ಬ್ರೇಕಿಂಗ್ ನ್ಯೂಸ್
05-06-23 03:24 pm Mangalore Correspondent ಕರಾವಳಿ
ಮಂಗಳೂರು, ಜೂನ್ 5: ವಿಪಕ್ಷದ ನಾಯಕ ರಾಜ್ಯದ ಪಾಲಿಗೆ ಶ್ಯಾಡೋ ಸಿಎಂ ಇದ್ದಂತೆ. ಆದರೆ ಬಿಜೆಪಿಗೆ ಕನಿಷ್ಠ ವಿರೋಧ ಪಕ್ಷದ ನಾಯಕನನ್ನು ಆಯ್ಕೆ ಮಾಡುವ ಯೋಗ್ಯತೆ ಇಲ್ಲ. ಚುನಾವಣೆ ಸೋಲಿನಿಂದಾಗಿ ಕರ್ನಾಟಕದಲ್ಲಿ ಬಿಜೆಪಿ ನಿಷ್ಕ್ರಿಯ ಆಗಿದೆ. ಜನ ಇವರನ್ನು ತಿರಸ್ಕರಿಸಿದ್ದಾರೆ, ಬಿಜೆಪಿ ನಾಯಕರು ಸೋಲಿನಿಂದ ಕಂಗೆಟ್ಟಿದ್ದಾರೆ ಎಂದು ಮಾಜಿ ಎಂಎಲ್ಸಿ, ಕಾಂಗ್ರೆಸ್ ಮುಖಂಡ ಐವಾನ್ ಡಿಸೋಜ ಟೀಕಿಸಿದ್ದಾರೆ.
ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಟಿ ನಡೆಸಿದ ಅವರು, ಬಿಜೆಪಿ ಅವಧಿಯಲ್ಲಿ ಗೋಹತ್ಯೆ, ಹಲಾಲ್ ಕಟ್, ಮತಾಂತರ, ಕೋಮು ದ್ವೇಷ ಇತ್ಯಾದಿ ವಿಚಾರಗಳೇ ಚರ್ಚೆಯಾಗಿದ್ದವು. ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತಿದ್ದಂತೆ ಗ್ಯಾರಂಟಿ ಭರವಸೆಗಳು, ಅನುದಾನ, ಸವಲತ್ತುಗಳ ಬಗ್ಗೆ ಚರ್ಚೆಯಾಗುತ್ತಿದೆ. ಇದು ಕಾಂಗ್ರೆಸ್- ಬಿಜೆಪಿ ಆಡಳಿತಕ್ಕಿರುವ ವ್ಯತ್ಯಾಸ. ಆದರೆ ನಮ್ಮ ಪ್ರಧಾನಿಯವರು ಕರ್ನಾಟಕದ ಗ್ಯಾರಂಟಿ ಯೋಜನೆಗಳು ಬೋಗಸ್ ಎಂದು ಹೇಳುತ್ತಿದ್ದಾರೆ. ಜನಾದೇಶದಿಂದ ಕಾಂಗ್ರೆಸ್ ಅಧಿಕಾರಕ್ಕೆ ಬಂದು ಬಡವರಿಗಾಗಿ ಗ್ಯಾರಂಟಿ ಯೋಜನೆಗಳನ್ನು ಕೊಡುತ್ತಿದ್ದೇವೆ. ನಾವು ಸವಲತ್ತು ಕೊಡುವುದನ್ನು ಬೋಗಸ್ ಅನ್ನುವುದಾದರೆ ನೀವು ಜನಪರವೋ, ಜನರ ವಿರುದ್ಧವೋ ಎಂದು ಹೇಳಬೇಕು ಎಂದರು.
ನಾವು ನುಡಿದಂತೆ ನಡೆದಿದ್ದೇವೆ. ಬಿಜೆಪಿಯವರು ಈಗ ಪ್ರತಿಭಟನೆಗೆ ಇಳಿದಿದ್ದಾರಂದ್ರೆ, ಅವರಿಗೆ ಗ್ಯಾರಂಟಿ ಯೋಜನೆ ಬಗ್ಗೆ ಹೊಟ್ಟೆಯುರಿ. ಇಂತಹ ಉರಿಗೆ ಮದ್ದಿಲ್ಲ. ಇವರು ಇದೇ ರೀತಿ ಮುಂದುವರಿದಲ್ಲಿ ಲೋಕಸಭೆ ಚುನಾವಣೆಯಲ್ಲಿ ರಾಜ್ಯದ 28 ಸೀಟನ್ನೂ ಸೋಲುತ್ತೀರಿ. ನಾವು ಜೂನ್, ಜುಲೈನಲ್ಲಿ ಗ್ಯಾರಂಟಿ ಯೋಜನೆಗಳ ಫಲಾನುಭವಿಗಳ ಆಯ್ಕೆಗಾಗಿ ಕಾರ್ಯಕ್ರಮ ಮಾಡುತ್ತೇವೆ. ಬಿಜೆಪಿ ಶಾಸಕರು, ನಾಯಕರು ಕೂಡ ಜೊತೆಯಾಗಬೇಕು. ಜನರಿಗೆ ಸರಕಾರದ ಸವಲತ್ತು ತಲುಪಿಸುವ ಜವಾಬ್ದಾರಿ ಪ್ರತಿಯೊಬ್ಬ ಜನಪ್ರತಿನಿಧಿಗೂ ಇರುತ್ತದೆ.
200 ಯೂನಿಟ್ ಒಳಗಿದ್ದರೆ ಬಿಲ್ ಇರಲ್ಲ
ಗೃಹಜ್ಯೋತಿ ಯೋಜನೆಯಡಿ ಸರಾಸರಿ ವಿದ್ಯುತ್ ಬಳಕೆ 200 ಯೂನಿಟ್ ಒಳಗಿದ್ದರೆ, ಅಂಥವರಿಗೆ ಪೂರ್ತಿ ವಿದ್ಯುತ್ ಬಿಲ್ ಉಚಿತ ಇರುತ್ತದೆ. ಅದಕ್ಕಿಂತ ಹೆಚ್ಚು ವಿದ್ಯುತ್ ಬಳಕೆ ಮಾಡುತ್ತಿದ್ದಲ್ಲಿ ಆತನಿಗೆ ಈ ಸೌಲಭ್ಯ ಇರುವುದಿಲ್ಲ. ಪ್ರತಿ ತಿಂಗಳ ಮೀಟರ್ ರೀಡಿಂಗ್ ಸಂದರ್ಭದಲ್ಲಿ 200 ಯೂನಿಟ್ ಒಳಗಿದ್ದಲ್ಲಿ ವಿದ್ಯುತ್ ಬಿಲ್ ಕಟ್ಟಲು ಇರುವುದಿಲ್ಲ. ಗ್ರಾಹಕನಿಗೆ ನೀಡಿದ ಉಚಿತ ಮೊತ್ತವನ್ನು ವಿದ್ಯುತ್ ಸರಬರಾಜು ಕಂಪನಿಗಳಿಗೆ ಸರ್ಕಾರದಿಂದ ಪಾವತಿಸಲಾಗುವುದು. ಈ ಯೋಜನೆ ಸೌಲಭ್ಯ ಆಗಸ್ಟ್ 2023ರ ಮೀಟರ್ ರೀಡಿಂಗ್ ಅಂದರೆ, ಜುಲೈ ತಿಂಗಳ ವಿದ್ಯುತ್ ಬಳಕೆಗೆ ಅನ್ವಯವಾಗುವಂತೆ ಜಾರಿಗೆ ಬರಲಿದೆ ಎಂದು ಐವಾನ್ ಡಿಸೋಜ ತಿಳಿಸಿದ್ದಾರೆ. ಕಡಿಮೆ ವಿದ್ಯುತ್ ಬಳಕೆದಾರರಿಗೆ ಸರಾಸರಿ ಬಿಲ್ ಗಿಂತ ಹತ್ತು ಶೇ. ಹೆಚ್ಚು ಬಳಕೆಗೆ ಮಾತ್ರ ಅವಕಾಶ ಇರುತ್ತದೆ. ಉಚಿತವೆಂದು ಹೆಚ್ಚು ವಿದ್ಯುತ್ ಬಳಕೆಯಾಗಿದ್ದು ಪತ್ತೆಯಾದಲ್ಲಿ ಆತನಿಂದಲೇ ಬಿಲ್ ವಸೂಲಿ ಮಾಡಲಾಗುತ್ತದೆ.
ಇಬ್ರಾಹಿಂ ಕೋಡಿಜಾಲ್, ಶುಭೋದಯ ಆಳ್ವ ಮತ್ತಿತರರಿದ್ದರು.
The leader of the opposition is like a shadow CM for the state. But the BJP does not have the capacity to choose at least the leader of the opposition. The BJP has become inactive in Karnataka due to the election debacle. Former MLC and Congress leader Ivan D'Souza said that people have rejected him and bjp leaders are upset with the defeat.
20-05-25 03:30 pm
Bangalore Correspondent
Shashi Kumar IPS, Corruption, Hubballi, polic...
19-05-25 04:00 pm
Bjp, Radha Mohan Das Agarwal: 1971ರ ಯುದ್ಧ ಗೆಲ...
17-05-25 01:44 pm
Santosh Lad, Modi, Pak, War: ಮೋದಿ ತಾವೇ ಸುಪ್ರೀ...
16-05-25 10:04 am
Davanagere Sp, Constable Accident: ದಾವಣಗೆರೆಯಲ...
15-05-25 10:16 pm
20-05-25 02:36 pm
HK News Desk
Operation Sindhoor, Rahul Gandhi,.Pakistan: ಆ...
20-05-25 01:42 pm
ಆಡಲು ಹೋಗಿದ್ದಾಗ ಮಳೆ ಬಂತೆಂದು ನಿಲ್ಲಿಸಿದ್ದ ಕಾರಿನ...
19-05-25 02:25 pm
ಚಾರ್ಮಿನಾರ್ ಬಳಿಯ ಗುಲ್ಜಾರ್ ಹೌಸ್ನಲ್ಲಿ ಬೆಂಕಿ ಅವ...
19-05-25 01:46 pm
Brijesh Chowta, Tejaswi Surya: ಪಾಕ್ ಪ್ರೇರಿತ ಭ...
18-05-25 08:23 pm
20-05-25 02:03 pm
Mangalore Correspondent
Job Scam Mangalore, Police Suspend, Hireglow...
19-05-25 11:07 pm
Jail Attack, Suhas Shetty, Mangalore, Chotte...
19-05-25 10:14 pm
Konaje Suicide, Mangalore, Hair loss: ಕೂದಲು ಉ...
19-05-25 09:41 pm
Mangalore Job Scam, Police, Lawrence Dsouza,...
19-05-25 05:22 pm
19-05-25 09:38 pm
Mangalore Correspondent
Belagavi Murder, Mother in law: ಸೊಸೆಗೆ ಮಕ್ಕಳಾ...
19-05-25 03:35 pm
Reshma Bariga, FIR, Mangalore; ಆಪರೇಶನ್ ಸಿಂಧೂರ...
18-05-25 07:45 pm
Suhas Shetty, BJP Corporator Shweta Poojary,...
18-05-25 07:35 pm
Bangalore Cigarette Murder, Video Viral: ಕಾರಿ...
17-05-25 05:00 pm