ಬ್ರೇಕಿಂಗ್ ನ್ಯೂಸ್
30-10-20 09:33 pm Mangaluru Correspondent ಕರಾವಳಿ
ಮಂಗಳೂರು, ಅಕ್ಟೋಬರ್ 30: ಸಮೋಸಾ ತಿನ್ನಲು ಫಾಸ್ಟ್ ಫುಡ್ ಸೆಂಟರ್ ಗೆ ಬಂದಿದ್ದ ನಾಲ್ವರು ದಾಂಧಲೆ ನಡೆಸಿ, ಏರ್ ಪಿಸ್ತೂಲ್ ತೋರಿಸಿ ಭಯ ಸೃಷ್ಟಿಸಿದ ಘಟನೆ ಮಂಗಳೂರಿನ ಫಳ್ನೀರ್ ನಲ್ಲಿ ನಡೆದಿದೆ. ಪ್ರಕರಣ ಸಂಬಂಧ ಇಬ್ಬರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಫಳ್ನೀರ್ ಬಳಿ ರಸ್ತೆ ಬದಿಯಲ್ಲಿರುವ ಎಂಎಫ್ಸಿ ಫಾಸ್ಟ್ ಫುಡ್ ಸೆಂಟರಿಗೆ ಸಂಜೆ 5 ಗಂಟೆ ಸುಮಾರಿಗೆ ಆಗಮಿಸಿದ್ದ ನಾಲ್ವರು ಸಮೋಸಾ ಮತ್ತು ಚಹಾ ಕೇಳಿದ್ದಾರೆ. ಸಮೋಸಾ ತಣ್ಣಗಿದ್ದ ವಿಚಾರದಲ್ಲಿ ಸಿಬಂದಿ ಜೊತೆ ವಾಗ್ವಾದ ನಡೆಸಿದ್ದಾರೆ. ವಾಗ್ವಾದ ಅತಿರೇಕಕ್ಕೆ ಹೋಗಿದ್ದು, ಹೊರಭಾಗದಲ್ಲಿದ್ದ ಚೇರ್ ಎತ್ತಿಕೊಂಡು ದಾಂಧಲೆ ನಡೆಸಿದ್ದಾರೆ. ಈ ವೇಳೆ, ಹೊಟೇಲ್ ಸಿಬಂದಿ ಉಸ್ಮಾನ್ ಮತ್ತು ಸಾಹಿಲ್ ಎಂಬವರು ಬಂದು ಪ್ರತಿ ದಾಳಿಗೆ ಮುಂದಾಗಿದ್ದಾರೆ. ಈ ವೇಳೆ, ಆರೋಪಿಗಳ ಪೈಕಿ ಜುನೇದ್ ಎಂಬಾತ ತನ್ನಲ್ಲಿದ್ದ ಏರ್ ಪಿಸ್ತೂಲ್ ನಲ್ಲಿ ಗುಂಡು ಹಾರಿಸಿದ್ದು ಉಸ್ಮಾನ್ ಕುಂಡೆಗೆ ಬಿದ್ದಿದೆ. ಅಲ್ಲದೆ, ಸಾಹಿಲ್ ಮೇಲೆ ಗ್ಲಾಸ್ ಪುಡಿಗೈದು ಅದರಲ್ಲಿ ಹಲ್ಲೆ ಮಾಡಿದ್ದಾನೆ. ಇಷ್ಟಾಗುತ್ತಿದ್ದಂತೆ ಆರೋಪಿಗಳ ಜೊತೆಗಿದ್ದ ಇನ್ನಿಬ್ಬರು ಅಲ್ಲಿಂದ ಪರಾರಿಯಾಗಿದ್ದಾರೆ.
ಆದರೆ, ಜುನೇದ್ ಮತ್ತು ಇಜಾಝ್ ಅಲ್ಲಿಂದ ತೆರಳಿರಲಿಲ್ಲ. ಮತ್ತಷ್ಟು ವಾಗ್ವಾದ ಮಾಡುತ್ತಾ ದಾಂಧಲೆಯಲ್ಲಿ ಪೀಠೋಪಕರಣ ಪುಡಿಗಟ್ಟಲು ಯತ್ನಿಸಿದ್ದಾರೆ. ಈ ವೇಳೆ, ಅಕ್ಕಪಕ್ಕದ ಅಂಗಡಿಗಳ ಸಿಬಂದಿ ಮತ್ತು ಸಾರ್ವಜನಿಕರು ಬಂದು ಇಬ್ಬರನ್ನೂ ಹಿಡಿದು ಹೊಟೇಲ್ ಒಳಗೆ ಕೂಡಿ ಹಾಕಿದ್ದಾರೆ. ಗಾಯಗೊಂಡ ಉಸ್ಮಾನ್ ಮತ್ತು ಸಾಹಿಲ್ ನನ್ನು ಖಾಸಗಿ ಆಸ್ಪತ್ರೆಗೆ ಸೇರಿಸಲಾಗಿದೆ. ಆರೋಪಿಗಳಾದ ಜುನೇದ್ ಮತ್ತು ಇಜಾಝ್ ಗಾಂಜಾ ಮತ್ತಿನಲ್ಲಿದ್ದ ರೀತಿ ವರ್ತಿಸುತ್ತಿದ್ದರು. ಕೂಡಲೇ ಪೊಲೀಸರು ಧಾವಿಸಿದ್ದು, ಇಬ್ಬರನ್ನೂ ವಶಕ್ಕೆ ಪಡೆದು ವೆನ್ಲಾಕ್ ಆಸ್ಪತ್ರೆಗೆ ಕೊಂಡೊಯ್ದು ಮೆಡಿಕಲ್ ಟೆಸ್ಟ್ ಮಾಡಿಸಿ ಪಾಂಡೇಶ್ವರ ಠಾಣೆಗೆ ಹೊತ್ತೊಯ್ದಿದ್ದಾರೆ. ಆರೋಪಿಗಳು ದಾಂಧಲೆ ನಡೆಸಿರುವುದು ಪೂರ್ತಿಯಾಗಿ ಹೊಟೇಲಿನ ಸಿಸಿಟಿವಿಯಲ್ಲಿ ದಾಖಲಾಗಿದ್ದು, ಅದನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಏರ್ ಪಿಸ್ತೂಲ್ ಬಳಕೆ ಏನು ?
ಏರ್ ಪಿಸ್ತೂಲ್ ಅನ್ನು ಸಾಮಾನ್ಯವಾಗಿ ಮಂಗನನ್ನು ಓಡಿಸಲು ಬಳಸುತ್ತಾರೆ. ಜೇಬಿನಲ್ಲಿ ಇಟ್ಟುಕೊಂಡು ಶೋ ಮಾಡುವವರೂ ಇರುತ್ತಾರೆ. ಇದಕ್ಕೆ ಲೈಸನ್ಸ್ ಬೇಕಿಲ್ಲ. ಅದರಿಂದ ಹೊಡೆದರೆ ಜೀವಕ್ಕೆ ಅಪಾಯ ಆಗಲ್ಲ. ಆದರೆ, ಆರೋಪಿಗಳ ಬಳಿ ಇದ್ದುದು ಏರ್ ಪಿಸ್ತೂಲ್ ಎನ್ನುವುದು ಅಲ್ಲಿನ ಸಿಬಂದಿಗಾಗಲೀ, ಸಾರ್ವಜನಿಕರಿಗಾಗಲೀ ತಿಳಿಯಲಿಲ್ಲ. ಒಮ್ಮೆ ಶೂಟ್ ಮಾಡಿದ ಬಳಿಕ ಮತ್ತೊಮ್ಮೆ ಶೂಟ್ ಮಾಡಲು ಅದನ್ನು ರಿಲೋಡ್ ಮಾಡಬೇಕಾಗಿದ್ದರಿಂದ ಈ ವೇಳೆ ಸಾರ್ವಜನಿಕರು ಆರೋಪಿಯನ್ನು ಹಿಡಿದಾಕಿದ್ದರು. ಆಗಿದ್ದಿಷ್ಟೇ ಅಂತಾರೆ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು.
Detailed report by Headline Karnataka on Fire Gun Shot at Falnir MFC restaurant in Mangalore by unidentified assaliants. A group of unidentified assailants on Friday, October 30 fired gunshots at MFC hotel located in Falnir.
15-07-25 01:32 pm
Bangalore Correspondent
ನಟಿ ಸರೋಜಾ ದೇವಿ- ಎಸ್ಸೆಂ ಕೃಷ್ಣ ಪ್ರೇಮ ಪ್ರಸಂಗ ; ಮ...
15-07-25 12:27 pm
ಕೇವಲ 2 ಸಾವಿರ ಲಂಚ ಕೇಳಿ ಸಿಕ್ಕಿಬಿದ್ದ ಪಂಚಾಯತ್ ಪಿಡ...
15-07-25 10:35 am
ಧರ್ಮಸ್ಥಳದಲ್ಲಿ 20 ವರ್ಷಗಳಲ್ಲಾದ ಯುವತಿಯರ ನಾಪತ್ತೆ-...
14-07-25 10:44 pm
Shiradi Ghat Accident, Car: ಶಿರಾಡಿ ಘಾಟ್ ; ರಸ್...
14-07-25 01:43 pm
14-07-25 03:24 pm
HK News Desk
ಅಹ್ಮದಾಬಾದ್ ವಿಮಾನ ದುರಂತ ; ಭಾರೀ ಅನುಮಾನ ಹುಟ್ಟಿಸಿ...
12-07-25 09:25 pm
Apples New COO, Sabih Khan: ಟೆಕ್ ದೈತ್ಯ ಏಪಲ್ ಸ...
12-07-25 04:21 pm
ಸಾಮೂಹಿಕ ಮತಾಂತರ ; ಮೂರೇ ವರ್ಷಕ್ಕೆ ಚಾಂಗೂರ್ ಬಾಬಾನಿ...
12-07-25 02:15 pm
Coimbatore Serial Blasts, 'Tailor Raja' Arres...
11-07-25 12:08 pm
15-07-25 02:28 pm
HK News Desk
Mangalore Accident, Alto Car: ದೆಹಲಿಯಿಂದ ಬಂದ ಗ...
15-07-25 10:32 am
ಕಲ್ಲು ಮರಳಿನ ಸಮಸ್ಯೆಯಿಂದ ಜನರ ತಲೆಗೆ ಚಪ್ಪಡಿ ಕಲ್ಲು...
14-07-25 09:55 pm
Mrpl leakgae, Death, Fight: ಅನಿಲ ಸೋರಿಕೆಯಿಂದ ಇ...
14-07-25 07:56 pm
Mangalore, Help: ಅಪಘಾತದಲ್ಲಿ ಬಡ ಮಹಿಳೆಯ ತಲೆಗೆ ತ...
13-07-25 11:13 pm
15-07-25 01:13 pm
HK News Desk
Mangalore Crime, Police: ದುಬೈನಲ್ಲಿ ವಹಿವಾಟು ;...
15-07-25 11:38 am
ಮ್ಯಾಟ್ರಿಮನಿ ಸೈಟಲ್ಲಿ ಸಿಕ್ಕ ಗೆಳತಿಯಿಂದಲೇ ಮೋಸ ; ಆ...
13-07-25 05:23 pm
ಅಪ್ರಾಪ್ತ ಬಾಲಕಿಯನ್ನು ಶಾಲೆಗೆ ಕರೆದೊಯ್ಯುವ ನೆಪದಲ್ಲ...
12-07-25 11:10 pm
Dowry Harassment, Mysuru: ಮದುವೆಯಾದ ಎರಡೇ ತಿಂಗಳ...
12-07-25 01:32 pm