ಸಂಶೋಧಕ ಪ್ರೊ.ಎ.ವಿ.ನಾವಡ, ಡಾ.ಯು.ವಿ ಶೆಣೈ ಸೇರಿ 38 ಮಂದಿ ಸಾಧಕರಿಗೆ ಜಿಲ್ಲಾ ರಾಜ್ಯೋತ್ಸವ ಗರಿ

30-10-20 09:18 pm       Headline Karnataka News Network   ಕರಾವಳಿ

ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ರಾಜ್ಯೋತ್ಸವ ಪ್ರಶಸ್ತಿಯನ್ನು ಪ್ರಕಟಿಸಲಾಗಿದ್ದು, ಸಂಘ-ಸಂಸ್ಥೆಗಳು ಸೇರಿದಂತೆ 38 ಮಂದಿಗೆ ಈ ಬಾರಿ ಪ್ರಶಸ್ತಿ ನೀಡಲಾಗಿದೆ.

ಮಂಗಳೂರು, ಅಕ್ಟೋಬರ್ 30 : ದಕ್ಷಿಣ ಕನ್ನಡ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪಟ್ಟಿ ಪ್ರಕಟವಾಗಿದ್ದು ತುಳು ಸಂಶೋಧಕ, ಸಾಹಿತಿ ಪ್ರೊ.ಎ.ವಿ. ನಾವಡ, ಹಿರಿಯ ವೈದ್ಯ ಡಾ.ಯು.ವಿ. ಶೆಣೈ ಸೇರಿ 38 ಮಂದಿಯನ್ನು ಆಯ್ಕೆ ಮಾಡಲಾಗಿದೆ. 

ರಂಗಭೂಮಿ ಕಲಾವಿದ ಚೇತನ್ ರೈ ಮಾಣಿ, ಪತ್ರಿಕೋದ್ಯಮದಲ್ಲಿ ಬಿ.ಟಿ. ರಂಜನ್, ಶ್ರೀನಿವಾಸ ನಾಯಕ್ ಇಂದಾಜೆ, ಜಿನ್ನಪ್ಪ ಗೌಡ, ಸಮಾಜಸೇವೆಗೆ ಸುಬ್ರಹ್ಮಣ್ಯ ಭಟ್, ಯಕ್ಷಗಾನ ಗಣೇಶ ಕೊಲೆಕಾಡಿ, ಇತಿಹಾಸಕಾರ ಡಾ.ವೈ ಉಮಾನಾಥ ಶೆಣೈ, ದೈವ ಪಾತ್ರಿ ಗಂಗಯ್ಯ ಪರವ ಸೇರಿ 30 ಮಂದಿ ವಿವಿಧ ಕ್ಷೇತ್ರಗಳ ಸಾಧಕರು, ಎಂಟು ಸಂಘ- ಸಂಸ್ಥೆಗಳಿಗೆ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆ ಮಾಡಿ ಜಿಲ್ಲಾಡಳಿತದಿಂದ ಪಟ್ಟಿ ಪ್ರಕಟಿಸಲಾಗಿದೆ.

Professor A V Navada and Dr Shenoy among 38 selected for Karnataka Rajyotsava Awards 2020.