ಬ್ರೇಕಿಂಗ್ ನ್ಯೂಸ್
26-05-23 02:45 pm Mangalore Correspondent ಕರಾವಳಿ
ಮಂಗಳೂರು, ಮೇ 26 : ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಆರೋಪ ಮಾಡಿರುವುದು ಜನರನ್ನು ತಪ್ಪು ದಾರಿಗೆಳೆಯುವ ಪ್ರಯತ್ನ. ಆ ರೀತಿಯ ಹೇಳಿಕೆ ನೀಡಿರುವ ಹರೀಶ್ ಪೂಂಜ ವಿರುದ್ಧ ಶಿಕ್ಷೆಯಾಗಬೇಕು. ಜೊತೆಗೆ, ಕಳೆದ ಹತ್ತು ವರ್ಷಗಳಲ್ಲಿ ಆಗಿರುವ ಧರ್ಮಾಧರಿತ ಹತ್ಯೆ ಪ್ರಕರಣಗಳನ್ನು ವಿಶೇಷ ತನಿಖೆಗೆ ಗುರಿಪಡಿಸಬೇಕು. ಅದಕ್ಕಾಗಿ ಈ ಹಿಂದೆ ದಕ್ಷಿಣ ಕನ್ನಡ ಎಸ್ಪಿ ಆಗಿದ್ದ ಸುಬ್ರಹ್ಮಣ್ಯೇಶ್ವರ ರಾವ್ ಅವರಂತಹ ದಕ್ಷ ಅಧಿಕಾರಿಯನ್ನು ತನಿಖೆಗೆ ನೇಮಿಸಬೇಕು ಎಂದು ಮಾಜಿ ಸಚಿವ ರಮಾನಾಥ ರೈ ಆಗ್ರಹಿಸಿದ್ದಾರೆ.
ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಟಿ ನಡೆಸಿದ ಅವರು, ಈ ಜಿಲ್ಲೆಯಲ್ಲಿ ಅತಿ ಹೆಚ್ಚು ಧರ್ಮಾಧಾರಿತ ಕೊಲೆಗಳಾಗಿರುವುದು ಎಲ್ಲರಿಗು ಗೊತ್ತಿದೆ. ಇದರಿಂದ ಬಹಳಷ್ಟು ಅಮಾಯಕರು ಸಾವಿಗೀಡಾಗಿದ್ದಾರೆ, ಹಿಂದು- ಮುಸ್ಲಿಮರು ಹತ್ಯೆಯಾಗಿದ್ದಾರೆ. ಯಾವುದೇ ಹತ್ಯೆ ಪ್ರಕರಣಗಳಲ್ಲಿ ಒಬ್ಬನೇ ಒಬ್ಬ ಕಾಂಗ್ರೆಸಿನವರು ಆರೋಪಿಗಳಾಗಿಲ್ಲ. ಬಿಜೆಪಿ, ಇತರ ಧಾರ್ಮಿಕ ಸಂಘಟನೆ ಅಥವಾ ಎಸ್ಡಿಪಿಐನವರು ಆರೋಪಿಗಳಿದ್ದಾರೆ. ಇಂಥ ಘಟನೆಗಳಿಗೆ ಯಾರು ಕಾರಣ, ಯಾರು ಪ್ರೇರಣೆ ನೀಡಿದ್ದಾರೆ ಇತ್ಯಾದಿ ವಿಚಾರಗಳು ತನಿಖೆಯಲ್ಲಿ ಹೊರಬರಬೇಕು. ಆಗಮಾತ್ರ ಈ ಭಾಗದಲ್ಲಿ ನಡೆಯುವ ಧರ್ಮ, ಕೋಮು ವೈಷಮ್ಯದ ಕೊಲೆಗಳಿಗೆ ಫುಲ್ ಸ್ಟಾಪ್ ಬೀಳಬಹುದು ಎಂದು ಹೇಳಿದ್ದಾರೆ.
ಬಿಜೆಪಿ ಸರ್ಕಾರದಲ್ಲಿ ಹತ್ಯೆಗಳಾಗಿಲ್ಲ. ಕಾಂಗ್ರೆಸ್ ಸರ್ಕಾರದಲ್ಲಿ ಮತ್ತೆ ಆ ರೀತಿಯ ಲಕ್ಷಣ ಬಂದಿದೆ ಎನ್ನುತ್ತಾರೆ. ಆದರೆ ಅಂತಹ ಕೃತ್ಯ ನಡೆಸುವುದಕ್ಕೆ ಕಾಂಗ್ರೆಸ್ ಸರ್ಕಾರ ಇರುವಾಗಲೇ ಮತೀಯ ಸಂಘಟನೆಗಳು ಮುಂದಾಗಿರುವುದನ್ನು ನೋಡುತ್ತೇವೆ. ಅದಕ್ಕಾಗಿ ಎಲ್ಲ ರೀತಿಯ ಧರ್ಮಾಧಾರಿತ, ರಾಜಕೀಯ ಪ್ರೇರಿತ ಹತ್ಯೆ ಪ್ರಕರಣಗಳನ್ನು ಮರು ತನಿಖೆ ಮಾಡಬೇಕು. ಇವರ ರಾಜಕೀಯ ಮೇಲಾಟದಲ್ಲಿ ಮುಂದಕ್ಕೆ ಈ ರೀತಿ ಆಗಬಾರದಂತೆ ನೋಡಿಕೊಳ್ಳಬೇಕು. ಇದಕ್ಕಾಗಿ ವಿಶೇಷ ತನಿಖಾ ತಂಡ ನೇಮಕಕ್ಕೆ ಮುಖ್ಯಮಂತ್ರಿಗೆ ಮನವಿ ಮಾಡುತ್ತೇನೆ ಎಂದರು.
ಮುಖ್ಯಮಂತ್ರಿಯನ್ನು ಗುರಿಯಾಗಿಸಿ ಹೆಸರು ಕೆಡಿಸುವ ಪ್ರಯತ್ನಕ್ಕೆ ಕ್ಷಮೆ ಯಾಚನೆ ಸಾಕಾಗಲ್ಲ, ತಪ್ಪೆಂದು ಕಂಡುಬಂದರೆ ಶಿಕ್ಷೆಯಾಗಬೇಕು. ಶಿಕ್ಷೆಯಾದಲ್ಲಿ ಇಂತಹ ಹೇಳಿಕೆ ನೀಡುವವರಿಗೆ ಪಾಠವಾಗುತ್ತದೆ ಎಂದು ರಮಾನಾಥ ರೈ ಹೇಳಿದರು. ಶಶಿಧರ್ ಹೆಗ್ಡೆ, ನವೀನ್ ಡಿಸೋಜ ಮತ್ತಿತರರಿದ್ದರು.
Mla Harish Poonja should apologise publicly for killing remarks on CM Siddaramaiah says Ramanath Rai in Mangalore. Communal killings in the state should be reinvestigated by former SP of Dakshina Kannada Subramanyashwara Rao
10-05-25 10:40 pm
HK News Desk
Dk Shivakumar, Congress, Birthday: ಭಯೋತ್ಪಾದನೆ...
10-05-25 12:40 pm
Mandya Post, Modi; ಮಾಜಿ ಪಾಕ್ ಪ್ರಧಾನಿಗೆ ಮೋದಿ ಶ...
10-05-25 11:30 am
Janardhana Reddy disqualified, MLA: ಅಕ್ರಮ ಗಣಿ...
08-05-25 11:07 pm
U T Khader, Dinesh Gundurao, Suhas Shetty Mur...
08-05-25 07:50 pm
10-05-25 11:05 pm
HK News Desk
ಎಸ್-400 ಏರ್ ಡಿಫೆನ್ಸ್ ಸಿಸ್ಟಮ್ ಮತ್ತು ಬ್ರಹ್ಮೋಸ್...
10-05-25 09:24 pm
India and Pakistan, Ceasefire: ಮೂರೇ ದಿನದಲ್ಲಿ...
10-05-25 08:28 pm
India-Pakistan war: ಭಾರತ - ಪಾಕಿಸ್ತಾನ ತಕ್ಷಣದಿಂ...
10-05-25 07:25 pm
Indian Military, Pakistan : ತನ್ನ ಮೂರು ವಾಯುನೆಲ...
10-05-25 01:58 pm
10-05-25 07:10 pm
Mangalore Correspondent
ಹಿಂದು - ಮುಸ್ಲಿಂ ಮಧ್ಯೆ ಪ್ರಚೋದನಕಾರಿ ಪೋಸ್ಟ್ ಹಾಕು...
09-05-25 11:07 pm
Mangalore University, U T Khader, Syndicate M...
09-05-25 06:22 pm
Resham Bariga, Belthangady, Indo Pak War, Ant...
09-05-25 03:24 pm
Suhas Shetty Murder Case, Speaker UT Khader,...
09-05-25 01:32 pm
08-05-25 05:32 pm
HK News Desk
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm