lasting impact on the region.
17-05-26 08:55 pm
HK News Staffer
ವಿಜಯಪುರದಲ್ಲಿ ಗಾಳಿ-ಮಳೆಯ ಅಬ್ಬರಕ್ಕೆ ಮನೆಯೇ ಸಮಾಧಿ...
15-05-26 10:30 pm
ಮದ್ಯ ಪ್ರಿಯರಿಗೆ ಗುಡ್ನ್ಯೂಸ್ ; ಪ್ರೀಮಿಯಂ ಬಿಯರ್,...
15-05-26 09:56 pm
ಹಿಜಾಬ್ಗೆ ಗ್ರೀನ್ ಸಿಗ್ನಲ್; ಮತ್ತೆ ಭುಗಿಲೆದ್ದ ವಿವ...
14-05-26 10:19 am
ಬಿಜೆಪಿ ಸರ್ಕಾರ ನಿಷೇಧಿಸಿದ್ದ ಹಿಜಾಬ್ ನಿಷೇಧ ಹಿಂಪಡೆ...
13-05-26 10:18 pm
18-05-26 02:18 pm
HK News Staffer
ಭೋಜಶಾಲಾ ವಿವಾದಿತ ಮಸೀದಿ ಕಟ್ಟಡವಲ್ಲ, ವಾಗ್ದೇವಿ ಸರಸ...
16-05-26 10:13 pm
ಗುಡುಗು - ಮಿಂಚಿನ ಬಿರುಗಾಳಿಗೆ ಉತ್ತರ ಪ್ರದೇಶದಲ್ಲಿ...
16-05-26 02:01 pm
ಮುಂದಿನ ವರ್ಷದಿಂದ ಕಂಪ್ಯೂಟರ್ ಆಧಾರಿತ NEET ಪರೀಕ್ಷೆ...
15-05-26 04:16 pm
ದೇಶಾದ್ಯಂತ ಪೆಟ್ರೋಲ್, ಡೀಸೆಲ್ ದರ ಹೆಚ್ಚಳ ; ಮಿತವ್ಯ...
15-05-26 08:54 am
18-05-26 10:47 pm
HK News Desk
ಸರ್ಕಾರಿ ಶಾಲೆಗಳಿಗೆ ಸುಣ್ಣ-ಬಣ್ಣ ಇಲ್ಲ , ಶಿಕ್ಷಕರ ನ...
16-05-26 09:19 pm
ವಿಕಲಚೇತನ ಮಕ್ಕಳಿಗಾಗಿ ಉಡುಪಿಯಲ್ಲಿ ದೇಶದಲ್ಲೇ ಮೊದಲ...
16-05-26 09:16 pm
ಬಡ ಹಿಂದು ಮಹಿಳೆಯ ಪರ ನೆರವು ಕೇಳಿಕೊಂಡು ಬಂದ ಮುಸ್ಲಿ...
16-05-26 07:22 pm
ಮಂಗಳೂರು ಜೈಲಿನಲ್ಲಿ ಉಚಿತ ಕಾನೂನು ನೆರವು ಸೇವಾ ಕೇಂದ...
16-05-26 01:13 pm
18-05-26 06:49 pm
HK News Staffer
ಇನ್ಸ್ಟಾಮಾರ್ಟ್ ಉದ್ಯೋಗಿ ಲಿಫ್ಟ್ ದುರಂತದಲ್ಲಿ ಸಾವು...
18-05-26 06:47 pm
ದುಬಾರೆ ಶಿಬಿರದಲ್ಲಿ ಆನೆಗಳ ಕಾದಾಟ; ಚೆನ್ನೈ ಮೂಲದ ಪ್...
18-05-26 06:21 pm
ಶಿವಂ ಅಸೋಸಿಯೇಟ್ಸ್ ಹೆಸರಲ್ಲಿ ಬಹುಕೋಟಿ ವಂಚನೆ; ಸಿಐ...
18-05-26 04:19 pm
ತಾಯಿಗೆ ಅವಾಚ್ಯವಾಗಿ ನಿಂದಿಸಿದ್ದಕ್ಕೆ ಹೆಣವಾದ ಅಣ್ಣ,...
18-05-26 12:37 pm