ಬ್ರೇಕಿಂಗ್ ನ್ಯೂಸ್
26-05-23 08:03 pm Mangalore Correspondent ಕರಾವಳಿ
ಉಳ್ಳಾಲ, ಮೇ 26 : ಕಡಲ್ಕೊರೆತಕ್ಕೆ ವಿಪರೀತ ಹಾನಿಗೊಳಗಾಗುತ್ತಿದ್ದ ಉಚ್ಚಿಲ, ಬಟ್ಟಂಪಾಡಿ, ಸೀಗ್ರೌಂಡ್ ಪ್ರದೇಶಗಳಿಗೆ ರಾಜ್ಯ ವಿಧಾನ ಸಭೆಯ ಸ್ಪೀಕರ್, ಮಂಗಳೂರು ಶಾಸಕ ಯು.ಟಿ. ಖಾದರ್ ಶುಕ್ರವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಈ ವೇಳೆ ಅವರು ಜಿಲ್ಲಾಧಿಕಾರಿ ರವಿ ಕುಮಾರ್ ಎಂ.ಆರ್ ಮತ್ತು ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿದರು. ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಈ ಹಿಂದೆ ಉಳ್ಳಾಲದ ಕೋಡಿ, ಕೋಟೆಪುರ, ಮೊಗವೀರಪಟ್ಣ, ಸುಭಾಷ್ ನಗರ, ಹಿಲೇರಿಯ ಮೊದಲಾದ ಭಾಗದಲ್ಲಿ ಶಾಶ್ವತವಾದ ಕೆಲಸ ಮಾಡಿದ ಕಾರಣ ಇವತ್ತು ಅಲ್ಲಿ ಕಡಲ್ಕೊರೆತ ರಕ್ಷಣಾ ಕಾರ್ಯ ನಡೆದಿದೆ. ಆ ನಿಟ್ಟಿನಲ್ಲಿ ವಿಪರೀತ ಕಡಲ್ಕೊರೆತಕ್ಕೊಳಗಾಗುತ್ತಿರುವ ಸೋಮೇಶ್ವರ ಉಚ್ಚಿಲ- ಬಟ್ಟಂಪಾಡಿ ಪ್ರದೇಶದಲ್ಲೂ ಶಾಶ್ವತ ರಕ್ಷಣಾ ಕಾರ್ಯ ಆಗಲೇಬೇಕಿದೆ. ಮೊದಲ ಹಂತದ ಕಾಮಗಾರಿ ನಡೆದಿದ್ದರೂ ರಸ್ತೆ ಕಡಲು ಪಾಲಾಗಿದೆ. ಸಮಸ್ಯೆ ಉಲ್ಬಣಗೊಂಡ ಬಳಿಕ ಕಾಮಗಾರಿ ನಡೆಸೋದಕ್ಕಿಂತ ಸಮಸ್ಯೆ ಉದ್ಭವಿಸುವ ಮುನ್ನವೇ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಜಿಲ್ಲಾಧಿಕಾರಿಗಳ ಜತೆಗೆ ಸಮಾಲೋಚಿಸಿದ್ದು ಸ್ಥಳ ಪರಿಶೀಲನೆ ನಡೆಸಿದ್ದೇವೆ ಎಂದರು.

ಕಡಲ್ಕೊರೆತಕ್ಕೆ ಸಂಬಂಧಪಟ್ಟಂತೆ ತುರ್ತು ಕಾಮಗಾರಿ ಮತ್ತು ಶಾಶ್ವತ ಕಾಮಗಾರಿ ಆಗಬೇಕಿದೆ. ಈಗಾಗಲೇ ಎನ್ ಐಟಿಕೆಯ ತಜ್ಞರು ಒಂದು ವರದಿ ಕೊಟ್ಟಿದ್ದಾರೆ. ಇಲ್ಲಿ ಶಾಶ್ವತ ಕಾಮಗಾರಿ ಆಗಬೇಕಾದ ಕಾರಣ ಅದಕ್ಕೆ ಸಂಬಂಧಪಟ್ಟ ತಜ್ಞ ಎಂಜಿನಿಯರ್ ಗಳನ್ನು ಕರೆಸಿ ಅವರು ಕೊಟ್ಟ ವರದಿಯನ್ನು ಸಂಬಂಧಪಟ್ಟ ಇಲಾಖೆ ಹಾಗೂ ಮುಖ್ಯಮಂತ್ರಿಗಳಿಗೆ ಸಲ್ಲಿಸಿ ಮುಂದಿನ ಕ್ರಮ ಕೈಗೊಳ್ಳುವಂತೆ ಆಗ್ರಹಿಸುತ್ತೇನೆ ಎಂದರು.

ಸೋಮೇಶ್ವರ ಉಚ್ಚಿಲ, ಬಟ್ಟಂಪಾಡಿ, ಮುಕ್ಕಚ್ಚೇರಿ ಬಳಿಯ ಸೀಗ್ರೌಂಡ್ ನಲ್ಲಿ ಈ ಬಾರಿ ಮಳೆಗೆ ಕಡಲ್ಕೊರೆತಕ್ಕೆ ಮನೆ, ಆಸ್ತಿ, ಪ್ರಾಣಹಾನಿ ಆಗದಂತೆ ಮುನ್ನೆಚ್ಚರಿಕಾ ಕ್ರಮವಾಗಿ ತುರ್ತು ತಾತ್ಕಾಲಿಕ ಕಾಮಗಾರಿಗೂ ಆಗ್ರಹಿಸುತ್ತೇನೆ ಎಂದು ತಿಳಿಸಿದರು. ಜಿಲ್ಲಾಧಿಕಾರಿ ಎಮ್.ಆರ್ ರವಿಕುಮಾರ್, ವಿವಿಧ ಇಲಾಖಾ ಅಧಿಕಾರಿಗಳು, ಜನಪ್ರತಿನಿಧಿಗಳು ಜತೆಗಿದ್ದರು.
Mangalore Speaker MLA UT Khader visits Sea erosion affected areas in ullal, orders for quick work before rains.
03-07-26 01:21 pm
HK News Staffer
ರಾಮನಗರದಲ್ಲಿ 10 ಸಾವಿರಕ್ಕೂ ಹೆಚ್ಚು ಬಾಂಗ್ಲಾ ಪ್ರಜೆ...
02-07-26 09:19 pm
ಆರ್ಎಸ್ಎಸ್ಗೆ ಬರುವ ಪ್ರತಿ ರೂಪಾಯಿಗೂ ಲೆಕ್ಕವಿದೆ,...
02-07-26 09:18 pm
ಬಿಜೆಪಿಯವರು ದೇವಸ್ಥಾನಗಳ ಮುಂದೆ ಹುಂಡಿ ಹಣ ಕಳ್ಳರಿದ್...
01-07-26 09:49 pm
ದನ ಕೊಂದವರು ಜೈಲಿಗೆ, ಮನುಷ್ಯರನ್ನು ಕೊಂದವರು ಪ್ರಧಾನ...
29-06-26 10:33 pm
03-07-26 09:40 pm
HK News Staffer
ಲಾಡ್ಲೆ ಮಶಾಕ್ ದರ್ಗಾ ಗಲಭೆ ಪ್ರಕರಣ ಸೇರಿ 52 ಕ್ರಿಮಿ...
02-07-26 03:37 pm
ಹಿಂದು ವಿವಾಹಕ್ಕೆ ನೋಂದಣಿಯಷ್ಟೇ ಸಾಲದು, ಸಪ್ತಪದಿ ಇನ...
02-07-26 01:56 pm
ಅಯೋಧ್ಯೆ ರಾಮ ಮಂದಿರ ದೇಣಿಗೆ ಹಗರಣ; ಟ್ರಸ್ಟಿ ಅನಿಲ್...
02-07-26 01:42 pm
1990ರ ಕಾಶ್ಮೀರಿ ಪಂಡಿತರ ನರಮೇಧ ; ನರ್ಸ್ ಸರಳಾ ಭಟ್...
30-06-26 08:06 pm
03-07-26 10:17 pm
HK News Staffer
ಕೆರೆಬೈಲ್ ಎಸ್ಟೇಟ್ ಆವರಣ ಗೋಡೆ ಕುಸಿದು ಅವಾಂತರ ; ಸ...
02-07-26 10:53 pm
ಆರೆಂಜ್ ಅಲರ್ಟ್ ಸೂಚನೆ ; ದಕ್ಷಿಣ ಕನ್ನಡ ಜಿಲ್ಲೆಯಲ್ಲ...
02-07-26 10:11 pm
ಮಂಜನಾಡಿ ಮನೆ ಕುಸಿತ ದುರಂತ ; ಎರಡೂ ಕಾಲುಗಳನ್ನು ಕಳಕ...
01-07-26 10:37 pm
ಭಾರಿ ಮಳೆ ; ಜುಲೈ 2 ದಕ್ಷಿಣ ಕನ್ನಡ ಶಾಲೆ - ಕಾಲೇಜಿಗ...
01-07-26 09:58 pm
03-07-26 07:45 pm
HK News Staffer
ಮುಸ್ಲಿಂ ಧರ್ಮಗುರುಗಳಿಗೆ ನಿಂದನೆ ; ಪುನೀತ್ ಕೆರೆಹಳ್...
03-07-26 06:59 pm
ಇನ್ಸ್ಟಾ ಗ್ರಾಮ್ ಸ್ಟಾರ್ ಧನ್ಯಾ ಕುಂಬಳೆ ಹೆದ್ದಾರಿ...
03-07-26 04:22 pm
ಬೆಂಗಳೂರಿನಲ್ಲಿ ಡೇಂಜರ್ ಡೇ ಕೇರ್ ; ಪುಟ್ಟ ಮಕ್ಕಳನ್ನ...
03-07-26 02:41 pm
ಮಂಗಳೂರು ಜೈಲಿಗೆ ಹೊರಗಿನಿಂದ ಗಾಂಜಾ ಪೊಟ್ಟಣ ಎಸೆದ ವ್...
03-07-26 12:25 pm