ಬ್ರೇಕಿಂಗ್ ನ್ಯೂಸ್
27-05-23 05:40 pm Mangalore Correspondent ಕರಾವಳಿ
ಮಂಗಳೂರು, ಮೇ 27: ಕಾಂಗ್ರೆಸ್ ದ್ವೇಷದ ರಾಜಕಾರಣ ಮಾಡುತ್ತಿದೆ. ಬಿಜೆಪಿ ಶಾಸಕರ ವಿರುದ್ಧ ಸೇಡಿನಿಂದ ದೂರು ದಾಖಲು ಮಾಡುತ್ತಿದೆ. ಬಿಜೆಪಿ ಸರಕಾರ ಅನುಕಂಪದ ಆಧಾರದಲ್ಲಿ ಬಿಜೆಪಿ ಕಾರ್ಯಕರ್ತ ಪ್ರವೀಣ್ ಪತ್ನಿಗೆ ನೀಡಿದ್ದ ಉದ್ಯೋಗವನ್ನು ಕಸಿದುಕೊಂಡಿದೆ. ಮಾನವೀಯ ನೆಲೆಯಲ್ಲಿ ಮತ್ತೆ ಉದ್ಯೋಗ ಕೊಡಿಸಲು ನಾವು ಆಗ್ರಹ ಮಾಡುತ್ತೇವೆ. ನೀಡದೇ ಇದ್ದರೆ ಕೇಂದ್ರ ಸ್ವಾಮ್ಯದ ಸಂಸ್ಥೆಗಳಲ್ಲಿ ಉದ್ಯೋಗ ತೆಗೆಸಿಕೊಡುತ್ತೇನೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಹೇಳಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಟಿ ನಡೆಸಿದ ಅವರು, ಬಿಜೆಪಿ ಶಾಸಕರಾದ ಹರೀಶ್ ಪೂಂಜ, ಅಶ್ವತ್ಥ ನಾರಾಯಣ ವಿರುದ್ಧ ಸೇಡಿನಿಂದ ಪೊಲೀಸ್ ದೂರು ದಾಖಲಿಸುತ್ತಿದ್ದಾರೆ. ನಾವು ಇದನ್ನು ಖಂಡಿಸುತ್ತೇವೆ ಎಂದರು. ಕಾಂಗ್ರೆಸ್ ಸರಕಾರ ಉಸಿರಾಡುವುದಕ್ಕೆ ಒಂದು ತಿಂಗಳು ಅವಕಾಶ ಕೊಡುತ್ತೇವೆ. ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸದಿದ್ದರೆ ಜುಲೈನಿಂದ ರಾಜ್ಯದಾದ್ಯಂತ ಪ್ರತಿಭಟನೆ ನಡೆಸುತ್ತೇವೆ. ಚುನಾವಣೆ ಸಂದರ್ಭದಲ್ಲಿ ಎಲ್ಲರಿಗೂ ವಿದ್ಯುತ್ ಉಚಿತ, ಎಲ್ಲ ಮಹಿಳೆಯರಿಗೂ ಬಸ್ಸಿನಲ್ಲಿ ಉಚಿತ ಎಂದು ಹೇಳಿದ್ದವರು ಈಗ ಯಾಕೆ ಷರತ್ತು ವಿಧಿಸುತ್ತಿದ್ದಾರೆ ಎಂದು ಪ್ರಶ್ನಿಸಿದರು.
ನಮ್ಮದೇ ಸರ್ಕಾರ ಬರ್ತದೆ ಅಂತ...
ಪ್ರವೀಣ್ ಪತ್ನಿಗೆ ಉದ್ಯೋಗ ಮುಖ್ಯಮಂತ್ರಿ ಪದಾಧಿಕಾರ ಇರೋ ವರೆಗೆ ಮಾತ್ರ ಎಂದೇ ಆದೇಶ ಪತ್ರದಲ್ಲಿ ಇದೆಯಲ್ಲಾ ಎಂಬ ಪ್ರಶ್ನೆಗೆ ಉತ್ತರಿಸಿದ ನಳಿನ್ ಕುಮಾರ್, ನಾವೇ ಮತ್ತೆ ಅಧಿಕಾರಕ್ಕೆ ಬರುತ್ತೇವೆ ಎಂಬ ವಿಶ್ವಾಸದಲ್ಲಿದ್ದೆವು. ಆರು ತಿಂಗಳ ನಂತರ ಪರ್ಮನೆಂಟ್ ಮಾಡುವ ಉದ್ದೇಶ ಇತ್ತು. ಕಾನೂನು ಸಮಸ್ಯೆಗಳಿದ್ದವು. ಈಗ ಅಧಿಕಾರ ಹೋಗಿದ್ದರಿಂದ ಹೀಗಾಗಿದೆ ಎಂದುತ್ತರಿಸಿದರು. ಬಿಜೆಪಿ ಕಾರ್ಯಕರ್ತರು, ಕಾಂಗ್ರೆಸ್ ನಾಯಕರು ನಿಮ್ಮ ರಾಜಿನಾಮೆ ಯಾವಾಗ ಎಂದು ಕೇಳುತ್ತಿದ್ದಾರೆ ಎಂಬ ಪ್ರಶ್ನೆಗೆ, ಯಾರು ಕೇಳುತ್ತಿದ್ದಾರೆ, ಕಾರ್ಯಕರ್ತರು ಹಾಗೆ ಕೇಳಿಲ್ಲ. ಕಾಂಗ್ರೆಸ್ ಕೇಳಿದ್ದರೆ ಅವರಿಗೆ ಉತ್ತರ ಕೊಡುತ್ತೇನೆ ಎಂದು ಹೇಳಿದರು.
ಯಾರು ಒತ್ತಡ ಹಾಕಿದ್ದೆಂದು ಹೇಳಿದ್ದಾರೆಯೇ ?
ಪುತ್ತೂರಿನಲ್ಲಿ ಬಿಜೆಪಿ ಕಾರ್ಯಕರ್ತರಿಗೆ ಪೊಲೀಸ್ ದೌರ್ಜನ್ಯ ನಡೆಸಿದ ಘಟನೆಗೆ ಯಾರು ಕಾರಣ ಎಂಬ ಪ್ರಶ್ನೆಗೆ, ಬಿಜೆಪಿಯಿಂದ ದೂರು ನೀಡಿಲ್ಲ. ನಗರಸಭೆ ಅಧಿಕಾರಿ ದೂರು ನೀಡಿದ್ದವರು. ನಾವು ಒತ್ತಡ ಹಾಕುವ ಪ್ರಶ್ನೆ ಬರುವುದಿಲ್ಲ. ಯಾರಾದ್ರೂ ನಾವು ಒತ್ತಡ ಹಾಕಿದ್ದೇವೆ ಎಂದು ಹೇಳಿದ್ದಾರೆಯೇ ಎಂದು ಪ್ರಶ್ನಿಸಿದರು. ಬಿಜೆಪಿಯವರು ಒತ್ತಡ ಹಾಕದೆ ಮತ್ತೆ ಯಾರು ಹಾಕುತ್ತಾರೆ ಎಂದು ಕೇಳಿದ್ದಕ್ಕೆ, ಬಿಜೆಪಿ ಮೇಲೆ ಆರೋಪ ಬರಿಸಲು ಕಾಂಗ್ರೆಸಿನವರು ಮಾಡಿರಬಹುದು. ಕಾಂಗ್ರೆಸಿನವರೇ ಮಾಡಿದ್ದೆಂದು ನಾನು ಹೇಳುತ್ತೇನೆ ಎಂದರು. ಹಲ್ಲೆಗೀಡಾದ ವ್ಯಕ್ತಿಯೇ ಪೊಲೀಸರು ತಮಗೆ ಒತ್ತಡ ಇದೆಯೆಂದು ಹೇಳಿ ಹಲ್ಲೆ ನಡೆಸಿದ್ದಾರೆಂದು ಹೇಳಿದ್ದರು ಎಂದು ಮರುತ್ತರ ನೀಡಿದಾಗ, ನಮಗೇನು ಗೊತ್ತಿಲ್ಲ. ಪೊಲೀಸರು ನಮ್ಮ ಹೆಸರು ಹೇಳಿದ್ದರೇ ಎಂದು ಕೇಳಿದರು.
ಅರುಣ್ ಪುತ್ತಿಲ ಲೋಕಸಭೆ ಚುನಾವಣೆಗೆ ಅಭ್ಯರ್ಥಿಯೆಂದು ಬಿಂಬಿಸಲಾಗುತ್ತಿದೆ ಎಂಬ ಪ್ರಶ್ನೆಗೆ, ಅರುಣ್ ಪುತ್ತಿಲ ನಮ್ಮ ಮಾರ್ಗದರ್ಶಕರು. ಅವರನ್ನು ಜೊತೆಗೆ ಸೇರಿಸಿಕೊಂಡು ನಾವು ಹೋಗುತ್ತೇವೆ. ಯಾವುದೇ ಭಿನ್ನಾಭಿಪ್ರಾಯ ಇಲ್ಲ ಎಂದರು. ನೀವು ಪುತ್ತೂರಿನಲ್ಲಿ ಬಿಜೆಪಿಯೇ ಗೆಲ್ಲುತ್ತದೆ ಎಂದಿದ್ರಲ್ಲಾ ಎಂದು ಕೇಳಿದ್ದಕ್ಕೆ, ನಮ್ಮ ಲೆಕ್ಕಾಚಾರದಲ್ಲಿ ಸ್ವಲ್ಪ ಎಡವಿದ್ದೇವೆ. ಮತ್ತೆ ಒಗ್ಗಟ್ಟಿನಿಂದ ಪಕ್ಷ ಸಂಘಟನೆ ಮಾಡುತ್ತೇವೆ ಎಂದರು.
ಮೂಡುಬಿದ್ರೆ ರಸ್ತೆ ಎಂದಾಗ ಉರಿದು ಬಿದ್ದ ಸಂಸದ
ಮಂಗಳೂರು- ಮೂಡುಬಿದ್ರೆ ಅಡ್ಡೂರಿನಲ್ಲಿ ಸುತ್ತು ಬಳಸಿ ಒಯ್ಯುತ್ತಿದ್ದಾರೆ, ಗುರುಪುರ ಸೇತುವೆ ಇದ್ದರೂ, ಮತ್ತೊಂದು ಸೇತುವೆ ಮಾಡುತ್ತಿದ್ದಾರೆ ಯಾಕೆ ಎಂಬ ಪ್ರಶ್ನೆಗೆ ಉರಿದು ಬಿದ್ದ ಸಂಸದ ನಳಿನ್ ಕುಮಾರ್, ಆ ರೀತಿಯ ಆರೋಪಗಳೇ ಇಲ್ಲ. ಯಾರು ಮಾಡಿದ್ದಾರೆ ಹೇಳಿ. ಒಂದು ಹೈವೇ ಎಂದ ಮೇಲೆ ಬೈಪಾಸ್ ರೋಡ್ ಎಲ್ಲ ಬರ್ತದೆ. ಅದೇ ರೀತಿ ಮಾಡಿದ್ದಾರೆ. ಅದಕ್ಕಾಗಿ ಹೊಸ ಸೇತುವೆ ಮಾಡಿದ್ದಾರೆ. ಗುರುಪುರದಲ್ಲಿ ಅಂಗಡಿಗಳನ್ನು ಉಳಿಸುವುದಕ್ಕಾಗಿ ಈ ರೀತಿ ಮಾಡಿದ್ದೇವೆ. ಹಳೆ ಸೇತುವೆ ಇದ್ದ ಹಾಗೆಯೇ ಇರುತ್ತದೆ. ಹೊಸ ರಸ್ತೆಯಲ್ಲಿ ಫ್ಲೈ ಓವರ್, ಸೇತುವೆ ಎಲ್ಲ ಬರ್ತದೆ ಎಂದು ಹೇಳಿ ಧನ್ಯವಾದ ಎನ್ನುತ್ತಾ ಎದ್ದು ನಡೆದರು. ಅದೇ ಹೆದ್ದಾರಿ 5 ಕಿಮೀ ಹೆಚ್ಚುವರಿ ಉದ್ದ ಆಗ್ತಿದೆಯಲ್ಲ ಎಂಬ ಪ್ರಶ್ನೆಗೆ ನಳಿನ್ ಉತ್ತರ ನೀಡಲಿಲ್ಲ. ಗುರುಪುರದಲ್ಲಿ ಅಂಗಡಿಗಳನ್ನು ಉಳಿಸಲು 5 ಕಿಮೀ ಸುತ್ತು ಬಳಸಿ ಹೋಗುವ ಅನಿವಾರ್ಯತೆ ಇದೆಯೇ ಎಂಬ ಪ್ರಶ್ನೆಗೆ ಸಂಸದರೇ ಉತ್ತರ ನೀಡಬೇಕಾಗಿದೆ.
Mangalore Nalin warns of agitation if Congress fails to fulfill guarantee schemes, Will gaurnatee central government job for Praveen Nettaru wife. "The BJP will hold a state-wide agitation if the Congress government fails to implement the five guarantee schemes promised to the people,” said BJP state president Nalin Kumar Kateel.
11-05-25 01:21 pm
HK News Desk
Minister zameer ahmed, Pak, India: ಮೋದಿ ಹೇಳಿದ...
10-05-25 10:40 pm
Dk Shivakumar, Congress, Birthday: ಭಯೋತ್ಪಾದನೆ...
10-05-25 12:40 pm
Mandya Post, Modi; ಮಾಜಿ ಪಾಕ್ ಪ್ರಧಾನಿಗೆ ಮೋದಿ ಶ...
10-05-25 11:30 am
Janardhana Reddy disqualified, MLA: ಅಕ್ರಮ ಗಣಿ...
08-05-25 11:07 pm
11-05-25 01:43 pm
HK News Desk
India Pak War: ಪೆಟ್ಟು ತಿಂದರೂ ಬಿಡದ ಪಾಕ್ ನರಿಬುದ...
10-05-25 11:05 pm
ಎಸ್-400 ಏರ್ ಡಿಫೆನ್ಸ್ ಸಿಸ್ಟಮ್ ಮತ್ತು ಬ್ರಹ್ಮೋಸ್...
10-05-25 09:24 pm
India and Pakistan, Ceasefire: ಮೂರೇ ದಿನದಲ್ಲಿ...
10-05-25 08:28 pm
India-Pakistan war: ಭಾರತ - ಪಾಕಿಸ್ತಾನ ತಕ್ಷಣದಿಂ...
10-05-25 07:25 pm
10-05-25 07:10 pm
Mangalore Correspondent
ಹಿಂದು - ಮುಸ್ಲಿಂ ಮಧ್ಯೆ ಪ್ರಚೋದನಕಾರಿ ಪೋಸ್ಟ್ ಹಾಕು...
09-05-25 11:07 pm
Mangalore University, U T Khader, Syndicate M...
09-05-25 06:22 pm
Resham Bariga, Belthangady, Indo Pak War, Ant...
09-05-25 03:24 pm
Suhas Shetty Murder Case, Speaker UT Khader,...
09-05-25 01:32 pm
08-05-25 05:32 pm
HK News Desk
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm