ಬ್ರೇಕಿಂಗ್ ನ್ಯೂಸ್
29-10-20 06:23 pm Mangalore Correspondent ಕರಾವಳಿ
ಮಂಗಳೂರು, ಅಕ್ಟೋಬರ್ 29: ಕೊರೊನಾ ಮಹಾಮಾರಿಯ ನಡುವೆ ನಾಡಿನೆಲ್ಲೆಡೆ ನವರಾತ್ರಿ ಉತ್ಸವ ಸರಳವಾಗಿ ನಡೆದಿದೆ. ಎಲ್ಲೆಡೆ ಅದ್ದೂರಿಯಾಗಿ ಆಚರಿಸುತ್ತಿದ್ದ ನವರಾತ್ರಿ ಉತ್ಸವವನ್ನು ಅತ್ಯಂತ ಸರಳವಾಗಿ ನಡೆಸಿದ್ದರಿಂದ ಗೌಜಿ, ಗದ್ದಲಕ್ಕೆ ಅವಕಾಶ ಇರಲಿಲ್ಲ. ಈ ನಡುವೆ ಕೆಲವು ಯುವತಿಯರು ವಿಭಿನ್ನವಾಗಿ ಶಾರದೆಯ ರೂಪದಲ್ಲಿ ಫೋಟೋ ಶೂಟ್ ಮಾಡಿಸಿಕೊಂಡು ಗಮನ ಸೆಳೆದಿದ್ದಾರೆ. ಛಾಯಾಗ್ರಾಹಕರು ಮತ್ತು ಮೇಕಪ್ ಕಲಾವಿದರ ಗರಡಿಯಲ್ಲಿ ಸಾದಾ ಸೀದಾ ಯುವತಿಯರು ಕೂಡ ಶಾರದೆಯ ಪೋಷಾಕಿನಲ್ಲಿ ಕಂಗೊಳಿಸಿದ್ದಾರೆ. ಆದರೆ ಇವೆಲ್ಲದರ ಮಧ್ಯೆ ಕ್ರಿಸ್ತಿಯನ್ ಯುವತಿಯೊಬ್ಬಳು ಶಾರದೆಯ ರೂಪದಲ್ಲಿ ಕಾಣಿಸಿಕೊಂಡು ಸುದ್ದಿಯಾಗಿದ್ದಾರೆ.
ಆಕೆ, ಮಂಗಳೂರಿನ ಕುಲಶೇಖರ ನಿವಾಸಿ ಅನಿಷಾ ಅಂಜಲಿನಾ ಮೊಂತೆರೋ. ಮಂಗಳೂರಿನ ಪಾಥ್ ವೇ ಹಾಗು ಮರ್ಸಿ ಲೇಡಿಸ್ ಸಲೂನ್ ಸಹಯೋಗದಲ್ಲಿ ಶ್ಯಾಡೊ ಆಫ್ ನವದುರ್ಗಾ ಸರಣಿ ಫೋಟೋ ಶೂಟ್ ಆಯೋಜಿಸಲಾಗಿತ್ತು. ಇದಕ್ಕಾಗಿ ಫೋಟೋ ಶೂಟ್ ಮಾಡಿಕೊಳ್ಳಲು ಅನಿಷಾಗೆ ಗೆಳೆಯರು ಪ್ರೇರಣೆ ನೀಡಿದ್ದರು. ದುಂಡಗಿನ ಮುಖದ ಸೌಂದರ್ಯ ಶಾರದೆಯ ರೂಪಕ್ಕೆ ಸೂಟ್ ಆಗತ್ತೆ ಅಂತಾ ಪ್ರೋತ್ಸಾಹ ನೀಡಿದ್ದರು. ಈ ಬಗ್ಗೆ ಮನೆಯಲ್ಲಿ ವಿಷಯ ಪ್ರಸ್ತಾಪಿಸಿದಾಗ, ತಂದೆ ಮೊದಲಿಗೆ ಗದರಿದ್ದರಂತೆ. ಫೋಟೋ ಶೂಟ್ ಮಾಡೋದಾದ್ರೆ ಮಾಡು.. ಶಾರದೆ ದೇವತೆಯಾದ್ದರಿಂದ ದೇವಿ ರೀತಿ ಕಾಣಿಸಿಕೊಳ್ಳಲು ವ್ರತಾಚರಣೆ ಮಾಡಬೇಕು ಎಂದಿದ್ದಾರೆ. ಅದರಂತೆ, ಅನಿಷಾ ಮೀನು, ಮಾಂಸಾಹಾರ ಬಿಟ್ಟು 21 ದಿವಸ ವ್ರತ ಆಚರಿಸಿದ್ದಾರೆ. ಹಿಂದುಗಳ ವಿರೋಧ ಬರುವುದು ಬೇಡವೆಂದು ವ್ರತ ಆಚರಿಸಿಯೇ ಶಾರದೆಯ ರೂಪ ತಾಳಿದ್ದು ಅನಿಷಾ ಬಗ್ಗೆ ಕರಾವಳಿಯಲ್ಲಿ ಮತಭೇದ ಮರೆತು ಮೆಚ್ಚುಗೆ ಕೇಳಿಬಂದಿದೆ.




ಅಂದಹಾಗೆ, ಶಾಖಾಹಾರಿಯಾಗಿದ್ದು ಶಾರದೆಯ ರೂಪದಲ್ಲಿ ಕಾಣಿಸಿಕೊಂಡ ಅನಿಷಾಳ ಫೋಟೋ ಪಾಥ್ ವೇ ಸ್ಪರ್ಧೆಯಲ್ಲಿ ಸೆಲೆಕ್ಟ್ ಕೂಡ ಆಗಿದೆ. ನವದುರ್ಗೆಯರ ಗೆಟಪ್ ನಲ್ಲಿ ಮಾಡೆಲ್ ಗಳು ಸೇರಿ ಹಲವು ಯುವತಿಯರು ಕಂಗೊಳಿಸಿದ್ದರು. ಆದರೆ ಇವೆಲ್ಲದರ ನಡುವೆ, ವಿಭಿನ್ನವಾಗಿದ್ದ ಅನಿಷಾ ಫೋಟೋ ತೀರ್ಪುಗಾರರಿಗೆ ಆಕರ್ಷಕವಾಗಿ ಕಂಡಿದ್ದರಲ್ಲಿ ಅಚ್ಚರಿ ಏನಿಲ್ಲ.. ವಿಶೇಷ ಅಂದ್ರೆ, ಅನಿಷಾ ಶಾರದೆಯಾಗಿ ಕಾಣಿಸಿಕೊಂಡಿದ್ದರ ಹಿಂದೆ ಪೋಷಕರ ಸಪೋರ್ಟ್ ಕೂಡ ಇದೆ. ತಂದೆ ದಯಾನಂದ್ ಹಾಗು ತಾಯಿ ಜೂಡಿ ಪ್ರೆಸಿಲ್ಲ ಮಗಳ ಜೊತೆ ಬೆನ್ನಿಗೆ ನಿಂತಿದ್ದರು.
ಅಂದಹಾಗೆ, ಅನಿಷಾ ಶಾರದೆಯಾಗಿ ರೂಪ ತಾಳಲು ಹಲವರು ಪ್ರಯತ್ನ ಪಟ್ಟಿದ್ದಾರೆ. ಸರ್ಪ್ರೈಸ್ ಸ್ಟುಡಿಯೋ ಮಾಲಕ ದೀಪಕ್ ಗಂಗೂಲಿ, ಛಾಯಾಗ್ರಾಹಕ ವರ್ಷಿಲ್ ಅಂಚನ್, ಮೇಕಪ್ ಕಲಾವಿದೆ ಮರ್ಸಿ ವೀಣಾ ಡಿಸೋಜಾ, ಅನಿಷಾಳನ್ನು ವಿಭಿನ್ನವಾಗಿ ಶೃಂಗರಿಸಿ, ಶಾರದೆಯ ರೂಪ ತಾಳುವಂತೆ ಮಾಡಿದ್ದರು. ಇದೇನೇ ಇದ್ದರೂ, ಕೆಥೋಲಿಕ್ ಕ್ರಿಸ್ತಿಯನ್ ಆಗಿರುವ ಅನಿಷಾ ಹಿಂದು ದೇವತೆ ಶಾರದೆಯ ಅವತಾರಕ್ಕಾಗಿ ಶ್ರದ್ಧಾ ಭಕ್ತಿಯಿಂದ ಪ್ರಯತ್ನ ಪಟ್ಟಿದ್ದಂತೂ ಸತ್ಯ. ಯುವತಿಯರು ಶಾರದೆಯರ ರೀತಿ ಶೃಂಗರಿಸಿ ಫೋಟೋ ತೆಗೆಸಿಕೊಳ್ಳುವ ವಿಚಾರದಲ್ಲಿ ಪರ- ವಿರೋಧ ಇದ್ದರೂ, ಈಕೆಯ ನಡೆ ಮಾತ್ರ ಪ್ರಶಂಸೆಗೆ ಕಾರಣವಾಗಿದೆ.
Video:
Mangalore Catholic Christian girl Anisha Angelina Monteiro from Mangaluru has observed fast for 21 days for the shoot. Anisha Angelina Monteiro has discerned fast making sure that her fasting does not affect religious reverence.
01-05-26 08:33 pm
HK News Staffer
ರಾಜ್ಯದಲ್ಲಿ ಸದ್ಯಕ್ಕೆ ಸಿಎಂ ಬದಲಾವಣೆ ಇಲ್ಲ, ನಾನು ಸ...
30-04-26 08:16 pm
ಬೆಂಗಳೂರು ಸೇರಿ 18 ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳ...
30-04-26 11:53 am
ಸದ್ಯಕ್ಕಿಲ್ಲ ಡಿಕೆಶಿಗೆ ಸಿಎಂ ಭಾಗ್ಯ ; ರಾಜ್ಯಸಭೆ- ಏ...
29-04-26 10:36 am
ನಾಯಕತ್ವ ಬದಲಾವಣೆ ಮಾತೇ ಇಲ್ಲ, ಮೇ 20ರೊಳಗೆ ಸಂಪುಟ ವ...
26-04-26 08:05 pm
02-05-26 11:18 am
HK News Staffer
Actor Vijay, Election, Poll: ಚುನಾವಣೋತ್ತರ ಸಮೀಕ...
29-04-26 11:18 pm
ಇದು ಫ್ರೆಂಡ್ಲಿ ಫೆಡರಲ್ ಅಸ್ಸಾಸಿನ್, ಟ್ರಂಪ್ ಅತ್ಯಾಚ...
27-04-26 02:48 pm
ಶ್ವೇತಭವನದ ಡಿನ್ನರ್ ಪಾರ್ಟಿಯಲ್ಲಿ ಗುಂಡಿನ ದಾಳಿ ; ಭ...
26-04-26 12:49 pm
ರಾಘವ್ ಚಡ್ಡಾ ಸೇರಿ ಏಳು ಆಪ್ ಸಂಸದರು ಬಿಜೆಪಿಗೆ ; ಮೇ...
25-04-26 03:54 pm
29-04-26 11:05 pm
HK News Staffer
ತಾಲೂಕು ಆಸ್ಪತ್ರೆ ಖಾಸಗಿ ವಶಕ್ಕೆ ; ಆರೋಗ್ಯ ಸಚಿವರ ಉ...
28-04-26 09:18 pm
ASI Assault Case, Mangalore: ಎಎಸ್ಐ ಮೇಲೆ ಹಲ್ಲೆ...
28-04-26 01:35 pm
ನೂತನ ಮನೆಯ ಔತಣಕೂಟ ದಿನವೇ ಮೃತಪಟ್ಟ ಯಜಮಾನ ; ಬಂಟ್ವಾ...
28-04-26 01:26 pm
ಮಂಗಳೂರು- ಬೆಂಗಳೂರು ರೈಲಿನಲ್ಲಿ ಮಗುವಿಗೆ ಜನ್ಮವಿತ್ತ...
27-04-26 10:29 am
02-05-26 12:19 pm
HK News Staffer
ಕೋರ್ಟ್ ಜಟಾಪಟಿ ಬಳಿಕ ಕುದ್ರೋಳಿ ಕ್ಷೇತ್ರಕ್ಕೆ ಹೊಸ ಕ...
01-05-26 09:24 pm
ಸಹೋದ್ಯೋಗಿ ಮೇಲೆ ಆಸಿಡ್ ದಾಳಿ ; ಕೇರಳ ಮೂಲದ ವ್ಯಕ್...
01-05-26 07:18 pm
Rakesh Gladson Dsouza: ಮಂಗಳೂರಿನ ಯುವ ಉದ್ಯಮಿ ರಾ...
01-05-26 06:36 pm
ಮಕ್ಕಳ ಆಯೋಗ ಸಮಿತಿ ಸದಸ್ಯನಿಂದಲೇ ಹಲವು ಮಹಿಳೆಯರಿಗೆ...
01-05-26 01:45 pm