ಬ್ರೇಕಿಂಗ್ ನ್ಯೂಸ್
23-05-23 04:52 pm Mangalore Correspondent ಕರಾವಳಿ
ಪುತ್ತೂರು, ಮೇ 23 : ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ವಿರುದ್ಧ ಹಿಂದು ಮಹಾಸಭಾ ಕಿಡಿಕಾರಿದ್ದು, ನಳಿನ್ ಅವರಿಗೆ ತಾಕತ್ತಿದ್ರೆ ಪಕ್ಷೇತರರಾಗಿ ಸ್ಪರ್ಧಿಸಲಿ. ಮೋದಿ, ಯೋಗಿ ಹೆಸರು ಎತ್ತದೆ ಚುನಾವಣೆ ಎದುರಿಸಿ ಅರುಣ್ ಪುತ್ತಿಲ ಪಡೆದ ಮತಕ್ಕಿಂತ ಹತ್ತು ಶೇಕಡಾ ಮತ ಪಡೆದು ತೋರಿಸಲಿ ಎಂದು ಹಿಂದೂ ಮಹಾಸಭಾ ರಾಜ್ಯ ಕಾರ್ಯದರ್ಶಿ ಧರ್ಮೇಂದ್ರ ಅಮೀನ್ ಹೇಳಿದ್ದಾರೆ.
ಅರುಣ್ ಪುತ್ತಿಲ ಅವರ 10% ಮತವನ್ನ ಪಡೆದು ತೋರಿಸಿ, ನಿಮ್ಗೆ ತಾಕತ್ ಇದ್ಯಾ ಅಂತ ನೋಡಿ ಬಿಡೋಣ. ಈ ನಡುವೆ ಹರೀಶ್ ಪೂಂಜಾನಂತ ಓರ್ವ ಶಾಸಕ ಸತ್ಯಜಿತ್, ತಿಮರೋಡಿ ಬಗ್ಗೆ ಮಾತಾಡ್ತಾರೆ. ಅವ್ರ ಬಗ್ಗೆ ಮಾತಾಡಲು ಯಾವ ನೈತಿಕತೆ ಇದೆ ಬಿಜೆಪಿ ಶಾಸಕರಿಗೆ. ಅಧಿಕಾರ ಸಿಕ್ಕಿದ ಕೂಡ್ಲೇ ಬಾಯಿಗೆ ಬಂದಾಗೆ ಮಾತಾಡೋದು ತಪ್ಪು.
ಪೀಠದಲ್ಲಿ ಕೂರಿಸಿದ್ದೇವೋ, ಹಾಗೆಯೇ ಇಳಿಸೋದು ಗೊತ್ತು, ಹಿಂದೂ ಮಹಾಸಭಾ ಎಚ್ಚರಿಕೆ ಕೊಡ್ತಿದೆ. ನೈತಿಕತೆ ಇದ್ರೆ ಬಿಜೆಪಿ ಶಾಸಕರು ಮೌನವಾಗಿರಿ. ಸಾಧ್ಯವಾದ್ರೆ ಹಿಂದೂ ಕಾರ್ಯಕರ್ತರಿಗೆ, ಹಿಂದುತ್ವವಾದಿಗಳಿಗೆ ಸಹಾಯ ಮಾಡಿ, ಅದು ಬಿಟ್ಟು ಹಿಂಬಾಗಿಲಿನಲ್ಲಿ ಅಧಿಕಾರ ಬಳಸಿ ದೌರ್ಜನ್ಯ ಎಸೆಗೋದು ಮಾಡಿದ್ರೆ ನಾವು ಸುಮ್ಮನಿರಲ್ಲ.
ಎಲ್ಲ ಹಿಂದೂ ಸಂಘಟನೆಗಳನ್ನ ಜೊತೆ ಸೇರಿಸಿಕೊಂಡು ಬಿಜೆಪಿ ವಿರುದ್ಧ ಹೋರಾಟದ ಹಾದಿ ಹಿಡಿಯುತ್ತೇವೆ, 2024ರ ಲೋಕಸಭಾ ಚುನಾವಣೆ ಇದೆ. ನಾವು ಮೋದಿ ನೋಡಿಕೊಂಡು ಸುಮ್ಮನಿದ್ದೇವೆ, ಅದು ಬಿಟ್ಟು ನಿಮ್ಮ ಮುಖ ನೋಡಿ ಸುಮ್ಮನಿರಲ್ಲ. ಇದಕ್ಕೆಲ್ಲ ಉತ್ತರ ಕೊಡೋದಕ್ಕೂ ಬರುತ್ತೆ.
ಯಾವಾನಾದ್ರೂ ಒಬ್ಬ ಶಾಸಕನ ಮಗನಾಗಲಿ ಮಂತ್ರಿಯ ಮಗನಾಗಲಿ ಹೋರಾಟದ ಹಾದಿಯಲ್ಲಿದ್ದಾರಾ..? ಹಾಗಾಗಿ ಎಚ್ಚರಿಕೆ ಕೊಡ್ತಾ ಇದ್ದೇವೆ. ಪುತ್ತೂರಿನ ಪೊಲೀಸ್ ದೌರ್ಜನ್ಯ ಪ್ರಕರಣದಲ್ಲಿ ಸರಿಯಾದ ನ್ಯಾಯ ಸಿಕ್ಕಿಲ್ಲ. ಈ ಕೂಡಲೇ ಡಿವೈಎಸ್ಪಿ ಅವರನ್ನ ಅಮಾನತು ಮಾಡ್ಬೇಕು. ಇಲ್ಲದಿದ್ದಲ್ಲಿ ನಾವು ಕೋರ್ಟ್ ಮೆಟ್ಟಿಲೇರುತ್ತೇವೆ ಎಂದು ಸುದ್ದಿಗೋಷ್ಟಿಯಲ್ಲಿ ಹಿಂದೂ ಮಹಾಸಭಾ ಮುಖಂಡ ಧರ್ಮೇಂದ್ರ ಅಮೀನ್ ಎಚ್ಚರಿಕೆ ನೀಡಿದ್ದಾರೆ.
Hindu Mahasabha Dharmendra Nayaka slams BJP Nalin Kateel, challenges if he can get 10 percent of votes of Arun Puthila in Puttur standing as an Independent candidate.
15-07-25 01:32 pm
Bangalore Correspondent
ನಟಿ ಸರೋಜಾ ದೇವಿ- ಎಸ್ಸೆಂ ಕೃಷ್ಣ ಪ್ರೇಮ ಪ್ರಸಂಗ ; ಮ...
15-07-25 12:27 pm
ಕೇವಲ 2 ಸಾವಿರ ಲಂಚ ಕೇಳಿ ಸಿಕ್ಕಿಬಿದ್ದ ಪಂಚಾಯತ್ ಪಿಡ...
15-07-25 10:35 am
ಧರ್ಮಸ್ಥಳದಲ್ಲಿ 20 ವರ್ಷಗಳಲ್ಲಾದ ಯುವತಿಯರ ನಾಪತ್ತೆ-...
14-07-25 10:44 pm
Shiradi Ghat Accident, Car: ಶಿರಾಡಿ ಘಾಟ್ ; ರಸ್...
14-07-25 01:43 pm
14-07-25 03:24 pm
HK News Desk
ಅಹ್ಮದಾಬಾದ್ ವಿಮಾನ ದುರಂತ ; ಭಾರೀ ಅನುಮಾನ ಹುಟ್ಟಿಸಿ...
12-07-25 09:25 pm
Apples New COO, Sabih Khan: ಟೆಕ್ ದೈತ್ಯ ಏಪಲ್ ಸ...
12-07-25 04:21 pm
ಸಾಮೂಹಿಕ ಮತಾಂತರ ; ಮೂರೇ ವರ್ಷಕ್ಕೆ ಚಾಂಗೂರ್ ಬಾಬಾನಿ...
12-07-25 02:15 pm
Coimbatore Serial Blasts, 'Tailor Raja' Arres...
11-07-25 12:08 pm
15-07-25 10:40 pm
Mangalore Correspondent
Udupi Rain, Fishermen Missing: ಉಡುಪಿ ; ಭಾರೀ ಗ...
15-07-25 10:13 pm
Kmc Manipal Hospital, Mangalore, Health Card:...
15-07-25 07:19 pm
Karkala Parashurama Theme Park: ಕಾರ್ಕಳ ಪರಶುರಾ...
15-07-25 02:28 pm
Mangalore Accident, Alto Car: ದೆಹಲಿಯಿಂದ ಬಂದ ಗ...
15-07-25 10:32 am
15-07-25 10:57 pm
HK News Desk
Lawrence Bishnoi, Bangalore, Crime: ಡಾನ್ ಲಾರೆ...
15-07-25 06:52 pm
Mangalore, Moodbidri college, Rape, Blackmail...
15-07-25 06:07 pm
ಹಿಂದು ಯುವತಿಯರನ್ನು ಮತಾಂತರ ಮಾಡುತ್ತಿದ್ದಾನೆಂದು ಸು...
15-07-25 05:21 pm
Mangalore Police, Arrest, NITTE College Stude...
15-07-25 01:13 pm