ಬ್ರೇಕಿಂಗ್ ನ್ಯೂಸ್
05-06-23 11:21 am Mangalore Correspondent ಕರಾವಳಿ
ಉಳ್ಳಾಲ, ಜೂ.5: ಲವ್ ಜಿಹಾದ್ ಭಾಗವಾಗಿ ಹಿಂದು ಯುವತಿಯರೊಂದಿಗೆ ಸೋಮೇಶ್ವರ ಬೀಚಲ್ಲಿ ಮಜಾ ಉಡಾಯಿಸುತ್ತಿದ್ದ ಅನ್ಯಕೋಮಿನ ಯುವಕರಿಗೆ ನೋವಿನಿಂದಲೇ ಹಿಂದೂ ಯುವಕರು ಹಲ್ಲೆ ನಡೆಸಿದ್ದಾರೆ. ಹಿಂದೂಗಳು ಪಲಾಯನವಾದಿಗಳಲ್ಲ ,ಹಿಂದೂ ಸಮಾಜ ಕೈಗೆ ಬಳೆ ತೊಟ್ಟಿಲ್ಲ, ಹಿಂದೂ ಸಮಾಜಕ್ಕೆ ಅನ್ಯಾಯವಾದರೆ ಹೋರಾಟಕ್ಕೆ ನಾನು ಸಿದ್ಧ ಎಂದು ಹಿಂದೂ ಫೈರ್ ಬ್ರಾಂಡ್ ಖ್ಯಾತಿಯ ಅರುಣ್ ಪುತ್ತಿಲ ಹೇಳಿದ್ದಾರೆ.
ಅಂಬಿಕಾ ರೋಡ್ ಗಟ್ಟಿ ಸಮಾಜ ಭವನದಲ್ಲಿ ಹಿಂದೂ ಬಾಂಧವರು ಉಳ್ಳಾಲ ಇವರ ನೇತೃತ್ವದಲ್ಲಿ ಜರಗಿದ ಭಾರತ್ ಮಾತಾ ಪೂಜನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು ಪೊಲೀಸ್ ಇಲಾಖೆಯು ಜನಪ್ರತಿನಿಧಿಯ ಕೈಗೊಂಬೆಯಂತೆ ವರ್ತಿಸಿದರೆ ಹಿಂದೂ ಸಮಾಜ ಉತ್ತರವನ್ನು ನೀಡಲು ಸಿದ್ಧವಿದೆ. ಸೋಮೇಶ್ವರದ ಘಟನೆಯಲ್ಲಿ ಹಿಂದೂ ಕಾರ್ಯಕರ್ತರ ವಿರುದ್ಧ ಕೇಸು ಹಾಕಲಾಗಿದೆ. ಅನೈತಿಕ ಚಟುವಟಿಕೆಗಳಲ್ಲಿ ಭಾಗಿಯಾದವರಿಗೆ ರಕ್ಷಣೆ ನೀಡಲಾಗಿದೆ. ಕ್ಷೇತ್ರದಲ್ಲಿ ದ್ವೇಷದ ರಾಜಕಾರಣವನ್ನು ಮಾಡದೆ ಪ್ರೀತಿ ವಿಶ್ವಾಸದ ವಾತಾವರಣ ನಿರ್ಮಿಸುವುದು ಇಲ್ಲಿನ ಜನಪ್ರತಿನಿಧಿಯ ಕರ್ತವ್ಯ. ಪೊಲೀಸ್ ಇಲಾಖೆಯೊಳಗೂ ಹಿಂದೂಗಳಿದ್ದಾರೆ. ಜನಸ್ನೇಹಿ ಇಲಾಖೆಯ ಪೊಲೀಸರಿಗೆ ಗೌರವ ಕೊಡುವ ಹೃದಯ ಶ್ರೀಮಂತಿಕೆ ಇರುವ ಸಮಾಜವೆಂದರೆ ಅದು ಹಿಂದೂ ಸಮಾಜವಾಗಿದೆ.
ಧರ್ಮದ, ನಂಬಿಕೆಗಳ ವಿರುದ್ಧದ ಸಂಗತಿಗಳು ನಡೆದರೆ, ಆರಾಧನೆಗಳ ಅಪಮಾನಗಳು ನಡೆದಲ್ಲಿ ಸಾಮಾಜಿಕ ಬದ್ಧತೆಯ ಜೊತೆಗೆ ಹಿಂದುತ್ವವನ್ನು ಪ್ರತಿಪಾದಿಸುವುದು ಅನಿವಾರ್ಯ. ಸೋಮೇಶ್ವರದಲ್ಲೂ ಮೋಜು, ಮಸ್ತಿಗೆ ಹಿಂದೂ ಸಹೋದರಿಯರನ್ನು ಉಪಯೋಗಿಸುವ ಸಂದರ್ಭದಲ್ಲಿ ನಮ್ಮ ಕಾರ್ಯಕರ್ತರು ವಿರೋಧ ಮಾಡಿದ್ದಾರೆ. ವಿರೋಧಿಸುವುದು ನಮ್ಮ ಧರ್ಮ, ಸಹೋದರಿಯರ ಅತ್ಯಾಚಾರವನ್ನು ಸಹಿಸಲು ಸಾಧ್ಯವೇ ಇಲ್ಲ. ಉಳ್ಳಾಲದಲ್ಲಿ ಹಿಂದೂ ವಿರೋಧಿ ವಿಚಾರಗಳು ನಡೆದರೆ, ಹಲ್ಲೆಗಳು ನಡೆದರೆ ಮುಂದೆ ನಿಂತು ನ್ಯಾಯ ಒದಗಿಸುತ್ತೇವೆ ಎಂದರು. ಪುತ್ತಿಲ ಪರಿವಾರದ ಗೌರವ ಸಲಹೆಗಾರ ರಾಜಶೇಖರ್, ಉದ್ಯಮಿ ಕಿರಣ್ ಧರ್ಮಸ್ಥಳ, ವಕೀಲರಾದ ಶಿವಾನಂದ್ ವಿಟ್ಲ , ಹಿಂದೂ ಯುವಸೇನೆಯ ಜಯಂತ್ ಕಾಪಿಕಾಡ್, ಗಟ್ಟಿ ಸಮಾಜದ ಅಧ್ಯಕ್ಷ ದಯಾನಂದ್ ಪಿಲಿಕೂರು , ಕಾರ್ಯಕ್ರಮದ ಸಂಘಟಕ ವಕೀಲ ಮಿತೇಶ್ ಪೂಜಾರಿ ಉಪಸ್ಥಿತರಿದ್ದರು.
Mangalore Moral Policing, Revenge for Love Jihad is necessary says Arun Puthila in Ullal speaking at a program.
14-09-25 05:18 pm
Bangalore Correspondent
ವಾಹನ ಸವಾರರಿಗೆ ಶೇ.50 ರಿಯಾಯಿತಿ ಆಫರ್ ಎಫೆಕ್ಟ್ ...
13-09-25 10:38 pm
ಕುರುಬ ಕ್ರಿಶ್ಚಿಯನ್, ಕುಂಬಾರ ಕ್ರಿಶ್ಚಿಯನ್ ಇದೆಯೇ?...
13-09-25 08:46 pm
Caste Cenus News, Karnataka; ಸೆ.22ರಿಂದ ಅ.7ರ ವ...
13-09-25 07:50 pm
Hassan Accident, 9 killed, Update: ಗಣೇಶ ಮೆರವಣ...
13-09-25 04:31 pm
14-09-25 07:31 pm
HK News Desk
ಮಿಜೋರಾಂ ರಾಜ್ಯದಲ್ಲಿ ಮೊದಲ ರೈಲು ಮಾರ್ಗ ಪ್ರಧಾನಿ ಮೋ...
13-09-25 03:25 pm
ವಾಷಿಂಗ್ ಮೆಷಿನ್ ವಿಷಯದಲ್ಲಿ ವಾಗ್ವಾದ ; ಅಮೆರಿಕದಲ...
12-09-25 11:33 am
ನೇಪಾಳದಲ್ಲಿ ಕಮ್ಯುನಿಸ್ಟ್ ಸರಕಾರ ಪತನ ; ಹೊಸ ನಾಯಕ ಯ...
10-09-25 04:22 pm
ನೇಪಾಳದಲ್ಲಿ ಹಿಂಸಾಚಾರ ತೀವ್ರ ; ದೇಶ ಬಿಟ್ಟು ಓಡಿದ ಪ...
09-09-25 11:09 pm
13-09-25 11:05 pm
Udupi Correspondent
Mangalore, Police, Loud Speakers: ಗಣೇಶೋತ್ಸವಕ್...
12-09-25 10:58 pm
Mahesh Vikram Hegde Arrested, Post Card Kanna...
12-09-25 09:25 pm
Sameer Md, Dharmasthala: ವಿದೇಶದಿಂದ ಫಂಡ್ ಬಂದಿ...
12-09-25 08:53 pm
RTI Dharmasthala Hostels, Mahesh Thimarodi: ಧ...
12-09-25 07:43 pm
14-09-25 06:01 pm
HK News Desk
Mangalore Fake Aadhar, RTC Scam, Police: ಆರೋಪ...
13-09-25 11:36 am
ಅಪ್ರಾಪ್ತ ಬಾಲಕಿಯನ್ನು ಅತ್ಯಾಚಾರಗೈದು ಹತ್ಯೆ ; ಬೆಳಗ...
12-09-25 11:07 pm
Ullal Police, Mangalore, Gold Robbery: ತೊಕ್ಕೊ...
12-09-25 10:48 pm
Udupi, Brahmavar Stabbing, Crime: ಬ್ರಹ್ಮಾವರ ;...
12-09-25 05:31 pm